ನಿರ್ದಿಷ್ಟವಾದ ಕಾರು ಬೇಕೆಂದು ನಾನು ಕೇಳಿಲ್ಲ, ಸರ್ಕಾರೀ ಕಾರುಗಳು ನಮ್ಮಪ್ಪನ ಆಸ್ತಿಯಲ್ಲ: ಹೆಚ್ ಡಿ ಕುಮಾರಸ್ವಾಮಿ

ನಿರ್ದಿಷ್ಟವಾದ ಕಾರು ಬೇಕೆಂದು ನಾನು ಕೇಳಿಲ್ಲ, ಸರ್ಕಾರೀ ಕಾರುಗಳು ನಮ್ಮಪ್ಪನ ಆಸ್ತಿಯಲ್ಲ: ಹೆಚ್ ಡಿ ಕುಮಾರಸ್ವಾಮಿ

ಅರುಣ್​ ಕುಮಾರ್​ ಬೆಳ್ಳಿ
|

Updated on:Jan 10, 2025 | 3:47 PM

ರಾಜ್ಯದ ಕೆಲ ಹೆದ್ದಾರಿಗಳನ್ನು ಮೇಲ್ದರ್ಜೆಗೆ ಏರಿಸುವಂತೆ ಮನವಿ ಮಾಡಲು ಕೇಂದ್ರ ಸಚಿವ ನಿತಿನ್ ಗಡ್ಕರಿಯವರನ್ನು ಭೇಟಿ ಮಾಡಿದ್ದೇನೆ, ಶ್ರೀರಂಗಪಟ್ಟಣದಿಂದ ಅರಸೀಕೆರೆ ನಡುವಿನ ರಸ್ತೆಯನ್ನು ಅಪ್​ಗ್ರೇಡ್ ಮಾಡಬೇಕಿದೆ, ಮಂಡ್ಯದ ರಿಂಗ್ ರಸ್ತೆ ಕಾಮಗಾರಿಗೆ ಚಾಲನೆ ನೀಡಬೇಕಿದೆ ಮತ್ತು 2016ರಲ್ಲಿ ನಿಂತುಹೋಗಿರುವ ರಸ್ತೆ ಕಾಮಗಾರಿಗಳನ್ನು ಪುನಃ ಆರಂಭಿಸಬೇಕಿದೆ ಎಂದು ಕುಮಾರಸ್ವಾಮಿ ಹೇಳಿದರು.

ಮಂಡ್ಯ: ಮಾಜಿ ಸಂಸದೆ ಸುಮಲತಾ ಅಂಬರೀಶ್ ಅವರು ಬಳಸಿದ ಕಾರನ್ನು ಉಪಯೋಗಿಸಲ್ಲ ಅಂತ ಯಾವತ್ತೂ ಹೇಳಿಲ್ಲ, ಆ ಕಾರು ಈ ಕಾರು ಅಂತ ಹೇಳಲು ಅದೇನೂ ನಮ್ಮಪ್ಪನ ಆಸ್ತಿಯಲ್ಲ, ನಾನು ಮಮುಖ್ಯಮಂತ್ರಿಯಾದಾಗಲೂ ಸರ್ಕಾರಿ ಕಾರು ಬಳಸಿಲ್ಲ, ಸರ್ಕಾರಿ ಡ್ರೈವರ್ ಇಟ್ಟುಕೊಂಡಿಲ್ಲ ಮತ್ತು ಸರ್ಕಾರದಿಂದ ಸಂಬಳವನ್ನೂ ಪಡೆದಿಲ್ಲ ಎಂದು ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಹೇಳಿದರು. ನಗರದಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಅವರು, ತಾನು ಅಧಿಕಾರದಲ್ಲಿರುವವರೆಗೆ ಒಂದು ಶಾಶ್ವತವಾದ ಕಾರು ಬೇಕೆಂದು ಕೇಳಿದ್ದೇನೆಯೇ ಹೊರತು ನಿರ್ದಿಷ್ಟವಾದ ಕಾರೇ ಬೇಕೆಂದು ಹೇಳಿಲ್ಲ, ಚಲುವರಾಯಸ್ವಾಮಿ ಏನು ಕೇಳಿಸಿಕೊಂಡಿದ್ದಾರೋ ಗೊತ್ತಿಲ್ಲ ಎಂದು ಕುಮಾರಸ್ವಾಮಿ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:   ಚುನಾವಣಾ ಸಮಯದಲ್ಲಿ ನಮಗೆ ಬೇಕಾದ ಜನ ದುಡ್ಡು ಕೊಡುತ್ತಾರೆ, ಅದನ್ನು ಖರ್ಚು ಮಾಡುತ್ತೇನೆ: ಹೆಚ್ ಡಿ ಕುಮಾರಸ್ವಾಮಿ

Published on: Jan 10, 2025 03:44 PM