ಬಿಜೆಪಿಯಲ್ಲಿನ ಒಳಜಗಳಗಳಿಂದ ಬೇಸತ್ತ ಮುಖಂಡರು ಬೇರೆಪಕ್ಷ ನೋಡಿಕೊಂಡರೆ ಆಶ್ಚರ್ಯವಿಲ್ಲ: ಸೋಮಶೇಖರ್

ಬಿಜೆಪಿಯಲ್ಲಿನ ಒಳಜಗಳಗಳಿಂದ ಬೇಸತ್ತ ಮುಖಂಡರು ಬೇರೆಪಕ್ಷ ನೋಡಿಕೊಂಡರೆ ಆಶ್ಚರ್ಯವಿಲ್ಲ: ಸೋಮಶೇಖರ್

ಅರುಣ್​ ಕುಮಾರ್​ ಬೆಳ್ಳಿ
|

Updated on: Jan 09, 2025 | 4:38 PM

ದ್ವಾರಕಾನಾಥ್ ಗುರೂಜಿಯವರು 30 ವರ್ಷಗಳ ಹಿಂದೆಯೇ ಡಿಕೆ ಶಿವಕುಮಾರ್ ಜೈಲಿಗೆ ಹೋಗ್ತಾರೆ, ಜೈಲಿಂದ ವಾಪಸ್ಸು ಬಂದ ಬಳಿಕ ಮುಖ್ಯಮಂತ್ರಿಯಾಗುತ್ತಾರೆ ಅಂತ ಭವಿಷ್ಯ ನುಡಿದಿದ್ದರು, ಅವರ ಮಾತನ್ನು ಯಾರೂ ನಂಬಿರಲಿಲ್ಲ, ಶಿವಕುಮಾರ್ ಹಣೇಲಿ ಸಿಎಂ ಆಗುವ ಯೋಗ ಬರೆದಿದ್ದರೆ ಯಾರೂ ಅದನ್ನು ತಪ್ಪಿಸಲಾಗಲ್ಲ ಎಂದು ಶಾಸಕ ಸೋಮಶೇಖರ್ ಹೇಳಿದರು.

ಬೆಂಗಳೂರು: ಬಿಜೆಪಿ ಶಾಸಕ ಎಸ್ ಟಿ ಸೋಮಶೇಖರ್ ಒಂದು ವರ್ಷಕ್ಕೂ ಹೆಚ್ಚು ಸಮಯದಿಂದ ಕಾಂಗ್ರೆಸ್ ಪಕ್ಷಕ್ಕೆ ವಾಪಸ್ಸು ಹೋಗುವ ಬಗ್ಗೆ ಮಾತಾಡುತ್ತಿದ್ದಾರೆ. ಇವತ್ತು ನಗರದಲ್ಲಿ ನಮ್ಮ ಪ್ರತಿನಿಧಿಯೊಂದಿಗೆ ಮಾತಾಡಿದ ಅವರು ಬಿಜೆಪಿಯಲ್ಲಿ ನಡೆಯುತ್ತಿರುವ ಒಳಜಗಳ ಕುರಿತು ಅಸಮಾಧಾನ ವ್ಯಕ್ತಪಡಿಸಿದರು. ಎಲ್ಲ ಸರಿಹೊಗುತ್ತದೆ ಎಂಬ ನಿರೀಕ್ಷೆಯಲ್ಲಿ ಕೆಲ ಬಿಜೆಪಿ ನಾಯಕಯ ದಿನದೂಡುತ್ತಿದ್ದಾರೆ, ಆದರೆ ಸರಿಹೋಗದೆ ಇದ್ದ ಪಕ್ಷದದಲ್ಲಿ ಅವರು ತಮ್ಮ ದಾರಿ ತಾವು ನೋಡಿಕೊಂಡು ಕಾಂಗ್ರೆಸ್ ಇಲ್ಲವೇ ಮತ್ಯಾವುದೋ ಪಕ್ಷಕ್ಕೆ ಸೇರುತ್ತಾರೆ, ಬಿಜೆಪಿಯಲ್ಲಿ ಏನಾಗುತ್ತದೆ, ಕಾಂಗ್ರೆಸ್ ನಲ್ಲಿ ಏನಾಗುತ್ತದೆ ಅನ್ನೋದು ತನಗೆ ಮುಖ್ಯವಲ್ಲ, ಕ್ಷೇತ್ರಕ್ಕೆ ಅನುದಾನ ಬಿಡುಗಡೆಯಾಗಬೇಕು ಮತ್ತು ಅಲ್ಲಿನ ಸಮಸ್ಯೆಗಳು ನಿವಾರಣೆಯಾಗಬೇಕು, ಅದು ಮಾತ್ರ ತನ್ನ ಗುರಿ ಎಂದು ಸೋಮಶೇಖರ್ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: ಪಕ್ಷ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿರುವ ಸೋಮಶೇಖರ್ ಮತ್ತು ಶಿವರಾಂ ಹೆಬ್ಬಾರ್ ವಿರುದ್ಧ ಕ್ರಮ: ವಿಜಯೇಂದ್ರ