Sign In

By signing in or creating an account, you agree with Associated Broadcasting Company's Terms & Conditions and Privacy Policy.

ಎಷ್ಟು ಹೊತ್ತು ಹೆಂಡ್ತಿ ಮುಖ ನೋಡ್ಕೊಂಡ್ ಇರ್ತೀರಾ? 90 ಗಂಟೆ ಕೆಲಸ ಮಾಡಿ ಎಂದ ಎಲ್ ಅಂಡ್ ಟಿ ಮುಖ್ಯಸ್ಥ

L&T Chairman SN Subramanian interaction with employees: ಉದ್ಯೋಗಿಗಳು ವಾರದಲ್ಲಿ 90 ಗಂಟೆ ಕೆಲಸ ಮಾಡಬೇಕು ಎಂದು ಎಲ್ ಅಂಡ್ ಟಿ ಚೇರ್ಮನ್ ಎಸ್ ಎನ್ ಸುಬ್ರಮಣಿಯನ್ ಹೇಳಿದ್ದಾರೆ. ವಾರದಲ್ಲಿ ಎರಡು ದಿನ ವೀಕಾಫ್ ನೀಡುವ ಸಂಬಂಧ ಉದ್ಯೋಗಿಗಳೊಂದಿಗಿನ ಸಂವಾದದಲ್ಲಿ ಅವರು ಪಾಲ್ಗೊಂಡು ಮಾತನಾಡುತ್ತಿದ್ದರು. ಮನೆಯಲ್ಲಿ ಎಷ್ಟು ಹೊತ್ತು ಹೆಂಡ್ತಿ ಮುಖ ನೋಡ್ಕೊಂಡು ಇರ್ತೀರಿ. ಕಚೇರಿಗೆ ಬಂದು ಕೆಲಸ ಮಾಡಿ ಎಂದು ಅವರು ಉದ್ಯೋಗಿಗಳಿಗೆ ಕಿವಿಮಾತು ಹೇಳಿದ್ದಾರೆ.

ಎಷ್ಟು ಹೊತ್ತು ಹೆಂಡ್ತಿ ಮುಖ ನೋಡ್ಕೊಂಡ್ ಇರ್ತೀರಾ? 90 ಗಂಟೆ ಕೆಲಸ ಮಾಡಿ ಎಂದ ಎಲ್ ಅಂಡ್ ಟಿ ಮುಖ್ಯಸ್ಥ
ಎಸ್ ಎನ್ ಸುಬ್ರಹ್ಮಣ್ಯನ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jan 09, 2025 | 6:39 PM

ನವದೆಹಲಿ, ಜನವರಿ 9: ಭಾರತದ ಯುವಕರು ವಾರಕ್ಕೆ 70 ಗಂಟೆ ಕೆಲಸ ಮಾಡಬೇಕು ಎನ್ನುವ ಇನ್ಫೋಸಿಸ್ ನಾರಾಯಣಮೂರ್ತಿ ಅವರ ವಾದಕ್ಕೆ ಹಲವರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಈ ನಡುವೆ ಎಲ್ ಅಂಡ್ ಟಿ ಛೇರ್ಮನ್ ಎಸ್ ಎನ್ ಸುಬ್ರಮಣಿಯನ್ ಅವರು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಉದ್ಯೋಗಿಗಳು ವಾರಕ್ಕೆ 90 ಗಂಟೆ ಕೆಲಸ ಮಾಡಬೇಕು ಎಂದು ತಾಕೀತು ಮಾಡಿದ್ದಾರೆ. ಅಷ್ಟು ಮಾತ್ರವಲ್ಲ, ಉದ್ಯೋಗಿಗಳು ಶನಿವಾರದ ಜೊತೆಗೆ ಭಾನುವಾರವೂ ಕೆಲಸ ಮಾಡಬೇಕು ಎಂಬುದು ಅವರ ಅನಿಸಿಕೆ.

ಈಗ ಹೆಚ್ಚಿನ ದೊಡ್ಡ ಸಂಸ್ಥೆಗಳು ಉದ್ಯೋಗಿಗಳಿಗೆ ವಾರಕ್ಕೆ ಎರಡು ದಿನ ಆಫ್ ನೀಡುತ್ತವೆ. ಆದರೆ, ವಾರಕ್ಕೆ ಆರು ದಿನ ಕೆಲಸ ಮಾಡಿಸುವ ಕೆಲವೇ ದೊಡ್ಡ ಸಂಸ್ಥೆಗಳಲ್ಲಿ ಎಲ್ ಅಂಡ್ ಟಿಯೂ ಒಂದು. ಉದ್ಯೋಗಿಗಳೊಂದಿಗಿನ ಸಂವಾದ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಿದ್ದ ಸಂಸ್ಥೆಯ ಮುಖ್ಯಸ್ಥರು ಈ ವಿಚಾರವಾಗಿ ಮಾತನಾಡುತ್ತಾ, ವಾರಕ್ಕೆ ಆರು ದಿನ ಅಲ್ಲ, ಎಲ್ಲಾ ಏಳು ದಿನವೂ ಕೆಲಸ ಮಾಡುವ ಬಗ್ಗೆ ಹೇಳಿದ್ದಾರೆ. ‘ಭಾನುವಾರವೂ ನಿಮ್ಮಿಂದ ಕೆಲಸ ಮಾಡಿಸಲು ಸಾಧ್ಯವಾಗುತ್ತಿಲ್ಲದಿರುವುದಕ್ಕೆ ನನಗೆ ವಿಷಾದ ಇದೆ. ನಾನು ಭಾನುವಾರವೂ ಕೆಲಸ ಮಾಡುತ್ತೇನೆ. ನೀವೂ ಕೂಡ ಭಾನುವಾರ ಕೆಲಸ ಮಾಡಿದರೆ ನನಗೆ ಹೆಚ್ಚು ಖುಷಿಯಾಗುತ್ತದೆ’ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ: ಮುಂದಿನ ನಾಲ್ಕೈದು ವರ್ಷದಲ್ಲಿ ಮನುಷ್ಯರ ಎರಡು ಲಕ್ಷ ಬ್ಯಾಂಕ್ ಉದ್ಯೋಗಗಳನ್ನು ಕಿತ್ತುಕೊಳ್ಳಲಿದೆ ಎಐ

ಎಷ್ಟು ಹೊತ್ತು ಹೆಂಡ್ತಿ ಮುಖ ನೋಡ್ತೀರಿ…?

‘ನೀವು ಮನೆಯಲ್ಲಿ ಕೂತ್ಕೊಂಡು ಏನ್ ಮಾಡ್ತೀರಿ? ಎಷ್ಟು ಹೊತ್ತು ಹೆಂಡ್ತಿ ಮುಖ ನೋಡಿಕೊಂಡು ಇರುತ್ತೀರಿ? ಮನೆಯಲ್ಲಿ ಹೆಂಡ್ತಿ ಎಷ್ಟು ಹೊತ್ತು ನಿಮ್ಮ ಮುಖ ನೋಡಿಕೊಂಡು ಇರ್ತಾರೆ? ಆಫೀಸ್​ಗೆ ಬಂದು ಕೆಲಸ ಮಾಡಿ’ ಎಂದು ಡಬಲ್ ವೀಕಾಫ್ ನಿರೀಕ್ಷೆಯಲ್ಲಿದ್ದ ಉದ್ಯೋಗಿಗಳಿಗೆ ಅವರು ಶಾಕ್ ಕೊಟ್ಟಿದ್ದಾರೆ. ಎಲ್ ಅಂಡ್ ಟಿ ಛೇರ್ಮನ್ ಎಸ್ ಎನ್ ಸುಬ್ರಮಣಿಯನ್ ಅವರ ಈ ಸಂವಾದದ ವಿಡಿಯೋ ತುಣುಕು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಚೀನೀಯರ ಉದಾಹರಣೆ ನೀಡಿದ ಸುಬ್ರಮಣಿಯನ್

ಎಲ್ ಅಂಡ್ ಟಿ ಮುಖ್ಯಸ್ಥರು ತಮ್ಮ 90 ಗಂಟೆ ಕೆಲಸದ ವಾದಕ್ಕೆ ಚೀನೀಯರ ನಿದರ್ಶನ ನೀಡಿದ್ದಾರೆ. ಚೀನೀ ವ್ಯಕ್ತಿಯೊಬ್ಬರೊಂದಿಗೆ ನಡೆದ ಸಂವಾದವೊಂದನ್ನು ಉದಾಹರಣೆಯಾಗಿ ನೀಡಿದ್ದಾರೆ. ತಾನು ಆ ಚೀನೀ ವ್ಯಕ್ತಿಯೊಂದಿಗೆ ಮಾತನಾಡುತ್ತಿದ್ದಾಗ ಆತ ಚೀನಾ ಹೇಗೆ ಅಮೆರಿಕವನ್ನು ಹಿಂದಿಕ್ಕಲು ಸಫಲವಾಯಿತು ಎಂಬುದಕ್ಕೆ ಕಾರಣ ನೀಡಿದರಂತೆ. ಅವರ ಪ್ರಕಾರ ಅಮೆರಿಕನ್ನರು ವಾರಕ್ಕೆ 50 ಗಂಟೆ ಮಾತ್ರವೇ ಕೆಲಸ ಮಾಡುತ್ತಾರೆ. ಚೀನೀಯರು 90 ಗಂಟೆ ಕೆಲಸ ಮಾಡುತ್ತಾರೆ. ಹೀಗಾಗಿ, ಚೀನಾ ವೇಗದಲ್ಲಿ ಬೆಳೆಯಲು ಸಾಧ್ಯವಾಯಿತು ಎಂದಿದ್ದಾರೆ.

ಇದನ್ನೂ ಓದಿ: ವಿಶ್ವದ ದರ್ಜೆ ರೈಲು ಪ್ರಯಾಣ ವ್ಯವಸ್ಥೆಗೆ ಹೂಡಿಕೆ; ಮುಕ್ಕಾಲು ಪಾಲು ಬಜೆಟ್ ಅನುದಾನ ಬಳಸಿದ ರೈಲ್ವೆ ಇಲಾಖೆ

‘ಇಗೋ ಇಲ್ಲಿದೆ ನಿಮಗೆ ಉತ್ತರ. ನೀವು ಜಗತ್ತನ್ನು ಗೆಲ್ಲಬೇಕೆಂದಿದ್ದರೆ ವಾರದಲ್ಲಿ 90 ಗಂಟೆ ಕೆಲಸ ಮಾಡಬೇಕು. ಮುಂದೆ ಬನ್ನಿ ಜನರೇ…’ ಎಂದು ಅವರು ಈ ವಿಡಿಯೋದಲ್ಲಿ ಹೇಳಿರುವುದು ಕಾಣುತ್ತದೆ.

ರೆಡ್ಡಿಟ್ ಪ್ಲಾಟ್​ಫಾರ್ಮ್​ನಲ್ಲಿ ಈ ವಿಡಿಯೋ ಶೇರ್ ಆಗಿದೆ. ಸಾಕಷ್ಟು ಪರ ವಿರೋಧ ಚರ್ಚೆ ಆಗಿದೆ. ಪರಕ್ಕಿಂತ ವಿರೋಧ ಅನಿಸಿಕೆಗಳೇ ಹೆಚ್ಚಾಗಿವೆ. ಕುಟುಂಬದೊಂದಿಗೆ ಸಮಯ ಕಳೆಯಲು ಅವಕಾಶ ಇಲ್ಲದಿದ್ದರೆ ಅದೇನು ಚೆಂದ ಎಂದು ಹಲವು ಪ್ರತಿಕ್ರಿಯಿಸಿದ್ದಾರೆ. ಖ್ಯಾತ ಉದ್ಯಮಿ ಹರ್ಷ್ ಗೋಯಂಕಾ ಕೂಡ ಸುಬ್ರಮಣಿಯನ್ ವಾದವನ್ನು ವಿರೋಧಿಸಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ರನ್ಯಾ ಪ್ರಕರಣದಲ್ಲಿ ಡಿಅರ್​ಐ, ಸಿಎಂಗೆ ವರದಿ ಸಲ್ಲಿಸಿರಬಹುದು: ಪರಮೇಶ್ವರ್
ರನ್ಯಾ ಪ್ರಕರಣದಲ್ಲಿ ಡಿಅರ್​ಐ, ಸಿಎಂಗೆ ವರದಿ ಸಲ್ಲಿಸಿರಬಹುದು: ಪರಮೇಶ್ವರ್
ಬಿಡದಿ ರೈಲ್ವೆ ನಿಲ್ದಾಣ ಸ್ಫೋಟಿಸುವುದಾಗಿ ಬೆದರಿಕೆ ಕರೆ
ಬಿಡದಿ ರೈಲ್ವೆ ನಿಲ್ದಾಣ ಸ್ಫೋಟಿಸುವುದಾಗಿ ಬೆದರಿಕೆ ಕರೆ
ಉತ್ತರ ಕರ್ನಾಟಕದ ಅನೇಕ ಭಾಗಗಳಲ್ಲಿ ನೀರಿನ ಸಮಸ್ಯೆ, ಎಲ್ಲಿ ಜನಪ್ರತಿನಿಧಿಗಳು?
ಉತ್ತರ ಕರ್ನಾಟಕದ ಅನೇಕ ಭಾಗಗಳಲ್ಲಿ ನೀರಿನ ಸಮಸ್ಯೆ, ಎಲ್ಲಿ ಜನಪ್ರತಿನಿಧಿಗಳು?
ಗ್ಯಾಸ್​ ಸಿಲಿಂಡರ್​ ತುಂಬಿದ್ದ ಲಾರಿ ಬ್ರೇಕ್​ ಫೇಲ್​ ಆಗಿ ಮರಕ್ಕೆ ಡಿಕ್ಕಿ
ಗ್ಯಾಸ್​ ಸಿಲಿಂಡರ್​ ತುಂಬಿದ್ದ ಲಾರಿ ಬ್ರೇಕ್​ ಫೇಲ್​ ಆಗಿ ಮರಕ್ಕೆ ಡಿಕ್ಕಿ
ಫೆಲೈನ್ ಪ್ಯಾನ್​ಲ್ಯೂಕೊಪೇನಿಯಾ ವೈರಸ್ ಸೋಂಕು ಬೆಕ್ಕುಗಳಲ್ಲಿ ಸಾಂಕ್ರಾಮಿಕ!
ಫೆಲೈನ್ ಪ್ಯಾನ್​ಲ್ಯೂಕೊಪೇನಿಯಾ ವೈರಸ್ ಸೋಂಕು ಬೆಕ್ಕುಗಳಲ್ಲಿ ಸಾಂಕ್ರಾಮಿಕ!
ಸೀರೆಯುಟ್ಟು, ಚಪ್ಪಲಿ ಧರಿಸಿ ಲಂಡನ್​ನ ಪಾರ್ಕ್​ನಲ್ಲಿ ಮಮತಾ ಜಾಗಿಂಗ್
ಸೀರೆಯುಟ್ಟು, ಚಪ್ಪಲಿ ಧರಿಸಿ ಲಂಡನ್​ನ ಪಾರ್ಕ್​ನಲ್ಲಿ ಮಮತಾ ಜಾಗಿಂಗ್
ದಾವಣಗೆರೆ: ನೋಡ ನೋಡ್ತಿದ್ದಂತೆಯೇ ಸುಟ್ಟು ಕರಕಲಾದ ಕಾರುಗಳು
ದಾವಣಗೆರೆ: ನೋಡ ನೋಡ್ತಿದ್ದಂತೆಯೇ ಸುಟ್ಟು ಕರಕಲಾದ ಕಾರುಗಳು
ಕೋಲಾರ: ಹೆಲ್ಮೆಟ್ ತೆಗೀತಿದ್ದಂತೆ ಬುಸ್ ಎಂದ ನಾಗಪ್ಪ! ಆಮೇಲೇನಾಯ್ತು ನೋಡಿ
ಕೋಲಾರ: ಹೆಲ್ಮೆಟ್ ತೆಗೀತಿದ್ದಂತೆ ಬುಸ್ ಎಂದ ನಾಗಪ್ಪ! ಆಮೇಲೇನಾಯ್ತು ನೋಡಿ
ಧಗ ಧಗನೆ ಹೊತ್ತಿ ಉರಿದ ಸಿಲಿಂಡರ್ ತುಂಬಿದ್ದ ಟ್ರಕ್, ಹಲವು ಬಾರಿ ಸ್ಫೋಟ
ಧಗ ಧಗನೆ ಹೊತ್ತಿ ಉರಿದ ಸಿಲಿಂಡರ್ ತುಂಬಿದ್ದ ಟ್ರಕ್, ಹಲವು ಬಾರಿ ಸ್ಫೋಟ
VIDEO: ರನೌಟ್ ಮಾಡಲು ಕುಲ್ದೀಪ್ ಯಾದವ್​ನ ತಳ್ಳಿದ ರಿಷಭ್ ಪಂತ್
VIDEO: ರನೌಟ್ ಮಾಡಲು ಕುಲ್ದೀಪ್ ಯಾದವ್​ನ ತಳ್ಳಿದ ರಿಷಭ್ ಪಂತ್