ಬೊಜ್ಜು ಮತ್ತು ಅಧಿಕ ತೂಕವಿರುವವರು ತೀವ್ರ ಬ್ಯಾಕ್ಟೀರಿಯಾ ಸೋಂಕಿನಿಂದ ಸಾವಿಗೀಡಾಗಿದ್ದು ಕಡಿಮೆ: ವರದಿ
ಬೊಜ್ಜು ಮತ್ತು ಹೆಚ್ಚಿನ ತೂಕ ಇರುವವರು ತೀವ್ರ ಬ್ಯಾಕ್ಟೀರಿಯಾ ಸೋಂಕಿನಿಂದ ಸಾವಿಗೀಡಾಗಿದ್ದು ಕಡಿಮೆ ಎಂಬುದನ್ನು ಹೊಸ ಅಧ್ಯಯನವೊಂದು ತಿಳಿಸಿದೆ.
ಅಧಿಕ ತೂಕ ಮತ್ತು ಬೊಜ್ಜು ಹೊಂದಿರುವುದು ಅನೇಕ ಕಾಯಿಲೆಗಳಿಗೆ ಅಪಾಯ ಎಂಬುದನ್ನು ಕೇಳಿಯೇ ಇರುತ್ತೀರಿ. ಆದರೀಗ ಹೊಸ ಅಧ್ಯಯನ, ಬೊಜ್ಜು ಮತ್ತು ಹೆಚ್ಚಿನ ತೂಕ ತೀವ್ರ ಬ್ಯಾಕ್ಟೀರಿಯಾ ಸೋಂಕಿನಿಂದ ಸಾವಿಗೀಡಾದವರ ಸಂಖ್ಯೆ ಕಡಿಮೆ ಎಂಬುದನ್ನು ತಿಳಿಸಿದೆ.
ಕೊವಿಡ್ 19 ಸಾಂಕ್ರಾಮಿಕ ರೋಗದ ಮೊದಲ ದತ್ತಾಂಶವನ್ನು ಸಂಗ್ರಹಿಸಲಾಗಿದೆ. ಸಾಲ್ಗ್ರೆನ್ಸ್ಕಾ ಅಕಾಡೆಮಿ, ಗೊಥೆನ್ಬರ್ಗ್ ವಿಶ್ವವಿದ್ಯಾಲಯ ಮತ್ತು ಸ್ಕೋವ್ಡೆಯ ಸ್ಕಾರಬೋರ್ಗ್ ಆಸ್ಪತ್ರೆಯ ವಿಜ್ಞಾನಿಗಳು ಈ ಕುರಿತಂತೆ ಸಂಶೋಧನೆ ನಡೆಸಿದೆ.
ಸ್ಕೋವ್ಡೆ ಸ್ಕಾರಬೋರ್ಗ್ ಆಸ್ಪತ್ರೆಯಲ್ಲಿ ತೀವ್ರವಾದ ಬ್ಯಾಕ್ಟೀರಿಯಾದಿಂದ ಚಿಕಿತ್ಸೆ ಪಡೆಯುತ್ತಿದ್ದ 2,196 ಜನರ ಅಧ್ಯಯವನ್ನು ನಡೆಸಿತು. ಒಟ್ಟು 9 ತಿಂಗಳಿನ ಅವಧಿಯನ್ನು ಅವಲೋಕಿಸಿ ಅಧ್ಯಯನ ನಡೆಸಲಾಯಿತು. ಫಲಿತಾಂಶದ ಪ್ರಕಾರ ಸಾಮಾನ್ಯ ತೂಕ ಹೊಂದಿರುವ ಜನರು ಒಂದು ವರ್ಷದಲ್ಲಿ ಶೇ.26ರಷ್ಟು ಜನ ಸಾವಿಗೀಡಾಗಿದ್ದಾರೆ. ಹೆಚ್ಚು ತೂಕ ಮತ್ತು ಬೊಜ್ಜು ಹೊಂದಿರುವವರು ಶೇ. 9-17ರಷ್ಟು ಜನ ಸಾವಿಗೀಡಾಗಿದ್ದಾರೆ ಎಂಬುದು ತಿಳಿದು ಬಂದಿದೆ. ಇದರಿಂದ ಅಧಿಕ ತೂಕ ಮತ್ತು ಬೊಜ್ಜು ಹೊದಿರುವವರು ತೀವ್ರವಾದ ಬ್ಯಾಕ್ಟೀರಿಯಾ ಸೋಂಕುಗಳ ವಿರುದ್ಧ ರಕ್ಷಣೆ ನೀಡಿ ಸಾವಿನ ಪ್ರಮಾಣವನ್ನು ಕಡಿಮೆ ಮಾಡಿದೆ ಎಂಬುದನ್ನು ತಿಳಿಸಿದೆ.
ಇತರ ರೋಗಗಳಿಗೆ ಸಂಬಂಧಿಸಿದಂತೆ ಹೆಚ್ಚಿನ ತೂಕ ಮತ್ತು ಬೊಜ್ಜಿನಿಂದ ದುಷ್ಪರಿಣಾಮಗಳೇ ಹೆಚ್ಚು. ಇದು ಕ್ಯಾನ್ಸರ್, ಹೃದಯ ರಕ್ತನಾಳದ ಕಾಯಿಲೆಗೆ ಕಾರಣವಾಗುತ್ತದೆ. ಆದರೆ ತೀವ್ರ ಬೊಜ್ಜು ಮತ್ತು ತೂಕ ಸೋಂಕಿನ ವಿರುದ್ಧ ಹೋರಾಡಲು ಹೇಗೆ ಸಹಕರಿಸುತ್ತದೆ ಎಂಬುದು ಕುತೂಹಲಕಾರಿಯಾದ ಪ್ರಶ್ನೆ ಆಗಿದೆ.
ಈ ಕುರಿತಾಗಿ ಸಾಲ್ಗ್ರೆನ್ಸ್ಕಾ ಅಕಾಡೆಮಿ ಮತ್ತು ಸ್ಕೋವ್ಡೆನ ಸ್ಕಾರಬೋರ್ಗ್ ಆಸ್ಪತ್ರೆಯ ಹಿರಿಯ ಸಲಹೆಗಾರ ಹಾಗೂ ಹಿರಿಯ ಲೇಖಕ ಗುನ್ನರ್ ಜಾಕೋಬ್ಸನ್ ಮಾತನಾಡಿ, ಕೊವಿಡ್ 19ನಿಂದ ಅಧಿಕ ತೂಕ ಹೊಂದಿರುವವರಿಗೆ ತೀವ್ರವಾದ ಹೊಡೆತ ಬಿದ್ದಿದೆ. ಸಾಮಾನ್ಯವಾಗಿ ನೋಡುವುದಾದರೆ ಬೊಜ್ಜಿನಿಂದ ಅನೇಕ ರೋಗಗಳು ಆವರಿಸಿಕೊಳ್ಳುವುದು ಹೆಚ್ಚು. ಆದರೆ, ಹೆಚ್ಚಿನ ತೂಕ ಮತ್ತು ಬೊಜ್ಜು ಸೋಂಕಿನ ವಿರುದ್ಧ ದೇಹದ ರಕ್ಷಣೆಗೆ ಹೇಗೆ ಸಹರಿಸುತ್ತದೆ ಎಂಬುದರ ಕುರಿತಾಗಿ ಇನ್ನೂ ಹೆಚ್ಚಿನ ಅಧ್ಯಯನದ ಅಗತ್ಯವಿದೆ ಎಂದು ಹೇಳಿದ್ದಾರೆ.
ಜನಸಂಖ್ಯೆಯನ್ನಾಧರಿಸಿ ವಿವಿಧ ಸಾಂಕ್ರಾಮಿಕ ಕಾಯಿಲೆಗಳಲ್ಲಿನ ಚಿಕಿತ್ಸೆಯ ಫಲಿತಾಂಶಗಳ ಮೇಲೆ ಬೊಜ್ಜು ಯಾವ ರೀತಿಯ ಪರಿಣಾಮ ಬೀರುತ್ತದೆ ಎಂಬುದರ ಕುರಿತಾಗಿ ಇನ್ನೂ ಹೆಚ್ಚಿನ ಅಧ್ಯಯನ ಅವಶ್ಯಕತೆ ಇದೆ ಎಂದು ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ:
ಬ್ಲಾಕ್ ಫಂಗಸ್ ತಡೆಗಟ್ಟಲು ಎಲ್ಲಾ ರೀತಿಯ ಸಿದ್ಧತೆಗಳು ಆಗಿವೆ: ಆರೋಗ್ಯ ಸಚಿವ ಡಾ.ಕೆ.ಸುಧಾಕರ್
ಲಸಿಕಾ ಅಭಿಯಾನಕ್ಕೆ ತಗುಲಲಿರುವ ವೆಚ್ಚವು ಲಾಕ್ಡೌನ್ಗಳಿಂದ ಆಗಿರುವ ನಷ್ಟಕ್ಕಿಂತ ಕಡಿಮೆಯಿರಲಿದೆ: ವರದಿ
Published On - 2:38 pm, Tue, 25 May 21