ತಾಂಬೂಲ ಹೇಗೆ ನೀಡಬೇಕು, ತಾಂಬೂಲ ಹಾಕಿಕೊಳ್ಳುವಾಗ ತುದಿ ಭಾಗ ಕೀಳುವುದೇಕೆ?
ಭಾರತೀಯ ಸಂಪ್ರದಾಯದಲ್ಲಿ ತಾಂಬೂಲಕ್ಕೆ ಪ್ರಮುಖ ಸ್ಥಾನ ನೀಡಲಾಗಿದೆ. ನಿಶ್ಚಿತಾರ್ಥ, ಮದುವೆ, ಪೂಜೆ, ವ್ರತ, ಶುಭ ಸಮಾರಂಭಗಳಲ್ಲಿ ತಾಂಬೂಲ ಇರಲೇಬೇಕು. ಹಿಂದೆ ಯುದ್ಧದ ಸಂದರ್ಭದಲ್ಲಿ ರಣ ವೀಳ್ಯ ನೀಡುವಲ್ಲಿ ವೀಳ್ಯದೆಲೆ ಬಳಕೆಯಾಗುತ್ತಿತ್ತು ಎಂದು ಉಲ್ಲೇಖವಿದೆ. ಊಟವಾದ ಬಳಿಕ ಎಲೆ-ಅಡಿಕೆ ತಿನ್ನಬೇಕೆಂಬ ಸಂಪ್ರದಾಯವಿದೆ. ಹೀಗಾಗೇ ಮನೆಗೆ ಬಂದ ಅತಿಥಿಗಳಿಗೆ ಮೊದಲು ಕುಡಿಯಲು ನೀರು ಕೊಟ್ಟು, ಊಟ ಬಡಿಸಿ ನಂತರ ತಾಂಬೂಲ ನೀಡುವ ಪದ್ಧತಿ ಇಂದಿಗೂ ಕೆಲವೊಂದು ಕಡೆ ಆಚರಣೆಯಲ್ಲಿದೆ. ನಮ್ಮ ಪೂರ್ವಜರು ಯಾವುದೇ ಕಾರ್ಯಕ್ರಮಗಳಿಗೆ ಆಮಂತ್ರಣ ಪತ್ರಿಕೆಗಳನ್ನು ಮುದ್ರಿಸುತ್ತಿರಲಿಲ್ಲ. ಬದಲಾಗಿ […]
ಭಾರತೀಯ ಸಂಪ್ರದಾಯದಲ್ಲಿ ತಾಂಬೂಲಕ್ಕೆ ಪ್ರಮುಖ ಸ್ಥಾನ ನೀಡಲಾಗಿದೆ. ನಿಶ್ಚಿತಾರ್ಥ, ಮದುವೆ, ಪೂಜೆ, ವ್ರತ, ಶುಭ ಸಮಾರಂಭಗಳಲ್ಲಿ ತಾಂಬೂಲ ಇರಲೇಬೇಕು. ಹಿಂದೆ ಯುದ್ಧದ ಸಂದರ್ಭದಲ್ಲಿ ರಣ ವೀಳ್ಯ ನೀಡುವಲ್ಲಿ ವೀಳ್ಯದೆಲೆ ಬಳಕೆಯಾಗುತ್ತಿತ್ತು ಎಂದು ಉಲ್ಲೇಖವಿದೆ. ಊಟವಾದ ಬಳಿಕ ಎಲೆ-ಅಡಿಕೆ ತಿನ್ನಬೇಕೆಂಬ ಸಂಪ್ರದಾಯವಿದೆ. ಹೀಗಾಗೇ ಮನೆಗೆ ಬಂದ ಅತಿಥಿಗಳಿಗೆ ಮೊದಲು ಕುಡಿಯಲು ನೀರು ಕೊಟ್ಟು, ಊಟ ಬಡಿಸಿ ನಂತರ ತಾಂಬೂಲ ನೀಡುವ ಪದ್ಧತಿ ಇಂದಿಗೂ ಕೆಲವೊಂದು ಕಡೆ ಆಚರಣೆಯಲ್ಲಿದೆ.
ನಮ್ಮ ಪೂರ್ವಜರು ಯಾವುದೇ ಕಾರ್ಯಕ್ರಮಗಳಿಗೆ ಆಮಂತ್ರಣ ಪತ್ರಿಕೆಗಳನ್ನು ಮುದ್ರಿಸುತ್ತಿರಲಿಲ್ಲ. ಬದಲಾಗಿ ತಾಂಬೂಲ ನೀಡುವ ಮೂಲಕ ಕಾರ್ಯಕ್ರಮಕ್ಕೆ ಆಮಂತ್ರಣ ನೀಡಲಾಗುತ್ತಿತ್ತು. ಹೀಗೆ ಆಮಂತ್ರಿಸುವ ಪದ್ಧತಿ ಇಂದಿಗೂ ನಮ್ಮ ಸಂಪ್ರದಾಯದಲ್ಲಿ ಕಾಣಬಹುದು. ವೀಳ್ಯದೆಲೆ ಅಡಿಕೆ ಜಗಿಯುವುದನ್ನೇ ಒಂದು ಪ್ರಮುಖ ಹವ್ಯಾಸವನ್ನಾಗಿಸಿಕೊಂಡವರು ಸಾಕಷ್ಟು ಜನರಿದ್ದಾರೆ. ಹೀಗೆ ಪ್ರತಿಯೊಂದು ಕಾರ್ಯಕ್ರಮಗಳಲ್ಲೂ ವೀಳ್ಯದೆಲೆಯು ಬಳಕೆಯಾಗುತ್ತೆ.
ತಾಂಬೂಲದಲ್ಲಿ ವೀಳ್ಯದೆಲೆಯ ಪಾತ್ರ ಮಹತ್ತರವಾದುದು. ವೀಳ್ಯದೆಲೆ ತುದಿಯಲ್ಲಿ ಲಕ್ಷ್ಮೀವಾಸವಾಗಿರ್ತಾಳೆ. ವೀಳ್ಯದೆಲೆ ಬಲಭಾಗದಲ್ಲಿ ಬ್ರಹ್ಮ ದೇವರ ವಾಸ, ವೀಳ್ಯದೆಲೆ ಮಧ್ಯದಲ್ಲಿ ಸರಸ್ವತಿ ದೇವಿ, ವೀಳ್ಯದೆಲೆ ಎಡಭಾಗದಲ್ಲಿ ಪಾರ್ವತಿ ದೇವಿ, ವೀಳ್ಯದೆಲೆಯ ಸಣ್ಣದಂಟಿನಲ್ಲಿ ಮಹಾವಿಷ್ಣುವಿನ ವಾಸ, ವೀಳ್ಯದೆಲೆ ಹಿಂಭಾಗದಲ್ಲಿ ಚಂದ್ರ ವಾಸ, ವೀಳ್ಯದೆಲೆಯ ಎಲ್ಲಾ ಮೂಲೆಗಳಲ್ಲಿ ಪರಮೇಶ್ವರನ ವಾಸ, ವೀಳ್ಯದೆಲೆಯ ಬುಡದಲ್ಲಿ ಮೃತ್ಯುದೇವತೆಯ ವಾಸವಿರುತ್ತೆ.
ಈ ಕಾರಣಕ್ಕೆ ತಾಂಬೂಲ ಹಾಕಿಕೊಳ್ಳುವಾಗ ತುದಿ ಭಾಗ ತೆಗೆದು ಹಾಕಿಕೊಳ್ಳಲಾಗುತ್ತೆ. ವೀಳ್ಯದೆಲೆ ತೊಟ್ಟಿನಲ್ಲಿ ಅಹಂಕಾರ ದೇವತೆ ಹಾಗೂ ದಾರಿದ್ರ್ಯಲಕ್ಷ್ಮೀ ಇರುತ್ತಾರೆ. ಆದುದರಿಂದಲೇ ವೀಳ್ಯದೆಲೆ ಹಾಕಿಕೊಳ್ಳುವವರು ತೊಟ್ಟನ್ನು ಮುರಿದು ಹಾಕ್ತಾರೆ. ವೀಳ್ಯದೆಲೆ ಮಧ್ಯಭಾಗದ ನಂತರ ಮನ್ಮಥನ ವಾಸ. ಈ ಎಲ್ಲಾ ದೇವರುಗಳು ಇರೋದ್ರಿಂದಲೇ, ವೀಳ್ಯದೆಲೆ ತಾಂಬೂಲಕ್ಕೆ ಇಷ್ಟೊಂದು ಮಹತ್ವವಿದೆ.
ತಾಂಬೂಲ ನೀಡುವ ಬಗೆ ಹೇಗೆ: ಶುಭ ಸಮಾರಂಭಗಳಲ್ಲಿ, ಹಬ್ಬ, ಪೂಜೆ ವ್ರತಗಳನ್ನು ಆಚರಿಸಿದವರು ತಾಂಬೂಲ ನೀಡುವ ಆಚರಣೆ ಇದೆ. ಹೀಗೆ ತಾಂಬೂಳ ನೀಡುವಾಗ ಮೊದಲು ಮುತ್ತೈದೆಯರಿಗೆ ಅರಿಶಿನ, ಕುಂಕುಮ ನೀಡಬೇಕು. ನಂತರ ತಾಂಬೂಲ ನೀಡುವಾಗ ವೀಳ್ಯದೆಲೆಯ ತುದಿ ಹಾಗೂ ಬಾಳೆಹಣ್ಣಿನ ತುದಿ ನಮ್ಮ ಕಡೆಯಲ್ಲಿರಬೇಕು.
ವೀಳ್ಯೆದೆಲೆಯನ್ನು ಮೂರು ಅಥವಾ ಐದರ ಸಂಖ್ಯೆಯಲ್ಲಿ ಹಾಗೆಯೇ ಅಡಿಕೆಯನ್ನು, ಹಣ್ಣನ್ನು ಎರಡರ ಸಂಖ್ಯೆಯಲ್ಲಿಡಬೇಕು. ತಾಂಬೂಲದಲ್ಲಿ ಯಾವುದಾದರೂ ಒಂದು ಹಣ್ಣನ್ನು ನೀಡಬೇಕು. ಇನ್ನು ದೇವರಿಗೆ ನೈವೇದ್ಯ ಅರ್ಪಿಸುವಾಗ ಪೂರ್ವ ಅಥವಾ ಉತ್ತರ ದಿಕ್ಕಿಗೆ ತುದಿ ಬರುವ ತರಹ ವೀಳ್ಯದೆಲೆಯನ್ನು ಇಟ್ಟು ದೇವರಿಗೆ ನೈವೇದ್ಯ ಅರ್ಪಿಸಬೇಕು.
ಯಾರ ಮನೆಯಲ್ಲೇ ತಾಂಬೂಲ ಕೊಟ್ಟರೂ, ದೇವರ ಮುಂದೆ ಇಟ್ಟು ನಮಸ್ಕಾರ ಮಾಡಿ, ಆ ನಂತರ ಉಪಯೋಗಿಸಬೇಕು. ಮಂಗಳವಾರ, ಶುಕ್ರವಾರಗಳಂದು ಯಾವುದೇ ಕಾರಣಕ್ಕೂ ವೀಳ್ಯದೆಲೆಯನ್ನು ಹೊರಗೆ ಬಿಸಾಕಬಾರದು. ಹಸಿರಾಗಿರುವ ಮತ್ತು ಅಂದವಾಗಿ ಹಸ್ತದ ಆಕಾರ ಇರುವ ಎಳೆಯ ವೀಳ್ಯದೆಲೆಯನ್ನೇ ದೇವರ ನೈವೇದ್ಯಕ್ಕೆ ಮತ್ತು ತಾಂಬೂಲ ನೀಡಲು ಬಳಸಬೇಕು.
Published On - 8:08 pm, Tue, 26 November 19