ದಾವಣಗೆರೆ: ಸರ್ಕಾರಿ ನೌಕರನಾಗಿದ್ದುಕೊಂಡು ಖಾಸಗಿಯಾಗಿ ಚಿಕಿತ್ಸೆ ನೀಡುತ್ತಿದ್ದ ಎಂಬ ಆರೋಪ ಹೊಂದಿದ್ದ ಸ್ಟಾಫ್ ನರ್ಸ್ ಆತ್ಮಹತ್ಯೆಗೆ ಶರಣು
ನಿನ್ನೆ ಗ್ರಾಮಕ್ಕೆ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಭೇಟಿ ನೀಡಿದ್ದರು. ಭೇಟಿ ನೀಡಿದ ವೇಳೆ ಖಾಸಗಿಯಾಗಿ ಚಿಕಿತ್ಸೆ ನೀಡದಂತೆ ಹೇಳಿದ್ದರು. ಈ ವಿಚಾರ ಮಾಧ್ಯಮಗಳಲ್ಲಿ ಪ್ರಕಟವಾಗಿತ್ತು. ಇದಕ್ಕೆ ಬೇಸತ್ತು 30 ವರ್ಷದ ಸ್ಟಾಫ್ ನರ್ಸ್ ರಂಗಸ್ವಾಮಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಮಾಹಿತಿ ತಿಳಿದುಬಂದಿದೆ.
ದಾವಣಗೆರೆ: ಪ್ರಾಥಮಿಕ ಆರೋಗ್ಯ ಕೇಂದ್ರದ ಸ್ಟಾಫ್ ನರ್ಸ್ ಆತ್ಮಹತ್ಯೆಗೆ ಶರಣಾಗಿದ್ದಾರೆ. ದಾವಣಗೆರೆ ತಾಲೂಕಿನ ಮಾಯಕೊಂಡ ಬಳಿಯ ಹುಚ್ಚವನಳ್ಳಿಯಲ್ಲಿಯ ರಂಗಸ್ವಾಮಿ ನೇಣಿಗೆ ಶರಣಾದ ಸ್ಟಾಫ್ ನರ್ಸ್. ರಂಗಸ್ವಾಮಿ ವಿರುದ್ಧ ಸರ್ಕಾರಿ ನೌಕರನಾಗಿದ್ದುಕೊಂಡು ಖಾಸಗಿಯಾಗಿ ಚಿಕಿತ್ಸೆ ನೀಡುತ್ತಿದ್ದ ಎಂಬ ಆರೋಪವಿತ್ತು. ನಿನ್ನೆ ಗ್ರಾಮಕ್ಕೆ ಭೇಟಿ ವೇಳೆ ಜಿಲ್ಲಾಧಿಕಾರಿ ತಾಕೀತು ಮಾಡಿದ್ದರು. ಖಾಸಗಿಯಾಗಿ ಚಿಕಿತ್ಸೆ ನೀಡದಂತೆ ಸ್ಟಾಫ್ ನರ್ಸ್ಗೆ ತಾಕೀತು ಮಾಡಿದ್ದರು. ಇದರಿಂದ ಮನನೊಂದು ರಂಗಸ್ವಾಮಿ ನೇಣಿಗೆ ಶರಣಾಗಿದ್ದಾರೆ ಎಂದು ಹೇಳಲಾಗುತ್ತಿದೆ.
ನಿನ್ನೆ ಗ್ರಾಮಕ್ಕೆ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಭೇಟಿ ನೀಡಿದ್ದರು. ಭೇಟಿ ನೀಡಿದ ವೇಳೆ ಖಾಸಗಿಯಾಗಿ ಚಿಕಿತ್ಸೆ ನೀಡದಂತೆ ಹೇಳಿದ್ದರು. ಈ ವಿಚಾರ ಮಾಧ್ಯಮಗಳಲ್ಲಿ ಪ್ರಕಟವಾಗಿತ್ತು. ಇದಕ್ಕೆ ಬೇಸತ್ತು 30 ವರ್ಷದ ಸ್ಟಾಫ್ ನರ್ಸ್ ರಂಗಸ್ವಾಮಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಮಾಹಿತಿ ತಿಳಿದುಬಂದಿದೆ. ತಾನು ಖಾಸಗಿ ಕ್ಲಿನಿಕ್ ನಡೆಸುತ್ತಿದ್ದ ಕಟ್ಟಡದಲ್ಲೇ ರಂಗಸ್ವಾಮಿ ನೇಣು ಬಿಗಿದುಕೊಂಡಿದ್ದಾರೆ.
6 ತಿಂಗಳ ಮಗುವಿಗೂ ಕೊರೊನಾ ಸೋಂಕು ಬಾಗಲಕೋಟೆ: ಆರು ತಿಂಗಳ ಹಸುಗೂಸಿಗೆ ಕೊರೊನಾ ಸೋಂಕಿರುವುದು ದೃಢವಾಗಿದೆ. ಬಾಗಲಕೋಟೆಯ ಕುಮಾರೇಶ್ವರ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಹೆಚ್ಎಫ್ಎನ್ಸಿ ಬೆಡ್ನಲ್ಲಿ ಮಗುವಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಜಿಲ್ಲೆಯ ಬಸವನ ಬಾಗೇವಾಡಿ ಮೂಲದ ಮಗುವಿಗೆ ಮಹಾಮಾರಿ ಕೊರೊನಾ ಸೋಂಕು ತಗುಲಿದೆ. ಸೋಂಕಿತ ಮಗುವಿನ ಜೊತೆ ಮಗುವಿನ ತಾಯಿ ಇದ್ದಾರೆ.
ನಿನ್ನೆ ಮಗುವಿಗೆ ತೇಗು ಬರಲು ಆರಂಭಿಸಿತ್ತು. ಇಳಕಲ್ ನಗರದ ಖಾಸಗಿ ಆಸ್ಪತ್ರೆಗೆ ಬಂದಿದ್ದರು. ಅಲ್ಲಿಂದ ಬಾಗಲಕೋಟೆ ಕುಮಾರೇಶ್ವರ ಆಸ್ಪತ್ರೆಗೆ ಕಳುಹಿಸಿದ್ದರು. ಮಗು ಮತ್ತು ತಾಯಿಗೆ ಆರ್ಟಿಪಿಸಿಆರ್ ಪರೀಕ್ಷೆ ಮಾಡಲಾಗಿತ್ತು. ಈ ವೇಳೆ ಮಗುವಿಗೆ ಕೊವಿಡ್ ಇರುವುದು ದೃಢಪಟ್ಟಿದೆ. ತಾಯಿಯ ವರದಿ ಇನ್ನೂ ಬಂದಿಲ್ಲ. ಸದ್ಯ ಮಕ್ಕಳ ತಜ್ಞರು ಮಗುವಿನ ಆರೋಗ್ಯದ ಮೇಲೆ ತೀವ್ರ ನಿಗಾ ವಹಿಸಿದ್ದಾರೆ.
ಇದನ್ನೂ ಓದಿ
ಬೊಜ್ಜು ಮತ್ತು ಅಧಿಕ ತೂಕವಿರುವವರು ತೀವ್ರ ಬ್ಯಾಕ್ಟೀರಿಯಾ ಸೋಂಕಿನಿಂದ ಸಾವಿಗೀಡಾಗಿದ್ದು ಕಡಿಮೆ: ವರದಿ
ಟೂಲ್ಕಿಟ್ ಪ್ರಕರಣದಲ್ಲಿ ಕಾಂಗ್ರೆಸ್ ನಾಯಕರಿಗೆ ನೊಟೀಸ್ ಜಾರಿ, ಬಿಜೆಪಿಯ ಸಂಬಿತ್ ಪಾತ್ರಾ ವಿಚಾರಣೆ ಸಾಧ್ಯತೆ
(Primary Health Centre commits suicide at Davanagere)