ಪೋಡ್​​ಕ್ಯಾಸ್ಟ್ ಸೂಪರ್​ಸ್ಟಾರ್ ನಿಖಿಲ್ ಕಾಮತ್ ಜೊತೆ ಪ್ರಧಾನಿ ಮೋದಿ; ಟ್ರೇಲರ್ ಸದ್ದು; ಅಧಿಕೃತ ವಿಡಿಯೋ ಸದ್ಯದಲ್ಲೇ

Narendra Modi first podcast with Nikhil Kamath: ನರೇಂದ್ರ ಮೋದಿ ಅವರು ಖ್ಯಾತ ಉದ್ಯಮಿ ನಿಖಿಲ್ ಕಾಮತ್ ಅವರ ಪೋಡ್​​ಕ್ಯಾಸ್ಟ್​ನಲ್ಲಿ ಸಂದರ್ಶನ ನೀಡಿದ್ದಾರೆ. ಅದರ ಟ್ರೇಲರ್ ಜ. 9ರಂದು ಬಿಡುಗಡೆ ಆಗಿದೆ. ಎರಡು ನಿಮಿಷದ ಟ್ರೇಲರ್​ನಲ್ಲಿ ನರೇಂದ್ರ ಮೋದಿ ಅವರು ಕೆಲ ವಿಚಾರಗಳ ಬಗ್ಗೆ ನೇರವಾಗಿ ಮಾತನಾಡಿರುವುದು ಕಾಣಬಹುದು. ತಮ್ಮ ಚೊಚ್ಚಲ ಪೋಡ್​​ಕ್ಯಾಸ್ಟ್ ಸಂದರ್ಶನದಲ್ಲಿ ನರೇಂದ್ರ ಮೋದಿ ಅವರು ಯುವಕರಿಗೆ ಒಂದು ನಿಶ್ಚಿತ ಗುರಿಯೊಂದಿಗೆ ರಾಜಕೀಯಕ್ಕೆ ಬರುವಂತೆ ಕರೆ ನೀಡಿದ್ದಾರೆ.

ಪೋಡ್​​ಕ್ಯಾಸ್ಟ್ ಸೂಪರ್​ಸ್ಟಾರ್ ನಿಖಿಲ್ ಕಾಮತ್ ಜೊತೆ ಪ್ರಧಾನಿ ಮೋದಿ; ಟ್ರೇಲರ್ ಸದ್ದು; ಅಧಿಕೃತ ವಿಡಿಯೋ ಸದ್ಯದಲ್ಲೇ
ನರೇಂದ್ರ ಮೋದಿ, ನಿಖಿಲ್ ಕಾಮತ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Jan 10, 2025 | 12:14 PM

ನವದೆಹಲಿ, ಜನವರಿ 10: ಪ್ರಧಾನಿ ನರೇಂದ್ರ ಮೋದಿ ಪೋಡ್​ಕ್ಯಾಸ್ಟ್ ಪ್ರಪಂಚಕ್ಕೆ ಪದಾರ್ಪಣೆ ಮಾಡಿದ್ದಾರೆ. ತಮ್ಮ ಚೊಚ್ಚಲ ಪೋಡ್​ಕ್ಯಾಸ್ಟ್ ಸಂದರ್ಶನ ನೀಡಿದ್ದಾರೆ. ಪೋಡ್​ಕ್ಯಾಸ್ಟ್ ರಂಗಕ್ಕೆ ಹೊಸಬರಾದರೂ ಮಿಂಚಿನ ವೇಗದಲ್ಲಿ ಗಮನ ಸೆಳೆಯುತ್ತಿರುವ ಖ್ಯಾತ ಉದ್ಯಮಿ ನಿಖಿಲ್ ಕಾಮತ್ ಅವರ ಯೂಟ್ಯೂಬ್ ಚಾನಲ್​ಗೆ ನರೇಂದ್ರ ಮೋದಿ ಸಂದರ್ಶನ ಕೊಟ್ಟಿದ್ದಾರೆ. ಮೊನ್ನೆ ಕೆಲ ಸೆಕೆಂಡ್​ಗಳ ಸಣ್ಣ ಟೀಸರ್ ಬಿಟ್ಟಿದ್ದ ನಿಖಿಲ್ ಕಾಮತ್ ನಿನ್ನೆ (ಜ. 9) ಎರಡು ನಿಮಿಷದ ಟ್ರೇಲರ್ ಬಿಡುಗಡೆ ಮಾಡಿದ್ದಾರೆ. ಟೀಸರ್​ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಅವರ ನಗುವಿನಲ್ಲಿ ಗುರುತಿಸಬಹುದಿತ್ತು. ಟ್ರೇಲರ್​ನಲ್ಲಿ ಅವರೇ ಕಾಣಿಸಿಕೊಂಡಿದ್ದಾರೆ. ಸಂದರ್ಶನದ ಕೆಲ ಸಾರಾಂಶಗಳನ್ನು ನಿಖಿಲ್ ಕಾಮತ್ ಈ ಟ್ರೇಲರ್​ನಲ್ಲಿ ಬಿಚ್ಚಿಟ್ಟಿದ್ದಾರೆ.

ನಿಖಿಲ್ ಕಾಮತ್ ಕಳೆದ ಎರಡು ಮೂರು ವರ್ಷಗಳಿಂದ ಪೋಡ್​ಕ್ಯಾಸ್ಟಿಂಗ್ ಮಾಡುತ್ತಾ ಬಂದಿದ್ದಾರೆ. ಪೀಪಲ್ ಬೈ ಡಬ್ಲ್ಯುಟಿಎಫ್ ಸರಣಿಯಲ್ಲಿ ನರೇಂದ್ರ ಮೋದಿ ಅವರ ಸಂದರ್ಶನವು ಆರನೇ ಎಪಿಸೋಡ್ ಆಗಿದೆ. ರಣಬೀರ್ ಕಪೂರ್, ನಂದನ್ ನಿಲೇಕಣಿ, ರಿಯಲ್ ಎಸ್ಟೇಟ್ ಉದ್ಯಮಿಗಳು, ಯಾನ್ ಲೀಕುನ್ ಮೊದಲಾದವರ ಸಂದರ್ಶನವನ್ನು ಈ ಸರಣಿಯಲ್ಲಿ ಮಾಡಲಾಗಿದೆ. ದೇಶದ ಪ್ರಧಾನಿಯನ್ನು ಈ ವೇದಿಕೆಗೆ ಕರೆತಂದದ್ದು ನಿಖಿಲ್ ಕಾಮತ್ ಅವರ ಪೋಡ್​ಕ್ಯಾಸ್ಟ್ ಆಂಟ್ರಪ್ರನ್ಯೂರ್ ಸಾಹಸದಲ್ಲಿ ಹೊಸ ಮೈಲಿಗಲ್ಲಾಗಿದೆ.

ಇದನ್ನೂ ಓದಿ: 2025-26ರಲ್ಲಿ ಭಾರತದ ರಿಯಲ್ ಜಿಡಿಪಿ ಶೇ. 6.8, ನಾಮಿನಲ್ ಜಿಡಿಪಿ ಶೇ. 10.5 ಇರುವ ಸಾಧ್ಯತೆ

ತಪ್ಪು ಮಾಡದವ್ರ್ ಯಾರವ್ರೆ…

ನಿಖಿಲ್ ಕಾಮತ್ ಬಿಡುಗಡೆ ಮಾಡಿದ ಟ್ರೇಲರ್​ನಲ್ಲಿ ನರೇಂದ್ರ ಮೋದಿ ಅವರು ಕೆಲ ವಿಚಾರಗಳ ಬಗ್ಗೆ ಮಾತನಾಡಿರುವುದನ್ನು ಕಾಣಬಹುದು. ತಪ್ಪು ಮಾಡುವುದು ಸಹಜ. ತಾನೂ ಕೂಡ ಹಿಂದೆ ತಪ್ಪು ಮಾಡಿದ್ದೇನೆ. ತಾನೊಬ್ಬ ಮನುಷ್ಯನೇ ಹೊರತು ದೇವನಲ್ಲ ಎಂದು ನರೇಂದ್ರ ಮೋದಿ ಹೇಳುತ್ತಾರೆ.

ಇಂದಿನ ಯುವಕರು ರಾಜಕೀಯಕ್ಕೆ ಬರುವಾಗ ಮಹತ್ವಾಕಾಂಕ್ಷೆ ಮಾತ್ರವಲ್ಲ, ಒಂದು ಗುರಿ (ಮಿಷನ್) ಇಟ್ಟುಕೊಂಡಿರಬೇಕು ಎಂದು ಅದೇ ಟ್ರೇಲರ್​ನಲ್ಲಿ ಮೋದಿ ಸಲಹೆ ನೀಡಿರುವ ತುಣುಕು ಇದೆ. ಇನ್ನು, ಭಾರತದ ವಿದೇಶಾಂಗ ನೀತಿ ತಟಸ್ಥ ಅಲ್ಲ ಎಂಬುದನ್ನು ಪ್ರಧಾನಿಗಳು ಬಹಳ ಸ್ಪಷ್ಟಪಡಿಸುತ್ತಾರೆ. ಭಾರತವು ಶಾಂತಿಯ ಪರವಾಗಿರುತ್ತದೆ ಎಂದು ಸಾರಿಹೇಳುತ್ತಾರೆ.

ಇದನ್ನೂ ಓದಿ: ಅಪಘಾತಗೊಂಡರೆ ಆಸ್ಪತ್ರೆಯಲ್ಲಿ ಕ್ಯಾಷ್​ಲೆಸ್ ಚಿಕಿತ್ಸೆ; ರಾಷ್ಟ್ರಾದ್ಯಂತ ಯೋಜನೆ ಜಾರಿ: ನಿತಿನ್ ಗಡ್ಕರಿ

ಯಾವಾಗ ಪ್ರಸಾರವಾಗುತ್ತದೆ ಪೂರ್ಣ ಕಾರ್ಯಕ್ರಮ?

ನಿಖಿಲ್ ಕಾಮತ್ ಅವರು ಬಿಡುಗಡೆ ಮಾಡಿರುವ ಟ್ರೇಲರ್​ನಲ್ಲಿ ಪೂರ್ಣ ಎಪಿಸೋಡ್ ಯಾವಾಗ ಪ್ರಸಾರ ಆಗುತ್ತದೆ ಎಂಬುದನ್ನು ತಿಳಿಸಿಲ್ಲ. ಹಿಂದಿನ ಎಪಿಸೋಡ್​ಗಳನ್ನು ಗಮನಿಸಿದಾಗ, ಟ್ರೇಲರ್​ಗಳು ಸುಮಾರು 6ರಿಂದ 12 ದಿನಗಳ ಹಿಂದೆ ಬಿಡುಗಡೆ ಆಗಿದ್ದಿದೆ. ಸಂಕ್ರಾಂತಿ ಹಬ್ಬವಿರುವ ಜನವರಿ 14, ಮಂಗಳವಾರದಂದು ಈ ಎಪಿಸೋಡ್ ಪ್ರಸಾರವಾದರೂ ಅಚ್ಚರಿ ಇಲ್ಲ. ಜನವರಿ ಮೂರನೇ ವಾರದಲ್ಲಿ ಈ ಎಪಿಸೋಡ್ ನಿರೀಕ್ಷಿಸಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 12:13 pm, Fri, 10 January 25

‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಚಿಟ್ಟಾಣಿ ಆಸೆ ಈಡೇರಿಸಲು ಯಕ್ಷಗಾನದಲ್ಲಿ ಅಭಿನಯಿಸಿದ ನಟಿ ಉಮಾಶ್ರೀ
ಚಿಟ್ಟಾಣಿ ಆಸೆ ಈಡೇರಿಸಲು ಯಕ್ಷಗಾನದಲ್ಲಿ ಅಭಿನಯಿಸಿದ ನಟಿ ಉಮಾಶ್ರೀ
Daily Devotional: ಮಾಘ ಸ್ನಾನದ ಹಿಂದಿನ ರಹಸ್ಯ ಹಾಗೂ ಮಹತ್ವ ತಿಳಿಯಿರಿ
Daily Devotional: ಮಾಘ ಸ್ನಾನದ ಹಿಂದಿನ ರಹಸ್ಯ ಹಾಗೂ ಮಹತ್ವ ತಿಳಿಯಿರಿ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
ಪ್ರಿಯಕರನೊಂದಿಗೆ ಹೆಂಡತಿ ಹೋಗುತ್ತಿದ್ದ ಕಾರಿನ ಮೇಲೆ ಹತ್ತಿ ಕುಳಿತ ಗಂಡ!
ಪ್ರಿಯಕರನೊಂದಿಗೆ ಹೆಂಡತಿ ಹೋಗುತ್ತಿದ್ದ ಕಾರಿನ ಮೇಲೆ ಹತ್ತಿ ಕುಳಿತ ಗಂಡ!
ಅಯ್ಯೋ.. ಸಿಸಿಟಿವಿ ರಿಪೇರಿ ಮಾಡಲು ಬಂದಿದ್ದವನ ವಜ್ರದ ಉಂಗುರ ಬಿಡದ ಖದೀಮರು
ಅಯ್ಯೋ.. ಸಿಸಿಟಿವಿ ರಿಪೇರಿ ಮಾಡಲು ಬಂದಿದ್ದವನ ವಜ್ರದ ಉಂಗುರ ಬಿಡದ ಖದೀಮರು
ಗಾಂಧಿ ಭಾರತ ಒಂದು ಸರ್ಕಾರೀ ಕಾರ್ಯಕ್ರಮ, ಎಲ್ಲರೂ ಭಾಗವಹಿಸಬಹುದು: ಶಿವಕುಮಾರ್
ಗಾಂಧಿ ಭಾರತ ಒಂದು ಸರ್ಕಾರೀ ಕಾರ್ಯಕ್ರಮ, ಎಲ್ಲರೂ ಭಾಗವಹಿಸಬಹುದು: ಶಿವಕುಮಾರ್
ಮಹಾಕುಂಭದಲ್ಲಿ ಹೂವಿನ ಹಾರ ಮಾರುವ ಯುವತಿ ಸೌಂದರ್ಯಕ್ಕೆ ಫ್ಯಾನ್ ಆಗದವರೇ ಇಲ್ಲ
ಮಹಾಕುಂಭದಲ್ಲಿ ಹೂವಿನ ಹಾರ ಮಾರುವ ಯುವತಿ ಸೌಂದರ್ಯಕ್ಕೆ ಫ್ಯಾನ್ ಆಗದವರೇ ಇಲ್ಲ
ನಾನು ನಿಷ್ಠಾವಂತ ಕಾರ್ಯಕರ್ತ, ಸತೀಶ್ ಜಾರಕಿಹೊಳಿ ಹಿಂಬಾಲಕನಲ್ಲ: ಕಾರ್ಯಕರ್ತ
ನಾನು ನಿಷ್ಠಾವಂತ ಕಾರ್ಯಕರ್ತ, ಸತೀಶ್ ಜಾರಕಿಹೊಳಿ ಹಿಂಬಾಲಕನಲ್ಲ: ಕಾರ್ಯಕರ್ತ