AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಒಂದೇ ತೆರನಾದ ಅಭ್ಯಾಸ ಬಿಡಿ; ರೋಗನಿರೋಧಕ ಶಕ್ತಿ ಹೆಚ್ಚಿಸಲು ಆಹಾರ ಪದ್ಧತಿಯಲ್ಲಿ ವೈವಿಧ್ಯತೆ ಇರಲಿ

ಸರಿಯಾದ ಪೋಷಣೆಗೆ ವೈವಿಧ್ಯತೆ ಪ್ರಮುಖವಾಗಿದೆ. ಆರೋಗ್ಯದ ಸ್ಥಿಮಿತತೆಯನ್ನು ಕಾಪಾಡಲು ಒಂದೇ ಆಹಾರವನ್ನು ಅತಿಯಾಗಿ ಸೇವಿಸಬೇಡಿ ಕಾರಣ ಕೆಲವೊಮ್ಮೆ ಅತಿಯಾದರೆ ಅಮೃತ ಕೂಡ ವಿಷವಾಗುತ್ತದೆ. ಆದ ಕಾರಣ ನಿಮ್ಮ ಆಹಾರ ಪದ್ಧತಿ ಈ ಕೆಳಗಿನಂತಿದ್ದರೆ ಸೂಕ್ತ.

ಒಂದೇ ತೆರನಾದ ಅಭ್ಯಾಸ ಬಿಡಿ; ರೋಗನಿರೋಧಕ ಶಕ್ತಿ ಹೆಚ್ಚಿಸಲು ಆಹಾರ ಪದ್ಧತಿಯಲ್ಲಿ ವೈವಿಧ್ಯತೆ ಇರಲಿ
ಪ್ರಾತಿನಿಧಿಕ ಚಿತ್ರ
Follow us
preethi shettigar
| Updated By: Skanda

Updated on:May 22, 2021 | 8:00 AM

ಯಾವುದೇ ಕಾಯಿಲೆಯು ಒಂದೇ ತೆರನಾದ ಅಭ್ಯಾಸದಿಂದ ದೂರವಾಗುವುದಿಲ್ಲ. ಅಂತೆಯೇ ಸೋಂಕು ಕೂಡ. ಹೀಗಾಗಿ ನಾನಾ ರೀತಿಯ ಪ್ರಯತ್ನ ಅಗತ್ಯ. ಆಹಾರ ಸೇವನೆಯ ವಿಷಯಕ್ಕೆ ಬಂದರೆ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ತರಕಾರಿ, ಸೊಪ್ಪು, ಮಾಂಸ ಮತ್ತು ಇನ್ನಿತರ ಆಹಾರ ಪದ್ಧತಿಯನ್ನು ಅನುಸರಿಸಬೇಕಾಗುತ್ತದೆ. ಹೀಗಾಗಿ ಸರಿಯಾದ ಪೋಷಣೆಗೆ ವೈವಿಧ್ಯತೆ ಪ್ರಮುಖವಾಗಿದೆ. ಆರೋಗ್ಯದ ಸ್ಥಿಮಿತತೆಯನ್ನು ಕಾಪಾಡಲು ಒಂದೇ ಆಹಾರವನ್ನು ಅತಿಯಾಗಿ ಸೇವಿಸಬೇಡಿ ಕಾರಣ ಕೆಲವೊಮ್ಮೆ ಅತಿಯಾದರೆ ಅಮೃತ ಕೂಡ ವಿಷವಾಗುತ್ತದೆ. ಆದ ಕಾರಣ ನಿಮ್ಮ ಆಹಾರ ಪದ್ಧತಿ ಈ ಕೆಳಗಿನಂತಿದ್ದರೆ ಸೂಕ್ತ.

1. ಗ್ರೀನ್ ಟೀ ಹಸಿರು ಮತ್ತು ಕಪ್ಪು ಚಹಾಗಳೆರಡೂ ಒಂದು ರೀತಿಯ ಉತ್ಕರ್ಷಣ ನಿರೋಧಕವಾದ ಫ್ಲೇವೊನೈಡ್​ಗಳಿಂದ ತುಂಬಿರುತ್ತವೆ. ಅದರಲ್ಲೂ ಗ್ರೀನ್ ಟೀ ಹೆಚ್ಚು ಉಪಯುಕ್ತವಾಗಿದ್ದು, ಎಪಿಗಲ್ಲೊಕಾಟೆಚಿನ್ ಗ್ಯಾಲೇಟ್ (ಇಜಿಸಿಜಿ) ನೀಡುತ್ತದೆ ಮತ್ತು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

ಅಧ್ಯಯನಗಳು ಕೂಡ ಇಜಿಸಿಜಿ ರೋಗನಿರೋಧಕ ಕಾರ್ಯವನ್ನು ಹೆಚ್ಚಿಸುತ್ತದೆ ಎಂದು ಸ್ಪಷ್ಟಪಡಿಸಿದೆ. ಕಪ್ಪು ಚಹಾವು ಇಜಿಸಿಜಿಯನ್ನು ನಾಶಪಡಿಸುತ್ತದೆ. ಆದರೆ ಗ್ರೀನ್ ಟೀ ಇಜಿಸಿಜಿಯನ್ನು ಸಂರಕ್ಷಿಸುತ್ತದೆ. ಗ್ರೀನ್ ಟೀ ಅಮೈನೊ ಆಮ್ಲ ಎಲ್-ಥೈನೈನ್​ನ ಉತ್ತಮ ಮೂಲವಾಗಿದೆ. ಗ್ರೀನ್ ಟೀ ಒತ್ತಡವನ್ನು ಕಡಿಮೆ ಮಾಡುತ್ತದೆ, ಸೋಂಕು ಮತ್ತು ವೈರಸ್​ಗಳ ವಿರುದ್ಧ ಹೋರಾಡುತ್ತದೆ ಹಾಗೂ ಹೃದಯಕ್ಕೆ ಹೆಚ್ಚು ಶಕ್ತಿ ನೀಡುತ್ತದೆ.

2. ಪಪ್ಪಾಯ ಪಪ್ಪಾಯ ವಿಟಮಿನ್ ಸಿ ತುಂಬಿದ ಹಣ್ಣು. ಸಾಮಾನ್ಯವಾಗಿ ಈ ಹಣ್ಣು ಕೊರೊನಾದ ಈ ಕಾಲಘಟ್ಟದಲ್ಲಿ ಹೆಚ್ಚು ಸೂಕ್ತವಾಗಿದೆ. ವಿಟಮಿನ್ ಸಿ ಇತರ ತರಕಾರಿ ಅಥವಾ ಹಣ್ಣುಗಳಿಗಿಂತ ಹೆಚ್ಚು ಇದರಲ್ಲಿ ಇರುತ್ತದೆ. ಪಪ್ಪಾಯ ಕಾಯಿಯು ಪೆಫಿನ್ ಎಂಬ ಪ್ರೋಟಿನ್ ಅಂಶವನ್ನು ಹೊಂದಿದ್ದು, ಇದರಲ್ಲಿ ಜೀರ್ಣಕಾರಿ ಕಿಣ್ವವಿದೆ. ಸಾಮಾನ್ಯವಾಗಿ ಮಾಂಸಾಹಾರ ಸೇವಿಸಿದ ನಂತರ ಇದನ್ನು ಸೇವಿಸುತ್ತಾರೆ. ಪಪ್ಪಾಯದಲ್ಲಿ ಪೊಟ್ಯಾಸಿಯಮ್, ಮೆಗ್ನೀಸಿಯಮ್ ಮತ್ತು ಫೋಲೇಟ್ ಕೂಡ ಇದೆ.

3. ಕಿವಿ ಹಣ್ಣು ಪಪ್ಪಾಯದಂತೆ ಈ ಹಣ್ಣಿನಲ್ಲೂ ನೈಸರ್ಗಿಕವಾದ ಫೋಲೇಟ್, ಪೊಟ್ಯಾಸಿಯಮ್, ವಿಟಮಿನ್ ಕೆ, ಮತ್ತು ವಿಟಮಿನ್ ಸಿ ಸೇರಿದಂತೆ ಒಂದು ಟನ್ ಅಗತ್ಯ ಪೋಷಕಾಂಶಗಳು ತುಂಬಿರುತ್ತದೆ. ವಿಟಮಿನ್ ಸಿ ಸೋಂಕಿನ ವಿರುದ್ಧ ಹೋರಾಡಲು ಬಿಳಿ ರಕ್ತ ಕಣಗಳನ್ನು ಹೆಚ್ಚಿಸುತ್ತದೆ. ಕಿವಿ ಹಣ್ಣು ಸೇವಿಸುವುದರಿಂದ ಪೋಷಕಾಂಶ ದೇಹದಲ್ಲಿ ಹೆಚ್ಚಾಗುತ್ತದೆ ಮತ್ತು ದೇಹದ ಎಲ್ಲಾ ಭಾಗಗಳು ಸರಿಯಾಗಿ ಕಾರ್ಯನಿರ್ವಹಿಸುವಂತೆ ಇದು ಮಾಡುತ್ತದೆ.

4. ಕೋಳಿ ಮಾಂಸ ಅನಾರೋಗ್ಯದಿಂದ ಬಳಲುತ್ತಿದ್ದರೆ ಕೋಳಿಯಿಂದ ತಯಾರಿಸಿದ ಸೂಪ್ ಸೇವಿಸುವುದು ಉತ್ತಮ. ಇದು ಪ್ಲಸೀಬೊಗಿಂತ ಹೆಚ್ಚು ಪರಿಣಾಮಕಾರಿಯಾಗಿದ್ದು, ದೇಹಕ್ಕೆ ಶಕ್ತಿ ನೀಡುತ್ತದೆ. ಕೋಳಿ ಮಾಂಸದಿಂದ ತಯಾರಿಸಿದ ಸೂಪ್ ಸೇವಿಸುವುದರಿಂದ ಉರಿಯೂತ ಕಡಿಮೆಯಾಗುತ್ತದೆ. ಅಲ್ಲದೆ ಇದು ಶೀತದ ಲಕ್ಷಣಗಳನ್ನು ಸುಧಾರಿಸುತ್ತದೆ. ಸಾಮಾನ್ಯ ಕೋಳಿ ಮತ್ತು ಟರ್ಕಿಯಂತಹ ಕೋಳಿಗಳಲ್ಲಿ ವಿಟಮಿನ್ ಬಿ -6 ಅಧಿಕವಾಗಿರುತ್ತದೆ.

ಕೋಳಿ ಮಾಂಸವು ಬಿ -6 ನ್ನು ದೇಹಕ್ಕೆ ಒದಗಿಸುವ ಮೂರನೇ ಒಂದು ಭಾಗದಷ್ಟು ವಿಶ್ವಾಸಾರ್ಹ ಮೂಲವನ್ನು ಹೊಂದಿದೆ. ದೇಹದಲ್ಲಿ ಸಂಭವಿಸುವ ಅನೇಕ ರಾಸಾಯನಿಕ ಕ್ರಿಯೆಗಳಲ್ಲಿ ವಿಟಮಿನ್ ಬಿ -6 ಪ್ರಮುಖ ಪಾತ್ರ ವಹಿಸುತ್ತದೆ. ಹೊಸ ಮತ್ತು ಆರೋಗ್ಯಕರ ಕೆಂಪು ರಕ್ತ ಕಣಗಳ ರಚನೆಗೆ ಇದು ಅತ್ಯಗತ್ಯವಾಗಿದೆ.

ಕೋಳಿ ಮೂಳೆಗಳನ್ನು ಕುದಿಸಿ ತಯಾರಿಸಿದ ಸ್ಟಾಕ್ ಅಥವಾ ಸಾರು, ಜೆಲಾಟಿನ್, ಕೊಂಡ್ರೊಯಿಟಿನ್ ಮತ್ತು ಕರುಳಿನ ಸಮಸ್ಯೆಯನ್ನು ಗುಣಪಡಿಸುತ್ತದೆ ಮತ್ತು ರೋಗನಿರೋಧಕ ಶಕ್ತಿಗೆ ಸಹಾಯ ಮಾಡುವ ಇತರ ಪೋಷಕಾಂಶಗಳನ್ನು ಒದಗಿಸುತ್ತದೆ.

5. ಏಡಿ ಅಥವಾ ಚಿಪ್ಪುಯುಕ್ತ ಮೀನು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಪ್ರಯತ್ನಿಸುತ್ತಿರುವ ಅನೇಕರಿಗೆ ಚಿಪ್ಪುಮೀನು ಮೊದಲ ಆದ್ಯತೆಯಾಗಿದ್ದರೆ ಒಳಿತು. ಚಿಪ್ಪುಮೀನುಗಳು ಸತುಗಳಿಂದ ತುಂಬಿರುತ್ತವೆ. ಸತುವು ಇತರ ಜೀವಸತ್ವಗಳು ಮತ್ತು ಖನಿಜಗಳಂತೆ ಹೆಚ್ಚು ಗಮನ ಸೆಳೆಯುವುದಿಲ್ಲ, ಆದರೆ ನಮ್ಮ ದೇಹಕ್ಕೆ ಇದು ಅಗತ್ಯವಾಗಿರುತ್ತದೆ. ಇದರಿಂದ ರೋಗನಿರೋಧಕ ಕೋಶಗಳು ಹೆಚ್ಚು ಸದೃಢವಾಗುತ್ತದೆ.

ಸತುವನ್ನು ಹೆಚ್ಚಾಗಿ ಹೊಂದಿರುವ ಚಿಪ್ಪುಮೀನುಗಳ ವಿಧಗಳು: ಕಪ್ಪೆ ಚಿಪ್ಪು (ಮೋಳಿ) ಏಡಿ ಅಥವಾ ಜಾರಿ ಸಿಗಡಿ

ಇದನ್ನೂ ಓದಿ:

ನಿಮ್ಮ ಅಡುಗೆ ಮನೆಯಲ್ಲಿರುವ ಪದಾರ್ಥಗಳಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿಸುವ ಆಹಾರಗಳು ಇದೆಯೇ ಒಮ್ಮೆ ಗಮನಿಸಿ

Published On - 7:59 am, Sat, 22 May 21

‘ನಿದ್ರಾದೇವಿ ನೆಕ್ಸ್ಟ್​ ಡೋರ್’ ಚಿತ್ರದಲ್ಲಿ ಗೆಟಪ್ ಬದಲಿಸಿದ ಶೈನ್ ಶೆಟ್ಟಿ
‘ನಿದ್ರಾದೇವಿ ನೆಕ್ಸ್ಟ್​ ಡೋರ್’ ಚಿತ್ರದಲ್ಲಿ ಗೆಟಪ್ ಬದಲಿಸಿದ ಶೈನ್ ಶೆಟ್ಟಿ
ಪ್ರವೀಣ್ ಶೆಟ್ಟಿ ಪುತ್ರ ಪ್ರವೀರ್ ಶೆಟ್ಟಿಗೆ ಚಿತ್ರರಂಗದಲ್ಲಿ ಸ್ಫೂರ್ತಿ ಯಾರು
ಪ್ರವೀಣ್ ಶೆಟ್ಟಿ ಪುತ್ರ ಪ್ರವೀರ್ ಶೆಟ್ಟಿಗೆ ಚಿತ್ರರಂಗದಲ್ಲಿ ಸ್ಫೂರ್ತಿ ಯಾರು
ಬೆಂಗಳೂರು ರಣಭೀಕರ ಮಳೆಗೆ ಮುಳುಗಿದ `ಬೆಳ್ಳುಳ್ಳಿ ಕಬಾಬ್’ ಹೋಟೆಲ್
ಬೆಂಗಳೂರು ರಣಭೀಕರ ಮಳೆಗೆ ಮುಳುಗಿದ `ಬೆಳ್ಳುಳ್ಳಿ ಕಬಾಬ್’ ಹೋಟೆಲ್
ಪಿಎಸ್​​ಐ ನಾಗರಾಜ್​​ ಪತ್ನಿ ಆತ್ಮಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್​
ಪಿಎಸ್​​ಐ ನಾಗರಾಜ್​​ ಪತ್ನಿ ಆತ್ಮಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್​
ಅಧಿಕಾರ ಮತ್ತು ಬದುಕು ಎರಡೂ ಶಾಶ್ವತವಲ್ಲ: ತನ್ವೀರ್ ಸೇಟ್, ಕಾಂಗ್ರೆಸ್ ಶಾಸಕ
ಅಧಿಕಾರ ಮತ್ತು ಬದುಕು ಎರಡೂ ಶಾಶ್ವತವಲ್ಲ: ತನ್ವೀರ್ ಸೇಟ್, ಕಾಂಗ್ರೆಸ್ ಶಾಸಕ
ಹಾಡಿನ ಮೂಲಕ ಚಿತ್ರರಂಗದ ಕರಾಳ ಮುಖ ಪರಿಚಯಿಸಿದ ದುನಿಯಾ ವಿಜಯ್
ಹಾಡಿನ ಮೂಲಕ ಚಿತ್ರರಂಗದ ಕರಾಳ ಮುಖ ಪರಿಚಯಿಸಿದ ದುನಿಯಾ ವಿಜಯ್
ಪತ್ನಿಯಿಂದ ಪತಿಗೆ ಟಾರ್ಚರ್ ಪ್ರಕರಣಗಳು ಇತ್ತೀಚಿಗೆ ಜಾಸ್ತಿಯಾಗುತ್ತಿವೆ
ಪತ್ನಿಯಿಂದ ಪತಿಗೆ ಟಾರ್ಚರ್ ಪ್ರಕರಣಗಳು ಇತ್ತೀಚಿಗೆ ಜಾಸ್ತಿಯಾಗುತ್ತಿವೆ
ಅಂತಾರಾಷ್ಟ್ರೀಯ ಯೋಗ ದಿನದಲ್ಲಿ ಭಾಗವಹಿಸಲು ಎಲ್ಲ ದೇಶಗಳಿಗೂ ಮೋದಿ ಆಹ್ವಾನ
ಅಂತಾರಾಷ್ಟ್ರೀಯ ಯೋಗ ದಿನದಲ್ಲಿ ಭಾಗವಹಿಸಲು ಎಲ್ಲ ದೇಶಗಳಿಗೂ ಮೋದಿ ಆಹ್ವಾನ
ಲೂಟ್ ಕೆ ಲಾವ್ ಬಾಟ್ ಕೆ ಖಾವ್ ಸರ್ಕಾರದ ದ್ಯೇಯವಾಗಿದೆ: ಪ್ರಲ್ಹಾದ್ ಜೋಶಿ
ಲೂಟ್ ಕೆ ಲಾವ್ ಬಾಟ್ ಕೆ ಖಾವ್ ಸರ್ಕಾರದ ದ್ಯೇಯವಾಗಿದೆ: ಪ್ರಲ್ಹಾದ್ ಜೋಶಿ
ಕಾವೇರಿ ಆರತಿಯಿಂದ ಕೆಆರ್​ಎಸ್ ಜಲಾಶಯಕ್ಕೆ ಅಪಾಯವಿಲ್ಲ: ಗಣಿಗ
ಕಾವೇರಿ ಆರತಿಯಿಂದ ಕೆಆರ್​ಎಸ್ ಜಲಾಶಯಕ್ಕೆ ಅಪಾಯವಿಲ್ಲ: ಗಣಿಗ