ಕಳೆದ ವರ್ಷ​ದ ಇದೇ ಅವಧಿಗೆ ಹೋಲಿಸಿದರೆ ದೇಶದ ಈಗಿನ ಆರ್ಥಿಕ ಸ್ಥಿತಿಯಲ್ಲಿ ಏನಾದರೂ ಬದಲಾವಣೆಯಿದೆಯೇ?

ಕಳೆದ ವರ್ಷ ಕೋವಿಡ್ ಪಿಡುಗು ಧುತ್ತನೆ ಎದುರಾದಾಗ ವಿಶ್ವದಾದ್ಯಂತ ಆರ್ಥಿಕ ಚಟುವಟಿಗಳು ಕುಂಠಿತಗೊಂಡವು. ಇದು ಪೆಟ್ರೋಲಿಯಂ ಉತ್ಪನ್ನಗಳ ಮೇಲೂ ಪ್ರಬಾವ ಬೀರಿ ಅವುಗಳ ಬೇಲೆ ಗಣನೀಯವಾಗಿ ಇಳಿಮುಖಗೊಂಡಿತು. ಭಾರತದ ಸರಾಸರಿ ಕ್ರೂಡ್ ಆಯಿಲ್ ಬಾಸ್ಕೆಟ್ (ಸಿಒಬಿ) ದರ ಪ್ರತಿ ಬ್ಯಾರೆಲ್​ಗೆ 44.82 ರೂ. ಕುಸಿಯಿತು. ಇದು 2004-05 ರಿಂದ ಇದುವರೆಗಿನ ಅತ್ಯಂತ ಕಡಿಮೆ ಬೆಲೆಯಾಗಿದೆ.

ಕಳೆದ ವರ್ಷ​ದ ಇದೇ ಅವಧಿಗೆ ಹೋಲಿಸಿದರೆ ದೇಶದ ಈಗಿನ ಆರ್ಥಿಕ ಸ್ಥಿತಿಯಲ್ಲಿ ಏನಾದರೂ ಬದಲಾವಣೆಯಿದೆಯೇ?
ಸಾಂದರ್ಭಿಕ ಚಿತ್ರ
Follow us
ಅರುಣ್​ ಕುಮಾರ್​ ಬೆಳ್ಳಿ
|

Updated on:May 25, 2021 | 12:02 AM

ಇಂದಿಗೆ ಸರಿಯಾಗಿ ಹದಿನಾಲ್ಕು ತಿಂಗಳುಗಳ (ಮಾರ್ಚ್ 24, 2020) ಹಿಂದೆ ಹೆಚ್ಚುತ್ತಿದ್ದ ಕೊವಿಡ್ ಪಿಡುಗನ್ನು ತಡೆಯಲು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ದೇಶದಾದ್ಯಂತ ಲಾಕ್​ಡೌನ್ ಹೇರಿದರು. ಮಾರ್ಚ್​ 25, 2020ರಿಂದ ಮುಂದಿನ 68 ದಿನಗಳವರೆಗೆ ಭಾರತದಲ್ಲಿ ಸಂಪೂರ್ಣ ಲಾಕ್​ಡೌನ್ ಜಾರಿಯಲ್ಲಿತ್ತು. ಅ ವರ್ಷದ ದ್ವೀತಿಯಾರ್ಧದಲ್ಲಿ ನಿರ್ಬಂಧಗಳನ್ನು ಸಡಿಲಿಸಲಾಯಿತಾದರೂ 2021 ರಲ್ಲಿ ಪುನಃ ಲಾಕ್​ಡೌನ್ ಪ್ರವರ ಶುರುವಾಯಿತು. ಗೂಗಲ್ ಮೊಬಿಲಿಟಿ ಸೂಚ್ಯಂಕದಿಂದ ಪ್ರಾಪ್ತವಾಗಿರುವ ಡಾಟಾ ಪ್ರಕಾರ ಕೆಲಸದ ಸ್ಥಳಗಳಲ್ಲಿ ಈ ವರ್ಷದ ಮೇ 20ರ ಚಟುವಟಿಕೆಗಳು ಕಳೆದ ವರ್ಷದ ಮೇ 20ಕ್ಕಿಂತ ಕಮ್ಮಿಯಿದ್ದವು.

2020ರ ಲಾಕ್​ಡೌನಿಂದಾಗಿ ಆ ವರ್ಷ ಜೂನ್ 30ಕ್ಕೆ ಕೊನೆಗೊಂಡ ಎರಡನೇ ತ್ರೈಮಾಸಿಕ ಅವಧಿಯಲ್ಲಿ ಭಾರತದ ಜಿಡಿಪಿ ಶೇಕಡಾ 24 ರಷ್ಟು ಕುಸಿಯಿತು. 2021 ರ ತ್ರೈಮಾಸಿಕದ ಅಂಕಿ-ಅಂಶಗಳು ಆಗಸ್ಟ್​ ತಿಂಗಳಲ್ಲಿ ಮಾತ್ರ ಲಭ್ಯವಾಗಲಿವೆ. ಹಲವಾರು ಆರ್ಥಿಕ ತಜ್ಞರ ಪ್ರಕಾರ ಈ ತ್ರೈಮಾಸಿಕ ಅಂಕಿ-ಅಂಶಗಳು ಕಳೆದ ವರ್ಷದ ಅಂಕಿ-ಅಂಶಗಳಷ್ಟು ಕೆಟ್ಟದ್ದಾಗಿರಲಾರವು. ಅದರೆ, ಈ ವರ್ಷವು ಆರ್ಥಿಕ ಸ್ಥಿತಿಯು ಚೇತೋಹಾರಿವಾಗಿಲ್ಲ ಎನ್ನವುದಕ್ಕೆ ಮೂರು ಕಾರಣಗಳಿವೆ.

ಕಳೆದ ವರ್ಷ ಕೋವಿಡ್ ಪಿಡುಗು ಧುತ್ತನೆ ಎದುರಾದಾಗ ವಿಶ್ವದಾದ್ಯಂತ ಆರ್ಥಿಕ ಚಟುವಟಿಗಳು ಕುಂಠಿತಗೊಂಡವು. ಇದು ಪೆಟ್ರೋಲಿಯಂ ಉತ್ಪನ್ನಗಳ ಮೇಲೂ ಪ್ರಬಾವ ಬೀರಿ ಅವುಗಳ ಬೇಲೆ ಗಣನೀಯವಾಗಿ ಇಳಿಮುಖಗೊಂಡಿತು. ಭಾರತದ ಸರಾಸರಿ ಕ್ರೂಡ್ ಆಯಿಲ್ ಬಾಸ್ಕೆಟ್ (ಸಿಒಬಿ) ದರ ಪ್ರತಿ ಬ್ಯಾರೆಲ್​ಗೆ 44.82 ರೂ. ಕುಸಿಯಿತು. ಇದು 2004-05 ರಿಂದ ಇದುವರೆಗಿನ ಅತ್ಯಂತ ಕಡಿಮೆ ಬೆಲೆಯಾಗಿದೆ.

ಭಾರತದ ಶೇಕಡಾ 80 ರಷ್ಟು ಪೆಟ್ರೋಲಿಯಂ ಅಗತ್ಯಗಳನ್ನು ಆಮದು ಮಾಡಿಕೊಳ್ಳಲಾಗುತ್ತದೆ, ಹಾಗಾಗಿ ತೈಲದ ಬೆಲೆ ಕಮ್ಮಿಯಾದರೆ ಅದರಿಂದ ದೇಶಕ್ಕೆ ಹಲವಾರು ಲಾಭಗಳಿವೆ. ಈ ಲಾಭಗಳಲ್ಲಿ ಅನುಕೂಲಕರ ಟ್ರೇಡ್ ಬ್ಯಾಲೆನ್ಸ್ ಮೂಲಕ ಹೆಚ್ಚಿನ ಜಿಡಿಪಿ, ಕಡಿಮೆ ಹಣದುಬ್ಬರ, ಮತ್ತು ಅಗ್ಗದ ಕಚ್ಚಾ ತೈಲದ ಲಾಭಗಳನ್ನು ಗ್ರಾಹಕರಿಗೆ ವರ್ಗಾಯಿಸದ್ದರೆ ಸರ್ಕಾರಕ್ಕೆ ಲಭ್ಯವಾಗುವ ಹೆಚ್ಚಿನ ಆದಾಯ ಸೇರಿವೆ. 2020-21 ಆರ್ಥಿಕ ವರ್ಷವನ್ನು ಬೆಂಬಲಿಸಲು ಪೆಟ್ರೋಲಿಯಂ ಉತ್ಪನ್ನಗಳ ಮೂಲಕ ಸಿಕ್ಕ ಆದಾಯವು ನಿರ್ಣಾಯಕ ಪಾತ್ರ ನಿರ್ವಹಿಸಿತು.

ಕಳೆದ ವರ್ಷ ಕೊವಿಡ್​-19 ಅಪ್ಪಳಿದಾಗ ಅದರ ಬಗ್ಗೆ ಯಾರಲ್ಲೂ ಹೆಚ್ಚಿನ ಜ್ಞಾನ ಇಲ್ಲದೇ ಹೋಗಿದ್ದರಿಂದ ತೀವ್ರ ಸ್ವರೂಪದ ಆತಂಕ ಎದುರಾಗಿತ್ತು. ಲಸಿಕೆ ಗಳು ಲಭ್ಯವಾಗುತ್ತವೋ ಇಲ್ಲವೋ, ಲಭ್ಯ ಆದರೂ ಯಾವಾಗ ಆಗಲಿವೆ ಅನ್ನುವ ಬಗ್ಗೆ ಯಾರಿಗೂ ಗೊತ್ತಿರಲಿಲ್ಲ. ಲಾಕ್​ಡೌನ್ ಎಷ್ಟು ದಿಗಳವರೆಗೆ ಜಾರಿಯಲ್ಲಿರಲಿದೆ ಎನ್ನುವುದರ ಕುರಿತು ಸಹ ಸ್ಪಷ್ಟವಾದ ಮಾಹಿತಿ ಇರಲಿಲ್ಲ. ಎರಡನೇ ಅಲೆಯ ಎಚ್ಚರಿಕೆಯನ್ನು ಜನ ಊಹಾಪೋಹವೆಂದೇ ಭಾವಿಸಿದ್ದರು.

ಆದರೆ ಈ ಸಂಗತಿಗಳ ಬಗ್ಗೆ ಈಗ ಸಾಕಷ್ಟು ಸ್ಪಷ್ಟತೆಯಿದೆ. ಭಾರತದಲ್ಲಿ ಈಗ ಲಸಿಕೆಗಳು ಲಭ್ಯವಿವೆಯಾದರೂ ಆಗತ್ಯ ಪ್ರಮಾಣದಲ್ಲಿ ಅಲ್ಲ. ಎಲ್ಲರಿಗೂ ವ್ಯಾಕ್ಸಿನ್ ಸಿಗಬೇಕಾದರೆ ಸ್ವಲ್ಪ ಸಮಯ ಹಿಡಿಯಲಿದೆ. ಲಸಿಕೆಗಳ ಬಗ್ಗೆ ಸರ್ಕಾರ ಮತ್ತು ಖಾಸಗಿ ವಲಯ ತೋರಿದ ಉತ್ಸಾಹ ಅತಿರೇಕವೆನಿಸಿತು. ಈ ವಿಷಯದಲ್ಲಿ ಖಾಸಗಿ ವಲಯವನ್ನೇ ಹೆಚ್ಚು ದೂರಬೇಕು. ಎರಡನೇ ಅಲೆ ಭಾರತದಲ್ಲಿ ಏಳಲಾರದು ಅಂತ ಖಾಸಗಿ ವಲಯ ಅಂದುಕೊಂಡಿದ್ದು ಮೂರ್ಖತವೆನಿಸಿತು. ವ್ಯಾಪಾರ ಚಟುವಟಕೆಗಳನ್ನು ತೋರುವ ಪರಿಮಾಣ ನೊಮುರಾ ಇಂಡಿಯಾ ರಿಸಂಪ್ಷನ್ ಇಂಡೆಕ್ಸ್ (ಎನ್​ಐಬಿಆರ್​ಐ) ಪಿಡುಗು-ಮುನ್ನಿನ ಅವಧಿಗೆ ಹೋಲಿಸಿದರೆ ಮೇ 23 ಕ್ಕೆ ಕೊನೆಗೊಂಡ ವಾರದಲ್ಲಿ 60 ಕ್ಕೆ ಕುಸಿಯಿತು. ಅಂದರೆ 2020 ಮೇ 24ಕ್ಕೆ ಕೊನೆಗೊಂಡ ವಾರಕ್ಕಿಂತ ಕೇವಲ ಮೂರು ಪರ್ಸೆಂಟ್​ ಪಾಯಿಂಟ್​ಗಳಷ್ಟು ಜಾಸ್ತಿಯಿತ್ತು.

ಈ ಅನುಭವವು ಮೂರನೇ ಅಲೆ ಮತ್ತು ಅದು ಆರ್ಥಿಕ ಚಟುವಟಿಗಳಿಗೆ ಸೃಷ್ಟಿಸಹುದಾದ ನಿರ್ಭಂಧಗಳ ಹಿನ್ನೆಲೆಯಲ್ಲಿ ಆರ್ಥಿಕ ವ್ಯವಸ್ಥೆಗೆ ಉತ್ತಮ ಆಕಾರವನ್ನು ನೀಡಲಿದೆ. ಬಿಸಿನೆಸ್​ಗೆ ಸಂಬಂಧಿಸಿದ ಭಾರತದ ಖ್ಯಾತ ಪತ್ರಿಕೆಯೊಂದರಲ್ಲಿ ಜೆಪಿ ಮೋರ್ಗನ್ ಸಂಸ್ಥೆಯಲ್ಲಿ ಭಾರತದ ಮುಖ್ಯ ಆರ್ಥಿಕ ತಜ್ಞರಾಗಿರುವ ಸಾಜಿದ್ ಚಿನಾಯ್​ ಅವರು ಬರೆದಿರುವ ಪ್ರಬಂಧದದಲ್ಲಿ, ಧುತ್ತನೆ ಎದುರಾದ ಎರಡನೇ ಅಲೆ ಮತ್ತು ಅದರ ತೀವ್ರತೆ ಹಾಗೂ ಹಾಹಾಕಾರ ಜನರ ನಡುವಳಿಕೆಗಳ ಮೇಲೆ ದೇಶದಲ್ಲಿ ಎಲ್ಲರಿಗೂ ಲಸಿಕೆ ಸಿಗುವವರೆಗೆ ಪ್ರಭಾವ ಬೀರಬಲ್ಲದು ಎಂದು ಹೇಳಿದ್ದಾರೆ. ಈ ನೋವು ಮತ್ತು ಭೀತಿ ದೇಶದ ನೀತಿಗಳನ್ನು ರೂಪಿಸುವವರಲ್ಲಿ ನಿರ್ಬಂಧಗಳನ್ನು ಹೇರುವಾಗ ಹೆಚ್ಚಿನ ಜಾಗ್ರತೆ, ಆದಾಯದ ಅಭದ್ರತೆ, ಕುಟುಂಬಗಳ ಮುಂದಾಲೋಚನೆಯ ಉಳಿತಾಯ ಮತ್ತು ಖಾಸಗಿ ಹೂಡಿಕೆ ಮೊದಲಾದವುಗಳು ಹಣಕಾಸಿನ ಪರಿಸ್ಥಿತಿ ಸುಧಾರಿಸಿದರೂ ಚೇತರಿಸಿಕೊಳ್ಳಲು ಸಮಯ ತೆಗೆದುಕೊಳ್ಳಲಿವೆ, ಎಂದು ಚಿನಾಯ್ ವಾದಿಸಿದ್ದಾರೆ.

ಇದನ್ನೂ ಓದಿ: Corona, Business Loss : ವ್ಯಾಪಾರಕ್ಕೆ ನಾವು ಹಾಕಿದ್ದ ಬಂಡವಾಳ ಸಹ ಸಿಗುತ್ತಿಲ್ಲ!

Published On - 11:49 pm, Mon, 24 May 21

‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ಬಾಗಲಕೋಟೆ: ಬೆಳೆಗೆ ಜನರ ದೃಷ್ಟಿ ತಾಗದಿರಲು ಚಿತ್ರ ನಟಿಯರು ಕಾವಲು!
ಬಾಗಲಕೋಟೆ: ಬೆಳೆಗೆ ಜನರ ದೃಷ್ಟಿ ತಾಗದಿರಲು ಚಿತ್ರ ನಟಿಯರು ಕಾವಲು!
ಹಾಸ್ಟೆಲ್​ಗೆ ಕಾಲಿಟ್ಟರೆ ಕಾಲು ಕತ್ತರಿಸ್ತೀನಿ ಎಂದು ಗದರಿದ ಶಾಸಕ ದರ್ಶನ್
ಹಾಸ್ಟೆಲ್​ಗೆ ಕಾಲಿಟ್ಟರೆ ಕಾಲು ಕತ್ತರಿಸ್ತೀನಿ ಎಂದು ಗದರಿದ ಶಾಸಕ ದರ್ಶನ್
ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್
ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್