Daily Horoscope: ಮನಸ್ಸು ದುರ್ಬಲವಾಗಲು ಬಿಡಬೇಡಿ, ತಾಳ್ಮೆ ಇರಲಿ
10 ಜನವರಿ 2025: ಶುಕ್ರವಾರದಂದು ಮೇಷ, ವೃಷಭ, ಮಿಥುನ, ಕರ್ಕಾಟಕ, ಸಿಂಹ, ಕನ್ಯಾ ರಾಶಿಯವರ ರಾಶಿ ಭವಿಷ್ಯ ಹೇಗಿದೆ? ಇಂದಿನ ಸಣ್ಣ ಕೆಲಸವನ್ನು ಮಾಡಲು ಅಧಿಕ ಸಮಯವನ್ನು ತೆಗೆದುಕೊಳ್ಳುವಿರಿ. ಹೊಸ ಮನೆಯನ್ನು ಕಟ್ಟುವ ಯೋಚನೆಯನ್ನು ಕಾರಣಾಂತರಗಳಿಂದ ನಿಲ್ಲಿಸುವಿರಿ. ಹಾಗಾದರೆ ಜನವರಿ 10ರ ದಿನ ಭವಿಷ್ಯ ಮತ್ತು ಪಂಚಾಂಗ ಇಲ್ಲಿದೆ ನೋಡಿ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ದಕ್ಷಿಣಾಯನ, ಹೇಮಂತ ಋತು, ಧನು ಮಾಸ, ಮಹಾನಕ್ಷತ್ರ: ಪೂರ್ವಾಷಾಢ, ಮಾಸ: ಪೌಷ, ಪಕ್ಷ: ಶುಕ್ಲ, ವಾರ: ಶುಕ್ರ, ತಿಥಿ: ಏಕಾದಶೀ, ನಿತ್ಯನಕ್ಷತ್ರ: ರೋಹಿಣೀ, ಯೋಗ: ಶುಕ್ಲ, ಕರಣ: ಭದ್ರ, ಸೂರ್ಯೋದಯ ಬೆಳಗ್ಗೆ 07 ಗಂಟೆ 01 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 19 ನಿಮಿಷಕ್ಕೆ, ರಾಹು ಕಾಲ ಬೆಳಿಗ್ಗೆ 11:16 ರಿಂದ 12:40ರ ವರೆಗೆ, ಯಮಘಂಡ ಕಾಲ ಮಧ್ಯಾಹ್ನ 03:30 ರಿಂದ 04:54 ರವರೆಗೆ, ಗುಳಿಕ ಬೆಳಿಗ್ಗೆ 08:26 ರಿಂದ 09:51 ರವರೆಗೆ.
ಮೇಷ ರಾಶಿ: ನಿಮ್ಮ ಹೇಳಿಕೆ ಸುಳ್ಳಾಗಬಹುದು ಎಂಬ ಭಯವಿರುವುದು. ಇಂದು ವ್ಯರ್ಥವಾಗಿ ಖರ್ಚು ಮಾಡುವುದನ್ನು ತಪ್ಪಿಸಬೇಕು. ನೀವು ದೈಹಿಕಪೀಡೆಯಿಂದ ಬಳಲುತ್ತಿದ್ದರೆ ದುಃಖವು ಹೆಚ್ಚಾಗಬಹುದು. ಸಾಮಾಜಿಕ ಚಟುವಟಿಕೆಗಳಲ್ಲಿ ಅಡಚಣೆ ಇರುವುದು. ಮಕ್ಕಳ ಕಡೆಯಿಂದ ಸಂತೋಷದ ಸುದ್ದಿ ಇರುತ್ತದೆ. ಸ್ತ್ರೀಯರು ತಾಳ್ಮೆಯನ್ನು ಕಳೆದುಕೊಳ್ಳುವ ಸಂಭವವಿದೆ. ನಿಮ್ಮ ಸಾಮರ್ಥ್ಯದ ಬಗ್ಗೆ ನಿಮಗೇ ಸರಿಯಾಗಿ ಗೊತ್ತಿಲ್ಲದೇ ಹೋಗಬಹುದು. ಮಕ್ಕಳ ಶುಭವಾರ್ತೆಯು ಸಂತಸಕೊಡಬಹುದು. ಬಂಗಾರದ ಮೇಲೆ ಹೂಡಿಕೆ ಮಾಡುವಿರಿ. ನಿಮ್ಮ ಮೇಲೆ ಯಾವುದಾದರೊಂದು ವಿಷಯ, ವ್ಯಕ್ತಿಗಳು ಪ್ರಭಾವ ಬೀರಬಹುದು. ಸಮಾಜವು ನಿಮ್ಮನ್ನು ಸ್ವಾರ್ಥಿಯಂತೆ ನೋಡಬಹುದು. ಹಿರಿಯರ ನಂಬಿಕೆಯನ್ನು ಗಳಿಸಲು ಕಷ್ಟವಾದೀತು. ಸಿಟ್ಟಾಗಿ ಮನೆಯಿಂದ ಹೊರ ನಡೆಯುವ ಪ್ರಸಂಗವು ಬರಬಹುದು. ಮನಸ್ಸಿಗೆ ಬಾರದ ಕಾರ್ಯವನ್ನು ಮಾಡಲು ಧೈರ್ಯ ಸಾಲದು.
ವೃಷಭ ರಾಶಿ; ಇಂದು ಕೇಳಿದರೂ ಸಹಾಯ ಮಾಡದೇ ಇರುವುದು ಸ್ನೇಹಿತರ ಬಗ್ಗೆ ಸಂದೇಹ ಬರುವುದು. ಪ್ರೇಮವು ನೀವಂದುಕೊಂಡಂತೆ ಮುಕ್ತಾಯವಾದುದ್ದು ನಿಮಗೆ ಖುಷಿಕೊಡುವುದು. ಅಂದುಕೊಂಡಂತೆ ಆಗಿದ್ದಕ್ಕೆ ಸಂತೋಷವು ಇರಲಿದೆ. ವಿದೇಶದಲ್ಲಿ ಉದ್ಯೋಗಕ್ಕಾಗಿ ಪ್ರಯತ್ನಿಸುವಿರಿ. ಗೌಪ್ಯವಾಗಿ ವ್ಯವಹಾರವನ್ನು ನಡೆಸುವಿರಿ. ಪ್ರೀತಿಯನ್ನು ತೋರ್ಪಡಿಸುವ ರೀತಿ ಬೇರೆ ರೀತಿಯದ್ದು. ನೀವು ಇತರರ ಒಳ್ಳೆಯದನ್ನು ಯೋಚಿಸುವಿರಿ ಹಾಗೂ ಒಳ್ಲೆಯ ಮನಸ್ಸಿನಿಂದ ಸೇವೆ ಮಾಡುತ್ತೀರಿ. ನಿಮ್ಮ ಮಕ್ಕಳ ಮನೋಭಾವವನ್ನು ಅವರಿಗೆ ಇಷ್ಟವಾದುದನ್ನು ಮಾಡುವಿರಿ. ಇಂದಿನ ವ್ಯಾಪಾರದಿಂದ ಆರ್ಥಿಕತೆಯು ಬಲವಾಗುವುದು. ಮಕ್ಕಳು ಆರ್ಥಿಕತೆಯ ದುರ್ಬಲತೆಯಿಂದ ವಿದ್ಯಾಭ್ಹ್ಯಾಸವನ್ನು ನಿಲ್ಲಿಸಬೇಕಾದೀತು. ಸ್ತ್ರೀಯರಿಂದ ಸಹಾಯ ಪಡೆದರೂ ನೋಡುಗರು ಅದನ್ನು ಅಪಾರ್ಥ ಮಾಡಿಕೊಳ್ಳಬಹುದು. ನಿಮ್ಮ ಹೇಳಿಕೆಗಳು ಮಹತ್ತ್ವದ್ದಾಗಿರದು.
ಮಿಥುನ ರಾಶಿ: ಮಹತ್ತ್ವಾಕಾಂಕ್ಷೆಗಳನ್ನು ಯಾರ ಬಳಿಯೂ ಹೇಳದೇ ಮುಂದುವರಿಯುವಿರಿ. ನಿಮ್ಮನ್ನು ರಕ್ಷಿಸಿಕೊಳ್ಳಲು ಬೇರೆ ತಂತ್ರಗಳನ್ನು ಮಾಡುವಿರಿ. ಸಂಗಾತಿಯ ಆರೋಗ್ಯದಲ್ಲಿ ವ್ಯತ್ಯಾಸವಾಗಿದ್ದು ಯೋಗ್ಯ ಚಿಕಿತ್ಸೆಯನ್ನು ಕೊಡುವಿರಿ. ನಿಮ್ಮ ಕಠಿಣ ಪರಿಶ್ರಮದಿಂದ ನೀವು ಉತ್ತಮ ಫಲಿತಾಂಶವನ್ನು ಪಡೆಯುವಿರಿ. ಇಂದು ತಾಯಿಯ ಕಡೆಯಿಂದ ಪ್ರೀತಿ ಮತ್ತು ವಿಶೇಷ ಬೆಂಬಲದ ಸಾಧ್ಯತೆಯಿದೆ. ಮೋಜಿಗಾಗಿ ಹಣವನ್ನು ಖರ್ಚು ಮಾಡುತ್ತೀರಿ. ಇದು ನಿಮ್ಮ ಶತ್ರುಗಳನ್ನು ಅಸಮಾಧಾನಗೊಳಿಸುತ್ತದೆ. ಇಂದು ಪೋಷಕರ ಬಗ್ಗೆ ವಿಶೇಷ ಕಾಳಜಿ ವಹಿಸಿ. ಅಪರಿಚಿತರ ಮಾತನ್ನು ನೀವು ನಂಬುವಿರಿ. ಪರೀಕ್ಷೆಯ ಸಿದ್ಧತೆಯಲ್ಲಿ ವಿದ್ಯಾರ್ಥಿಗಳಿಗೆ ಗೊಂದಲವಾಗಬಹುದು. ಬಂಧುಗಳ ವಿಯೋಗವೂ ಆಗಬಹುದು. ವಿವಾಹೇತರ ಸಂಬಂಧದಿಂದ ನಿಮಗೆ ಬೇಸರವಾಗುವುದು. ನಿಮ್ಮ ಮಾತಿನಿಂದ ಯಾವ ಲಾಭವೂ ಆಗದು ಎಂಬುದು ಇಂದು ತಿಳಿಯುವುದು. ಸ್ವಂತ ಉದ್ಯೋಗವನ್ನು ಮಾಡಬೇಕು ಎಂದು ಅನ್ನಿಸುವುದು.
ಕರ್ಕಾಟಕ ರಾಶಿ: ಇಂದು ಅನೇಕ ಕಾರಣಗಳಿಂದ ಬಹಳಷ್ಟು ಸಮಸ್ಯೆಗಳನ್ನು ಎದುರಿಸಬೇಕಾದೀತು. ಮನಸ್ಸು ದುರ್ಬಲವಾಗಲು ಬಿಡಬೇಡಿ. ವ್ಯವಹಾರದ ಬೆಳವಣಿಗೆಗೆ ಮಾಡಿದ ಪ್ರಯತ್ನಗಳು ಇಂದು ಫಲಪ್ರದವಾಗದು. ತಾಳ್ಮೆ ಮತ್ತು ಪ್ರತಿಭೆಯಿಂದ ಶತ್ರು ಗೆಲ್ಲುವಲ್ಲಿ ನೀವು ಯಶಸ್ಸನ್ನು ಗಳಿಸುವಿರಿ. ನಿಮ್ಮದಾದ ಚಿಂತನೆ, ಕಾರ್ಯದಿಂದ ಯಶಸ್ಸನ್ನು ಪಡೆಯಲು ನೀವು ಬಹಳ ಸಮಯ ಕಾಯಬೇಕಾಗಬಹುದು. ಸಣ್ಣ ವಿಷಯಕ್ಕೆ ಸ್ನೇಹಿತರ ಜೊತೆಗಿನ ಸಂಬಂಧವು ಹಾಳಾಗಬಹುದು. ನಿಮ್ಮಿಂದ ಕಾರ್ಯವನ್ನು ಮಾಡಿಸಿಕೊಂಡು ಕೈ ಬಿಡಬಹುದು. ಅಂದುಕೊಂಡಂತೆ ಆಗಿದ್ದಕ್ಕೆ ಸಂತೋಷವು ಇರಲಿದೆ. ವಿದೇಶದಲ್ಲಿ ಉದ್ಯೋಗಕ್ಕಾಗಿ ಪ್ರಯತ್ನಿಸುವಿರಿ. ಮುಸುಕಿನ ಗುದ್ದಾಟದಿಂದ ಮೈಕೈ ನೋವಾಗಬಹುದು ಅಷ್ಟೇ. ಚಂಚಲ ಸ್ವಭಾವವು ತಾನಾಗಿಯೇ ಕಡಿಮೆಯಾಗಿದ್ದು ಅಚ್ಚರಿ ಆಗಬಹುದು. ಕಳೆದುಹೋದುದನ್ನು ಮರಳಿ ಪಡೆಯುವುದು ಕಷ್ಟ. ವಾಹನದಿಂದ ಆರ್ಥಿಕ ಸ್ಥಿತಿಗೆ ಹೊಡೆತ.
ಸಿಂಹ ರಾಶಿ: ಮೋಹಕ್ಕೆ ವಶವಾಗಿ ಯಾರ ಮಾತಿನಿಂದಲೂ ತಿಳಿವಳಿಕೆ ಬಾರದು. ಕೃಷಿಯಲ್ಲಿ ನಿಮಗೆ ತಾಳ್ಮೆ ಅತ್ಯಂತ ಅವಶ್ಯಕ. ಇಂದಿನ ನಿಮ್ಮ ಕೆಲಸವು ನಿಮಗೇ ಇಷ್ಟವಾಗದು. ಕೆಲವು ವಿಷಯಕ್ಕೆ ಕುಟುಂಬದಿಂದ ವಿರೋಧವಿರುವುದು. ಸ್ನೇಹಿತರ ಜೊತೆ ಸುತ್ತಾಟ ಮತ್ತು ಉತ್ತಮ ಭೋಜನವನ್ನು ಮಾಡುವಿರಿ. ನಿಮ್ಮದು ನಿಮಗೇ ಸಿಕ್ಕರೂ ಸಂತೃಪ್ತಿ ಇರದು. ಹಠದ ಸ್ವಭಾವವನ್ನು ಕಡಿಮೆ ಮಾಡಿಕೊಳ್ಳುವುದು ಉತ್ತಮ. ಎಲ್ಲವನ್ನೂ ನಕಾರಾತ್ಮಕವಾಗಿಯೇ ನೋಡುವಿರಿ. ನಿಮ್ಮ ಭಾವನೆಗಳನ್ನು ಇನ್ನೊಬ್ಬರ ಬಳಿ ಹೇಳುಕೊಳ್ಳುವಿರಿ. ಭೂಮಿಯಿಂದ ಇಂದು ಸಂಪತ್ತು ಕಳೆದುಕೊಳ್ಳಬೇಕಾಗುವುದು. ಹಿರಿಯರ ಮಾತುಗಳು ಪೂರ್ಣವಾಗಿ ಇಷ್ಟವಾಗದು. ವಿದ್ಯಾರ್ಥಿಗಳು ಓದಿನ ಬಗ್ಗೆ ಹೆಚ್ಚು ಗಮನ ಹರಿಸುವುದು ಮುಖ್ಯವಾದೀತು. ಯಾವುದನ್ನೇ ಆದರೂ ಚಿಂತಿಸಿ ಮಾತನಾಡಿ. ಹೊಸ ಮನೆಯನ್ನು ಕಟ್ಟುವ ಯೋಚನೆಯನ್ನು ಕಾರಣಾಂತೆಗಳಿಂದ ನಿಲ್ಲಿಸುವಿರಿ. ಭೂಮಿಯ ಉತ್ಪನ್ನದಿಂದ ಲಾಭ.
ಕನ್ಯಾ ರಾಶಿ; ಇಂದಿನ ಸಣ್ಣ ಕೆಲಸವನ್ನು ಮಾಡಲು ಅಧಿಕ ಸಮಯವನ್ನು ತೆಗೆದುಕೊಳ್ಳುವಿರಿ. ಹೊಸ ಮನೆಯನ್ನು ಕಟ್ಟುವ ಯೋಚನೆಯನ್ನು ಕಾರಣಾಂತರಗಳಿಂದ ನಿಲ್ಲಿಸುವಿರಿ. ಇಂದು ನಿಮಗೆ ಏಕಾಂತವೇ ಹೆಚ್ಚು ಸುಖವನ್ನು ಕೊಡುವುದು. ನಿಮ್ಮಲ್ಲಿ ಇಂದು ದಾನ, ಧರ್ಮದ ಪ್ರಜ್ಞೆ ವರ್ಧಿಸಬಹುದು. ಧಾರ್ಮಿಕ ಆಚರಣೆಗಳಲ್ಲಿ ಶ್ರದ್ಧೆಯಿಂದ ಪಾಲ್ಗೊಳ್ಳುವಿರಿ. ಆರ್ಥಿಕ ಪರಿಸ್ಥಿತಿ ಬಲವಾಗಿರುತ್ತದೆ. ಹೊಟ್ಟೆಯ ಸ್ವಾಸ್ಥ್ಯವು ಕೆಡುವ ಸಾಧ್ಯತೆಯಿದೆ. ಜಾಗರೂಕರಾಗಿರಿ ಮತ್ತು ಆಹಾರದ ಮೇಲೆ ಸಂಯಮವಿರಿಸಿ. ಸಾಮಾಜಿಕ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಮನ್ನಣೆ ಸಿಗುವುದು. ಯಂತ್ರಗಳ ವಿಚಾರದಲ್ಲಿ ನಿಮಗೆ ಹೆಚ್ಚಿನ ಆಸಕ್ತಿಯು ಇರಲಿದ್ದು ವಿದ್ಯಾಭ್ಯಾಸಕ್ಕೆ ಆ ಕ್ಷೇತ್ರವನ್ನು ಆಯ್ಕೆ ಮಾಡಿಕೊಳ್ಳುವಿರಿ. ಮಕ್ಕಳ ವಿವಾಹದಿಂದ ಚಿಂತೆ ದೂರವಾಗುವುದು. ಹಿರಿಯರ ನಂಬಿಕೆಯನ್ನು ಗಳಿಸಲು ಕಷ್ಟವಾದೀತು. ಮನೆಯಿಂದ ಹೊರ ನಡೆಯುವ ಪ್ರಸಂಗವು ಬರಬಹುದು.