Horoscope Today 10 January 2025: ಈ ರಾಶಿಯವರು ಗೌಪ್ಯವಾಗಿ ವ್ಯವಹಾರ ನಡೆಸುವಿರಿ, ಆರ್ಥಿಕತೆ ಬಲವಾಗುವುದು

ಶಾಲಿವಾಹನ ಶಕೆ 1947ರ ಮಾರ್ಗಶಿರ ಮಾಸದ ಕೃಷ್ಣ ಪಕ್ಷದ ಪಂಚಮಿಯ ದಿನದ ನಿತ್ಯ ಪಂಚಾಂಗವನ್ನು ಮತ್ತು ಎಲ್ಲಾ 12 ರಾಶಿಗಳಿಗೆ ದಿನದ ಭವಿಷ್ಯವನ್ನು ಒಳಗೊಂಡಿದೆ. ಪ್ರತಿಯೊಂದು ರಾಶಿಗೂ ಆರ್ಥಿಕ, ವೃತ್ತಿಪರ ಮತ್ತು ವೈಯಕ್ತಿಕ ಜೀವನದ ಮೇಲೆ ದಿನದ ಪ್ರಭಾವವನ್ನು ವಿವರಿಸಲಾಗಿದೆ. ಸಕಾರಾತ್ಮಕ ಮತ್ತು ನಕಾರಾತ್ಮಕ ಅಂಶಗಳನ್ನು ತಿಳಿದುಕೊಳ್ಳಲು ಈ ಲೇಖನ ಸಹಾಯ ಮಾಡುತ್ತದೆ.

Horoscope Today 10 January 2025: ಈ ರಾಶಿಯವರು ಗೌಪ್ಯವಾಗಿ ವ್ಯವಹಾರ ನಡೆಸುವಿರಿ, ಆರ್ಥಿಕತೆ ಬಲವಾಗುವುದು
ಈ ರಾಶಿಯವರು ಗೌಪ್ಯವಾಗಿ ವ್ಯವಹಾರ ನಡೆಸುವಿರಿ, ಆರ್ಥಿಕತೆ ಬಲವಾಗುವುದು
Follow us
ಲೋಹಿತ ಹೆಬ್ಬಾರ್​, ಇಡುವಾಣಿ
| Updated By: ಗಂಗಾಧರ​ ಬ. ಸಾಬೋಜಿ

Updated on: Jan 10, 2025 | 12:02 AM

ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ದಕ್ಷಿಣಾಯನ, ಹೇಮಂತ ಋತು, ಧನು ಮಾಸ, ಮಹಾನಕ್ಷತ್ರ: ಪೂರ್ವಾಷಾಢ, ಮಾಸ: ಪೌಷ, ಪಕ್ಷ: ಶುಕ್ಲ, ವಾರ: ಶುಕ್ರ, ತಿಥಿ: ಏಕಾದಶೀ, ನಿತ್ಯನಕ್ಷತ್ರ: ರೋಹಿಣೀ, ಯೋಗ: ಶುಕ್ಲ, ಕರಣ: ಭದ್ರ, ಸೂರ್ಯೋದಯ ಬೆಳಗ್ಗೆ 07 ಗಂಟೆ 01 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 19 ನಿಮಿಷಕ್ಕೆ, ರಾಹು ಕಾಲ ಬೆಳಿಗ್ಗೆ 11:16 ರಿಂದ 12:40ರ ವರೆಗೆ, ಯಮಘಂಡ ಕಾಲ ಮಧ್ಯಾಹ್ನ 03:30 ರಿಂದ 04:54 ರವರೆಗೆ, ಗುಳಿಕ ಬೆಳಿಗ್ಗೆ 08:26 ರಿಂದ 09:51 ರವರೆಗೆ.

ಮೇಷ ರಾಶಿ: ನಿಮ್ಮ ಹೇಳಿಕೆ ಸುಳ್ಳಾಗಬಹುದು ಎಂಬ ಭಯವಿರುವುದು. ಇಂದು ವ್ಯರ್ಥವಾಗಿ ಖರ್ಚು ಮಾಡುವುದನ್ನು ತಪ್ಪಿಸಬೇಕು. ನೀವು ದೈಹಿಕಪೀಡೆಯಿಂದ ಬಳಲುತ್ತಿದ್ದರೆ ದುಃಖವು ಹೆಚ್ಚಾಗಬಹುದು. ಸಾಮಾಜಿಕ ಚಟುವಟಿಕೆಗಳಲ್ಲಿ ಅಡಚಣೆ ಇರುವುದು. ಮಕ್ಕಳ ಕಡೆಯಿಂದ ಸಂತೋಷದ ಸುದ್ದಿ ಇರುತ್ತದೆ. ಸ್ತ್ರೀಯರು ತಾಳ್ಮೆಯನ್ನು ಕಳೆದುಕೊಳ್ಳುವ ಸಂಭವವಿದೆ. ನಿಮ್ಮ ಸಾಮರ್ಥ್ಯದ ಬಗ್ಗೆ ನಿಮಗೇ ಸರಿಯಾಗಿ ಗೊತ್ತಿಲ್ಲದೇ ಹೋಗಬಹುದು. ಮಕ್ಕಳ ಶುಭವಾರ್ತೆಯು ಸಂತಸಕೊಡಬಹುದು. ಬಂಗಾರದ ಮೇಲೆ‌ ಹೂಡಿಕೆ ಮಾಡುವಿರಿ. ನಿಮ್ಮ ಮೇಲೆ ಯಾವುದಾದರೊಂದು ವಿಷಯ, ವ್ಯಕ್ತಿಗಳು ಪ್ರಭಾವ ಬೀರಬಹುದು. ಸಮಾಜವು ನಿಮ್ಮನ್ನು ಸ್ವಾರ್ಥಿಯಂತೆ ನೋಡಬಹುದು. ಹಿರಿಯರ ನಂಬಿಕೆಯನ್ನು ಗಳಿಸಲು ಕಷ್ಟವಾದೀತು. ಸಿಟ್ಟಾಗಿ ಮನೆಯಿಂದ ಹೊರ ನಡೆಯುವ ಪ್ರಸಂಗವು ಬರಬಹುದು. ಮನಸ್ಸಿಗೆ ಬಾರದ ಕಾರ್ಯವನ್ನು ಮಾಡಲು ಧೈರ್ಯ ಸಾಲದು.

ವೃಷಭ ರಾಶಿ; ಇಂದು ಕೇಳಿದರೂ ಸಹಾಯ ಮಾಡದೇ ಇರುವುದು ಸ್ನೇಹಿತರ ಬಗ್ಗೆ ಸಂದೇಹ ಬರುವುದು. ಪ್ರೇಮವು ನೀವಂದುಕೊಂಡಂತೆ ಮುಕ್ತಾಯವಾದುದ್ದು ನಿಮಗೆ ಖುಷಿಕೊಡುವುದು. ಅಂದುಕೊಂಡಂತೆ ಆಗಿದ್ದಕ್ಕೆ ಸಂತೋಷವು ಇರಲಿದೆ. ವಿದೇಶದಲ್ಲಿ ಉದ್ಯೋಗಕ್ಕಾಗಿ ಪ್ರಯತ್ನಿಸುವಿರಿ. ಗೌಪ್ಯವಾಗಿ ವ್ಯವಹಾರವನ್ನು ನಡೆಸುವಿರಿ. ಪ್ರೀತಿಯನ್ನು ತೋರ್ಪಡಿಸುವ ರೀತಿ ಬೇರೆ ರೀತಿಯದ್ದು. ನೀವು ಇತರರ ಒಳ್ಳೆಯದನ್ನು ಯೋಚಿಸುವಿರಿ ಹಾಗೂ ಒಳ್ಲೆಯ ಮನಸ್ಸಿನಿಂದ ಸೇವೆ ಮಾಡುತ್ತೀರಿ. ನಿಮ್ಮ ಮಕ್ಕಳ ಮನೋಭಾವವನ್ನು ಅವರಿಗೆ ಇಷ್ಟವಾದುದನ್ನು ಮಾಡುವಿರಿ. ಇಂದಿನ ವ್ಯಾಪಾರದಿಂದ ಆರ್ಥಿಕತೆಯು ಬಲವಾಗುವುದು. ಮಕ್ಕಳು ಆರ್ಥಿಕತೆಯ ದುರ್ಬಲತೆಯಿಂದ ವಿದ್ಯಾಭ್ಹ್ಯಾಸವನ್ನು ನಿಲ್ಲಿಸಬೇಕಾದೀತು. ಸ್ತ್ರೀಯರಿಂದ ಸಹಾಯ ಪಡೆದರೂ ನೋಡುಗರು ಅದನ್ನು ಅಪಾರ್ಥ ಮಾಡಿಕೊಳ್ಳಬಹುದು. ನಿಮ್ಮ ಹೇಳಿಕೆಗಳು ಮಹತ್ತ್ವದ್ದಾಗಿರದು.

ಮಿಥುನ ರಾಶಿ: ಮಹತ್ತ್ವಾಕಾಂಕ್ಷೆಗಳನ್ನು ಯಾರ ಬಳಿಯೂ ಹೇಳದೇ ಮುಂದುವರಿಯುವಿರಿ. ನಿಮ್ಮನ್ನು ರಕ್ಷಿಸಿಕೊಳ್ಳಲು ಬೇರೆ ತಂತ್ರಗಳನ್ನು ಮಾಡುವಿರಿ. ಸಂಗಾತಿಯ ಆರೋಗ್ಯದಲ್ಲಿ ವ್ಯತ್ಯಾಸವಾಗಿದ್ದು ಯೋಗ್ಯ ಚಿಕಿತ್ಸೆಯನ್ನು ಕೊಡುವಿರಿ. ನಿಮ್ಮ ಕಠಿಣ ಪರಿಶ್ರಮದಿಂದ ನೀವು ಉತ್ತಮ ಫಲಿತಾಂಶವನ್ನು ಪಡೆಯುವಿರಿ. ಇಂದು ತಾಯಿಯ ಕಡೆಯಿಂದ ಪ್ರೀತಿ ಮತ್ತು ವಿಶೇಷ ಬೆಂಬಲದ ಸಾಧ್ಯತೆಯಿದೆ. ಮೋಜಿಗಾಗಿ ಹಣವನ್ನು ಖರ್ಚು ಮಾಡುತ್ತೀರಿ. ಇದು ನಿಮ್ಮ ಶತ್ರುಗಳನ್ನು ಅಸಮಾಧಾನಗೊಳಿಸುತ್ತದೆ. ಇಂದು ಪೋಷಕರ ಬಗ್ಗೆ ವಿಶೇಷ ಕಾಳಜಿ ವಹಿಸಿ. ಅಪರಿಚಿತರ ಮಾತನ್ನು ನೀವು ನಂಬುವಿರಿ. ಪರೀಕ್ಷೆಯ ಸಿದ್ಧತೆಯಲ್ಲಿ ವಿದ್ಯಾರ್ಥಿಗಳಿಗೆ ಗೊಂದಲವಾಗಬಹುದು. ಬಂಧುಗಳ ವಿಯೋಗವೂ ಆಗಬಹುದು. ವಿವಾಹೇತರ ಸಂಬಂಧದಿಂದ ನಿಮಗೆ ಬೇಸರವಾಗುವುದು. ನಿಮ್ಮ ಮಾತಿನಿಂದ ಯಾವ ಲಾಭವೂ ಆಗದು ಎಂಬುದು ಇಂದು ತಿಳಿಯುವುದು. ಸ್ವಂತ ಉದ್ಯೋಗವನ್ನು ಮಾಡಬೇಕು ಎಂದು ಅನ್ನಿಸುವುದು.

ಕರ್ಕಾಟಕ ರಾಶಿ: ಇಂದು ಅನೇಕ ಕಾರಣಗಳಿಂದ ಬಹಳಷ್ಟು ಸಮಸ್ಯೆಗಳನ್ನು ಎದುರಿಸಬೇಕಾದೀತು. ಮನಸ್ಸು ದುರ್ಬಲವಾಗಲು ಬಿಡಬೇಡಿ. ವ್ಯವಹಾರದ ಬೆಳವಣಿಗೆಗೆ ಮಾಡಿದ ಪ್ರಯತ್ನಗಳು ಇಂದು ಫಲಪ್ರದವಾಗದು. ತಾಳ್ಮೆ ಮತ್ತು ಪ್ರತಿಭೆಯಿಂದ ಶತ್ರು ಗೆಲ್ಲುವಲ್ಲಿ ನೀವು ಯಶಸ್ಸನ್ನು ಗಳಿಸುವಿರಿ. ನಿಮ್ಮದಾದ ಚಿಂತನೆ, ಕಾರ್ಯದಿಂದ ಯಶಸ್ಸನ್ನು ಪಡೆಯಲು ನೀವು ಬಹಳ ಸಮಯ ಕಾಯಬೇಕಾಗಬಹುದು. ಸಣ್ಣ ವಿಷಯಕ್ಕೆ ಸ್ನೇಹಿತರ ಜೊತೆಗಿನ ಸಂಬಂಧವು ಹಾಳಾಗಬಹುದು. ನಿಮ್ಮಿಂದ ಕಾರ್ಯವನ್ನು ಮಾಡಿಸಿಕೊಂಡು ಕೈ ಬಿಡಬಹುದು. ಅಂದುಕೊಂಡಂತೆ ಆಗಿದ್ದಕ್ಕೆ ಸಂತೋಷವು ಇರಲಿದೆ. ವಿದೇಶದಲ್ಲಿ ಉದ್ಯೋಗಕ್ಕಾಗಿ ಪ್ರಯತ್ನಿಸುವಿರಿ. ಮುಸುಕಿನ ಗುದ್ದಾಟದಿಂದ ಮೈಕೈ ನೋವಾಗಬಹುದು ಅಷ್ಟೇ. ಚಂಚಲ ಸ್ವಭಾವವು ತಾನಾಗಿಯೇ ಕಡಿಮೆಯಾಗಿದ್ದು ಅಚ್ಚರಿ ಆಗಬಹುದು. ಕಳೆದುಹೋದುದನ್ನು ಮರಳಿ ಪಡೆಯುವುದು ಕಷ್ಟ. ವಾಹನದಿಂದ ಆರ್ಥಿಕ ಸ್ಥಿತಿಗೆ ಹೊಡೆತ.

ಸಿಂಹ ರಾಶಿ: ಮೋಹಕ್ಕೆ ವಶವಾಗಿ ಯಾರ ಮಾತಿನಿಂದಲೂ ತಿಳಿವಳಿಕೆ ಬಾರದು. ಕೃಷಿಯಲ್ಲಿ ನಿಮಗೆ ತಾಳ್ಮೆ ಅತ್ಯಂತ ಅವಶ್ಯಕ. ಇಂದಿನ ನಿಮ್ಮ ಕೆಲಸವು ನಿಮಗೇ ಇಷ್ಟವಾಗದು. ಕೆಲವು ವಿಷಯಕ್ಕೆ ಕುಟುಂಬದಿಂದ ವಿರೋಧವಿರುವುದು. ಸ್ನೇಹಿತರ ಜೊತೆ ಸುತ್ತಾಟ ಮತ್ತು ಉತ್ತಮ ಭೋಜನವನ್ನು ಮಾಡುವಿರಿ. ನಿಮ್ಮದು ನಿಮಗೇ ಸಿಕ್ಕರೂ ಸಂತೃಪ್ತಿ ಇರದು. ಹಠದ ಸ್ವಭಾವವನ್ನು ಕಡಿಮೆ ಮಾಡಿಕೊಳ್ಳುವುದು ಉತ್ತಮ. ಎಲ್ಲವನ್ನೂ ನಕಾರಾತ್ಮಕವಾಗಿಯೇ ನೋಡುವಿರಿ. ನಿಮ್ಮ ಭಾವನೆಗಳನ್ನು ಇನ್ನೊಬ್ಬರ ಬಳಿ ಹೇಳುಕೊಳ್ಳುವಿರಿ. ಭೂಮಿಯಿಂದ ಇಂದು ಸಂಪತ್ತು ಕಳೆದುಕೊಳ್ಳಬೇಕಾಗುವುದು. ಹಿರಿಯರ ಮಾತುಗಳು ಪೂರ್ಣವಾಗಿ ಇಷ್ಟವಾಗದು. ವಿದ್ಯಾರ್ಥಿಗಳು ಓದಿನ ಬಗ್ಗೆ ಹೆಚ್ಚು ಗಮನ ಹರಿಸುವುದು ಮುಖ್ಯವಾದೀತು. ಯಾವುದನ್ನೇ ಆದರೂ ಚಿಂತಿಸಿ ಮಾತನಾಡಿ. ಹೊಸ ಮನೆಯನ್ನು ಕಟ್ಟುವ ಯೋಚನೆಯನ್ನು ಕಾರಣಾಂತೆಗಳಿಂದ ನಿಲ್ಲಿಸುವಿರಿ. ಭೂಮಿಯ ಉತ್ಪನ್ನದಿಂದ ಲಾಭ.

ಕನ್ಯಾ ರಾಶಿ; ಇಂದಿನ ಸಣ್ಣ ಕೆಲಸವನ್ನು ಮಾಡಲು ಅಧಿಕ ಸಮಯವನ್ನು ತೆಗೆದುಕೊಳ್ಳುವಿರಿ. ಹೊಸ ಮನೆಯನ್ನು ಕಟ್ಟುವ ಯೋಚನೆಯನ್ನು ಕಾರಣಾಂತರಗಳಿಂದ ನಿಲ್ಲಿಸುವಿರಿ. ಇಂದು ನಿಮಗೆ ಏಕಾಂತವೇ ಹೆಚ್ಚು ಸುಖವನ್ನು ಕೊಡುವುದು. ನಿಮ್ಮಲ್ಲಿ ಇಂದು ದಾನ, ಧರ್ಮದ ಪ್ರಜ್ಞೆ ವರ್ಧಿಸಬಹುದು. ಧಾರ್ಮಿಕ ಆಚರಣೆಗಳಲ್ಲಿ ಶ್ರದ್ಧೆಯಿಂದ ಪಾಲ್ಗೊಳ್ಳುವಿರಿ. ಆರ್ಥಿಕ ಪರಿಸ್ಥಿತಿ ಬಲವಾಗಿರುತ್ತದೆ. ಹೊಟ್ಟೆಯ ಸ್ವಾಸ್ಥ್ಯವು ಕೆಡುವ ಸಾಧ್ಯತೆಯಿದೆ. ಜಾಗರೂಕರಾಗಿರಿ ಮತ್ತು ಆಹಾರದ ಮೇಲೆ ಸಂಯಮವಿರಿಸಿ. ಸಾಮಾಜಿಕ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಮನ್ನಣೆ ಸಿಗುವುದು. ಯಂತ್ರಗಳ ವಿಚಾರದಲ್ಲಿ ನಿಮಗೆ ಹೆಚ್ಚಿನ ಆಸಕ್ತಿಯು ಇರಲಿದ್ದು ವಿದ್ಯಾಭ್ಯಾಸಕ್ಕೆ ಆ ಕ್ಷೇತ್ರವನ್ನು ಆಯ್ಕೆ ಮಾಡಿಕೊಳ್ಳುವಿರಿ. ಮಕ್ಕಳ ವಿವಾಹದಿಂದ ಚಿಂತೆ ದೂರವಾಗುವುದು. ಹಿರಿಯರ ನಂಬಿಕೆಯನ್ನು ಗಳಿಸಲು ಕಷ್ಟವಾದೀತು. ಮನೆಯಿಂದ ಹೊರ ನಡೆಯುವ ಪ್ರಸಂಗವು ಬರಬಹುದು.

ತುಲಾ ರಾಶಿ; ನಿಷ್ಠುರದ ಮಾತಿಗೆ ಧೈರ್ಯ ಸಾಲದು. ಅಂದುಕೊಂಡಷ್ಟು ವೇಗವಾಗಿ ಯಾವುದೂ ಆಗುವುದಿಲ್ಲ ಎಂಬುದು ಗೊತ್ತಿರಲಿ. ನಿಮ್ಮಲ್ಲಿ ಪಕ್ವತೆಯ ಕೊರತೆ ಕಾಣಿಸುವುದು. ಕುಟುಂಬವು ನಿಮ್ಮ ವಿವಾಹದ ಸಂತೋಷದಲ್ಲಿ ಇರಲಿದೆ. ಕೃತಜ್ಞತೆಯಿಂದ ನಿಮ್ಮ ವ್ಯವಹಾರವು ಇರಲಿ. ಸಂಪತ್ತಿಗಾಗಿ ನೀವು ಬಹಳ ಶ್ರಮಪಡುವಿರಿ. ಆರ್ಥಿಕತೆಯ ಅಭಿವೃದ್ಧಿಯನ್ನು ಗಂಭೀರವಾಗಿ ತೆಗೆದುಕೊಳ್ಳಬೇಕಾಗುವುದು. ಆದಾಯಕ್ಕೆ ಸ್ವಪ್ರಯತ್ನವು ಸ್ವಲ್ಪವಾದರೂ ಇರಲಿ. ದಿನವನ್ನು ಮನೆಯ ಕೆಲಸದ ಜೊತೆ ಕಳೆಯುವಿರಿ. ಎಂದೋ ಆಗಬೇಕಿದ್ದ ಕೆಲಸಗಳು ಇಂದು ಪೂರ್ಣವಾಗುವುದು‌. ಹಗುರವಾಗಿ ಯಾರ ಬಗ್ಗೆಯೂ ಮಾತನಾಡುವುದು ಬೇಡ. ನಿಮ್ಮ ವ್ಯಕ್ತಿತ್ವದ ಪೂರ್ಣಪರಿಚಯವು ಆಗುವುದು. ಮಾನಸಿಕ ಆರೋಗ್ಯದ ಬಗ್ಗೆ ಕಾಳಜಿ ಹೆಚ್ಚಿರಲಿ. ಭೇಟಿಯನ್ನು ಮಾಡಲು ಕಾದು ಸಮಯವನ್ನು ವ್ಯರ್ಥಮಾಡಿಕೊಳ್ಳುವಿರಿ. ತಾಳ್ಮೆಯಿಂದ ವರ್ತಿಸಲು ನಿಮ್ಮವರಿಂದ ಸಲಹೆ ಸಿಗುವುದು. ವೈವಾಹಿಕ ಜೀವನದಲ್ಲಿ ಶೈಕ್ಷಣಿಕ ತುಲನೆ ನಡೆಯಬಹುದು.

ವೃಶ್ಚಿಕ ರಾಶಿ: ವ್ಯವಸ್ಥೆಯ ವಿರುದ್ಧವಾಗಿ ಹೋಗಲು ಆಗದು. ಇಂದು ಅಮೂಲ್ಯವಾದ ವಸ್ತುವು ನಿಮ್ಮ ಪಾಲಾಗಬಹುದು. ಆದರೆ ಅನಗತ್ಯ ವೆಚ್ಚಗಳು ಸಹ ಬರಲಿವೆ. ನಿಮ್ಮ ವ್ಯವಹಾರದಲ್ಲಿಯೂ ಸಹ ನೀವು ಭಾಗವಹಿಸುವಿರಿ. ಇದರಿಂದ ಕೆಲಸ ಪೂರ್ಣಗೊಳ್ಳುತ್ತದೆ. ನೀವು ಯಾವುದೇ ಹೊಸ ಕೆಲಸದಲ್ಲಿ ಹೂಡಿಕೆ ಮಾಡಬೇಕಾದರೆ, ಖಂಡಿತವಾಗಿಯೂ ಮಾಡಿ, ಭವಿಷ್ಯದಲ್ಲಿ ಪ್ರಯೋಜನವಿದೆ. ಅಲ್ಪವನ್ನು ಮಾತ್ರ ಮಾಡಿದರೆ ನಿಮಗೂ ಹೊರೆಯಾಗದು. ಸಾಲವನ್ನು ಹಿಂಪಡೆಯಲು ಇಂದು ತಿರುಗಾಟ ಮಾಡುವಿರಿ. ಇನ್ನೊಬ್ಬರು ಕೊಡುವ ತೊಂದರೆಯಿಂದ ನೀವು ಬೇಸತ್ತುಹೋಗಬಹುದು. ವ್ಯವಹಾರಕ್ಕೆ ಇಂದು ದೂರಪ್ರಯಾಣ ಮಾಡುವಿರಿ. ನಿಮ್ಮ ಮಾತಿನಿಂದ ಯಾವ ಲಾಭವೂ ಆಗದು ಎಂಬುದು ಇಂದು ತಿಳಿಯುವುದು. ಸ್ವಂತ ಉದ್ಯೋಗವನ್ನು ಮಾಡಬೇಕು ಎಂದು ಅನ್ನಿಸುವುದು. ನಿಮ್ಮನ್ನೇ ಒಮ್ಮೆ ನೋಡಿಕೊಳ್ಳಿ. ಇಂದು ಕಲಹವಾಗುವಾಗ ಅಪರಿಚಿತರ ಸಹಾಯವು ಸಿಗಲಿದೆ. ಭಾಗ್ಯದ ಬಾಗಿಲು ತೆಗೆಯುವ ನಿರೀಕ್ಷೆಯಲ್ಲಿ ಇರುವಿರಿ.

ಧನು ರಾಶಿ: ಅನ್ಯಾಯವನ್ನು ಖಂಡಿಸುವ‌ ಕ್ರಮದಲ್ಲಿ ಖಂಡಿಸಿ. ನಿಮ್ಮ ಖರೀದಿಗಳು ಆದಾಯವನ್ನು ಅವಲಂಬಿಸಿ ಇರುವುದು. ಇಂದು ನೀವು ಲಾಭವನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಕೆಲಸ ಮಾಡಿದರೆ ನಿಮಗೆ ತೃಪ್ತಿ ಸಿಗದು. ಭೂಮಿಯಿಂದ ಇಂದು ಸಂಪತ್ತು ಸಿಗಬಹುದು. ಹಿರಿಯರ ಮಾತುಗಳು ಪೂರ್ಣವಾಗಿ ಇಷ್ಟವಾಗದು. ವಿದ್ಯಾರ್ಥಿಗಳು ಓದಿನ ಬಗ್ಗೆ ಹೆಚ್ಚು ಗಮನ ಹರಿಸುವುದು ಮುಖ್ಯವಾಗಬೇಕು. ಯಾರ ಬಳಿಯೇ ಆದರೂ ಚಿಂತಿಸಿ ಮಾತನಾಡಿ. ನಿಮ್ಮ ಮನಸ್ಸಿಗೆ ಹಿಡಿಸದ ವಿಚಾರಗಳ ಚರ್ಚೆಯಿಂದ ನೀವು ದೂರ ಇರುವಿರಿ. ನಿಮ್ಮ ಸ್ವಭಾವದಲ್ಲಿ ಬದಲಾವಣೆ ಇರಲಿದ್ದು ಇತರರಿಗೆ ಇದು ಅನಿರೀಕ್ಷಿತವೂ ಆಗಬಹುದು. ಕುಟುಂಬವು ನಿಮ್ಮ ವಿವಾಹದ ಸಂತೋಷದಲ್ಲಿ ಇರಲಿದೆ. ಕೃತಜ್ಞತೆಯಿಂದ ನಿಮ್ಮ ವ್ಯವಹಾರವು ಇರಲಿ. ಸಂಗಾತಿಯ ಪ್ರೀತಿಯು ಕಡಿಮೆ ಆದೀತು. ಸ್ವಂತ ಕೆಲಸಕ್ಕೆ ಸಮಯವು ಸಿಗದೇ ಎಲ್ಲವನ್ನೂ ಉಳಿಸಿಕೊಳ್ಳುವಿರಿ. ಆರ್ಥಿಕ ವಿಚಾರದಲ್ಲಿ ಸರಿಯಾದ ಹೊಂದಾಣಿಕೆ ಸಿಗದೇ ಕಷ್ಟವಾಗಬಹುದು.

ಮಕರ ರಾಶಿ; ನಿಮ್ಮಿಂದ ಕೆಲವರು ಬದಲಾವಣೆಯನ್ನು ನಿರೀಕ್ಷಿಸಬಹುದು. ತಿಳುವಳಿಕೆಯಿಂದ ಹೊಸ ಮಾರ್ಗಗಳನ್ನು ಹುಡುಕಲು ಇಂದು ಖರ್ಚು ಮಾಡುವಿರಿ. ನೀವು ಸೀಮಿತವಾಗಿ ಅಗತ್ಯಕ್ಕೆ ತಕ್ಕಂತೆ ಮಾತ್ರ ಖರ್ಚು ಮಾಡುತ್ತೀರಿ. ನಿಮ್ಮ ಕುಟುಂಬ ಸದಸ್ಯರಿಗೆ ನೀವು ವಿಶ್ವಾಸದ್ರೋಹಿ ಆಗುವ ಸಾಧ್ಯತೆಯಿದೆ. ಸಹಾಯ ಸಿಗುವುದಿಲ್ಲ ಬೇಡಿದರೆ ಉತ್ತಮ. ಹಳೆಯ ಸ್ನೇಹಿತನನ್ನು ಯಾವುದಾದರೂ ರೀತಿಯಲ್ಲಿ ಭೇಟಿಯಾಗುವಿರಿ. ಮನೆಯನ್ನು ಬಿಟ್ಟು ಹೋಗಲು ಚೋರ ಭಯವು ಕಾಡಬಹುದು. ಸ್ನೇಹಿತರು ನಿಮ್ಮ ನಿರ್ಲಕ್ಷ್ಯದ ಕಾರಣದಿಂದ ದೂರಾಗಬಹುದು. ಎಂದೋ ಆಗಬೇಕಿದ್ದ ಕೆಲಸಗಳು ಇಂದು ಪೂರ್ಣವಾಗುವುದು‌. ಹಗುರವಾಗಿ ಯಾರ ಬಗ್ಗೆಯೂ ಮಾತನಾಡುವುದು ಬೇಡ. ನಿಮ್ಮ ವ್ಯಕ್ತಿತ್ವದ ಪೂರ್ಣಪರಿಚಯವು ಆಗುವುದು. ಆತ್ಮವಂಚನೆಯೇ ನಿಮ್ಮನ್ನು ಬಹಳ ಕಾಡುವುದು. ಇಂದೂ ಕೂಡ ಮನೆಯಿಂದ ಕಛೇರಿಯ ಕೆಲಸವನ್ನು ಮಾಡುವಿರಿ. ಎಲ್ಲವೂ ಇದ್ದರೂ ಅದನ್ನು ಬಳಸುವ ಕಲೆಯೂ ಗೊತ್ತಿರಬೇಕಾಗುವುದು.

ಕುಂಭ ರಾಶಿ; ಕೋಪದ‌ ಮೇಲೆ‌ ನಿಮಗೆ ನಿಯಂತ್ರಣ ಇಂದು ಸಿಗದು. ಪೋಷಕರ ಬೆಂಬಲವು ನಿಮಗಾದ ಆರ್ಥಿಕ ಆತಂಕವನ್ನು ಕಡಿಮೆ ಮಾಡಬಹುದು. ಮಾತಿನಲ್ಲಿ ಮಾಧುರ್ಯ ಇಲ್ಲದಿದ್ದರೆ ಸಂಬಂಧದಲ್ಲಿ ಕಹಿಯಾದೀತು. ವಿವಿಧ ಮೂಲಗಳಿಂದ ನಿಮಗೆ ಆದಾಯವು ಬರಲಿದ್ದು ಹೂಡಿಕೆಯ ಕಡೆ ನಿಮ್ಮ ಗಮನ ಇರುವುದು. ನಿಮ್ಮ ಆಲಸ್ಯವನ್ನು ಹಿತಶತ್ರುಗಳು ಅವಕಾಶವಾಗಿ ತೆಗೆದುಕೊಳ್ಳುವರು. ಯಾರನ್ನೂ ನೀವು ಒಮ್ಮೆಲೆ ನಂಬುವುದು ಕಷ್ಟವಾದರೂ ಇಂದು ನಂಬಿಕೆ ಅನಿವಾರ್ಯ ಆದೀತು. ನಿಮ್ಮ ಸ್ಥಿರಮತಿಯಿಂದ ಕಷ್ಟದ ಸಂದರ್ಭವನ್ನು ಹಿಡಿತಕ್ಕೆ ತರುವಿರಿ. ಸಂಗಾತಿಗೆ ಉಡುಗೊರೆಯನ್ನು ನೀಡಿ ಕೋಪವು ಕಡಿಮೆ ಮಾಡುವಿರಿ. ಇಷ್ಟಪಟ್ಟರ ಜೊತೆ ಸಮಯವನ್ನು ಕಳೆಯಲು ಆಗದು. ಅದಕ್ಕೆ ಅವರಿಗೆ ಬೇಸರವೂ ಆಗುವುದು. ನಿಮ್ಮ ಯೋಜನೆಯನ್ನು ಕಾರ್ಯರೂಪಕ್ಕೆ ತರಲು ಬಯಸುವಿರಿ. ಪ್ರಣಯದಲ್ಲಿ ಇಂದು ಅತಿಯಾದ ಆಸಕ್ತಿಯು ಇರುವುದು.

ಮೀನ ರಾಶಿ: ಇಂದು ಬದುಕಿನಲ್ಲಿ ಯಾರ ಪಾತ್ರ ಅತಿಮುಖ್ಯ ಎನ್ನುವುದು ತಿಳಿಯುವುದು. ವಿವಾಹದ ಬಗ್ಗೆ ಮನಸ್ಸಿನಲ್ಲಿ ನಾನಾ ಬಗೆಯ ಗೊಂದಲವು ಇರುವುದು. ನೀವು ಸದಾ ಸಂತೋಷದಿಂದ ಇರುವ ಕಾರಣ ಜನರು ನಿಮ್ಮೊಂದಿಗೆ ಸಂಬಂಧ ಹೊಂದಲು ಪ್ರಯತ್ನಿಸುತ್ತಾರೆ. ಸಾಮಾಜಿಕ ಗೌರವವನ್ನು ಪಡೆಯುವುದರಿಂದ ನಿಮ್ಮ ಸ್ಥೈರ್ಯ ಹೆಚ್ಚಾಗುತ್ತದೆ. ಮನಸ್ಸಿನಲ್ಲಿ ನಾನಾ ಬಗೆಯ ಗೊಂದಲವು ಇರುವುದು. ವಿದೇಶ ಪ್ರಯಾಣಕ್ಕೆ ಮಿತ್ರನ ಸಹಕಾರವನ್ನು ಅಪೇಕ್ಷಿಸುವಿರಿ. ಕೃಷಿಯ ಬಗ್ಗೆ ಸ್ವಲ್ಪ ಆಸಕ್ತಿಯು ಇರುವುದು. ಹಣಕ್ಕಾಗಿ ಯಾರನ್ನಾದರೂ ಕೇಳುವ ಸ್ಥಿತಿಯು ಬರಬಹುದು. ಆಪ್ತರ ಜೊತೆಗಿದ್ದು ವ್ಯವಹಾರದ ಚಾತುರ್ಯವನ್ನು ನೀವು ಇಂದು ಅರಿತುಕೊಳ್ಳುವಿರಿ. ನಿಮ್ಮ ವಸ್ತುವೇ ಆದರೂ ಅದರ ಮೇಲೆ ಅಧಿಕಾರ ಚಲಾಯಿಸಲಾಗದು. ಆಪ್ತರ ಮೇಲೆ‌ ಸಂಶಯವನ್ನು ಇಟ್ಟುಕೊಳ್ಳುವುದು ಬೇಡ.

ಲೋಹಿತ ಹೆಬ್ಬಾರ್ – 8762924271 (what’s app only)

ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್