Health Tips: ಒಂದು ಕಪ್ ಕಾಫಿ ಕುಡಿಯುವುದರಿಂದ ಎಷ್ಟೆಲ್ಲಾ ಪ್ರಯೋಜನಗಳಿವೆ ಗೊತ್ತಾ?
ಕಾಫಿಯಲ್ಲಿನ ಕೆಫೀನ್ ಅಂಶದಿಂದ ನರಮಂಡಲ ಚುರುಕುಗೊಳ್ಳಲು ಸಹಾಯಕವಾಗಿದೆ. ಮೆದುಳಿನ ಕ್ರಿಯೆಯನ್ನು ಚುರುಕುಗೊಳಿಸುತ್ತದೆ. ಹಾಗೂ ಖಿನ್ನತೆಯನ್ನು ದೂರ ಮಾಡಲು ಒಂದು ಕಪ್ ಕಾಫಿ ಸಹಾಯಕವಾಗಿದೆ.
ಜೋರಾದ ಮಳೆ, ಮನೆಯ ಕಿಟಿಕಿಯಿಂದಾಚೆಗೆ ನೋಡುತ್ತಾ ಬಿಸಿ ಬಿಸಿ ಕಾಫಿ ಕುಡಿಯುವುದು ಒಂದು ರೀತಿಯ ಚಟ. ಅಡುಗೆ ಮನೆಯಿಂದ ಕಾಫಿಯ ಪರಿಮಳ ಬರುತ್ತಿದ್ದರೆ ಎಲ್ಲಿದ್ದರೂ ಓಡೋಡಿ ಬಂದು ನನಗೊಂದು ಕಪ್ ಎಂದು ಕೂಗೇ ಬಿಡುತ್ತೇವೆ. ಆದರೆ ಅತಿಯಾದ ಸೇವನೆ ಆರೋಗ್ಯಕ್ಕೆ ಹಾನಿಕಾರಕ. ಮಿತವಾಗಿ ಬಳಸಿದರೆ ಕಾಫಿ ಸೇವನೆಯಿಂದ ಅನೇಕ ಪ್ರಯೋಜನಗಳಿವೆ.
ಒಂದು ಕಪ್ ಕಾಫಿ ಕುಡಿಯುವುದರಿಂದ ಪ್ರಯೋಜಗಳೇನು? ನಮ್ಮ ಆರೋಗ್ಯದ ಮೇಲೆ ಧನಾತ್ಮಕ ಪರಿಣಾಮಗಳೇನು ಎಂಬುದರ ಕುರಿತಾಗಿ ತಿಳಿಯೋಣ. ಕಾಫಿಯಲ್ಲಿನ ಕೆಫೀನ್ ಅಂಶದಿಂದ ನರಮಂಡಲ ಚುರುಕುಗೊಳ್ಳಲು ಸಹಾಯಕವಾಗಿದೆ. ಮೆದುಳಿನ ಕ್ರಿಯೆಯನ್ನು ಚುರುಕುಗೊಳಿಸುತ್ತದೆ. ಹಾಗೂ ಖಿನ್ನತೆಯನ್ನು ದೂರ ಮಾಡಲು ಒಂದು ಕಪ್ ಕಾಫಿ ಸಹಾಯಕವಾಗಿದೆ. ಯಕೃತ್ತಿನ ರೋಗಗಳನ್ನು ಕಡಿಮೆ ಮಾಡಲು ಕಾಫಿ ಸಹಕರಿಸುತ್ತದೆ. ಯಕೃತ್ ಕ್ಯಾನ್ಸರ್, ಸಿರೋಸಿಸ್ ಕಾಯಿಲೆಗಳು ಬಾರದಂತೆ ತಡೆಗಟ್ಟಲು ಒಂದು ಕಪ್ ಕಾಫಿ ಪ್ರಯೋಜನಕಾರಿಯಾಗಿದೆ.
ಹಿತಮಿತವಾಗಿ ಕಾಫಿ ಕುಡಿಯುವದರಿಂದ ಅಪಧಮನಿಯ ಹೃದಯ ಕಾಯಿಲೆ, ಪಾರ್ಶ್ವವಾಯು, ಮಧುಮೇಹ ಮತ್ತು ಮೂತ್ರಪಿಂಡದಂತಹ ಕಾಯಿಲೆಯಿಂದ ಸಾಯುವ ಪ್ರಮಾಣ ಕಡಿಮೆ. ನಿಮ್ಮ ದೇಹದಲ್ಲಿ ಗ್ಲುಕೋಸ್ ಅಥವಾ ಸಕ್ಕರೆ ಅಂಶವನ್ನು ಸಂಸ್ಕರಿಸಲು ಸಹಾಯಕಾರಿ. ನೀವು ದಿನಕ್ಕೆ ಒಂದರಿಂದ ಎರಡು ಕಪ್ ಕಾಫಿ ಕುಡಿದರೆ ಹೃದಯ ಸಂಬಂಧಿತ ಸಮಸ್ಯೆ ಉಂಟಾಗುವ ಸಾಧ್ಯತೆ ಕಡಿಮೆ.
ಆದರೆ, ಬುದ್ಧಿವಂತಿಕೆಯಿಂದ ಕಾಫಿ ಸೇವನೆ ಮಾಡಬೇಕು. ಅಂದರೆ ನಮ್ಮ ದೇಹಕ್ಕೆ ಹೇಗೆ ಪರಿಣಾಮ ಬೀರುತ್ತಿದೆ. ಎಷ್ಟು ಪ್ರಮಾಣದಲ್ಲಿ ನಾವು ಕಾಫಿ ಸೇವಿಸಬೇಕು ಎಂಬುದನ್ನು ತಿಳಿದುಕೊಂಡಿರಬೇಕು. ಏಕೆಂದರೆ, ಪ್ರತಿಯೊಂದು ಆಹಾರವೂ ಒಬ್ಬೊಬ್ಬರ ಮೇಲೆ ಒಂದೊಂದು ಪರಿಣಾಮ ಬೀರುತ್ತದೆ. ಅವರ ದೇಹ ಪ್ರಕೃತಿಗೆ ಅನುಸಾರವಾಗಿ ಆಹಾರ ಸೇವಿಸುವುದು ಉತ್ತಮ.
ನೀವು ಆರಾಮದಾಯಕವಾಗಿ ನಿದ್ದೆ ಮಾಡಲು ಕಾಫಿ ಸಹಕರಿಸುತ್ತದೆ. ನಿದ್ದೆ ಸರಿಯಾದಲ್ಲಿ ಜೀವನದಲ್ಲಿ ಚೈತನ್ಯತೆಯಿಂದ ಕೂಡಿರಬಹುದು. ಹಾಗೆಯೇ ಆರೋಗ್ಯ ಮಟ್ಟವನ್ನೂ ಸುಧಾರಿಸಿಕೊಳ್ಳಬಹುದು. ಜೊತೆಜೊತೆಗೆ ಹೆಚ್ಚು ಕಾಫಿ ಸೇವಿಸುವುದು ಉತ್ತಮ ನಿದ್ರೆ ಹಾಳಾಗಲೂಬಹುದು. ಏಕೆಂದರೆ ಒಂದು ಕಪ್ ಕಾಫಿಯನ್ನು ಚಯಾಪಚಯಗೊಳಿಸಲು ದೇಹವು 12 ಗಂಟೆಗಳ ಸಮಯವನ್ನು ತೆಗೆದುಕೊಳ್ಳುತ್ತದೆ. ಇದು ರಾತ್ರಿ ನಿಮ್ಮ ನಿದ್ದೆಯನ್ನು ಹಾಳುಮಾಡಬಹುದು. ಮಧ್ಯಾಹ್ನದ ಬಳಿಕ ಪದೇ ಪದೇ ಕಾಫಿ ಕುಡಿಯುವ ಹವ್ಯಾಸವನ್ನು ಆದಷ್ಟು ತಪ್ಪಿಸಿ.
ಇದನ್ನೂ ಓದಿ:
ಚಿಕ್ಕಮಗಳೂರನ್ನು ಸರ್ಕಾರ ಸಂಪೂರ್ಣವಾಗಿ ನಿರ್ಲಕ್ಷಿಸಿದೆ; ಕಾಫಿನಾಡು ಜನರ ಆಕ್ರೋಶ