ಗೌತಮಿ ಸೋಲಿಗೆ ಸಂಚು ರೂಪಿಸಿದ ಚೈತ್ರಾ, ಭವ್ಯಾ; ಬಿಗ್ ಬಾಸ್ ಮನೆ ರಣರಂಗ
‘ಟಿಕೆಟ್ ಟು ಫಿನಾಲೆ’ ಟಾಸ್ಕ್ನಲ್ಲಿ ಎಲ್ಲರೂ ಅಗ್ರೆಸಿವ್ ಆಗಿ ಆಡುತ್ತಿದ್ದಾರೆ. ಬಿಗ್ ಬಾಸ್ ರಿಯಾಲಿಟಿ ಶೋನ ಫಿನಾಲೆಗೆ ಹೋಗಬೇಕು ಎಂಬ ಆಸೆಯಿಂದ ಎಲ್ಲರೂ ಕಷ್ಟಪಟ್ಟು ಆಟ ಆಡುತ್ತಿದ್ದಾರೆ. ಯಾರು ‘ಟಿಕೆಟ್ ಟು ಫಿನಾಲೆ’ ಟಾಸ್ಕ್ನಿಂದ ಹೊರಗೆ ಉಳಿಯಬೇಕು ಎಂಬುದನ್ನು ನಿರ್ಧರಿಸಲು ಒಂದು ಟಾಸ್ಕ್ ನೀಡಲಾಗಿತ್ತು. ಅದರಲ್ಲಿ ಚೈತ್ರಾ, ಭವ್ಯಾ ಸಂಚು ಮಾಡಿದರು.
ಬಿಗ್ ಬಾಸ್ ಮನೆಯಲ್ಲಿ 99ನೇ ದಿನದಲ್ಲಿ ಬಾಲ್ಗಳನ್ನು ಸಂಗ್ರಹಿಸುವ ಟಾಸ್ಕ್ ನೀಡಲಾಗಿದೆ. ಈ ಟಾಸ್ಕ್ ತುಂಬ ಟ್ರಿಕ್ಕಿ ಆಗಿದೆ ಕೂಡ. ತಮ್ಮ ಚೆಂಡುಗಳನ್ನು ಕಾಪಾಡಿಕೊಳ್ಳಬೇಕು. ಎದುರಾಳಿಗಳ ಚೆಂಡುಗಳನ್ನು ಕಸಿದುಕೊಳ್ಳಬೇಕು. ಎರಡೂ ಕೆಲಸವನ್ನು ಒಟ್ಟಿಗೆ ಮಾಡುವುದು ಕಷ್ಟ. ಗೌತಮಿ ಜಾದವ್ ಅವರು ಸಾಧ್ಯವಾದಷ್ಟು ಬಾಲ್ಗಳನ್ನು ಸಂಗ್ರಹಿಸುತ್ತಾ ಬಂದರು. ಆದರೆ ಆ ಚೆಂಡುಗಳನ್ನು ಉಳಿಸಿಕೊಳ್ಳುವುದು ಅಷ್ಟು ಸುಲಭ ಆಗಿರಲಿಲ್ಲ.
ಮೊದಲಿಗೆ ಹನುಮಂತ ಅವರನ್ನು ಚೈತ್ರಾ ಕುಂದಾಪುರ ಹಾಗೂ ಭವ್ಯಾ ಗೌಡ ಅವರು ಟಾರ್ಗೆಟ್ ಮಾಡಿದರು. ಬಳಿಕ ಗೌತಮಿ ಅವರನ್ನು ಟಾರ್ಗೆಟ್ ಮಾಡಲಾಯಿತು. ‘ಯಾವ ಸಮಯದಲ್ಲಿ ಯಾವ ರೀತಿ ಆಟ ಆಡಬೇಕು ಎಂಬುದು ನಮಗೆ ಚೆನ್ನಾಗಿ ಗೊತ್ತು’ ಎಂದು ಚೈತ್ರಾ ಅವರು ಹೇಳಿದ್ದರು. ಅದರಂತೆಯೇ ಅವರು ನಡೆದುಕೊಂಡರು.
ಬಿಗ್ ಬಾಸ್ ವೇದಿಕೆಯಲ್ಲಿ ಸುದೀಪ್ ಕಡೆಯಿಂದ ಚೈತ್ರಾಗೆ ಸಿಕ್ತು ಎಂದೂ ಮರೆಯಲಾಗದ ಗಿಫ್ಟ್
ಸಾಕಷ್ಟು ಚೆಂಡುಗಳನ್ನು ಸಂಗ್ರಹಿಸಿದ್ದ ಅವರು ಒಂದಷ್ಟು ತಂತ್ರಗಳನ್ನು ಬಳಸಲು ಪ್ರಯತ್ನಿಸಿದರು. ಬಟ್ಟೆಯಿಂದ ಬಾಸ್ಕೆಟ್ ಮುಚ್ಚಿಕೊಳ್ಳುವಂತಿಲ್ಲ ಎಂದು ಕ್ಯಾಪ್ಟನ್ ರಜತ್ ಹೇಳಿದರು. ಹಾಗಾಗಿ ಚೆಂಡುಗಳನ್ನು ಕಾಪಾಡಿಕೊಳ್ಳುವುದು ಇನ್ನಷ್ಟು ಕಷ್ಟ ಆಯಿತು. ಆ ಸಂದರ್ಭವನ್ನು ಬಳಸಿಕೊಂಡು ಭವ್ಯಾ ಗೌಡ ಮತ್ತು ಚೈತ್ರಾ ಅವರು ಮುಗಿಬಿದ್ದರು. ಎರಡನೇ ಸುತ್ತಿನಲ್ಲೂ ಇದೇ ರೀತಿ ಆಯಿತು. ಇದರಿಂದ ಗೌತಮಿ ಅವರಿಗೆ ಸಖತ್ ಕೋಪ ಬಂತು.
ಚೈತ್ರಾ ಕುಂದಾಪುರ ವಿಚಾರದಲ್ಲಿ ಉಲ್ಟಾ ಹೊಡೆತ ರಜತ್; ಸುದೀಪ್ಗೂ ಇದು ಶಾಕ್
ಬಿಗ್ ಬಾಸ್ ಆಟದಲ್ಲಿ ರೋಚಕತೆ ಜಾಸ್ತಿ ಆಗುತ್ತಲೇ ಇದೆ. ಯಾಕೆಂದರೆ ಫಿನಾಲೆ ಸಮೀಪಿಸುತ್ತಿದೆ. ಉಳಿದುಕೊಂಡಿರುವ ಕೆಲವೇ ಸ್ಪರ್ಧಿಗಳ ನಡುವೆ ಪೈಪೋಟಿಯ ಕಾವು ಹೆಚ್ಚಾಗಿದೆ. ಉಗ್ರಂ ಮಂಜು, ಗೌತಮಿ ಜಾದವ್, ತ್ರಿವಿಕ್ರಮ್, ಭವ್ಯಾ ಗೌಡ ಅವರು ಸ್ನೇಹದ ಮುಖವಾಡ ಬದಿಗಿಟ್ಟು ಆಟ ಆಡಲೇಬೇಕಾದ ದಿನಗಳು ಈಗ ಬಂದಿವೆ. ಕೊನೆಯಲ್ಲಿ ರಜತ್ ಅವರು ಕ್ಯಾಪ್ಟನ್ ಆಗಿ ಗಮನ ಸೆಳೆಯುತ್ತಿದ್ದಾರೆ. ಯಾರಿಗೆ ಕಪ್ ಸಿಗುತ್ತದೆ ಎಂಬುದನ್ನು ತಿಳಿಯಲು ಕೆಲವು ದಿನಗಳು ಮಾತ್ರ ಬಾಕಿ ಇವೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.