AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಿಮ್ಮ ಅಡುಗೆ ಮನೆಯಲ್ಲಿರುವ ಪದಾರ್ಥಗಳಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿಸುವ ಆಹಾರಗಳು ಇದೆಯೇ ಒಮ್ಮೆ ಗಮನಿಸಿ

ತರಕಾರಿಗಳನ್ನು ನಾನು ಸೇವಿಸುವುದಿಲ್ಲ, ಈ ಊಟ ಹಿಡಿಸುವುದಿಲ್ಲ, ಹೆಚ್ಚು ರುಚಿಕರವಾದ ತಿನಿಸು ಬೇಕು ಎಂದು ಕುಂಟು ನೆಪ ಕೊಡುವ ಬದಲು. ಮನೆಯಲ್ಲಿರುವ ಆಹಾರ ಪದಾರ್ಥಗಳಲ್ಲಿ ಯಾವುದು ಹೆಚ್ಚು ರೋಗನಿರೋಧಕ ಶಕ್ತಿ ನೀಡುತ್ತದೆ ಎನ್ನುವುದನ್ನು ಗಮನಿಸುವುದು ಸೂಕ್ತ.

ನಿಮ್ಮ ಅಡುಗೆ ಮನೆಯಲ್ಲಿರುವ ಪದಾರ್ಥಗಳಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿಸುವ ಆಹಾರಗಳು ಇದೆಯೇ ಒಮ್ಮೆ ಗಮನಿಸಿ
ಪ್ರಾತಿನಿಧಿಕ ಚಿತ್ರ
preethi shettigar
| Edited By: |

Updated on: May 20, 2021 | 8:46 AM

Share

ಕೊವಿಡ್ ಹೆಚ್ಚುತ್ತಿರುವ ಈ ಕಾಲಘಟ್ಟದಲ್ಲಿ ಸಾಮಾನ್ಯವಾಗಿ ಮನೆಯಲ್ಲಿಯೇ ಎಲ್ಲರೂ ಕಾಲ ಕಳೆಯುತ್ತಿದ್ದೇವೆ. ಇಂತಹ ಸಂದರ್ಭದಲ್ಲಿ ನಮ್ಮ ಆರೋಗ್ಯದ ಕಾಳಜಿಗೆ ನಾವು ಒಂದಷ್ಟು ತಯಾರಿ ನಡೆಸಬೇಕು ಮತ್ತು ಆರೋಗ್ಯದ ಬಗ್ಗೆ ಗಮನಹರಿಸಬೇಕು. ತರಕಾರಿಗಳನ್ನು ನಾನು ಸೇವಿಸುವುದಿಲ್ಲ, ಈ ಊಟ ಹಿಡಿಸುವುದಿಲ್ಲ, ಹೆಚ್ಚು ರುಚಿಕರವಾದ ತಿನಿಸು ಬೇಕು ಎಂದು ಕುಂಟು ನೆಪ ಕೊಡುವ ಬದಲು. ಮನೆಯಲ್ಲಿರುವ ಆಹಾರ ಪದಾರ್ಥಗಳಲ್ಲಿ ಯಾವುದು ಹೆಚ್ಚು ರೋಗನಿರೋಧಕ ಶಕ್ತಿ ನೀಡುತ್ತದೆ ಎನ್ನುವುದನ್ನು ಗಮನಿಸುವುದು ಸೂಕ್ತ. ಕೊವಿಡ್ ಕಾಲದಲ್ಲಿ ಈ ಕೆಳಕಂಡ ಆಹಾರ ಪದಾರ್ಥ ನಮ್ಮ ಅಡುಗೆ ಕೊಣೆಯಲ್ಲಿ ಇದ್ದರೆ ಒಳಿತು:

1.ಪಾಲಕ್ ಸೊಪ್ಪು ಪಾಲಕ್ ಸೊಪ್ಪು ಕೇವಲ ವಿಟಮಿನ್ ಸಿ ಅಂಶವನ್ನು ಹೊಂದಿದೆ ಎಂಬ ಕಾರಣಕ್ಕಷ್ಟೇ ಅಲ್ಲ. ಇದು ಹೆಚ್ಚು ಆರೋಗ್ಯಯುತವಾದ ಗುಣಗಳನ್ನು ಹೊಂದಿದೆ ಎಂಬುವುದಕ್ಕು ಮುಖ್ಯ ಎನಿಸಿಕೊಳ್ಳುತ್ತದೆ. ರೋಗನಿರೋಧಕ ಶಕ್ತಿಯನ್ನು ಹೆಚ್ಚಾಗಿಸುವಲ್ಲಿ ಪಾಲಕ್ ಪ್ರಮುಖ ಪಾತ್ರ ಒದಗಿಸುತ್ತದೆ. ಸೋಂಕಿನ ವಿರುದ್ಧ ಹೋರಾಡಲು ಹೆಚ್ಚು ಶಕ್ತಿ ನೀಡುತ್ತದೆ ಮತ್ತು ಕ್ಯಾರೆಟ್​ನಲ್ಲಿರುವಷ್ಟು ಆರೋಗ್ಯಯುತ ಅಂಶ ಪಾಲಕ್​ ಸೊಪ್ಪಿನಲ್ಲಿದೆ.

ಇದು ಬ್ರೋಕೊಲಿಗೆ ಸಮಾನವಾಗಿದ್ದು, ಪಾಲಕ್​ ಅನ್ನು ಸಾಧ್ಯವಾದಷ್ಟು ಕಡಿಮೆ ಬೇಯಿಸಬೇಕು. ಇದರಿಂದ ಸೊಪ್ಪಿನಲ್ಲಿ ಹೆಚ್ಚು ಪೋಷಕಾಂಶ ಉಳಿದುಕೊಳ್ಳುತ್ತದೆ. ಆ ಮೂಲಕ ಇದು ದೇಹಕ್ಕೆ ಹೆಚ್ಚು ಆರೋಗ್ಯಯುತವಾಗಿರುತ್ತದೆ. ಪಾಲಕ್​ ವಿಟಮಿನ್ ಎ ಕೂಡ ನೀಡುತ್ತದೆ ಎನ್ನುವುದು ಇನ್ನೊಂದು ವಿಶೇಷ.

2. ಮೊಸರು ಮೊಸರು ರೋಗಗಳ ವಿರುದ್ಧ ಹೋರಾಡಲು ಮತ್ತು ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ಉತ್ತೇಜಿಸಲು ಸಹಕಾರಿಯಾಗಿದೆ. ರುಚಿಯಾದ ಮೊಸರಿನ ಜೊತೆಗೆ ಸ್ವಲ್ಪ ಸಕ್ಕರೆಯನ್ನು ಸೇವಿಸುವ ಅಭ್ಯಾಸವನ್ನು ಮಾಡಬಹುದು. ಇಲ್ಲವಾದಲ್ಲಿ ಮೊಸರಿಗೆ ಹಣ್ಣುಗಳು ಮತ್ತು ಜೇನುತುಪ್ಪವನ್ನು ಹಾಕಿ ಸೇವಿಸಬಹುದು ಇದು ದೇಹಕ್ಕೆ ಚೈತನ್ಯವನ್ನು ನೀಡುತ್ತದೆ.

ಮೊಸರು ವಿಟಮಿನ್ ಡಿ ಅಂಶದ ಉತ್ತಮ ಮೂಲವಾಗಿದ್ದು, ವಿಟಮಿನ್ ಡಿ ದೇಹದಲ್ಲಿನ ರೋಗ ನಿರೋಧಕ ಶಕ್ತಿಯನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ ಮತ್ತು ರೋಗಗಳ ವಿರುದ್ಧ ನಮ್ಮ ದೇಹದ ನೈಸರ್ಗಿಕ ರಕ್ಷಣಾಂಶವನ್ನು ಹೆಚ್ಚಿಸುತ್ತದೆ. ಹೀಗಾಗಿ ಕೊವಿಡ್​ನ ಈ ಕಾಲದಲ್ಲಿ ಮೊಸರು ಹೆಚ್ಚು ಒಳ್ಳೆಯದು.

3. ಬಾದಾಮಿ ಶೀತವನ್ನು ತಡೆಗಟ್ಟಲು ಮತ್ತು ಇದರ ವಿರುದ್ಧ ಹೋರಾಡಲು ವಿಟಮಿನ್ ಇ, ವಿಟಮಿನ್ ಸಿ ಹೆಚ್ಚು ಸ್ಥೈರ್ಯವನ್ನು ನೀಡುತ್ತದೆ. ಹೀಗಾಗಿ ಬಾದಾಮಿ ತಿನ್ನುವ ಅಭ್ಯಾಸವನ್ನು ರೂಢಿಸಿಕೊಳ್ಳಿ. ಬಾದಾಮಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಬಾದಾಮಿ ಕೊಬ್ಬನ್ನು ಕರಗಿಸಲು ನೆರವಾಗುತ್ತದೆ ಮತ್ತು ಅತಿ ಹೆಚ್ಚು ವಿಟಮಿನ್ ಇದರಲ್ಲಿ ಇದೆ.

ವಯಸ್ಕರಿಗೆ ಪ್ರತಿದಿನ ಕೇವಲ 15 ಮಿಗ್ರಾಂ ವಿಟಮಿನ್ ಇ ಬೇಕಾಗುತ್ತದೆ. ಅರ್ಧ ಕಪ್ ಬಾದಾಮಿ ಸೇವನೆ ಮಾಡುವುದು ಸೂಕ್ತ. ಈ ರೀತಿ ನಿಯಮಿತ ಬಾದಾಮಿ ಸೇವನೆಯಿಂದ ಸುಮಾರು 100 ಪ್ರತಿಶತ ವಿಶ್ವಾಸಾರ್ಹ ರೋಗನಿರೋಧಕ ಶಕ್ತಿ ಲಭ್ಯವಾಗುತ್ತದೆ.

4.ಸೂರ್ಯಕಾಂತಿ ಬೀಜಗಳು ಸೂರ್ಯಕಾಂತಿ ಬೀಜಗಳು ರಂಜಕ, ಮೆಗ್ನೀಸಿಯಮ್ ಮತ್ತು ವಿಟಮಿನ್ ಬಿ-6 ಮತ್ತು ಇ ಸೇರಿದಂತೆ ಪೋಷಕಾಂಶಗಳಿಂದ ತುಂಬಿವೆ. ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಮತ್ತು ಅದನ್ನು ನಿರ್ವಹಣೆ ಮಾಡಲು ವಿಟಮಿನ್ ಇ ಮುಖ್ಯವಾಗಿದೆ. ಹೆಚ್ಚಿನ ಪ್ರಮಾಣದ ವಿಟಮಿನ್ ಇ ಹೊಂದಿರುವ ಇತರ ಆಹಾರಗಳಲ್ಲಿ ಅವೊಕಾಡೊ ಕೂಡ ಒಂದು. ಸೂರ್ಯಕಾಂತಿ ಬೀಜದಿಂದ ಅಡುಗೆ ಎಣ್ಣೆ ಕೂಡ ತಯಾರಿಸಲಾಗುತ್ತದೆ. ಈ ಎಣ್ಣೆಯಲ್ಲಿ ಕರಿದ ತಿಂಡಿ ಆರೋಗ್ಯಕ್ಕೆ ಒಳಿತು.

5. ಅರಿಶಿಣ ಅರಿಶಿಣವು ಹೆಚ್ಚು ರೋಗನಿರೋಧಕ ಶಕ್ತಿಯನ್ನು ಹೊಂದಿದೆ. ಹಳದಿ ಬಣ್ಣದೊಂದಿಗೆ ಗುರುತಿಸಿಕೊಳ್ಳುವ ಇದು ಸಂಧಿವಾತ, ಉರಿಯೂತ ಮತ್ತು ಇನ್ನಿತರ ಸೋಂಕಿತ ಕಾಯಿಲೆಗೆ ರಾಮಬಾಣವಾಗಿದೆ. ಅರಿಶಿಣವು ಸ್ನಾಯು ನೋವು ಮತ್ತು ಇನ್ನಿತರ ಗಾಯವನ್ನು ವಾಸಿ ಮಾಡುತ್ತದೆ. ಹಾಲಿನಲ್ಲಿ ಅರಿಶಿಣ ಬೆರೆಸಿ ಕುಡಿಯುವುದು ಉತ್ತಮ ಅಭ್ಯಾಸ.

ಇದನ್ನೂ ಓದಿ:

ರೋಗನಿರೋಧಕ ಶಕ್ತಿ ಹೆಚ್ಚಿಸಲು ಆಹಾರ ಅಭ್ಯಾಸದಲ್ಲಿನ ಈ ಕೆಲವು ಬದಲಾವಣೆ ಬಹಳ ಮುಖ್ಯ

ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್