ಚೈತ್ರಾ ಕುಂದಾಪುರ ವಿಚಾರದಲ್ಲಿ ಉಲ್ಟಾ ಹೊಡೆತ ರಜತ್; ಸುದೀಪ್ಗೂ ಇದು ಶಾಕ್
‘ಚೈತ್ರಾ ಕುಂದಾಪುರ ಬಿಗ್ ಬಾಸ್ ಮನೆಗೆ ಅಗತ್ಯ ಇಲ್ಲದ ವ್ಯಕ್ತಿ. ಹೌದು ಅಥವಾ ಅಲ್ಲ’ ಎಂದು ಸುದೀಪ್ ಅವರು ಪ್ರಶ್ನೆ ಹೇಳಿದರು. ಅಚ್ಚರಿಯ ರೀತಿಯಲ್ಲಿ ರಜತ್ ಅವರು ‘ಅಲ್ಲ’ ಎಂದು ಉತ್ತರ ನೀಡಿದರು. ಇದು ನಿಜವಾಗಿಯೂ ಎಲ್ಲರಿಗೂ ಅಚ್ಚರಿ ಎನಿಸಿತು. ಸುದೀಪ್ ಕೂಡ ಅಚ್ಚರಿಪಟ್ಟರು. ತಮ್ಮ ಮಾತಿಗೆ ಕಾರಣ ಏನು ಎಂಬುದನ್ನು ಕೂಡ ರಜತ್ ಅವರು ವಿವರಿಸಿದ್ದಾರೆ.
ಚೈತ್ರಾ ಕುಂದಾಪುರ ಅವರಿಗೆ ಬಿಗ್ ಬಾಸ್ ಆಟ ಎಲ್ಲರಿಗಿಂತ ಚೆನ್ನಾಗಿ ಅರ್ಥ ಆಗಿದೆ ಎಂದು ರಜತ್ ಅಭಿಪ್ರಾಯಪಟ್ಟಿದ್ದಾರೆ. ಭಾನುವಾರದ (ಜನವರಿ 5) ಎಪಿಸೋಡ್ನಲ್ಲಿ ಕಿಚ್ಚ ಸುದೀಪ್ ಅವರು ನಡೆಸಿದ ‘ಯೆಸ್ ಅಥವಾ ನೋ’ ರೌಂಡ್ನಲ್ಲಿ ಚೈತ್ರಾ ಬಗ್ಗೆ ಚರ್ಚೆ ಆಗಿದೆ. ಚೈತ್ರಾ ಬಗ್ಗೆ ರಜತ್ ಅವರು ಹೇಳಿದ್ದನ್ನು ಕೇಳಿ ಸುದೀಪ್ ಅವರಿಗೂ ಆಶ್ಚರ್ಯ ಆಯಿತು. ಮೊದಲಿನಿಂದಲೂ ರಜತ್ ಮತ್ತು ಚೈತ್ರಾ ಹಾವು-ಮುಂಗುಸಿ ರೀತಿ ಆಡುತ್ತಿದ್ದಾರೆ. ಆದರೆ ಹೆಚ್ಚು ತಮಾಷೆ ಮಾಡಿಕೊಳ್ಳುವುದು ಕೂಡ ಅವರೇ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Latest Videos