ಹಣವನ್ನೇ ಖರ್ಚು ಮಾಡದ ಕುಮಾರಸ್ವಾಮಿ ಚನ್ನಪಟ್ಟಣದಲ್ಲಿ ಮಗನನ್ನು ಗೆಲ್ಲಿಸಲು ₹100 ಕೋಟಿ ಖರ್ಚು ಮಾಡಿದ್ದಾರೆ: ಸೋಮಶೇಖರ್

ಹಣವನ್ನೇ ಖರ್ಚು ಮಾಡದ ಕುಮಾರಸ್ವಾಮಿ ಚನ್ನಪಟ್ಟಣದಲ್ಲಿ ಮಗನನ್ನು ಗೆಲ್ಲಿಸಲು ₹100 ಕೋಟಿ ಖರ್ಚು ಮಾಡಿದ್ದಾರೆ: ಸೋಮಶೇಖರ್

ಅರುಣ್​ ಕುಮಾರ್​ ಬೆಳ್ಳಿ
|

Updated on:Jan 10, 2025 | 1:35 PM

ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಹುದ್ದೆಯ ಘನತೆ ಇಟ್ಟುಕೊಳ್ಳುವ ಬದಲು ವಾರಕ್ಕೊಮ್ಮೆ ಪ್ರೆಸ್ ಮೀಟ್ ನಡೆಸಿ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್​​ರನ್ನು ತೆಗಳುವುದು ಮಾಡುತ್ತಿದ್ದಾರೆ, ಅವರು ಗಾಳಿಯಲ್ಲಿ ಗುಂಡು ಹಾರಿಸುವುದನ್ನು ಬಿಟ್ಟು ಕೇಂದ್ರದಿಂದ ಯೋಜನೆಗಳನ್ನು ರಾಜ್ಯಕ್ಕೆ ತಂದು ಇಲ್ಲಿನ ಯುವಕರಿಗೆ ಉದ್ಯೋಗ ಅವಕಾಶಗಳನ್ನು ಕಲ್ಪಿಸಲಿ ಎಂದು ಸೋಮಶೇಖರ್ ಹೇಳಿದರು.

ಬೆಂಗಳೂರು: ಬಿಜೆಪಿ ಶಾಸಕ ಎಸ್ ಟಿ ಸೋಮಶೇಖರ್ ಇವತ್ತು ನಗರದಲ್ಲಿ ನಮ್ಮ ಪ್ರತಿನಿಧಿಯೊಂದಿಗೆ  ಮಾತಾಡುವಾಗ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ವಿರುದ್ಧ ಕಿಡಿಕಾರಿದರು. ಕಾಂಗ್ರೆಸ್ ಸರ್ಕಾರದ ವಿರುದ್ಧ 60 ಪರ್ಸೆಂಟ್ ಕಮೀಶನ್ ಅರೋಪ ಮಾಡುವ ಕುಮಾರಸ್ವಾಮಿ ಚನ್ನಪಟ್ಟಣದಲ್ಲಿ ತಮ್ಮ ಮಗನನ್ನು ಗೆಲ್ಲಿಸಲು ₹ 100 ಕೋಟಿಗೂ ಹೆಚ್ಚು ಖರ್ಚುಮಾಡಿದ್ದಾರೆ ಅಂತ ಅಲ್ಲಿನ ಜನಗಳೇ ಹೇಳುತ್ತಿದ್ದಾರೆ, ತಾನು ಕೂಡ ಚನ್ನಪಟ್ಟಣದವನು, ಮೊದಲೆಲ್ಲ ಚುನಾವಣೆ ಸಮಯಲ್ಲಿ ಹತ್ತು ರೂಪಾಯಿಯನ್ನೂ ಖರ್ಚು ಮಾಡದ ಕುಮಾರಸ್ವಾಮಿಗೆ ಚನ್ನಪಟ್ಟಣದಲ್ಲಿ ಅಷ್ಟು ಜಣ ಖರ್ಚು ಮಾಡಲು ಎಷ್ಟು ಪರ್ಸೆಂಟ್ ಕಮೀಶನ್ ತೆಗೆದುಕೊಳ್ಳಬೇಕಾಯಿತು? ಅವರೇನು ಆಲೂಗಡ್ಡೆ ಮಾರಿ ಅಷ್ಟು ಹಣ ಸಂಪಾದಿಸಿದರಾ? ಎಂದು ಸೋಮಶೇಖರ್ ಪ್ರಶ್ನಿಸಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಸಂವಿಧಾನ ಮತ್ತು ರಾಷ್ಟ್ರೀಯ ಐಕ್ಯತಾ ಸಮಾವೇಶದಲ್ಲಿ ಎಸ್ ಟಿ ಸೋಮಶೇಖರ್ ಭುಜದಡವಿ ಆತ್ಮೀಯತೆ ಪ್ರದರ್ಶಿಸಿದ ಸಿದ್ದರಾಮಯ್ಯ

Published on: Jan 09, 2025 05:24 PM