ದಾವಣಗೆರೆ ಸ್ಟಾಫ್ ನರ್ಸ್ ಆತ್ಮಹತ್ಯೆಗೆ ಹೊಸ ತಿರುವು; ಜಿಲ್ಲಾಧಿಕಾರಿಗೆ ಪತ್ರ

ಆತ್ಮಹತ್ಯೆಗೂ ಮುನ್ನ ರಂಗಸ್ವಾಮಿ ಬರೆದಿಟ್ಟ ಡೆತ್​ನೋಟ್ ಕುಟುಂಬ ಸದಸ್ಯರಿಗೆ ಸಿಕ್ಕಿದೆ. ಸೋಮವಾರ ಸಂಜೆ ಹುಚ್ಚವನಹಳ್ಳಿ ಗ್ರಾಮದಲ್ಲಿ ಕೊರೊನಾ ಪಾಸಿಟಿವ್ ಪ್ರಕರಣಗಳು ಹೆಚ್ಚಾದ ಹಿನ್ನೆಲೆ ಜಿಲ್ಲಾಧಿಕಾರಿ ಗ್ರಾಮಕ್ಕೆ ಭೇಟಿ ನೀಡಿದ್ದರು. ಈ ವೇಳೆ ನರ್ಸ್ ಗ್ರಾಮದಲ್ಲಿ ಚಿಕಿತ್ಸೆ ನೀಡುವ ಬಗ್ಗೆ ಸ್ಥಳೀಯರಿಂದ ಜಿಲ್ಲಾಧಿಕಾರಿ ಮಾಹಿತಿ ಪಡೆದರು.

ದಾವಣಗೆರೆ ಸ್ಟಾಫ್ ನರ್ಸ್ ಆತ್ಮಹತ್ಯೆಗೆ ಹೊಸ ತಿರುವು; ಜಿಲ್ಲಾಧಿಕಾರಿಗೆ ಪತ್ರ
ಸ್ಟಾಫ್ ನರ್ಸ್ ರಂಗಸ್ವಾಮಿ
Follow us
sandhya thejappa
|

Updated on: May 26, 2021 | 9:23 AM

ದಾವಣಗೆರೆ: ನಿನ್ನೆ (ಮೇ 25) ಆತ್ಮಹತ್ಯೆಗೆ ಶರಣಾದ ಸ್ಟಾಫ್ ನರ್ಸ್ ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ. ನಾನು ನಕಲಿ ವೈದ್ಯನಲ್ಲ. ನನ್ನ ಮೇಲೆ ಕ್ರಿಮಿನಲ್ ಕೇಸ್ ಮಾಡುವುದಕ್ಕಿಂತ ಸನ್ಮಾನ ಮಾಡಬೇಕು ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿಗೆ ಆತ್ಮಹತ್ಯೆಗೆ ಶರಣಾದ ಸ್ಟಾಫ್ ನರ್ಸ್ ರಂಗಸ್ವಾಮಿ ಪತ್ರ ಬರೆದಿದ್ದಾರೆ. ದಾವಣಗೆರೆ ತಾಲೂಕಿನ ಮಾಯಕೊಂಡ ಸಮೀಪದ ಹುಚ್ಚವನಹಳ್ಳಿಯಲ್ಲಿ 30 ವರ್ಷದ ರಂಗಸ್ವಾಮಿ ಆತ್ಮಹತ್ಯೆ ಮಾಡಿಕೊಂಡಿದ್ದರು.

ಆತ್ಮಹತ್ಯೆಗೂ ಮುನ್ನ ರಂಗಸ್ವಾಮಿ ಬರೆದಿಟ್ಟ ಡೆತ್​ನೋಟ್ ಕುಟುಂಬ ಸದಸ್ಯರಿಗೆ ಸಿಕ್ಕಿದೆ. ಸೋಮವಾರ ಸಂಜೆ ಹುಚ್ಚವನಹಳ್ಳಿ ಗ್ರಾಮದಲ್ಲಿ ಕೊರೊನಾ ಪಾಸಿಟಿವ್ ಪ್ರಕರಣಗಳು ಹೆಚ್ಚಾದ ಹಿನ್ನೆಲೆ ಜಿಲ್ಲಾಧಿಕಾರಿ ಗ್ರಾಮಕ್ಕೆ ಭೇಟಿ ನೀಡಿದ್ದರು. ಈ ವೇಳೆ ನರ್ಸ್ ಗ್ರಾಮದಲ್ಲಿ ಚಿಕಿತ್ಸೆ ನೀಡುವ ಬಗ್ಗೆ ಸ್ಥಳೀಯರಿಂದ ಜಿಲ್ಲಾಧಿಕಾರಿ ಮಾಹಿತಿ ಪಡೆದರು. ಅಲ್ಲದೆ ರಂಗಸ್ವಾಮಿ ವಿರುದ್ಧ ಸರ್ಕಾರಿ ನೌಕರನಾಗಿದ್ದುಕೊಂಡು ಖಾಸಗಿಯಾಗಿ ಚಿಕಿತ್ಸೆ ನೀಡುತ್ತಿದ್ದ ಎಂಬ ಆರೋಪಿವಿತ್ತು.

ಗ್ರಾಮಕ್ಕೆ ಭೇಟಿ ನೀಡಿದ ವೇಳೆ ರಂಗಸ್ವಾಮಿಗೆ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ತಾಕೀತು ಮಾಡಿದ್ದರು. ಖಾಸಗಿಯಾಗಿ ಚಿಕಿತ್ಸೆ ನೀಡದಂತೆ ಎಚ್ಚರಿಕೆ ನೀಡಿದ್ದರು. ಈ ಬಗ್ಗೆ ಮಾಧ್ಯಮದಲ್ಲಿ ಪ್ರಕಟವಾಗಿತ್ತು. ಇದಕ್ಕೆ ಮನನೊಂದ ರಂಗಸ್ವಾಮಿ ಆತ್ಮಹತ್ಯೆಗೆ ಶರಣಾಗಿದ್ದರು ಎಂದು ಹೇಳಲಾಗುತ್ತಿತ್ತು.

ನಿತ್ಯ ನಾನು ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ಚಿಕಿತ್ಸೆ ನೀಡುವೆ. ಎಂಎಸ್​ಸಿ ನರ್ಸಿಂಗ್ ಓದಿರುವೆ. ಕೊರೊನಾ ವಾರಿಯರ್ ಆಗಿರುವ ನನಗೆ ಸನ್ಮಾನಿಸಬೇಕು. ಅದನ್ನ ಬಿಟ್ಟು ಕ್ರಿಮಿನಲ್ ಕೇಸ್ ಹಾಕುವ ಬಗ್ಗೆ ಹೇಳಿದ್ದು ತೀವ್ರ ಬೇಸರವಾಗಿದೆ ಎಂದು ಸ್ಟಾಫ್ ನರ್ಸ್ ಡೆತ್​ನೋಟ್​ನಲ್ಲಿ ಉಲ್ಲೇಖ ಮಾಡಿದ್ದಾರೆ. ಸದ್ಯ ಈ ಪ್ರಕರಣ ಮಾಯಕೊಂಡ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

ಡೆತ್​ನೋಟ್​

ಇದನ್ನೂ ಓದಿ ದಾವಣಗೆರೆ: ಸರ್ಕಾರಿ ನೌಕರನಾಗಿದ್ದುಕೊಂಡು ಖಾಸಗಿಯಾಗಿ ಚಿಕಿತ್ಸೆ ನೀಡುತ್ತಿದ್ದ ಎಂಬ ಆರೋಪ ಹೊಂದಿದ್ದ ಸ್ಟಾಫ್ ನರ್ಸ್ ಆತ್ಮಹತ್ಯೆಗೆ ಶರಣು

ಜೂನ್​ 7ರ ನಂತರವೂ ಲಾಕ್​ಡೌನ್ ಮುಂದುವರಿಕೆ ಬಹುತೇಕ ಖಚಿತ; ವಾಹನ ಸಂಚಾರಕ್ಕೆ ಷರತ್ತುಬದ್ಧ ಅನುಮತಿ ಸಾಧ್ಯತೆ

(Staff Nurse write a death note before suicide in Davanagere)