ಬ್ಲಾಕ್ ಫಂಗಸ್ ತಡೆಗಟ್ಟಲು ಎಲ್ಲಾ ರೀತಿಯ ಸಿದ್ಧತೆಗಳು ಆಗಿವೆ: ಆರೋಗ್ಯ ಸಚಿವ ಡಾ.ಕೆ.ಸುಧಾಕರ್
ವೈದ್ಯಕೀಯ ಹಾಗೂ ಆರೋಗ್ಯ ಇಲಾಖೆಯ ಅಧಿಕಾರಿಗಳ ಜೊತೆ ಸಭೆ ನಡೆಸಿದ್ದೇನೆ. ಬ್ಲಾಕ್ ಫಂಗಸ್ ತಡೆಗಟ್ಟುವುದು ಹಾಗೂ ಸೂಕ್ತ ಚಿಕಿತ್ಸೆಗೆ ಸಂಬಂಧಿಸಿದಂತೆ ಚರ್ಚೆ ಮಾಡಿದ್ದೇನೆ. ಖಾಸಗಿ ಆಸ್ಪತ್ರೆ, ಸರ್ಕಾರಿ ಆಸ್ಪತ್ರೆ ಹಾಗೂ ವೈದ್ಯಕೀಯ ಕಾಲೇಜುಗಳಲ್ಲಿ ಯಾರೆಲ್ಲ ದಾಖಲಾಗಿದ್ದರು ಅವರ ಹೆಲ್ತ್ ಕಂಡೀಶನ್ ಬಗ್ಗೆ ಮಾಹಿತಿ ಕೇಳಿದ್ದೇನೆ.
ಬೆಂಗಳೂರು: ಕೊರೊನಾ ಬೆನ್ನಲ್ಲೆ ಎದುರಾಗಿರುವ ಬ್ಲಾಕ್ ಫಂಗಸ್ ಬಗ್ಗೆ ರಾಜ್ಯದಲ್ಲಿ ಆತಂಕ ಶುರುವಾಗಿದೆ. ಈ ಬ್ಲಾಕ್ ಫಂಗಸ್ ನಿಯಂತ್ರಿಸಲು ಆರೋಗ್ಯ ಇಲಾಖೆ ಸನ್ನದ್ಧವಾಗಿದೆಯಂತೆ. ಮ್ಯೂಕರ್ ಮೈಕೋಸಿಸ್ ಎಂಬ ಭಯಾನಕ ಕಾಯಿಲೆ ಅಮಾಯಕ ಪ್ರಾಣಗಳ ಜೊತೆ ಚೆಲ್ಲಾಟವಾಡುತ್ತಿದೆ. ಸದ್ಯ ರಾಜ್ಯದಲ್ಲೂ ಈ ಬ್ಲಾಕ್ ಫಂಗಸ್ ವ್ಯಾಪಕವಾಗಿ ಹರಡುವುದಕ್ಕೆ ಶುರುಮಾಡಿದೆ. ಹೀಗಾಗಿ ಇದನ್ನು ತಡೆಗಟ್ಟಲು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಹೊಸ ತಂತ್ರಗಳನ್ನು ರೂಪಿಸುತ್ತಿದ್ದಾರಂತೆ.
ವೈದ್ಯಕೀಯ ಹಾಗೂ ಆರೋಗ್ಯ ಇಲಾಖೆಯ ಅಧಿಕಾರಿಗಳ ಜೊತೆ ಸಭೆ ನಡೆಸಿದ್ದೇನೆ. ಬ್ಲಾಕ್ ಫಂಗಸ್ ತಡೆಗಟ್ಟುವುದು ಹಾಗೂ ಸೂಕ್ತ ಚಿಕಿತ್ಸೆಗೆ ಸಂಬಂಧಿಸಿದಂತೆ ಚರ್ಚೆ ಮಾಡಿದ್ದೇನೆ. ಖಾಸಗಿ ಆಸ್ಪತ್ರೆ, ಸರ್ಕಾರಿ ಆಸ್ಪತ್ರೆ ಹಾಗೂ ವೈದ್ಯಕೀಯ ಕಾಲೇಜುಗಳಲ್ಲಿ ಯಾರೆಲ್ಲ ದಾಖಲಾಗಿದ್ದರು ಅವರ ಹೆಲ್ತ್ ಕಂಡೀಶನ್ ಬಗ್ಗೆ ಮಾಹಿತಿ ಕೇಳಿದ್ದೇನೆ. ಸದ್ಯ ಇದುವರೆಗೂ ರಾಜ್ಯದಲ್ಲಿ 446 ಸಸ್ಪೆಕ್ಟ್ ಕೇಸ್ ಆಗಿದೆ. ಇದರಲ್ಲಿ 433 ಜನ ಅಡ್ಮಿಟ್ ಆಗಿದ್ದಾರೆ. 11 ಜನ ಮನೆಯಲ್ಲಿ ಇದ್ದಾರೆ ಅವರನ್ನು ಆಸ್ಪತ್ರೆ ದಾಖಲಿಸಲು ಹೇಳಿದ್ದೇವೆ. 12 ಜನ ಮ್ಯೂಕರ್ ಮೈಕೋಸಿಸ್ಗೆ ಮೃತಪಟ್ಟಿದ್ದಾರೆ. ಹೀಗಾಗಿ ಇದನ್ನ ತಡೆಗಟ್ಟಲು ಎಲ್ಲಾ ರೀತಿಯ ಸಿದ್ಧತೆಗಳು ಆಗಿವೆ ಎಂದು ಆರೋಗ್ಯ ಸಚಿವ ಡಾ.ಕೆ ಸುಧಾಕರ್ ಹೇಳಿದ್ದಾರೆ.
ಬ್ಲಾಕ್ ಫಂಗಸ್ ಕೊವಿಡ್ನಿಂದ ಗುಣಮುಖರಾದವರು, ಶುಗರ್ ಇದ್ದವರಿಗೆ ಎರಡು ವಾರದ ನಂತರ ಕಾಣಿಸಿಕೊಳ್ಳುತ್ತಿದೆ. ನಲ್ಲಿಯ ನೀರನ್ನು ಬಳಸಿದಾಗ ಬ್ಲಾಕ್ ಫಂಗಸ್ ಬರುತ್ತದೆ. ಒಂದೇ ಮಾಸ್ಕ್ನ ಪದೇ ಪದೇ ಬಳಸಿದರು ಬರುತ್ತದೆ. ವೆಂಟಿಲೇಟರ್ ಟ್ಯೂಬ್ ಬದಲಿಸುವಾಗ ಬರುತ್ತದೆ. ಹಾಸಿಗೆ ಮೇಲಿನ ಬೆಡ್ ಶೀಟ್ನಿಂದಲೂ ಬರುತ್ತದೆ. ಆಕ್ಸಿಜನ್ನಿಂದಲೂ ಬರಬಹುದು ಎಂದು ವರದಿ ಕೊಟ್ಟಿದೆ. ಹೀಗಾಗಿ ಸ್ವಲ್ಪ ಜಾಗರೂಕತೆ ಮುಖ್ಯ. ಜೊತೆಗೆ 18 ಸಾವಿರ ವಯಲ್ಸ್ ಲೈಪೋಸನಲ್ ಆಂಪೋಟೆರಿಸಿನ್ ಬಿ ಮೆಡಿಸಿನ್ ಕೇಂದ್ರಕ್ಕೆ ಬಂದಿದೆ. 9 ಸಾವಿರ ಜನರಿಗೆ ದೇಶದಲ್ಲಿ ಮ್ಯೂಕರ್ ಮೈಕೋಸಿಸ್ ಬಂದಿದೆ. ಒಂದು ಸಾವಿರ ವಯಲ್ಸ್ ಕಳುಹಿಸ್ತೇನೆ ಅಂತಾ ಸದಾನಂದ ಗೌಡರು ಹೇಳಿದ್ದಾರೆ. ಸದ್ಯ ಆಯಾ ರಾಜ್ಯದ ರೋಗಿಗಳ ಅನುಪಾತವಾಗಿ ಮೆಡಿಸಿನ್ ಬರುತ್ತಿದೆ. ಸದ್ಯ ಒಂದು ಸಾವಿರ ವಯಲ್ಸ್ ಬರಲಿದೆ ಅಂತಾ ಸುಧಾಕರ್ ತಿಳಿಸಿದ್ದಾರೆ.
ಇದನ್ನೂ ಓದಿ
ಖಾಲಿ ಹೊಟ್ಟೆಯಲ್ಲಿ ಬಾಳೆ ದಿಂಡಿನ ರಸ ಸೇವಿಸಿ; ವರ್ಷಕ್ಕೆ ಎರಡು ಬಾರಿಯಾದರು ಊಟದ ಜೊತೆಗೆ ಪಲ್ಯ ಮಾಡಿ ಬಡಿಸಿ
ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ದೇಶದ ಈಗಿನ ಆರ್ಥಿಕ ಸ್ಥಿತಿಯಲ್ಲಿ ಏನಾದರೂ ಬದಲಾವಣೆಯಿದೆಯೇ?
(Sudhakar said that all sorts of preparations have been made to prevent black fungus)