ಜೊತೆಗೆ ಇದ್ದವರಿಂದಲೇ ಧನರಾಜ್ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಧನರಾಜ್ ಅವರು ಫಿನಾಲೆ ಟಿಕೆಟ್ ಪಡೆಯಬೇಕು ಎಂದು ಕಷ್ಟಪಟ್ಟು ಆಟ ಆಡಿದ್ದರು. ಗೌತಮಿ ಜಾದವ್ ಮತ್ತು ಉಗ್ರಂ ಮಂಜು ಜೊತೆ ಅವರು ಕೈ ಜೋಡಿಸಿದ್ದರು. ಆದರೆ ಕೊನೇ ಹಂತದಲ್ಲಿ ಗೌತಮಿ ಮತ್ತು ಮಂಜು ಸೇರಿ ಧನರಾಜ್ಗೆ ಫಿನಾಲೆ ಟಿಕೆಟ್ ಸಿಗದಂತೆ ಮಾಡಿದ್ದಾರೆ. ಈ ಸ್ಥಿತಿ ಬಂದಿದ್ದಕ್ಕೆ ಇನ್ನುಳಿದ ಸದಸ್ಯರು ಲೇವಡಿ ಮಾಡಿದ್ದಾರೆ.
ಬಿಗ್ ಬಾಸ್ ಮನೆಯಲ್ಲಿ ಈ ವಾರ ಉಗ್ರಂ ಮಂಜು, ಗೌತಮಿ ಜಾದವ್ ಹಾಗೂ ಧನರಾಜ್ ಅವರು ಒಂದು ತಂಡವಾಗಿ ಆಟವಾಡಿದ್ದರು. ಆದರೆ ಮಂಜು ಮತ್ತು ಗೌತಮಿ ಅವರಿಂದಾಗಿ ಧನರಾಜ್ಗೆ ಫಿನಾಲೆ ಟಿಕೆಟ್ ಕೈತಪ್ಪಿ ಹೋಗಿದೆ. ಚೈತ್ರಾ ಕುಂದಾಪುರ, ರಜತ್ ಮುಂತಾದವರು ಈ ವಿಷಯದ ಬಗ್ಗೆ ಚರ್ಚೆ ಮಾಡಿದ್ದಾರೆ. ಜನವರಿ 9ರ ಸಂಚಿಕೆಯಲ್ಲಿ ಇದು ಪ್ರಸಾರ ಆಗಲಿದೆ. ಈ ಎಪಿಸೋಡ್ನ ಪ್ರೋಮೋವನ್ನು ‘ಕಲರ್ಸ್ ಕನ್ನಡ’ ವಾಹಿನಿ ಹಂಚಿಕೊಂಡಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Latest Videos