ರವಿ ಮೇಲೆ ಹಲ್ಲೆ ನಡೆದಾಗ ಬೆಳಗಾವಿ ಪೊಲೀಸ್ ಕಮೀಶನರ್ ಯಾರೊಂದಿಗೆ ಫೋನಲ್ಲಿ ಮಾತಾಡುತ್ತಿದ್ದರೆನ್ನುವುದು ಗೊತ್ತಾಗಬೇಕು: ಯತ್ನಾಳ್

ರವಿ ಮೇಲೆ ಹಲ್ಲೆ ನಡೆದಾಗ ಬೆಳಗಾವಿ ಪೊಲೀಸ್ ಕಮೀಶನರ್ ಯಾರೊಂದಿಗೆ ಫೋನಲ್ಲಿ ಮಾತಾಡುತ್ತಿದ್ದರೆನ್ನುವುದು ಗೊತ್ತಾಗಬೇಕು: ಯತ್ನಾಳ್

ಅರುಣ್​ ಕುಮಾರ್​ ಬೆಳ್ಳಿ
|

Updated on: Jan 09, 2025 | 3:06 PM

ರಾಜ್ಯ ಕಾಂಗ್ರೆಸ್ ನಾಯಕರಿಗೆ ಕೆಪಿಸಿಸಿ ಅಧ್ಯಕ್ಷನ ಬಗ್ಗೆ ಕೊಂಚವೂ ಭಯವಿಲ್ಲ, ಅವರು ಮುಖ್ಯಮಂತ್ರಿಯಾಗೋದು ಬಹಳಷ್ಟು ಮುಖಂಡರಿಗೆ ಬೇಕಿಲ್ಲ, ಹಾಗಾಗೇ ಅವರು ವಿದೇಶ ಪ್ರವಾಸದಲ್ಲಿದ್ದಾಗ ಡಿನ್ನರ್ ಮೀಟಿಂಗ್​​ಗಳನ್ನು ನಡೆಸಿದ್ದಾರೆ, ರಾಜಣ್ಣ ಮಾತಾಡಿದ್ದು ಸರಿಯಿದೆ, ದಲಿತ ಸಮುದಾಯಕ್ಕೆ ಸಭೆ ನಡೆಸುವ ಮತ್ತು ಊಟ ಮಾಡುವ ಅವಕಾಶವಿಲ್ಲವೇ? ಕಷ್ಟಸುಖಗಳನ್ನು ಹಂಚಿಕೊಳ್ಳಲು ಅವರು ಸೇರಬಾರದೇ ಎಂದು ಯತ್ನಾಳ್ ಕೇಳಿದರು.

ಬೆಂಗಳೂರು: ನಗರದಲ್ಲಿಂದು ನಮ್ಮ ಪ್ರತಿನಿಧಿಯೊಂದಿಗೆ ಮಾತಾಡಿದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಬೆಳಗಾವಿಯ ಪೊಲೀಸ್ ಕಮೀಶನರ್, ಸಿಟಿ ರವಿ ಪ್ರಕರಣದಲ್ಲಿ ಬಹಳ ಕೆಟ್ಟದ್ದಾಗಿ ನಡೆದುಕೊಂಡಿದ್ದಾರೆ, ಅವರು ಬೆಳಗಾವಿಗೆ ಮಾತ್ರ ಕಮೀಶನರ್, ಆದರೆ ತಮ್ಮ ವ್ಯಾಪ್ತಿಗೆ ಒಳಪಡದ ಖಾನಾಪುರದಲ್ಲಿ ಯಾರೊಂದಿಗೋ ನಿರಂತರವಾಗಿ ಫೋನಲ್ಲಿ ಮಾತಾಡಿದ ವಿಡಿಯೋಗಳನ್ನು ಜನ ನೋಡಿದ್ದಾರೆ. ಅವರು ಡಿಕೆ ಶಿವಕುಮಾರ್ ಜೊತೆ ಮಾತಾಡುತ್ತಿದ್ದರೋ ಅಥವಾ ಲಕ್ಷ್ಮಿ ಹೆಬ್ಬಾಳ್ಕರ್ ಜೊತೆಯೋ ಅನ್ನೋದನ್ನು ಕಾಲ್ ರೆಕಾರ್ಡ್ಸ್​ ಮೂಲಕ ಪತ್ತೆ ಮಾಡಬೇಕು ಎಂದು ಆಗ್ರಹಿಸಿದರು. ರವಿ ಮೇಲೆ ಹಲ್ಲೆ ನಡೆಸಲು ವ್ಯವಸ್ಥಿತ ಸಂಚು ನಡೆದಿತ್ತು ಎಂದು ಹೇಳಿದ ಅವರು, ಪಂಚಮಸಾಲಿ ಮೀಸಲಾತಿಗಾಗಿ ಪ್ರತಿಭಟನೆ ನಡೆಸುತ್ತಿದ್ದವರ ಮೇಲೂ ಬೆಳಗಾವಿ ಪೊಲೀಸ್ ಅಧಿಕಾರಿಗಳು ಲಾಠಿಚಾರ್ಜ್ ನಡೆಸಿದ್ದಾರೆ, ಇವರೆಲ್ಲ ಐಪಿಎಸ್ ಅಧಿಕಾರಿಗಳೆನಿಸಿಕೊಳ್ಳಲು ಅನರ್ಹರು ಎಂದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಕರ್ನಾಟಕ ಬಿಜೆಪಿಯಲ್ಲಿ ಬದಲಾವಣೆ ಬಿರುಗಾಳಿ: ಯತ್ನಾಳ್ ಸ್ಫೋಟಕ ಹೇಳಿಕೆ