2025-26ರಲ್ಲಿ ಭಾರತದ ರಿಯಲ್ ಜಿಡಿಪಿ ಶೇ. 6.8, ನಾಮಿನಲ್ ಜಿಡಿಪಿ ಶೇ. 10.5 ಇರುವ ಸಾಧ್ಯತೆ

India real GDP and Nominal GDP: 2025-26ರ ಹಣಕಾಸು ವರ್ಷದಲ್ಲಿ ಭಾರತದ ನೈಜ ಜಿಡಿಪಿ ದರ ಶೇ. 6.8ರಷ್ಟಿರಬಹುದು ಎಂದು ಬ್ಯಾಂಕ್ ಆಫ್ ಬರೋಡಾದ ವರದಿಯೊಂದರಲ್ಲಿ ಅಂದಾಜಿಸಲಾಗಿದೆ. ಇದೇ ವರದಿಯ ಪ್ರಕಾರ ಆ ವರ್ಷದಲ್ಲಿ ನಾಮಿನಲ್ ಜಿಡಿಪಿ ಶೇ. 10.5ರಷ್ಟಿರಬಹುದು. ಬ್ಯುಸಿನೆಸ್ ಸ್ಟ್ಯಾಂಡರ್ಡ್ ನಡೆಸಿದ ಆರ್ಥಿಕ ತಜ್ಞರ ಸಮೀಕ್ಷೆಯಲ್ಲೂ ಆ ವರ್ಷದ ನಾಮಿನಲ್ ಜಿಡಿಪಿ ಬೆಳವಣಿಗೆ ಅಂದಾಜು ಶೇ. 10ರಿಂದ 11ರಷ್ಟಿರಬಹುದು ಎನ್ನಲಾಗಿದೆ.

2025-26ರಲ್ಲಿ ಭಾರತದ ರಿಯಲ್ ಜಿಡಿಪಿ ಶೇ. 6.8, ನಾಮಿನಲ್ ಜಿಡಿಪಿ ಶೇ. 10.5 ಇರುವ ಸಾಧ್ಯತೆ
ಜಿಡಿಪಿ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jan 10, 2025 | 11:08 AM

ನವದೆಹಲಿ, ಜನವರಿ 10: ಪ್ರಸಕ್ತ ಹಣಕಾಸು ವರ್ಷದ ಎರಡನೇ ಕ್ವಾರ್ಟರ್​ನಲ್ಲಿ ಜಿಡಿಪಿ ನಿರೀಕ್ಷೆಗಿಂತ ಬಹಳ ಕಡಿಮೆ ಮಟ್ಟದಲ್ಲಿ ಬೆಳೆದಿರುವುದರಿಂದ ವರ್ಷದ ಆರ್ಥಿಕ ಬೆಳವಣಿಗೆ ಬಗ್ಗೆ ನಿರೀಕ್ಷೆಗಳೂ ಕಡಿಮೆ ಆಗಿವೆ. ಆದರೆ, ಮುಂದಿನ ಹಣಕಾಸು ವರ್ಷವಾದ 2025-26ರಲ್ಲಿ ಭಾರತದ ಆರ್ಥಿಕತೆ ತುಸು ಆಶಾದಾಯಕ ಎನಿಸುವ ಸಾಧ್ಯತೆ ಇದೆ. ಬ್ಯಾಂಕ್ ಆಫ್ ಬರೋಡಾದ ಆರ್ಥಿಕ ತಜ್ಞರು ಸಿದ್ಧಪಡಿಸಿದ ವರದಿ ಪ್ರಕಾರ 2025-26ರ ಹಣಕಾಸು ವರ್ಷದಲ್ಲಿ ಆರ್ಥಿಕತೆ ಶೇ. 6.8ರಷ್ಟು ಬೆಳೆಯುವ ನಿರೀಕ್ಷೆ ಇದೆ.

ಇದು ರಿಯಲ್ ಜಿಡಿಪಿ ದರವಾಗಿದೆ. ಇನ್ನು, ನಾಮಿನಲ್ ಜಿಡಿಪಿಯು 2025-25ರಲ್ಲಿ ಶೇ. 10.5ರಷ್ಟು ಹೆಚ್ಚಾಗಬಹುದು ಎಂದು ಬಿಒಬಿ ವರದಿಯಲ್ಲಿ ಅಂದಾಜಿಸಲಾಗಿದೆ. ‘2026ರ ಹಣಕಾಸು ವರ್ಷದಲ್ಲಿ ನಾಮಿನಲ್ ಜಿಡಿಪಿ ಶೇ. 10.5, ರಿಯಲ್ ಜಿಡಿಪಿ ಶೇ. 6.8ರಷ್ಟು ಬೆಳೆಯಬಹುದು ಎಂದು ನಿರೀಕ್ಷಿಸಿದ್ದೇವೆ,’ ಎಂದು ಈ ವರದಿಯಲ್ಲಿ ತಿಳಿಸಲಾಗಿದೆ.

ವಿಮಾನ ಪ್ರಯಾಣಿಕರ ಸಂಖ್ಯೆಯಲ್ಲಿ ಹೆಚ್ಚಳವಾಗಿರುವುದು, ಸರ್ವಿಸ್ ಸೆಕ್ಟರ್ ಪಿಎಂಐನಲ್ಲಿ ಹೆಚ್ಚಳ ಆಗಿರುವುದು, ಜಿಎಸ್​ಟಿ ಸಂಗ್ರಹ ಹೆಚ್ಚಿರುವುದು ಇವೆಲ್ಲವೂ ಆರ್ಥಿಕತೆ ಆರೋಗ್ಯಯುತವಾಗಿರುವುದರ ಸಂಕೇತಗಳೆಂದು ಈ ತಜ್ಞರು ಪರಿಗಣಿಸಿದ್ದಾರೆ. ಅಷ್ಟೇ ಅಲ್ಲ, ಈ ಸೀಸನ್​ನಲ್ಲಿ ಮುಂಗಾರು ಬೆಳೆಗಳ (ರಬಿ) ಬಿತ್ತನೆ ಬಹಳ ಅಧಿಕ ಮಟ್ಟದಲ್ಲಿ ಇದ್ದು, ಅದು ನಿರೀಕ್ಷಿತ ಬೆಳವಣಿಗೆ ಹೊಂದಿದಲ್ಲಿ ಕೃಷಿ ಕ್ಷೇತ್ರಕ್ಕೆ ಪುಷ್ಟಿ ಸಿಗುತ್ತದೆ. ಆಹಾರ ಉತ್ಪಾದನೆ ಉತ್ತಮವಾಗುತ್ತದೆ. ಇದು ಆರ್ಥಿಕತೆಗೆ ಪುಷ್ಟಿ ಕೂಡ ನೀಡುತ್ತದೆ ಎಂದು ಈ ವರದಿಯಲ್ಲಿ ವಿಶ್ಲೇಷಿಸಲಾಗಿದೆ.

ಇದನ್ನೂ ಓದಿ: ಎಷ್ಟು ಹೊತ್ತು ಹೆಂಡ್ತಿ ಮುಖ ನೋಡ್ಕೊಂಡ್ ಇರ್ತೀರಾ? 90 ಗಂಟೆ ಕೆಲಸ ಮಾಡಿ ಎಂದ ಎಲ್ ಅಂಡ್ ಟಿ ಮುಖ್ಯಸ್ಥ

ನಾಮಿನಲ್ ಜಿಡಿಪಿ ದರ ಶೇ 10-11

2025-26ರ ಹಣಕಾಸು ವರ್ಷದಲ್ಲಿ ನಾಮಿನಲ್ ಜಿಡಿಪಿ ದರದ ವಿಚಾರವಾಗಿ ಬ್ಯಾಂಕ್ ಆಫ್ ಬರೋಡಾದ ಆರ್ಥಿಕ ತಜ್ಞರ ಅಭಿಪ್ರಾಯವನ್ನು ವಿವಿಧ ಆರ್ಥಿಕ ತಜ್ಞರು ಪುನರುಚ್ಚರಿಸಿದ್ದಾರೆ. ಬ್ಯುಸಿನೆಸ್ ಸ್ಟ್ಯಾಂಡರ್ಡ್ ಪತ್ರಿಕೆ ನಡೆಸಿದ ಪೋಲಿಂಗ್​ನಲ್ಲಿ ಪಾಲ್ಗೊಂಡಿದ್ದ ಹತ್ತು ಆರ್ಥಿಕ ತಜ್ಞರು 2025-26ರ ಹಣಕಾಸು ವರ್ಷದಲ್ಲಿ ನಾಮಿನಲ್ ಜಿಡಿಪಿ ಶೇ. 10ರಿಂದ 11ರಷ್ಟು ಬೆಳೆಯಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ.

ಇನ್ನು, ಕೇಂದ್ರ ಸರ್ಕಾರದ ಅಧೀನದಲ್ಲಿರುವ ರಾಷ್ಟ್ರೀಯ ಸಾಂಖ್ಯಿಕ ಕಚೇರಿ (ಎನ್​ಎಸ್​ಒ) ಬಿಡುಗಡೆ ಮಾಡಿದ ವರದಿಯೊಂದರ ಪ್ರಕಾರ ಪ್ರಸಕ್ತ ಹಣಕಾಸು ವರ್ಷದಲ್ಲಿ (2024-25) ನಾಮಿನಲ್ ಜಿಡಿಪಿ ಶೇ. 9.7ರಷ್ಟು ಬೆಳೆಯಬಹುದು.

ನಾಮಿನಲ್ ಜಿಡಿಪಿ ಮತ್ತು ರಿಯಲ್ ಜಿಡಿಪಿ ನಡುವೆ ವ್ಯತ್ಯಾಸವೇನು?

ಜಿಡಿಪಿ ಎಂದರೆ ಸಮಗ್ರ ದೇಶೀಯ ಉತ್ಪನ್ನ. ಒಂದು ದೇಶದೊಳಗಿನ ಎಲ್ಲಾ ಉತ್ಪಾದನೆ ಮತ್ತು ಸೇವೆಗಳ ಒಟ್ಟು ಮೌಲ್ಯವಾಗಿರುತ್ತದೆ. ಈ ಮೌಲ್ಯವನ್ನು ಈಗಿನ ಮಾರುಕಟ್ಟೆ ಬೆಲೆಗಳಲ್ಲಿ ಗಣಿಸಿದರೆ ಸಿಗುವ ದರವು ನಾಮಿನಲ್ ಜಿಡಿಪಿ ದರವಾಗಿರುತ್ತದೆ.

ಇದನ್ನೂ ಓದಿ: ವಿಶ್ವದ ದರ್ಜೆ ರೈಲು ಪ್ರಯಾಣ ವ್ಯವಸ್ಥೆಗೆ ಹೂಡಿಕೆ; ಮುಕ್ಕಾಲು ಪಾಲು ಬಜೆಟ್ ಅನುದಾನ ಬಳಸಿದ ರೈಲ್ವೆ ಇಲಾಖೆ

ರಿಯಲ್ ಜಿಡಿಪಿಯಲ್ಲಿ ಹಣದುಬ್ಬರ ಅಂಶವನ್ನು ಪರಿಗಣಿಸಲಾಗುತ್ತದೆ. ನಾಮಿನಲ್ ಜಿಡಿಪಿ ಮೌಲ್ಯವನ್ನು ಹಣದುಬ್ಬರದಿಂದ ಕಳೆದರೆ ಸಿಗುವ ದರವು ರಿಯಲ್ ಜಿಡಿಪಿ ಆಗಿರುತ್ತದೆ. ಒಂದು ದೇಶದ ಆರ್ಥಿಕ ಬೆಳವಣಿಗೆಗೆ ಸಾಮಾನ್ಯವಾಗಿ ಅದರ ರಿಯಲ್ ಜಿಡಿಪಿ ದರವು ಅಳತೆಗೋಲಾಗಿರುತ್ತದೆ.

ನಾಮಿನಲ್ ಜಿಡಿಪಿಯನ್ನು ಇತರ ಕೆಲ ಆರ್ಥಿಕ ಮತ್ತು ಹಣಕಾಸು ನಿರ್ಧಾರಗಳಿಗೆ ಬಳಸಲಾಗುತ್ತದೆ. ಉದಾಹರಣೆಗೆ, ವಿತ್ತೀಯ ಕೊರತೆ, ಸಾಲ ಮತ್ತು ಜಿಡಿಪಿ ಅನುಪಾತ ಇತ್ಯಾದ ಸ್ಥೂಲ ಆರ್ಥಿಕ ಸೂಚಕಗಳನ್ನು ಗಣಿಸಲು ನಾಮಿನಲ್ ಜಿಡಿಪಿಯನ್ನು ಪರಿಗಣಿಸಲಾಗುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್
ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್
ವೈಕುಂಠ ಏಕಾದಶಿ, ಚಿಕ್ಕತಿರುಪತಿಯ ವೆಂಕಟೇಶ್ವರನಿಗೆ ವಿಶೇಷ ಪೂಜೆ
ವೈಕುಂಠ ಏಕಾದಶಿ, ಚಿಕ್ಕತಿರುಪತಿಯ ವೆಂಕಟೇಶ್ವರನಿಗೆ ವಿಶೇಷ ಪೂಜೆ
Video: ರೈಲಿನಲ್ಲಿ ಕುಡುಕ ಪ್ರಯಾಣಿಕ ಹಾಗೂ ಟಿಟಿಇ ನಡುವೆ ಹೊಡೆದಾಟ
Video: ರೈಲಿನಲ್ಲಿ ಕುಡುಕ ಪ್ರಯಾಣಿಕ ಹಾಗೂ ಟಿಟಿಇ ನಡುವೆ ಹೊಡೆದಾಟ
‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್