AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮುಂದಿನ ನಾಲ್ಕೈದು ವರ್ಷದಲ್ಲಿ ಮನುಷ್ಯರ ಎರಡು ಲಕ್ಷ ಬ್ಯಾಂಕ್ ಉದ್ಯೋಗಗಳನ್ನು ಕಿತ್ತುಕೊಳ್ಳಲಿದೆ ಎಐ

Artificial technology effect on Banking jobs: ಮುಂದಿನ 3-5 ವರ್ಷದಲ್ಲಿ ಬ್ಯಾಂಕಿಂಗ್ ವಲಯದಲ್ಲಿ ಎಐ ಟೆಕ್ನಾಲಜಿ ಅಳವಡಿಕೆಯಿಂದಾಗಿ ಜಾಗತಿಕ ಬ್ಯಾಂಕುಗಳಲ್ಲಿ 2 ಲಕ್ಷದಷ್ಟು ಉದ್ಯೋಗಿ ಸಂಖ್ಯೆ ಮೊಟಕುಗೊಳ್ಳಲಿದೆ ಎನ್ನುವ ಅಭಿಪ್ರಾಯವನ್ನು ಬ್ಲೂಮ್​ಬರ್ಗ್ ಇಂಟೆಲಿಜೆನ್ಸ್ ವರದಿಯೊಂದು ಹೇಳಿದೆ. ಬ್ಯಾಂಕುಗಳಲ್ಲಿನ ಬ್ಯಾಕ್ ಆಫೀಸ್ ಸೇರಿದಂತೆ ಕೆಲ ನಿರ್ದಿಷ್ಟ ವಿಭಾಗಗಳ ಮೇಲೆ ಎಐ ಹೆಚ್ಚು ಪರಿಣಾಮ ಬೀರಲಿದೆ.

ಮುಂದಿನ ನಾಲ್ಕೈದು ವರ್ಷದಲ್ಲಿ ಮನುಷ್ಯರ ಎರಡು ಲಕ್ಷ ಬ್ಯಾಂಕ್ ಉದ್ಯೋಗಗಳನ್ನು ಕಿತ್ತುಕೊಳ್ಳಲಿದೆ ಎಐ
ಆರ್ಟಿಫಿಶಿಯಲ್ ಇಂಟೆಲಿಜೆನ್ಸ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jan 09, 2025 | 3:13 PM

Share

ನವದೆಹಲಿ, ಜನವರಿ 9: ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಹೆಚ್ಚೆಚ್ಚು ಪ್ರಬಲಗೊಂಡಂತೆ ಮನುಷ್ಯರ ಶ್ರಮ ಕಡಿಮೆ ಆಗುತ್ತದೆ. ಹಾಗೆಯೇ, ಮನುಷ್ಯರ ಉದ್ಯೋಗಕ್ಕೂ ಕುತ್ತು ಬರುತ್ತದೆ ಎನ್ನುವ ಹಲವರ ಭಯ ನಿಜವಾಗುತ್ತಿದೆ. ಬ್ಲೂಮ್​​ಬರ್ಗ್ ಇಂಟೆಲಿಜೆನ್ಸ್​ನ ವರದಿಯೊಂದರ ಪ್ರಕಾರ ಮುಂದಿನ ಮೂರರಿಂದ ಐದು ವರ್ಷದಲ್ಲಿ ಜಾಗತಿಕವಾಗಿ 2 ಲಕ್ಷ ಬ್ಯಾಂಕ್ ಉದ್ಯೋಗಗಳು ಎಐ ಪಾಲಾಗಲಿವೆ ಎನ್ನಲಾಗಿದೆ. ಜಾಗತಿಕ ಬ್ಯಾಂಕುಗಳ ಸಿಬ್ಬಂದಿ ಸಂಖ್ಯೆಯಲ್ಲಿ ಶೇ. 3ರಷ್ಟು ಇಳಿಕೆ ಆಗಲು ಎಐ ಕಾರಣವಾಗಬಹುದು ಎಂದು ಈ ವರದಿಯಲ್ಲಿ ಅಂದಾಜಿಸಲಾಗಿದೆ. ಕೆಲ ಬ್ಯಾಂಕುಗಳು ಶೇ. 5ರಿಂದ 10ರಷ್ಟು ಸಿಬ್ಬಂದಿವರ್ಗ ಸಂಖ್ಯೆ ಮೊಟಕುಗೊಳ್ಳುವ ಸಾಧ್ಯತೆ ಇದೆ.

ಬ್ಯಾಂಕುಗಳಲ್ಲಿ ಬ್ಯಾಕ್ ಆಫೀಸ್, ಮಿಡಲ್ ಆಫೀಸ್ ಮತ್ತು ಆಪರೇಶನ್ಸ್ ಉದ್ಯೋಗಗಳು ಎಐ ಪಾಲಾಗುವ ಸಾಧ್ಯತೆ ಹೆಚ್ಚಿದೆ. ಕೆಲ ಗ್ರಾಹಕ ಸೇವೆಗಳೂ ಪರಿವರ್ತನೆ ಹೊಂದಬಹುದು. ಎಐ ಚಾಲಿತ ಬೋಟ್​ಗಳು ಗ್ರಾಹಕರ ಅನುಮಾನಗಳನ್ನು ಪರಿಹರಿಸುವ ವ್ಯವಸ್ಥೆ ಹೆಚ್ಚಬಹುದು. ಬ್ಯಾಂಕುಗಳ ಕೆವೈಸಿ ಕ್ರಮಗಳ ಹೊಣೆಯನ್ನು ಎಐ ಬೋಟ್​ಗಳಿಗೆ ವಹಿಸಬಹುದು ಎಂಬುದನ್ನು ಬ್ಲೂಮ್​ಬರ್ಗ್ ಇಂಟೆಲಿಜೆನ್ಸ್​ನ ಹಿರಿಯ ಅನಾಲಿಸ್ಟ್ ಆದ ಟೊಮಾಜ್ ನೋಯೆಟ್ಜೆಲ್ ಹೇಳುತ್ತಾರೆ.

ಇದನ್ನೂ ಓದಿ: ವಿಶ್ವದ ದರ್ಜೆ ರೈಲು ಪ್ರಯಾಣ ವ್ಯವಸ್ಥೆಗೆ ಹೂಡಿಕೆ; ಮುಕ್ಕಾಲು ಪಾಲು ಬಜೆಟ್ ಅನುದಾನ ಬಳಸಿದ ರೈಲ್ವೆ ಇಲಾಖೆ

ಯಾಂತ್ರಿಕವಾದ, ಪುನರಾವರ್ತನೆ ಮಾಡಬೇಕಾದ ಕಾರ್ಯಗಳನ್ನು ಒಳಗೊಂಡಿರುವ ಯಾವುದೇ ಉದ್ಯೋಗಗಳು ಅಪಾಯಕ್ಕೆ ಸಿಲುಕಲಿವೆ. ಈ ಉದ್ಯೋಗಗಳನ್ನು ಪೂರ್ಣವಾಗಿ ಎಐ ಕಿತ್ತುಕೊಳ್ಳುವುದಿಲ್ಲ. ಆದರೆ, ಉದ್ಯೋಗ ಸ್ವರೂಪಗಳಲ್ಲಿ ಬದಲಾವಣೆ ತರಬಲ್ಲುದು ಎಂಬುದು ಅವರ ಅನಿಸಿಕೆ.

ಜಾಗತಿಕ ಮಟ್ಟದ ಬ್ಯಾಂಕುಗಳಾದ ಸಿಟಿ ಗ್ರೂಪ್, ಜೆಪಿ ಮಾರ್ಗನ್ ಚೇಸ್, ಗೋಲ್ಡ್​ಮ್ಯಾನ್ ಸ್ಯಾಕ್ಸ್ ಗ್ರೂಪ್ ಮೊದಲಾದವು ಸೇರಿದಂತೆ 93 ಸಂಸ್ಥೆಗಳು ಈ ಸಮೀಕ್ಷೆಗೆ ಸ್ಪಂದಿಸಿವೆ. ಶೇ. 25ರಷ್ಟು ಸಂಸ್ಥೆಗಳು ಬ್ಯಾಂಕುಗಳ ಸಿಬ್ಬಂದಿ ಸಂಖ್ಯೆಯಲ್ಲಿ ಶೇ. 5ರಿಂದ 10ರಷ್ಟು ಇಳಿಕೆಯಾಗಬಹುದು ಎಂಬ ಅಂದಾಜು ಮಾಡಿವೆ.

ಸಕಾರಾತ್ಮಕ ಅಂಶವೆಂದರೆ, ಬ್ಯಾಂಕುಗಳ ಹೆಡ್​ಕೌಂಟ್ ಕಡಿಮೆ ಆದರೂ ಆದಾಯ ಹೆಚ್ಚಲಿದೆ. ತೆರಿಗೆ ಪೂರ್ವದ ಲಾಭದಲ್ಲಿ ಶೇ. 12ರಿಂದ ಶೇ. 17ಕ್ಕೆ ಹೆಚ್ಚಬಹುದು. ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ತಂತ್ರಜ್ಞಾನದಿಂದ ಉತ್ಪನ್ನಶೀಲತೆ ಹೆಚ್ಚುವುದು ಇದಕ್ಕೆ ಕಾರಣವಾಗಿರುತ್ತದೆ. ಸಮೀಕ್ಷೆಯಲ್ಲಿ ಶೇ. 80ರಷ್ಟು ಮಂದಿ ಈ ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ: ಗ್ರಾಹಕರ ದೂರು ಇತ್ಯರ್ಥಪಡಿಸದಿದ್ದರೆ ಬ್ಯಾಂಕುಗಳಿಗೆ ದಿನಕ್ಕೆ 100 ರೂನಂತೆ ದಂಡ

ಎಐ ಪರಿಣಾಮ ಬಹುತೇಕ ಎಲ್ಲಾ ಕ್ಷೇತ್ರಗಳಲ್ಲೂ ಇರುತ್ತದೆ. ಆದರೆ, ಹೆಚ್ಚು ಪರಿಣಾಮ ಬೀರುವುದು ಬ್ಯಾಂಕಿಂಗ್, ರೋಬೊಟಿಕ್ಸ್, ಸಾಫ್ಟ್​ವೇರ್ ಕ್ಷೇತ್ರಗಳಲ್ಲಿ ಎನ್ನಲಾಗಿದೆ. ಸಿಟಿಗ್ರೂಪ್​ನಂತಹ ಸಂಸ್ಥೆಗಳ ಪ್ರಕಾರ ಮುಂಬರುವ ವರ್ಷಗಳಲ್ಲಿ ಅರ್ಧದಷ್ಟು ಬ್ಯಾಂಕಿಂಗ್ ಉದ್ಯೋಗಿಗಳು ಮನುಷ್ಯರ ಕೈತಪ್ಪಲಿವೆ. ಈ ಅನಿಸಿಕೆಗೆ ಇಂಬು ಕೊಡುವಂತೆ, ಬ್ಯಾಂಕುಗಳು ತಮ್ಮ ಉತ್ಪನ್ನಶೀಲತೆ ಹೆಚ್ಚಿಸಲು ಎಐ ಟೆಕ್ನಾಲಜಿಯ ಹೊಸ ಹೊಸ ಆವಿಷ್ಕಾರಗಳತ್ತ ಮುಗಿಬೀಳುತ್ತಿರುವುದು ಕಂಡುಬರುತ್ತಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಒಂದೇ ಗೋತ್ರದವರ ಜೊತೆ ಮದುವೆ ಆಗಬಹುದಾ?
ಒಂದೇ ಗೋತ್ರದವರ ಜೊತೆ ಮದುವೆ ಆಗಬಹುದಾ?
ಇಂದು ಈ ರಾಶಿಯವರಿಗೆ ಆಕಸ್ಮಿಕ ಧನ ಯೋಗ!
ಇಂದು ಈ ರಾಶಿಯವರಿಗೆ ಆಕಸ್ಮಿಕ ಧನ ಯೋಗ!
ಕೊನೆಗೂ ತುಂಗಭದ್ರಾ ಡ್ಯಾಂ ಕ್ರಸ್ಟ್ ಗೇಟ್ ಬದಲಾವಣೆ ಕಾರ್ಯ ಆರಂಭ
ಕೊನೆಗೂ ತುಂಗಭದ್ರಾ ಡ್ಯಾಂ ಕ್ರಸ್ಟ್ ಗೇಟ್ ಬದಲಾವಣೆ ಕಾರ್ಯ ಆರಂಭ
ಸಿಕ್ಕ ಸಿಕ್ಕ ಜಾನುವಾರುಗಳನ್ನು ತಿಂದು ತೇಗಿದ ಚಿರತೆ ಬೋನಿಗೆ ಬಿತ್ತು
ಸಿಕ್ಕ ಸಿಕ್ಕ ಜಾನುವಾರುಗಳನ್ನು ತಿಂದು ತೇಗಿದ ಚಿರತೆ ಬೋನಿಗೆ ಬಿತ್ತು
ಗೋಪಾಲ್‌ಗಂಜ್‌ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಗೋಪಾಲ್‌ಗಂಜ್‌ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಕಾಳಹಸ್ತಿ ದೇವಸ್ಥಾನದಲ್ಲಿ ನೆಲದ ಮೇಲೆ ಕುಳಿತು ಪ್ರಸಾದ ಸೇವಿಸಿದ ರಷ್ಯನ್ನರು
ಕಾಳಹಸ್ತಿ ದೇವಸ್ಥಾನದಲ್ಲಿ ನೆಲದ ಮೇಲೆ ಕುಳಿತು ಪ್ರಸಾದ ಸೇವಿಸಿದ ರಷ್ಯನ್ನರು
ಗಂಡನ ಬಗ್ಗೆ ಬಿಗ್ ಬಾಸ್​ನಲ್ಲಿ ಚೈತ್ರಾ ಕುಂದಾಪುರ ಹೇಳಿದ್ದು ಸುಳ್ಳು: ತಂದೆ
ಗಂಡನ ಬಗ್ಗೆ ಬಿಗ್ ಬಾಸ್​ನಲ್ಲಿ ಚೈತ್ರಾ ಕುಂದಾಪುರ ಹೇಳಿದ್ದು ಸುಳ್ಳು: ತಂದೆ
ಪ್ರೇಮ್ ಕಹಾನಿ: 19 ವರ್ಷದ ಯುವತಿ ಹಿಂದೆ ಬಿದ್ದು ದುರಂತ ಅಂತ್ಯಕಂಡ 40 ಅಂಕಲ್
ಪ್ರೇಮ್ ಕಹಾನಿ: 19 ವರ್ಷದ ಯುವತಿ ಹಿಂದೆ ಬಿದ್ದು ದುರಂತ ಅಂತ್ಯಕಂಡ 40 ಅಂಕಲ್
ಬೇರೆ ಮಹಿಳೆ ಜತೆ ಲವ್ವಿಡವ್ವಿ: ಹೆಂಡ್ತಿ ಹತ್ಯೆಗೆ ಸುಪಾರಿ ಕೊಟ್ಟ ಪತಿ
ಬೇರೆ ಮಹಿಳೆ ಜತೆ ಲವ್ವಿಡವ್ವಿ: ಹೆಂಡ್ತಿ ಹತ್ಯೆಗೆ ಸುಪಾರಿ ಕೊಟ್ಟ ಪತಿ
ಡಿಕೆಶಿ ಪ್ರಾರ್ಥನೆಗೆ ಅಸ್ತು ಎಂದಳಾ ಶಕ್ತಿದೇವಿ? ಅರ್ಚಕರು ಹೇಳಿದ್ದಿಷ್ಟು
ಡಿಕೆಶಿ ಪ್ರಾರ್ಥನೆಗೆ ಅಸ್ತು ಎಂದಳಾ ಶಕ್ತಿದೇವಿ? ಅರ್ಚಕರು ಹೇಳಿದ್ದಿಷ್ಟು