Daily Devotional: ಪಚ್ಚ ಕರ್ಪೂರದ ಮಹತ್ವ ಮತ್ತು ಉಪಯೋಗ ತಿಳಿಯಿರಿ

Daily Devotional: ಪಚ್ಚ ಕರ್ಪೂರದ ಮಹತ್ವ ಮತ್ತು ಉಪಯೋಗ ತಿಳಿಯಿರಿ

ವಿವೇಕ ಬಿರಾದಾರ
|

Updated on: Jan 06, 2025 | 6:55 AM

ಪಚ್ಚ ಕರ್ಪೂರವು ಭಾರತದಲ್ಲಿ ಧಾರ್ಮಿಕ, ಔಷಧೀಯ ಮತ್ತು ಅಡುಗೆಯ ಉದ್ದೇಶಗಳಿಗೆ ವ್ಯಾಪಕವಾಗಿ ಬಳಸಲ್ಪಡುವ ಸುವಾಸನೆಯ ವಸ್ತುವಾಗಿದೆ. ಇದನ್ನು ಸಿಹಿತಿಂಡಿ ತಯಾರಿಕೆಯಲ್ಲೂ ಬಳಸಲಾಗುತ್ತದೆ. ಚಿಕ್ಕ ಪ್ರಮಾಣದಲ್ಲಿ ಉಪಯೋಗಿಸಿದರೆ ಸುರಕ್ಷಿತವಾದರೂ, ಹೆಚ್ಚಿನ ಪ್ರಮಾಣದ ಸೇವನೆ ಅಪಾಯಕಾರಿ. ಇದನ್ನು ನೋವು ನಿವಾರಣೆ ಮತ್ತು ಸೌಂದರ್ಯವರ್ಧಕಗಳಲ್ಲೂ ಬಳಸಲಾಗುತ್ತದೆ. ಆದರೆ ಪೂಜಾ ಕರ್ಪೂರದಲ್ಲಿ ಶುದ್ಧ ಕರ್ಪೂರದ ಪ್ರಮಾಣ ಕಡಿಮೆ ಇರುತ್ತದೆ.

ಕರ್ಪೂರದ ಒಂದು ಭಿನ್ನರೂಪವಾದ ಪಚ್ಚ ಕರ್ಪೂರವನ್ನು ಭಾರತೀಯರು ಸಿಹಿಪದಾರ್ಥಗಳ ತಯಾರಿಕೆಯಲ್ಲಿ ಬಳಸುವರು. ಬಲು ಸಣ್ಣ ಪ್ರಮಾಣದಲ್ಲಿ ಕರ್ಪೂರವನ್ನು ಅಹಾರದಲ್ಲಿ ಅಥವಾ ಔಷಧಿಯಾಗಿ ಸೇವಿಸಬಹುದಾದರೂ ಹೆಚ್ಚಿನ ಪ್ರಮಾಣದ ಸೇವನೆಯು ಶರೀರಕ್ಕೆ ವಿಷಕಾರಿ. ಸಾಮಾನ್ಯವಾಗಿ ನರಗಳ ಉಳುಕುವಿಕೆ. ಉರಿ ಬಾವು ಮತ್ತು ವಾತಗ್ರಸ್ತ ನೋವುಗಳಿಗೆ ಲೇಪಿ ಸಲು ಇದನ್ನು ಉಪಯೋಗಿಸುತ್ತಾರೆ.

ಕರ್ಪೂರವು ಸುವಾಸಿತ ದ್ರವ್ಯವಾಗಿದ್ದು ಧಾರ್ಮಿಕ ಕ್ರಿಯೆಗಳಲ್ಲಿ, ಔಷಧಿಗಳಲ್ಲಿ ಮತ್ತು ಕೆಲವೊಮ್ಮೆ ಅಡುಗೆಯಲ್ಲಿ ಸಹ ಬಳಸುವರು. ಅಲ್ಲದೆ ಪಟಾಕಿಗಳಲ್ಲಿ, ಶರೀರ ಲೇಪನದಲ್ಲಿ ಸಹ ಕರ್ಪೂರದ ಉಪಯೋಗವಿದೆ. ಕರ್ಪೂರದಲ್ಲಿ ತುಕ್ಕನ್ನು ವಿರೋಧಿಸುವ ಗುಣವಿರುವುದರಿಂದ ಅದನ್ನು ಉಕ್ಕಿನ ಸಲಕರಣೆಗಳನ್ನಿಡುವ ಪೆಟ್ಟಿಗೆಗಳಲ್ಲಿ ಬಳಸುವರು. ನೆಗಡಿ, ಕೆಮ್ಮುಗಳ ಉಪಶಮನಕ್ಕಾಗಿ ಬಳಸುವ ಕೆಲ ಔಷಧಿಗಳಲ್ಲಿ ಇದರ ಉಪಯೋಗವಿದೆ.