ಎತ್ತುಗಳಿಗೆ ಮಾಸ್ಕ್ ಹಾಕಿ ಕೂರಿಗೆ ಪೂಜೆ ನಡೆಸಿದ ಬಾಗಲಕೋಟೆಯ ರೈತ ಕುಟುಂಬ
ಐದು ತರಹದ ದ್ವಿದಳ ದಾನ್ಯ ಬಿತ್ತಿ ಮಾಡುವ ಪೂಜೆ ಇದಾಗಿದ್ದು, ಈ ವೇಳೆ ದೇವೆಂದ್ರಪ್ಪ ಪೂಜಾರ ಮತ್ತು ಹನುಮವ್ವ ಪೂಜಾರ ಎಂಬ ರೈತ ಕುಟುಂಬದ ಸದಸ್ಯರು ಕೂರಿಗೆ ಪೂಜೆ ನಡೆಸಿದ್ದಾರೆ.
ಬಾಗಲಕೋಟೆ: ಕೊವಿಡ್ ಬಾರದಂತೆ ತಡೆಯಲು ಮಾಸ್ಕ್, ಸ್ಯಾನಿಟೈಸರ್ ಬಳಸುತ್ತೇವೆ. ಆದರೆ ಇಲ್ಲೊಬ್ಬ ರೈತ ಇನ್ನೂ ಮುಂದುವರೆದು ಬಿತ್ತನೆ ಪೂಜಾ ಕಾರ್ಯದಲ್ಲೂ ಕೊವಿಡ್ ನಿಯಮ ಪಾಲಿಸಿ ಮಾದರಿಯಾಗಿದ್ದಾರೆ. ತಾವು ಮಾಸ್ಕ್ ಹಾಕಿಕೊಂಡದ್ದಲ್ಲದೇ ಎತ್ತುಗಳಿಗೂ ಮಾಸ್ಕ್ ಹಾಕಿ ವಿಶೇಷತೆ ಮೆರೆದಿದ್ದಾರೆ.
ಜಿಲ್ಲೆಯ ಗುಳೇದಗುಡ್ಡ ತಾಲೂಕಿನ ಹಿರೆಬೂದಿಹಾಳ ಗ್ರಾಮದಲ್ಲಿ ಇಂದು ರೈತರು ಮುಂಗಾರಿನ ಬಿತ್ತನೆಗಾಗಿ ಮಾಡುವ ಕೂರಿಗೆ ಪೂಜೆ ನಡೆಸಿದ್ದಾರೆ. ಐದು ತರಹದ ದ್ವಿದಳ ದಾನ್ಯ ಬಿತ್ತಿ ಮಾಡುವ ಪೂಜೆ ಇದಾಗಿದ್ದು, ಈ ವೇಳೆ ದೇವೆಂದ್ರಪ್ಪ ಪೂಜಾರ ಮತ್ತು ಹನುಮವ್ವ ಪೂಜಾರ ಎಂಬ ರೈತ ಕುಟುಂಬದ ಸದಸ್ಯರು ಕೂರಿಗೆ ಪೂಜೆ ನಡೆಸಿದ್ದಾರೆ. ಹೊಲದಲ್ಲಿ ಎತ್ತುಗಳನ್ನು ಸಿಂಗರಿಸಿ ಮಾಸ್ಕ್ ಹಾಕಿ ಬಿತ್ತನೆ ಕಾರ್ಯಕ್ಕೆ ನಾಂದಿ ಹಾಡಿದ್ದಾರೆ ಈ ರೈತರು. ಸದ್ಯ ಮಾಸ್ಕ್ ಧರಿಸಿರುವ ಎತ್ತುಗಳ ದೃಶ್ಯ ಎಲ್ಲೆಡೆ ವೈರಲ್ ಆಗುತ್ತಿದೆ.
ಇದನ್ನೂ ಓದಿ: ಕೊವಿಡ್ 19 ಸೋಂಕಿನಿಂದ ಪಾಲಕರನ್ನು ಕಳೆದುಕೊಂಡ ಮಕ್ಕಳ ಬಗ್ಗೆ ಕಾಳಜಿ ವಹಿಸಿ; ರಾಜ್ಯ ಸರ್ಕಾರಗಳಿಗೆ ಕೇಂದ್ರದಿಂದ ಸೂಚನೆ
(Farmers add Face Mask to bulls in Kurige Pooja in Bagalkot)