ಹೀಗೂ ಆಗೋದುಂಟು! ಭ್ರಷ್ಟ ಅಧಿಕಾರಿಗಳ ರಕ್ಷಣೆಗೆ ನಿಂತ ಹಾಸನ ನಗರಸಭಾ ಸದಸ್ಯರು
ಎಈಈ ಅಮಾಯಕರೋ ಅಥವಾ ದೋಷಿಯೋ ಅನ್ನೋದನ್ನು ಕೋರ್ಟ್ ತೀರ್ಮಾನಿಸುತ್ತದೆ, ಬಾಲು ತಮ್ಮ ಕೆಲಸ ಮಾಡುತ್ತಿದ್ದಾರೆ, ಕರ್ತವ್ಯನಿರತ ಸರ್ಕಾರೀ ನೌಕರನೊಬ್ಬನ ಕೆಲಸಕ್ಕೆ ಅಡ್ಡಿಪಡಿಸುವುದು ಸಹ ಅಪರಾಧವೇ, ಪ್ರಾಯಶಃ ಹಾಸನ ನಗರಸಭಾ ಸದಸ್ಯರಿಗೆ ಇದು ಗೊತ್ತಿರದ ವಿಷಯ ಅಂತ ಕಾಣುತ್ತದೆ. ಲಂಚ ಸ್ವೀಕರಿಸುವಾಗ ಸಿಕ್ಕಿಬಿದ್ದವರ ರಕ್ಷಣೆ ಜನ ನಿಂತಿದ್ದು ಮಾತ್ರ ಹೊಸ ವಿಷಯವೇ.
ಹಾಸನ: ಇಂಥ ಪ್ರಕರಣಗಳು ಅಪರೂಪ ಮಾರಾಯ್ರೇ. ವಿಷಯವೇನು ಗೊತ್ತಾ? ಹಾಸನ ನಗರಸಭೆಯ ಆಯುಕ್ತ ನರಸಿಂಹಮೂರ್ತಿ ಮತ್ತು ಇಲ್ಲಿನ ಎಈಈ ಕೆಆರ್ ವೆಂಕಟೇಶ್ ಎನ್ನುವವರು ₹ 50,000 ಲಂಚ ಸ್ವೀಕರಿಸುವಾಗ ರೆಡ್ ಹ್ಯಾಂಡಾಗಿ ಲೋಕಾಯುಕ್ತ ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ. ಇಲ್ಲಿಯವರೆಗೆ ಸ್ಟೋರಿ ಓಕೆ, ಭ್ರಷ್ಟ ಸರ್ಕಾರೀ ಅಧಿಕಾರಿಗಳು ಸಿಕ್ಕಿ ಬೀಳೋದು ಹೊಸದೇನಲ್ಲ. ಆದರೆ ಕೌನ್ಸಿಲರ್ಗಳು ಇಂಜಿನೀಯರ್ ಪರ ವಕಾಲತ್ತು ಮಾಡುತ್ತಿದ್ದಾರೆ, ಅವರು ಭ್ರಷ್ಟರಲ್ಲ, ಆಯಕ್ತ ಹೇಳಿದ್ದಕ್ಕೆ ಲಂಚ ತೆಗೆದುಕೊಂಡಿದ್ದಾರೆ, ಅವರನ್ನು ಬಿಟ್ಟು ಬಿಡಿ ಅಂತೆಲ್ಲ ಹೇಳುತ್ತಿದ್ದಾರೆ. ಲೋಕಾಯುಕ್ತ ಪಿಐ ಬಾಲು ಎನ್ನುವವರು ಕೌನ್ಸಿಲರ್ಗಳೊಂದಿಗೆ ತಾಳ್ಮೆಯಿಂದ ವರ್ತಿಸಿ, ನಮ್ಮ ಕೆಲಸ ಮಾಡಲು ಬಿಡಿ ಅಡ್ಡಿಪಡಿಸಬೇಡಿ ಅಂದಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಲಂಚದ ಹಣ ನುಂಗಿದ ಅಧಿಕಾರಿ: ವಾಂತಿ ಮಾಡಿಸಿ ಕಕ್ಕಿಸಿದ ಲೋಕಾಯುಕ್ತ ಪೊಲೀಸ್
Latest Videos