Betel Leaves Benefits: ವೀಳ್ಯದೆಲೆ ತಿನ್ನುವುದು ಅಜ್ಜ ಅಜ್ಜಿ ಮಾತ್ರ ಅಲ್ಲ; ಹಲ್ಲು ಕೆಂಪಾಗದಂತೆ ನೀವೂ ತಿಂದು ಆರೋಗ್ಯ ವೃದ್ಧಿಸಿಕೊಳ್ಳಿ

ಸಾಮಾನ್ಯವಾಗಿ ಊಟದ ಬಳಿಕ ವೀಳ್ಯದೆಲೆಯನ್ನು ಸೇವಿಸುತ್ತಾರೆ. ಇದಕ್ಕೆ ಪ್ರಮುಖ ಕಾರಣ ಈ ಎಲೆಗಳು ಜೀರ್ಣಕ್ರಿಯೆಗೆ ಹೆಚ್ಚು ಸಹಕಾರಿಯಾಗಿದ್ದು, ಸರಾಗವಾಗಿ ತಿಂದ ಅನ್ನ ಕರಗಲಿ ಎಂದು ಒಂದು ಎಲೆ ಅಡಿಕೆ ಹಾಕಿ ಮಲಗುವುದು ರೂಡಿ. ಇದನ್ನು ಹೊರತು ಪಡಿಸಿ ನಾನಾ ರೀತಿಯ ಆರೋಗ್ಯಕರ ಅಂಶಗಳು ವೀಳ್ಯದೆಲೆಯಲ್ಲಿ ಇದೆ.

Betel Leaves Benefits: ವೀಳ್ಯದೆಲೆ ತಿನ್ನುವುದು ಅಜ್ಜ ಅಜ್ಜಿ ಮಾತ್ರ ಅಲ್ಲ; ಹಲ್ಲು ಕೆಂಪಾಗದಂತೆ ನೀವೂ ತಿಂದು ಆರೋಗ್ಯ ವೃದ್ಧಿಸಿಕೊಳ್ಳಿ
ವೀಳ್ಯದೆಲೆ
Follow us
preethi shettigar
|

Updated on: May 26, 2021 | 9:08 AM

ವೀಳ್ಯದೆಲೆ ತಿನ್ನಿ ಎಂದಾಕ್ಷಣ ನಾವೇನು ಅಜ್ಜ- ಅಜ್ಜಿಯೇ ಎಂದು ಹಾಸ್ಯಮಾಡಿ ಮಾತನಾಡುವವರು ನಮ್ಮ ನಡುವೆ ಇದ್ದಾರೆ. ಆದರೆ ವೀಳ್ಯದೆಲೆ ಕೇವಲ ಒಂದು ವ್ಯಸನವಾಗಿ ಮಾತ್ರವಲ್ಲ ಈ ಎಲೆಗಳಿಂದ ದೇಹಕ್ಕೆ ಸೀಗುವ ಆರೋಗ್ಯಕರ ಅಂಶಗಳ ಬಗ್ಗೆಯು ನಾವು ತಿಳಿದುಕೊಳ್ಳುವುದು ಮುಖ್ಯ. ದುಡ್ಡು ಕೊಟ್ಟು ಹತ್ತಾರು ತರಹದ ಔಷಧಿಗಳನ್ನು ತರಿಸಿಕೊಳ್ಳುವ ಬದಲು, ಮನೆ ಹಿತ್ತಲಲ್ಲಿ ಅಥವಾ ತೋಟದಲ್ಲಿನ ವೀಳ್ಯದೆಲೆಯನ್ನು ಆರೋಗ್ಯದ ಹಿತ ದೃಷ್ಟಿಯಿಂದ ಸೇವಿಸಿ. ಅಭ್ಯಾಸ ಮಾಡಿಕೊಳ್ಳುವುದು ಬೇಡವಾದರೂ, ಆರೋಗ್ಯದ ದೃಷ್ಟಿಯಿಂದ ಸೇವಿಸಿ ಮತ್ತು ಎಲೆಯ ವಿಶೇಷತೆ ತಿಳಿದುಕೊಳ್ಳಿ.

ವೀಳ್ಯದೆಲೆ ಮತ್ತು ಉತ್ತಮ ಆರೋಗ್ಯ ಸಾಮಾನ್ಯವಾಗಿ ಊಟದ ಬಳಿಕ ವೀಳ್ಯದೆಲೆಯನ್ನು ಸೇವಿಸುತ್ತಾರೆ. ಇದಕ್ಕೆ ಪ್ರಮುಖ ಕಾರಣ ಈ ಎಲೆಗಳು ಜೀರ್ಣಕ್ರಿಯೆಗೆ ಹೆಚ್ಚು ಸಹಕಾರಿಯಾಗಿದ್ದು, ಸರಾಗವಾಗಿ ತಿಂದ ಅನ್ನ ಕರಗಲಿ ಎಂದು ಒಂದು ಎಲೆ ಅಡಿಕೆ ಹಾಕಿ ಮಲಗುವುದು ರೂಢಿ. ಇದನ್ನು ಹೊರತು ಪಡಿಸಿ ನಾನಾ ರೀತಿಯ ಆರೋಗ್ಯಕರ ಅಂಶಗಳು ವೀಳ್ಯದೆಲೆಯಲ್ಲಿ ಇದೆ.

1. ಮಕ್ಕಳ ಆರೋಗ್ಯಕ್ಕೆ ವೀಳ್ಯದೆಲೆ ರಾಮಬಾಣ ಪುಟ್ಟ ಮಕ್ಕಳಿಗೆ ಮಾತ್ರೆ, ಇನ್ನಿತರ ಔಷಧಿಗಳನ್ನು ತಂದು ಕೊಡುವುದರ ಬದಲು ಒಂದು ವೀಳ್ಯದೆಲೆಯನ್ನು ಚೆನ್ನಾಗಿ ಜಜ್ಜಿ ಅದರಿಂದ ತೆಗೆದ ರಸವನ್ನು ಮಕ್ಕಳಿಗೆ ಕೂಡಿಸುವುದು ಉತ್ತಮವಾದ ಅಭ್ಯಾಸ. ಕ್ಯಾಲ್ಸಿಯಂ ಅಂಶ ಈ ಎಲೆಗಳಲ್ಲಿ ಹೇರಳವಾಗಿರುವುದರಿಂದ ಇದು ಮಕ್ಕಳಿಗೆ ಹೆಚ್ಚು ಶಕ್ತಿಯನ್ನು ನೀಡುತ್ತದೆ. ಇನ್ನು ಕೆಮ್ಮು, ಶೀತದಂತಹ ಸಮಸ್ಯೆಗಳು ಬಾಲ್ಯದಲ್ಲಿ ಮಕ್ಕಳನ್ನು ಆಗಾಗ ಕಾಡುತ್ತಿರುತ್ತದೆ. ಹೀಗಾಗಿ ವೀಳ್ಯದೆಲೆಯನ್ನು ಕೊಬ್ಬರಿ ಎಣ್ಣೆಯಲ್ಲಿ ನೆನೆಸಿ ಸ್ವಲ್ಪ ಬಿಸಿ ಮಾಡಿ ಮಕ್ಕಳ ಎದೆಗೆ ಮತ್ತು ಬೆನ್ನಿಗೆ ಉಜ್ಜಿದರೆ ಈ ಸಮಸ್ಯೆ ದೂರವಾಗುತ್ತದೆ.

2. ದಂತ ಸಮಸ್ಯೆಯನ್ನು ದೂರ ಮಾಡುತ್ತದೆ ಸಾಮಾನ್ಯವಾಗಿ ಬಾಯಿಯಲ್ಲಿ ಅನೇಕ ಸಮಸ್ಯೆಗಳು ಉಂಟಾಗುತ್ತದೆ. ಇದಕ್ಕೆ ವೀಳ್ಯದೆಲೆ ಹೆಚ್ಚು ಉಪಯುಕ್ತ. ವೀಳ್ಯದೆಲೆಯನ್ನು ನೀರಿನಲ್ಲಿ ಕುದುಸಿ, ಅದಕ್ಕೆ ಬೇಕಾದಷ್ಟು ಉಪ್ಪು ಬೆರೆಸಿ, ಬಾಯಿ ಮುಕ್ಕಳಿಸುವುದರಿಂದ ಹಲ್ಲಿನ ಸಮಸ್ಯೆ, ವಸಡು ನೋವು ಮತ್ತು ಇನ್ನಿತರ ಬಾಯಿಗೆ ಸಂಬಂಧಿಸಿದ ಸಮಸ್ಯೆ ದೂರವಾಗುತ್ತದೆ.

3. ಉಸಿರಾಟದ ಸಮಸ್ಯೆಯ ನಿವಾರಕ ಕೊರೊನಾ ಎರಡನೇ ಅಲೆಯ ಈ ಕಾಲಘಟ್ಟದಲ್ಲಿ ಶ್ವಾಸಕೋಶದ ಸಮಸ್ಯೆ ಕಾಡುತ್ತಿದೆ. ಹೀಗಾಗಿ ಉಸಿರಾಟದ ಸಮಸ್ಯೆಯಿಂದ ಬಚಾವಾಗಲು ವೀಳ್ಯದೆಲೆ ಸೇವಿಸಿ. ವೀಳ್ಯದೆಲೆ, ಶುಂಠಿ ಹಾಗೂ ಜೇನು ತುಪ್ಪವನ್ನು ಬೆರೆಸಿ, ಬೆಳಿಗ್ಗೆ ಖಾಲಿ ಹೊಟ್ಟೆಗೆ ಸೇವಿಸುವುದರಿಂದ ಉಸಿರಾಟ ತೊಂದರೆ ಕಡಿಮೆಯಾಗುತ್ತದೆ. ಇನ್ನು ಶ್ವಾಸಕೋಶಕ್ಕೆ ಸಂಬಂಧಿಸಿದ ಇತರ ಕಾಯಿಲೆಗಳಿಗೂ ಕೂಡ ಇದು ರಾಮಬಾಣವಾಗಿದೆ.

4. ಕ್ಯಾನ್ಸರ್​ ತಡೆಯಲು ಸಹಕಾರಿ ವೀಳ್ಯದೆಲೆ ಕ್ಯಾನ್ಸರ್​ನಂತಹ ಮಾರಾಣಾಂತಿಕ ಕಾಯಿಲೆಯನ್ನು ದೂರ ಮಾಡುತ್ತದೆ. ಆಂಟಿಆಕ್ಸಿಡೆಂಟ್, ಆಂಟಿಮುಟಜೆನಿಕ್ ಮತ್ತು ಸಫ್ರೋಲ್ ಅಂಶಗಳು ಇರುವುದರಿಂದ ಇದು ಕ್ಯಾನ್ಸರ್​ನಿಂದ ರಕ್ಷಣೆ ನೀಡುತ್ತದೆ. ವೀಳ್ಯದೆಲೆಯನ್ನು ತಂಬಾಕು ಜೊತೆಗೆ ಸೇರಿಸಿಕೊಳ್ಳದೆ ಹಾಗೆ ತಿನ್ನುವುದರಿಂದ ಹೆಚ್ಚು ಉಪಯೋಗಳಿದೆ.

5. ಇತರ ಉಪಯೋಗಗಳು ವೀಳ್ಯದೆಲೆ ಗಾಯ ಬೇಗ ವಾಸಿಯಾಗಲು ಸಹಕಾರಿಯಾಗಿದೆ.ಈ ಕಾರಣಕ್ಕೆ ಆಯುರ್ವೇದದಲ್ಲಿ ವೀಳ್ಯದೆಲೆಗೆ ವಿಶೇಷವಾದ ಸ್ಥಾನವಿದೆ. ವೀಳ್ಯದೆಲೆಯಲ್ಲಿನ ಪಾಲಿಫೆನಾಲ್​ ಗಾಯ ಬೇಗ ಒಣಗುವಂತೆ ಮಾಡುತ್ತದೆ. ಮಧುಮೇಹವನ್ನು ಕೂಡ ವೀಳ್ಯದೆಲೆ ಕಡಿಮೆ ಮಾಡುತ್ತದೆ. ಇನ್ನು ಹೊಟ್ಟು ಹೆಚ್ಚಾಗಿ ತಲೆಯಲ್ಲಿ ಇದ್ದು, ಕೂದಲು ಉದುರುತ್ತಿದ್ದರೆ ಅಂತವರು ಕೂಡ ಇದನ್ನು ಚೆನ್ನಾಗಿ ರುಬ್ಬಿ ತಲೆಗೆ ಹಚ್ಚಿಕೊಳ್ಳಿ ಇದರಿಂದ ಹೊಟ್ಟು ಕಡಿಮೆಯಾಗುತ್ತದೆ. ರಕ್ತದಲ್ಲಿ ಗ್ಲೂಕೋಸ್​ ಮಟ್ಟವನ್ನು ಕೂಡ ಇದು ನಿಯಂತ್ರಣದಲ್ಲಿ ಇಡುತ್ತದೆ. ವೀಳ್ಯದೆಲೆ ಹೊಟ್ಟೆ ನೋವು, ಗ್ಯಾಸ್ಟಿಕ್​ನಂತಹ ಸಮಸ್ಯೆಗಳನ್ನು ನಿವಾರಿಸುತ್ತದೆ.

ಇದನ್ನೂ ಓದಿ:

ತಾಂಬೂಲ ಹೇಗೆ ನೀಡಬೇಕು, ತಾಂಬೂಲ ಹಾಕಿಕೊಳ್ಳುವಾಗ ತುದಿ ಭಾಗ ಕೀಳುವುದೇಕೆ?

ಖಾಲಿ ಹೊಟ್ಟೆಯಲ್ಲಿ ಬಾಳೆ ದಿಂಡಿನ ರಸ ಸೇವಿಸಿ; ವರ್ಷಕ್ಕೆ ಎರಡು ಬಾರಿಯಾದರು ಊಟದ ಜೊತೆಗೆ ಪಲ್ಯ ಮಾಡಿ ಬಡಿಸಿ

ಬೆಂಗಳೂರಿನಲ್ಲಿ ಹೊಸ ವರ್ಷಾಚರಣೆ ವೇಳೆ ಅಸಭ್ಯ ವರ್ತನೆ: ಜನರಿಂದ ಧರ್ಮದೇಟು
ಬೆಂಗಳೂರಿನಲ್ಲಿ ಹೊಸ ವರ್ಷಾಚರಣೆ ವೇಳೆ ಅಸಭ್ಯ ವರ್ತನೆ: ಜನರಿಂದ ಧರ್ಮದೇಟು
ಗುಡ್​ಬೈ 2024: ವೆಲ್​ಕಮ್​ 2025, ಜನರ ಜೋಶ್ ನೋಡಿ
ಗುಡ್​ಬೈ 2024: ವೆಲ್​ಕಮ್​ 2025, ಜನರ ಜೋಶ್ ನೋಡಿ
ಹೊಸ ವರ್ಷಾಚರಣೆ: ಜಗಮಗಿಸುವ ವಾತಾವರಣದಲ್ಲಿ ಕಿಕ್ಕಿರಿದು ಸೇರಿದ ಜನಸಾಗರ
ಹೊಸ ವರ್ಷಾಚರಣೆ: ಜಗಮಗಿಸುವ ವಾತಾವರಣದಲ್ಲಿ ಕಿಕ್ಕಿರಿದು ಸೇರಿದ ಜನಸಾಗರ
ಕಾನೂನಿನ ಚೌಕಟ್ಟಿನಲ್ಲಿ ಹೊಸ ವರ್ಷಾಚರಣೆ ಮಾಡಿ; ಪೊಲೀಸ್ ಕಮಿಷನರ್ ಮನವಿ
ಕಾನೂನಿನ ಚೌಕಟ್ಟಿನಲ್ಲಿ ಹೊಸ ವರ್ಷಾಚರಣೆ ಮಾಡಿ; ಪೊಲೀಸ್ ಕಮಿಷನರ್ ಮನವಿ
ದೇಗುಲದಲ್ಲಿ ಭಕ್ತನಂತೆ ಕೈ ಮುಗಿದು ಕುಳಿತು ಆಂಜನೇಯನ ಕಿರೀಟವನ್ನೇ ಕದ್ದ ಕಳ್ಳ
ದೇಗುಲದಲ್ಲಿ ಭಕ್ತನಂತೆ ಕೈ ಮುಗಿದು ಕುಳಿತು ಆಂಜನೇಯನ ಕಿರೀಟವನ್ನೇ ಕದ್ದ ಕಳ್ಳ
ಹೊಸವರ್ಷದ ಆಗಮನಕ್ಕಾಗಿ ಎಲ್ಲೆಡೆ ಶುರುವಾಗಿದೆ ಕ್ಷಣಗಣನೆ
ಹೊಸವರ್ಷದ ಆಗಮನಕ್ಕಾಗಿ ಎಲ್ಲೆಡೆ ಶುರುವಾಗಿದೆ ಕ್ಷಣಗಣನೆ
ರಜತ್​ಗೆ ರಿವರ್ಸ್​, ಧನರಾಜ್​-ಹನುಮಂತುಗೆ ಫಾಸ್ಟ್ ಫಾರ್ವರ್ಡ್
ರಜತ್​ಗೆ ರಿವರ್ಸ್​, ಧನರಾಜ್​-ಹನುಮಂತುಗೆ ಫಾಸ್ಟ್ ಫಾರ್ವರ್ಡ್
ಕೇಕ್ ಕತ್ತರಿಸಿ, ಪಟಾಕಿ ಸಿಡಿಸಿ ಹೊಸ ವರ್ಷ ಬರಮಾಡಿಕೊಂಡ ಆಕ್ಲೆಂಡ್ ಜನರು
ಕೇಕ್ ಕತ್ತರಿಸಿ, ಪಟಾಕಿ ಸಿಡಿಸಿ ಹೊಸ ವರ್ಷ ಬರಮಾಡಿಕೊಂಡ ಆಕ್ಲೆಂಡ್ ಜನರು
ಮೈಸೂರು ಅರಮನೆಯ ವಿದ್ಯುದ್ದೀಪ ಅಲಂಕಾರ ಇನ್ನೂ ಚೆಂದ: ರೈತರು
ಮೈಸೂರು ಅರಮನೆಯ ವಿದ್ಯುದ್ದೀಪ ಅಲಂಕಾರ ಇನ್ನೂ ಚೆಂದ: ರೈತರು
ಈ ವರ್ಷದ ಕೊನೆಯ ಸೂರ್ಯಾಸ್ತ: ಕ್ಯಾಮರಾ ಕಣ್ಣಲ್ಲಿ ಸೆರೆಯಾಯ್ತು ಮನಮೋಹಕ ದೃಶ್ಯ
ಈ ವರ್ಷದ ಕೊನೆಯ ಸೂರ್ಯಾಸ್ತ: ಕ್ಯಾಮರಾ ಕಣ್ಣಲ್ಲಿ ಸೆರೆಯಾಯ್ತು ಮನಮೋಹಕ ದೃಶ್ಯ