ವಿಶ್ವದ ದರ್ಜೆ ರೈಲು ಪ್ರಯಾಣ ವ್ಯವಸ್ಥೆಗೆ ಹೂಡಿಕೆ; ಮುಕ್ಕಾಲು ಪಾಲು ಬಜೆಟ್ ಅನುದಾನ ಬಳಸಿದ ರೈಲ್ವೆ ಇಲಾಖೆ
Indian Railways Budget: ಕಳೆದ ಬಜೆಟ್ನಲ್ಲಿ ರೈಲ್ವೆ ಇಲಾಖೆಗೆ ನೀಡಲಾದ ಅನುದಾನದಲ್ಲಿ ಶೇ. 76ರಷ್ಟನ್ನು ಒಂಬತ್ತು ತಿಂಗಳಲ್ಲಿ ಬಳಲಾಗಿದೆ ಎನ್ನುವ ಮಾಹಿತಿಯನ್ನು ರೈಲ್ವೆ ಸಚಿವಾಲಯ ನೀಡಿದೆ. 2024-25ರ ಬಜೆಟ್ನಲ್ಲಿ ರೈಲ್ವೇಸ್ 2,52,200 ಕೋಟಿ ರೂ ಬಂಡವಾಳ ವೆಚ್ಚಕ್ಕೆ ಹಣ ಪಡೆದಿತ್ತು. ಇದರಲ್ಲಿ ಇಲ್ಲಿಯವರೆಗೂ (ಜ. 5) 1,92,446 ಕೋಟಿ ರೂ ಬಳಕೆ ಮಾಡಲಾಗಿದೆ. ಕೆಪಾಸಿಟಿ ಹೆಚ್ಚಿಸುವ ಕಾರ್ಯಗಳಿಗೆ ಹೆಚ್ಚಿನ ಬಂಡವಾಳ ವಿನಿಯೋಗವಾಗಿದೆ.
ನವದೆಹಲಿ, ಜನವರಿ 9: ಈ ಹಣಕಾಸು ವರ್ಷದಲ್ಲಿ ಬಜೆಟ್ನಲ್ಲಿ ತನಗೆ ನೀಡಲಾದ ಅನುದಾನದಲ್ಲಿ ರೈಲ್ವೆ ಇಲಾಖೆ ಶೇ. 76ರಷ್ಟು ಮೊತ್ತವನ್ನು 9 ತಿಂಗಳಲ್ಲಿ ಬಳಸಿದೆ. ಭಾರತದಲ್ಲಿ ರೈಲು ವ್ಯವಸ್ಥೆಯ ಸಾಮರ್ಥ್ಯ ಹೆಚ್ಚಳಕ್ಕೆ ಭಾರೀ ಹೂಡಿಕೆ ಮಾಡಲಾಗಿದೆ. ಇದರಿಂದ ರೈಲು ಪ್ರಯಾಣದ ಗುಣಮಟ್ಟ ಹೆಚ್ಚಿಸಲು ಸಹಾಯಕವಾಗುವ ನಿರೀಕ್ಷೆ ಇದೆ. ರೈಲ್ವೆ ಸಚಿವಾಲಯ ಇತ್ತೀಚೆಗೆ ಬಿಡುಗಡೆ ಮಾಡಿದ ಮಾಹಿತಿ ಪ್ರಕಾರ, 2024-25ರ ಬಜೆಟ್ನಲ್ಲಿ ರೈಲ್ವೇಸ್ಗೆ ಬಂಡವಾಳ ವೆಚ್ಚಕ್ಕೆಂದು 2,52,200 ಕೋಟಿ ರೂ ನೀಡಲಾಗಿತ್ತು. ಈ ಪೈಕಿ ಡಿಸೆಂಬರ್ ತಿಂಗಳವರೆಗೂ 1,92,446 ಕೋಟಿ ರೂ ವೆಚ್ಚ ಮಾಡಲಾಗಿದೆ.
ರೈಲು ಬೋಗಿ ಇತ್ಯಾದಿ ರೋಲಿಂಗ್ ಸ್ಟಾಕ್ಗಳಿಗೆ ಬಜೆಟ್ನಲ್ಲಿ 50,903 ಕೋಟಿ ರೂ ಮೀಸಲಿರಿಸಲಾಗಿತ್ತು. ಜನವರಿ 5ರವರೆಗೂ ಇವುಗಳಿಗೆ 40,367 ಕೋಟಿ ರೂ ವೆಚ್ಚ ಮಾಡಲಾಗಿದೆ. ಒಂಬತ್ತು ತಿಂಗಳಲ್ಲಿ ಶೇ. 79ರಷ್ಟು ಅನುದಾನ ಬಳಸಲಾಗಿದೆ.
ಇದನ್ನೂ ಓದಿ: ಗ್ರಾಹಕರ ದೂರು ಇತ್ಯರ್ಥಪಡಿಸದಿದ್ದರೆ ಬ್ಯಾಂಕುಗಳಿಗೆ ದಿನಕ್ಕೆ 100 ರೂನಂತೆ ದಂಡ
ಹಾಗೆಯೇ ಸುರಕ್ಷತಾ ಕಾರ್ಯಗಳಿಗೆ ಬಜೆಟ್ನಲ್ಲಿ 34,412 ಕೋಟಿ ರೂ ಅನುದಾನ ಕೊಡಲಾಗಿತ್ತು. ಇದರಲ್ಲಿ ಶೇ. 82ರಷ್ಟು, ಅಂದರೆ 28,281 ಕೋಟಿ ರೂನಷ್ಟು ಹಣವನ್ನು ವ್ಯಯಿಸಲಾಗಿದೆ ಎಂದು ರೈಲ್ವೆ ಸಚಿವಾಲಯ ಹೇಳಿದೆ.
ಕಳೆದ ಒಂದು ದಶಕದಲ್ಲಿ ರೈಲ್ವೆ ಇಲಾಖೆಯ ಬಂಡವಾಳ ವೆಚ್ಚ ಸ್ಥಿರವಾಗಿದೆ. ಇದರ ಪರಿಣಾಮ ಇಂದು ಕಾಣಸಿಗುತ್ತಿದೆ. 136 ವಂದೇ ಭಾರತ್ ಟ್ರೈನುಗಳು ನಿರ್ಮಾಣವಾಗಿವೆ. ಬ್ರಾಡ್ಗೇಜ್ ಹಳಿಗಳ ವಿದ್ಯುದೀಕರಣ ಶೇ. 97ರಷ್ಟು ಆಗಿದೆ. ಹೊಸ ರೈಲು ಮಾರ್ಗಗಳು ನಿರ್ಮಾಣ ಆಗುತ್ತಲೇ ಇವೆ. ಗೇಜ್ ಪರಿವರ್ತನೆ, ಟ್ರ್ಯಾಕ್ ಡಬಲಿಂಗ್ ಇತ್ಯಾದಿಗಳಾಗಿವೆ. ಪಿಎಸ್ಯುಗಳಲ್ಲಿ ಹೂಡಿಕೆಗಳಾಗುತ್ತಿವೆ ಎಂದು ರೈಲ್ವೆ ಸಚಿವಾಲಯವು ಮಾಹಿತಿ ನೀಡಿದೆ.
ಇದನ್ನೂ ಓದಿ: Sugar MSP: ದುಬಾರಿಯಾಗಲಿದೆ ಸಕ್ಕರೆ, ಕನಿಷ್ಠ ಮಾರಾಟ ದರ ಹೆಚ್ಚಿಸುವ ಬಗ್ಗೆ ಸರ್ಕಾರ ಶೀಘ್ರ ನಿರ್ಧಾರ
ವಂದೇ ಭಾರತ್ ಸ್ಲೀಪರ್ ಟ್ರೈನುಗಳು ರೈಲು ಪ್ರಯಾಣದ ಅನುಭವವನ್ನೇ ಬದಲಿಸಲಿವೆ. ದೂರ ಪ್ರಯಾಣ ಮಾಡುವ ಜನರಿಗೆ ವಿಶ್ವದರ್ಜೆಯ ರೈಲು ಪ್ರಯಾಣದ ಅನುಭವವಾಗಲಿದೆ. ಈ ವಂದೇ ಭಾರತ್ ಸ್ಲೀಪರ್ ಟ್ರೈನುಗಳ ಸ್ಪೀಡ್ ಟ್ರಯಲ್ ನಡೆಯುತ್ತಿದೆ. ಟ್ರೈನುಗಳ ಸುರಕ್ಷತೆಯ ಪ್ರಯೋಗಗಳೂ ಆಗುತ್ತಿವೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ