AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಖಾಲಿ ಹೊಟ್ಟೆಯಲ್ಲಿ ಬಾಳೆ ದಿಂಡಿನ ರಸ ಸೇವಿಸಿ; ವರ್ಷಕ್ಕೆ ಎರಡು ಬಾರಿಯಾದರು ಊಟದ ಜೊತೆಗೆ ಪಲ್ಯ ಮಾಡಿ ಬಡಿಸಿ

ಕಲ್ಲನ್ನು ಕರಗಿಸುವ ಶಕ್ತಿ ಬಾಳೆ ದಿಂಡಿಗೆ ಇದೆ ಎನ್ನುವ ಮಾತು ಪುರಾತನವಾದದ್ದು, ಆದರೆ ಅದು ಇಂದು ಕೂಡ ನಮ್ಮ Banana Stem Benefits: ನಡುವೆ ಉಳಿದುಕೊಂಡಿದೆ. ಇದಕ್ಕೆ ಕಾರಣ ಬಾಳೆ ದಿಂಡಿನಿಂದ ಮಾಡಿದ ಜ್ಯೂಸ್ ಕುಡಿದರೆ ಕಿಡ್ನಿ ಸ್ಟೋನ್ ಸಮಸ್ಯೆ ಕಡಿಮೆಯಾಗುತ್ತದೆ. ಮೂತ್ರಪಿಂಡದಲ್ಲಾಗುವ ಕಲ್ಲಿನ ಸಮಸ್ಯೆಗೆ ಬಾಳೆ ದಿಂಡಿನಲ್ಲಿರುವ ಪೊಟ್ಯಾಸಿಯಮ್ ಅಂಶ ರಾಮಬಾಣವಾಗಿದೆ.

ಖಾಲಿ ಹೊಟ್ಟೆಯಲ್ಲಿ ಬಾಳೆ ದಿಂಡಿನ ರಸ ಸೇವಿಸಿ; ವರ್ಷಕ್ಕೆ ಎರಡು ಬಾರಿಯಾದರು ಊಟದ ಜೊತೆಗೆ ಪಲ್ಯ ಮಾಡಿ ಬಡಿಸಿ
ಬಾಳೆ ದಿಂಡು
preethi shettigar
| Edited By: |

Updated on: May 25, 2021 | 7:22 AM

Share

ಒಂದು ಬಾಳೆಯ ಮರ ಮನೆಯ ಪಕ್ಕದಲ್ಲಿದ್ದರೆ ನಾನಾ ರೀತಿಯ ಉಪಯೋಗಗಳು ಇದೆ ಎನ್ನುವುದು ಹಿಂದಿನಿಂದಲೂ ಹಿರಿಯರು ಹೇಳಿಕೊಂಡು ಬಂದಿರುವ ಮಾತು . ಕೇವಲ ಬಾಳೆ ಹಣ್ಣು, ಬಾಳೆ ಎಲೆ ಅಷ್ಟಕ್ಕೆ ಮಾತ್ರ ಇದು ಸೀಮಿತವಾಗಿಲ್ಲ. ಬದಲಿಗೆ, ಬಾಳೆ ಮರದ ದಂಟು ಅಥವಾ ದಿಂಡು ಕೂಡ ಉಪಯೋಗಕ್ಕೆ ಬರುತ್ತದೆ. ಅದರಲ್ಲೂ ಬಾಳೆ ದಿಂಡು ಆರೋಗ್ಯದ ದೃಷ್ಟಿಯಿಂದ ಹೆಚ್ಚು ಉಪಯುಕ್ತಕಾರಿ. ಸಾಮಾನ್ಯವಾಗಿ ಮಳೆಗಾಲದಲ್ಲಿ ಗಾಳಿ ಮಳೆಗೆ ಬಾಳೆ ಮರ ನೆಲಕ್ಕಚ್ಚುವುದು ನಡೆಯುತ್ತಿರುತ್ತದೆ. ಈ ಸಂದರ್ಭದಲ್ಲಿ ಎಲೆ ಮತ್ತು ಬಾಳೆ ಕಾಯಿಯನ್ನು ತುಂಡು ಮಾಡಿ ತೆಗೆದು ಅಡುಗೆ ಕೊಣೆಯಲ್ಲಿ ಇಡುವಂತೆ, ಬಾಳೆ ಮರದ ಮಧ್ಯಭಾಗವನ್ನು ತುಂಡು ಬಾಡಿ ಅಡುಗೆ ಮನೆಗೆ ತನ್ನಿ ಮತ್ತು ಅದನ್ನು ಸೇವಿಸುವ ಮೂಲಕ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಿ.

ಬಾಳೆ ಮರದ ಮೇಲೆ ಸೊನೆ ಇರುತ್ತದೆ ಅದನ್ನು ತಿನ್ನುವುದು ಹೇಗೆ ಎನ್ನುವುದು ಹಲವರಿಗೆ ಗೊಂದಲ ಇರಬಹುದು ಆದರೆ ಬಾಳೆ ಮರವನ್ನು ಮಧ್ಯಕ್ಕೆ ಕಡಿದು ಅದರ ಸುರುಳಿಗಳನ್ನು, ಒಳಗಿನ ಬಿಳಿ ಅಂಶ ಕಾಣುವವವರೆಗೆ ಬಿಡಿಸಬೇಕು. ಯಾವಾಗ ಬಿಳಿಯ ದಿಂಡು ಕಾಣುತ್ತದೆ, ಆಗ ಅದನ್ನು ಸಣ್ಣ ಸಣ್ಣ ತುಂಡುಗಳನ್ನಾಗಿ ಮಾಡಿಕೊಳ್ಳಬೇಕು. ಈ ರೀತಿಯ ಬಿಳಿ ಬಣ್ಣದ ಬಾಳೆ ದಿಂಡು ಆರೋಗ್ಯಕರವಾದ ಬಳಕೆಗೆ ಸಾಕ್ಷಿಯಾಗುತ್ತದೆ.

ಬಾಳೆ ದಿಂಡು ಮತ್ತು ಆರೋಗ್ಯ

ಬಾಳೆ ದಿಂಡಿನ ಪಲ್ಯ: ಸಾಮಾನ್ಯವಾಗಿ ಬಾಳೆ ದಿಂಡಿನ ಪಲ್ಯವನ್ನು ವರ್ಷಕ್ಕೆ ಎರಡುಬಾರಿಯಾದರು ತಿನ್ನಲೇ ಬೇಕು ಎನ್ನುವ ಮಾತು ಇದೆ. ಇದಕ್ಕೆ ಕಾರಣ ಬಾಳೆ ದಿಂಡಿನಿಂದ ಮಾಡುವ ಪಲ್ಯ. ಪಲ್ಯವನ್ನು ಮಾಡಿ ತಿನ್ನುವುದರಿಂದ ಹೊಟ್ಟೆ ಭಾಗಕ್ಕೆ ತುಂಬಾ ಒಳಿತು. ಉಗುರು ತಿನ್ನುವ ಅಭ್ಯಾಸ ಇರುವವರು ಇದನ್ನು ತಿನ್ನಲೇ ಬೇಕು ಮತ್ತು ಹೊಟ್ಟೆ ನೋವು, ಮಲಬದ್ಧತೆ, ಹೊಟ್ಟೆಯಲ್ಲಿನ ಕಲ್ಮಶ ಅಥವಾ ಹೊಟ್ಟೆಯಲ್ಲಿ ಕೂದಲು ಸೇರಿಕೊಂಡಿದ್ದರೆ ಇದು ಎಲ್ಲವನ್ನು ಶುದ್ಧ ಮಾಡುತ್ತದೆ. ಇನ್ನು ಬಾಳೆ ನಾರಿನಾಂಶವಾಗಿರುವುದರಿಂದ ಇದು ಜೀರ್ಣಕ್ರಿಯೆಗೆ ಕೂಡ ಸಹಕಾರಿಯಾಗಿದೆ. ಆ ಮೂಲಕ ಹೊಟ್ಟೆ ಉಬ್ಬರಿಸುವುದು ಸೇರಿ ಇನ್ನಿತರ ಕಾಯಿಲೆಯಿಂದ ನಮ್ಮನ್ನು ರಕ್ಷಿಸಲು ಬಾಳೆ ದಿಂಡು ಸಹಕಾರಿಯಾಗಿದೆ.

ಬಾಳೆ ದಿಂಡಿನ ಜ್ಯೂಸ್: ಕಲ್ಲನ್ನು ಕರಗಿಸುವ ಶಕ್ತಿ ಬಾಳೆ ದಿಂಡಿಗೆ ಇದೆ ಎನ್ನುವ ಮಾತು ಪುರಾತನವಾದದ್ದು, ಆದರೆ ಅದು ಇಂದು ಕೂಡ ನಮ್ಮ ನಡುವೆ ಉಳಿದುಕೊಂಡಿದೆ. ಇದಕ್ಕೆ ಕಾರಣ ಬಾಳೆ ದಿಂಡಿನಿಂದ ಮಾಡಿದ ಜ್ಯೂಸ್ ಕುಡಿದರೆ ಕಿಡ್ನಿ ಸ್ಟೋನ್ ಸಮಸ್ಯೆ ಕಡಿಮೆಯಾಗುತ್ತದೆ. ಮೂತ್ರಪಿಂಡದಲ್ಲಾಗುವ ಕಲ್ಲಿನ ಸಮಸ್ಯೆಗೆ ಬಾಳೆ ದಿಂಡಿನಲ್ಲಿರುವ ಪೊಟ್ಯಾಸಿಯಮ್ ಅಂಶ ರಾಮಬಾಣವಾಗಿದೆ. ಬಾಳೆ ದಿಂಡನ್ನು ಬಿಡಿಸಿ ರುಬ್ಬಿ ಅದರ ರಸವನ್ನು ತೆಗೆದು ಕುಡಿಯುವುದರಿಂದ ಕಿಡ್ನಿ ಸ್ಟೋನ್ ಮಾಯವಾಗುತ್ತದೆ. ರಕ್ತಹೀನತೆಯನ್ನು ಕೂಡ ಇದು ದೂರ ಮಾಡುತ್ತದೆ. ಕಾರಣ ಬಾಳೆ ದಿಂಡಿನಲ್ಲಿ ಕಬ್ಬಿಣಾಂಶ ಹೆಚ್ಚಾಗಿದ್ದು, ವಿಟಮಿನ್ ಬಿ 6 ಕೂಡ ಹೇರಳವಾಗಿದೆ. ಅಲ್ಲದೆ ಇದರಲ್ಲಿ ಫೈಬರ್ ಅಂಶವು ಕೂಡ ಇದೆ.

ರೋಗನಿರೋಧಕ ಶಕ್ತಿ ಹೆಚ್ಚಿಸುತ್ತದೆ ಕೊರೊನಾ ಎರಡನೇ ಅಲೆಯ ಈ ಕಾಲಘಟ್ಟದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳುವುದು ಅತಿ ಮುಖ್ಯ. ಇದಕ್ಕೆ ಬಾಳೆ ದಿಂಡು ಪುಷ್ಠಿ ನೀಡುತ್ತದೆ. ಕಾರಣ ಬಾಳೆ ದಿಂಡಿನಲ್ಲಿ ರೋಗನಿರೋಧಕ ಶಕ್ತಿ ಇದೆ. ಅಲ್ಲದೆ ಬಾಳೆ ದಿಂಡನ್ನು ಸೇವಿಸುವುದರಿಂದ ತೂಕವನ್ನು ಸಮತೋಲನಗೊಳಿಸಬಹುದು. ಇದು ಮೈಯಲ್ಲಿನ ಕೊಬ್ಬಿನಾಂಶವನ್ನು ದೂರ ಮಾಡಿ ಆರೋಗ್ಯಯುಕ್ತ ಜೀವನ ನಡೆಸಲು ಸಹಕಾರಿಯಾಗಿದೆ. 100 ಗ್ರಾಮ್ ಬಾಳೆ ದಿಂಡಿನಲ್ಲಿ 13 ಕ್ಯಾಲೋರಿ, 2 ಗ್ರಾಮಿನಷ್ಟು ಕಾರ್ಬೋಹೈಡ್ರೇಟ್ಸ್​, ಒಂದು ಗ್ರಾಮ್​ನಷ್ಟು ಡಯೇಟ್ರಿ ಫೈಬರ್ ಇರುತ್ತದೆ. ಇದು ಚರ್ಮ ಮತ್ತು ಕೂದಲಿಗೆ ಕೂಡ ಒಳ್ಳೆಯದು.

ಇದನ್ನೂ ಓದಿ:

ಒಂದೇ ತೆರನಾದ ಅಭ್ಯಾಸ ಬಿಡಿ; ರೋಗನಿರೋಧಕ ಶಕ್ತಿ ಹೆಚ್ಚಿಸಲು ಆಹಾರ ಪದ್ಧತಿಯಲ್ಲಿ ವೈವಿಧ್ಯತೆ ಇರಲಿ

25.2 ಕೋಟಿ ರೂ. ಹರಾಜಿನ ಬೆನ್ನಲ್ಲೇ ಸೊನ್ನೆ ಸುತ್ತಿದ ಕ್ಯಾಮರೋನ್ ಗ್ರೀನ್
25.2 ಕೋಟಿ ರೂ. ಹರಾಜಿನ ಬೆನ್ನಲ್ಲೇ ಸೊನ್ನೆ ಸುತ್ತಿದ ಕ್ಯಾಮರೋನ್ ಗ್ರೀನ್
ಕಾವ್ಯಾ ರೌದ್ರಾವತಾರಕ್ಕೆ ಎಲ್ಲರೂ ಶಾಕ್; ಅಶ್ವಿನಿಗೆ ಏಕವಚನದಲ್ಲೇ ಕ್ಲಾಸ್
ಕಾವ್ಯಾ ರೌದ್ರಾವತಾರಕ್ಕೆ ಎಲ್ಲರೂ ಶಾಕ್; ಅಶ್ವಿನಿಗೆ ಏಕವಚನದಲ್ಲೇ ಕ್ಲಾಸ್
ರಸ್ತೆ ಬದಿ ನಿಂತಿದ್ದ ಯುವತಿಯನ್ನು ಕೆಟ್ಟದಾಗಿ ಸ್ಪರ್ಶಿಸಿ ಪರಾರಿಯಾದ ಯುವಕ
ರಸ್ತೆ ಬದಿ ನಿಂತಿದ್ದ ಯುವತಿಯನ್ನು ಕೆಟ್ಟದಾಗಿ ಸ್ಪರ್ಶಿಸಿ ಪರಾರಿಯಾದ ಯುವಕ
ಇಸ್ಲಾಮಿಯಾದಿಂದ ಇಂಡಿಯಾವರೆಗೆ; ಸಖತ್ ಮಜವಾಗಿದೆ ಈ ಎಡಿಟೆಡ್ ವಿಡಿಯೋ
ಇಸ್ಲಾಮಿಯಾದಿಂದ ಇಂಡಿಯಾವರೆಗೆ; ಸಖತ್ ಮಜವಾಗಿದೆ ಈ ಎಡಿಟೆಡ್ ವಿಡಿಯೋ
ತಮ್ಮ ಸಾವಿಗೂ ಮುನ್ನ ದಾಳಿಕೋರನನ್ನು ತಡೆಯಲು ಯತ್ನಿಸಿದ್ದ ದಂಪತಿ
ತಮ್ಮ ಸಾವಿಗೂ ಮುನ್ನ ದಾಳಿಕೋರನನ್ನು ತಡೆಯಲು ಯತ್ನಿಸಿದ್ದ ದಂಪತಿ
ಶಬರಿಮಲೆಯ 18 ಮೆಟ್ಟಿಲುಗಳ ಮಹತ್ವವೇನು ಗೊತ್ತಾ?
ಶಬರಿಮಲೆಯ 18 ಮೆಟ್ಟಿಲುಗಳ ಮಹತ್ವವೇನು ಗೊತ್ತಾ?
ಇಂದು ಈ ರಾಶಿಯವರಿಗೆ ಪ್ರೀತಿಸಿದವರ ಜೊತೆ ಕಲಹಗಳು ಏರ್ಪಡಲಿವೆ
ಇಂದು ಈ ರಾಶಿಯವರಿಗೆ ಪ್ರೀತಿಸಿದವರ ಜೊತೆ ಕಲಹಗಳು ಏರ್ಪಡಲಿವೆ
ಮೊಬೈಲ್ ಕಳೆದುಕೊಂಡವರ ಮುಖದಲ್ಲಿ ಸಂತಸ ತಂದ ಉಡುಪಿ ಪೊಲೀಸರು
ಮೊಬೈಲ್ ಕಳೆದುಕೊಂಡವರ ಮುಖದಲ್ಲಿ ಸಂತಸ ತಂದ ಉಡುಪಿ ಪೊಲೀಸರು
‘45’ ಸಿನಿಮಾದಲ್ಲಿ ಶಿವರಾಜ್​ಕುಮಾರ್ ಲೇಡಿ ಗೆಟಪ್: ಗೀತಕ್ಕ ರಿಯಾಕ್ಷನ್ ನೋಡಿ
‘45’ ಸಿನಿಮಾದಲ್ಲಿ ಶಿವರಾಜ್​ಕುಮಾರ್ ಲೇಡಿ ಗೆಟಪ್: ಗೀತಕ್ಕ ರಿಯಾಕ್ಷನ್ ನೋಡಿ
ವ್ಯಕ್ತಿ ತಲೆಗೆ ಬಿಯರ್‌ ಬಾಟಲಿಂದ ಹೊಡೆದ ಗ್ಯಾಂಗ್
ವ್ಯಕ್ತಿ ತಲೆಗೆ ಬಿಯರ್‌ ಬಾಟಲಿಂದ ಹೊಡೆದ ಗ್ಯಾಂಗ್