AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೇಂದ್ರದಿಂದ ರಾಜ್ಯಗಳಿಗೆ ಜನವರಿಯಲ್ಲಿ 1,73,030 ಕೋಟಿ ರೂ ಜಿಎಸ್​ಟಿ ಹಣ ಹಂಚಿಕೆ; ಕರ್ನಾಟಕಕ್ಕೆ ಸಿಕ್ಕಿದ್ದು 6,310 ಕೋಟಿ ರೂ

Tax devolution to states: ಡಿಸೆಂಬರ್​ನಲ್ಲಿ ರಾಜ್ಯಗಳಿಗೆ 89,086 ಕೋಟಿ ರೂ ಜಿಎಸ್​ಟಿ ಹಣ ಹಂಚಿಕೆ ಮಾಡಿದ್ದ ಕೇಂದ್ರವು ಜನವರಿಯಲ್ಲಿ 1,73,030 ಕೋಟಿ ರೂ ನೀಡಿದೆ. ಉತ್ತರಪ್ರದೇಶಕ್ಕೆ ಅತ್ಯಧಿಕ 31,039 ಕೋಟಿ ರೂ ನೀಡಿದೆ. ಕರ್ನಾಟಕಕ್ಕೆ 6,310 ಕೋಟಿ ರೂ ಸಿಕ್ಕಿದೆ. 15ನೇ ಹಣಕಾಸು ಆಯೋಗದ ಶಿಫಾರಸು ಪ್ರಕಾರ ಒಟ್ಟಾರೆ ಜಿಎಸ್​ಟಿ ಸಂಗ್ರಹದಲ್ಲಿ ಶೇ. 41ರಷ್ಟು ಹಣವನ್ನು ರಾಜ್ಯಗಳಿಗೆ 14 ಕಂತುಗಳಲ್ಲಿ ಹಂಚಿಕೆ ಮಾಡಲಾಗುತ್ತದೆ.

ಕೇಂದ್ರದಿಂದ ರಾಜ್ಯಗಳಿಗೆ ಜನವರಿಯಲ್ಲಿ 1,73,030 ಕೋಟಿ ರೂ ಜಿಎಸ್​ಟಿ ಹಣ ಹಂಚಿಕೆ; ಕರ್ನಾಟಕಕ್ಕೆ ಸಿಕ್ಕಿದ್ದು 6,310 ಕೋಟಿ ರೂ
ಜಿಎಸ್​ಟಿ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jan 10, 2025 | 4:32 PM

Share

ನವದೆಹಲಿ, ಜನವರಿ 10: ಕೇಂದ್ರ ಸರ್ಕಾರ ಜನವರಿ ತಿಂಗಳಿಗೆ 1,73,030 ಕೋಟಿ ರೂ ಜಿಎಸ್​ಟಿ ಹಣವನ್ನು ರಾಜ್ಯ ಸರ್ಕಾರಗಳಿಗೆ ಹಂಚಿಕೆ ಮಾಡಿದೆ. ಇದು ಒಟ್ಟು ಜಿಎಸ್​ಟಿ ಸಂಗ್ರಹದಲ್ಲಿ ರಾಜ್ಯ ಸರ್ಕಾರಗಳ ಪಾಲಿನ ಒಂದು ಭಾಗ ಮಾತ್ರ. ಡಿಸೆಂಬರ್ ತಿಂಗಳಲ್ಲಿ 89,086 ಕೋಟಿ ರೂ ಜಿಎಸ್​ಟಿ ಹಣವನ್ನು ರಾಜ್ಯ ಸರ್ಕಾರಗಳಿಗೆ ಹಂಚಿಕೆ ಮಾಡಲಾಗಿತ್ತು. ಈ ತಿಂಗಳು ಹಂಚಿಕೆ ಹಣ ಎರಡು ಪಟ್ಟು ಹೆಚ್ಚಾಗಿದೆ. ರಾಜ್ಯ ಸರ್ಕಾರಗಳಿಗೆ ಬಂಡವಾಳ ವೆಚ್ಚ ಅಧಿಕಗೊಳಿಸಲು ಸಹಾಯಕವಾಗಿ ಹೆಚ್ಚಿನ ತೆರಿಗೆ ಹಣ ನೀಡಲಾಗಿದೆ. ಅಭಿವೃದ್ಧಿ ಕಾರ್ಯಗಳು ಮತ್ತು ಕಲ್ಯಾಣ ಯೋಜನೆಗಳ ವೆಚ್ಚಕ್ಕೆ ಈ ಹಣ ವಿನಿಯೋಗಿಸುವ ಉದ್ದೇಶ ಇದೆ.

ಈ ತಿಂಗಳು ರಾಜ್ಯಗಳಿಗೆ ನೀಡಿರುವ ಜಿಎಸ್​ಟಿ ಹಂಚಿಕೆಯಲ್ಲಿ ಅತಿಹೆಚ್ಚು ಪಾಲು ಉತ್ತರಪ್ರದೇಶಕ್ಕೆ ಸಿಕ್ಕಿದೆ. ದೇಶದ ಈ ಅತಿದೊಡ್ಡ ರಾಜ್ಯಕ್ಕೆ 31,039 ಕೋಟಿ ರೂ ಸಿಕ್ಕಿದೆ. ಬಿಹಾರಕ್ಕೆ 17,403 ಕೋಟಿ ರೂ ಸಿಕ್ಕಿದೆ. ಮಧ್ಯಪ್ರದೇಶ, ರಾಜಸ್ಥಾನ, ಮಹಾರಾಷ್ಟ್ರ ಮತ್ತು ಪಶ್ಚಿಮ ಬಂಗಾಳ ರಾಜ್ಯಗಳಿಗೆ 10,000 ಕೋಟಿ ರೂಗಿಂತಲೂ ಅಧಿಕ ಜಿಎಸ್​ಟಿ ಪಾಲು ನೀಡಲಾಗಿದೆ. ಕರ್ನಾಟಕಕ್ಕೆ ಸಿಕ್ಕಿರುವುದು 6,310 ಕೋಟಿ ರೂ ಮಾತ್ರವೇ. ಗುಜರಾತ್​ಗೆ ಕರ್ನಾಟಕಕ್ಕಿಂತಲೂ ಕಡಿಮೆ ಹಣ ಸಿಕ್ಕಿದೆ.

15ನೇ ಹಣಕಾಸು ಆಯೋಗವು ಜಿಎಸ್​ಟಿ ತೆರಿಗೆ ಹಣವನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಹಂಚಿಕೆ ಮಾಡಲು ಸೂತ್ರ ನೀಡಿದೆ. ಅದರ ಪ್ರಕಾರ ಹಂಚಿಕೆ ಮಾಡಲಾಗುತ್ತದೆ. ಶೇ. 41ರಷ್ಟು ಜಿಎಸ್​ಟಿ ಹಣವನ್ನು ರಾಜ್ಯಗಳಿಗೆ ಹಂಚಲು ಆಯೋಗ ಶಿಫಾರಸು ಮಾಡಿದೆ. ಈ ಹಣವನ್ನು ವರ್ಷಾದ್ಯಂತ 14 ಕಂತುಗಳಲ್ಲಿ ರಾಜ್ಯಗಳಿಗೆ ಹಂಚಿಕೆ ಮಾಡಲಾಗುತ್ತದೆ.

ಇದನ್ನೂ ಓದಿ: ಪೆಟ್ರೋಲ್ ಪಂಪ್ ಬಿಸಿನೆಸ್ ಹೊಂದಬೇಕಾ? ಆರಂಭಿಕ ಬಂಡವಾಳ, ಲೈಸೆನ್ಸ್, ಲಾಭ ಇತ್ಯಾದಿ ವಿವರ

ಜನವರಿಯಲ್ಲಿ ರಾಜ್ಯಗಳಿಗೆ ಹಂಚಿಕೆ ಮಾಡಲಾದ ಜಿಎಸ್​ಟಿ ಹಣದ ವಿವರ

  1. ಉತ್ತರಪ್ರದೇಶ: 31,039.84 ಕೋಟಿ ರೂ
  2. ಬಿಹಾರ್: 17,403.36 ಕೋಟಿ ರೂ
  3. ಮಧ್ಯಪ್ರದೇಶ: 13,582.86 ಕೋಟಿ ರೂ
  4. ಪಶ್ಚಿಮ ಬಂಗಾಳ: 13,017.06 ಕೋಟಿ ರೂ
  5. ಮಹಾರಾಷ್ಟ್ರ: 10,930.31 ಕೋಟಿ ರೂ
  6. ರಾಜಸ್ಥಾನ್: 10,426.78 ಕೋಟಿ ರೂ
  7. ಒಡಿಶಾ: 7,834.80 ಕೋಟಿ ರೂ
  8. ತಮಿಳುನಾಡು: 7,057.89 ಕೋಟಿ ರೂ
  9. ಆಂಧ್ರಪ್ರದೇಶ್: 7,002.52 ಕೋಟಿ ರೂ
  10. ಕರ್ನಾಟಕ: 6,310.40 ಕೋಟಿ ರೂ
  11. ಗುಜರಾತ್: 6,017.99 ಕೋಟಿ ರೂ
  12. ಛತ್ತೀಸ್​ಗಡ್: 5,895.13 ಕೋಟಿ ರೂ
  13. ಜಾರ್ಖಂಡ್: 5,722.10 ಕೋಟಿ ರೂ
  14. ಅಸ್ಸಾಮ್: 5,412.38 ಕೋಟಿ ರೂ
  15. ತೆಲಂಗಾಣ: 3,637.09 ಕೋಟಿ ರೂ
  16. ಕೇರಳ: 3,330.86 ಕೋಟಿ ರೂ
  17. ಪಂಜಾಬ್: 3,126.65 ಕೋಟಿ ರೂ
  18. ಅರುಣಾಚಲಪ್ರದೇಶ: 3,040.14 ಕೋಟಿ ರೂ
  19. ಉತ್ತರಾಖಂಡ್: 1,934.47 ಕೋಟಿ ರೂ
  20. ಹರ್ಯಾಣ: 1,891.22 ಕೋಟಿ ರೂ
  21. ಹಿಮಾಚಲಪ್ರದೇಶ: 1,436.16 ಕೋಟಿ ರೂ
  22. ಮೇಘಾಲಯ: 1,327.13 ಕೋಟಿ ರೂ
  23. ಮಣಿಪುರ್: 1,238.90 ಕೋಟಿ ರೂ
  24. ತ್ರಿಪುರಾ: 1,225.04 ಕೋಟಿ ರೂ
  25. ನಾಗಾಲ್ಯಾಂಡ್: 984.54 ಕೋಟಿ ರೂ
  26. ಮಿಜೋರಾಂ: 865.15 ಕೋಟಿ ರೂ
  27. ಸಿಕ್ಕಿಂ: 671.35 ಕೋಟಿ ರೂ
  28. ಗೋವಾ: 667.91 ಕೋಟಿ ರೂ

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಚಿತ್ರದುರ್ಗ ಬಸ್ ದುರಂತದ ಬಳಿಕವೂ ಎಚ್ಚೆತ್ತುಕೊಳ್ಳದ RTO ಅಧಿಕಾರಿಗಳು
ಚಿತ್ರದುರ್ಗ ಬಸ್ ದುರಂತದ ಬಳಿಕವೂ ಎಚ್ಚೆತ್ತುಕೊಳ್ಳದ RTO ಅಧಿಕಾರಿಗಳು
ಹೊಸ ವರ್ಷದ ಕೊಡುಗೆ: ನೀವು ಬೆಳಗ್ಗೆ ಹಲ್ಲು ಉಜ್ಜೋ ಮುಂಚೆಯೇ ಬಾರ್ ಓಪನ್!
ಹೊಸ ವರ್ಷದ ಕೊಡುಗೆ: ನೀವು ಬೆಳಗ್ಗೆ ಹಲ್ಲು ಉಜ್ಜೋ ಮುಂಚೆಯೇ ಬಾರ್ ಓಪನ್!
ಚಿತ್ರರಂಗಕ್ಕೆ ಬಂದಿದ್ದು ಗಲಾಟೆ ಮಾಡೋಕಲ್ಲ, ನಟಿಸೋಕೆ; ಸುದೀಪ್
ಚಿತ್ರರಂಗಕ್ಕೆ ಬಂದಿದ್ದು ಗಲಾಟೆ ಮಾಡೋಕಲ್ಲ, ನಟಿಸೋಕೆ; ಸುದೀಪ್
ತಮಿಳು ನಟ ನವೀನ್ ಚಂದ್ರಗೆ ಅಷ್ಟು ಸ್ಪಷ್ಟ ಕನ್ನಡ ಹೇಗೆ ಬರುತ್ತೆ?
ತಮಿಳು ನಟ ನವೀನ್ ಚಂದ್ರಗೆ ಅಷ್ಟು ಸ್ಪಷ್ಟ ಕನ್ನಡ ಹೇಗೆ ಬರುತ್ತೆ?
ವಿಶ್ವ ಕ್ರಿಕೆಟ್​ನಲ್ಲಿ ಈ ಸಾಧನೆ ಮಾಡಿದ ಏಕೈಕ ಮಹಿಳಾ ಆಟಗಾರ್ತಿ ದೀಪ್ತಿ
ವಿಶ್ವ ಕ್ರಿಕೆಟ್​ನಲ್ಲಿ ಈ ಸಾಧನೆ ಮಾಡಿದ ಏಕೈಕ ಮಹಿಳಾ ಆಟಗಾರ್ತಿ ದೀಪ್ತಿ
ಕರ್ನಾಟಕದಲ್ಲಿ ಸಿಎಂ ಬದಲಾವಣೆ ಬಗ್ಗೆ ಕೋಡಿಶ್ರೀ ಸ್ಫೋಟಕ ಭವಿಷ್ಯ
ಕರ್ನಾಟಕದಲ್ಲಿ ಸಿಎಂ ಬದಲಾವಣೆ ಬಗ್ಗೆ ಕೋಡಿಶ್ರೀ ಸ್ಫೋಟಕ ಭವಿಷ್ಯ
ನಾನು ಸಿನಿಮಾ ಡೈಲಾಗ್ ಮೂಲಕ ಟಾಂಟ್ ಕೊಡಲ್ಲ ಎಂದ ಸುದೀಪ್
ನಾನು ಸಿನಿಮಾ ಡೈಲಾಗ್ ಮೂಲಕ ಟಾಂಟ್ ಕೊಡಲ್ಲ ಎಂದ ಸುದೀಪ್
ಅವರೇ ಮೇಳದಲ್ಲಿ ಡಿಕೆಶಿಗೆ ಮಹಿಳೆ ಕೇಳಿದ ಪ್ರಶ್ನೆಗೆ ಕಕ್ಕಾಬಿಕ್ಕಿಯಾದ ಜನ
ಅವರೇ ಮೇಳದಲ್ಲಿ ಡಿಕೆಶಿಗೆ ಮಹಿಳೆ ಕೇಳಿದ ಪ್ರಶ್ನೆಗೆ ಕಕ್ಕಾಬಿಕ್ಕಿಯಾದ ಜನ
ಮುಸ್ಲಿಂ ಕುಟುಂಬಗಳಿಗೆ ಬೇರೆ ಜಾಗ ನೀಡುತ್ತೇವೆ
ಮುಸ್ಲಿಂ ಕುಟುಂಬಗಳಿಗೆ ಬೇರೆ ಜಾಗ ನೀಡುತ್ತೇವೆ
‘ಮಾರ್ಕ್’ ಮೊದಲ ದಿನದ ಕಲೆಕ್ಷನ್ 15 ಕೋಟಿ ನಾ? ಸುದೀಪ್ ಕಡೆಯಿಂದ ಸ್ಪಷ್ಟನೆ
‘ಮಾರ್ಕ್’ ಮೊದಲ ದಿನದ ಕಲೆಕ್ಷನ್ 15 ಕೋಟಿ ನಾ? ಸುದೀಪ್ ಕಡೆಯಿಂದ ಸ್ಪಷ್ಟನೆ