Prashant Kishor Detained: ಬಿಪಿಎಸ್​ಸಿ ಅಭ್ಯರ್ಥಿಗಳಿಗಾಗಿ ಆಮರಣಾಂತ ಉಪವಾಸ ಸತ್ಯಾಗ್ರಹ, ಪ್ರಶಾಂತ್ ಕಿಶೋರ್ ಬಂಧನ

Prashant Kishor Detained: ಬಿಪಿಎಸ್​ಸಿ ಅಭ್ಯರ್ಥಿಗಳಿಗಾಗಿ ಆಮರಣಾಂತ ಉಪವಾಸ ಸತ್ಯಾಗ್ರಹ, ಪ್ರಶಾಂತ್ ಕಿಶೋರ್ ಬಂಧನ

ನಯನಾ ರಾಜೀವ್
|

Updated on: Jan 06, 2025 | 8:26 AM

ಬಿಪಿಎಸ್​ಸಿ ಅಭ್ಯರ್ಥಿಗಳ ಬೇಡಿಕೆಗಳ ಈಡೇರಿಕೆಗಾಗಿ ಆಮರಣಾಂತ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ  ಜನ್​ಸುರಾಜ್ ಮುಖ್ಯಸ್ಥ ಪ್ರಶಾಂತ್ ಕಿಶೋರ್​ರನ್ನು ಪೊಲೀಸರು ಇಂದು ಬಂಧಿಸಿದ್ದಾರೆ. ಪೊಲೀಸರು ಅವರನ್ನು ವಶಕ್ಕೆ ಪಡೆದುಕೊಂಡು ಪಾಟ್ನಾದ ಏಮ್ಸ್​ ಆಸ್ಪತ್ರೆಗೆ ದಾಖಲಿಸಿದ್ದಾರೆ. ಪ್ರಶಾಂತ್ ಕಿಶೋರ್ ಅವರನ್ನು ಪೊಲೀಸರು ಬಲವಂತವಾಗಿ ಕರೆದೊಯ್ದಿದ್ದಾರೆ ಎಂದು ಪಿಕೆ ತಂಡ ಆರೋಪಿಸಿದೆ, ನಂತರ ಪ್ರತಿಭಟನಾಕಾರರು ಏಮ್ಸ್ ಹೊರಗೆ ಗದ್ದಲವನ್ನು ಸೃಷ್ಟಿಸಿದರು.

ಜನ್ಸುರಾಜ್ ಮುಖ್ಯಸ್ಥ ಪ್ರಶಾಂತ್ ಕಿಶೋರ್ ಸತತ ನಾಲ್ಕು ದಿನಗಳ ಕಾಲ ಆಮರಣ ಉಪವಾಸ ನಡೆಸಿದ್ದರು. ಪಾಟ್ನಾದ ಗಾಂಧಿ ಮೈದಾನದಿಂದ ಮುಂಜಾನೆ ಪೊಲೀಸರು ಪ್ರಶಾಂತ್ ಕಿಶೋರ್ ಅವರನ್ನು ವಶಕ್ಕೆ ಪಡೆದಿದ್ದಾರೆ. ಇದಾದ ಬಳಿಕ ಅವರನ್ನು ಚಿಕಿತ್ಸೆಗಾಗಿ ಏಮ್ಸ್‌ಗೆ ಕರೆದೊಯ್ಯಲಾಯಿತು. ಜನವರಿ 2 ರಂದು ಸಂಜೆ 5 ಗಂಟೆಯಿಂದ ಪಾಟ್ನಾದ ಗಾಂಧಿ ಮೈದಾನದಲ್ಲಿ ಪಿಕೆ ಆಮರಣಾಂತ ಉಪವಾಸ ಕುಳಿತಿದ್ದರು. ನಿಯಮಿತ ತಪಾಸಣೆಯ ವೇಳೆ ವೈದ್ಯರು ಚಿಕಿತ್ಸೆ ನೀಡದೇ ಇದ್ದರೆ ಅವರ ಸ್ಥಿತಿ ಇನ್ನಷ್ಟು ಹದಗೆಡಬಹುದು ಎಂದು ಎಚ್ಚರಿಸಿದ್ದಾರೆ.

ಬಿಹಾರ ಲೋಕಸೇವಾ ಆಯೋಗದ (ಬಿಪಿಎಸ್‌ಸಿ) 70ನೇ ಪೂರ್ವಭಾವಿ ಪರೀಕ್ಷೆಯನ್ನು ರದ್ದುಗೊಳಿಸುವಂತೆ ಒತ್ತಾಯಿಸಿ ಪ್ರಶಾಂತ್ ಕಿಶೋರ್ ಪಾಟ್ನಾದ ಗಾಂಧಿ ಮೈದಾನದಲ್ಲಿ ಆಮರಣಾಂತ ಉಪವಾಸ ನಡೆಸುತ್ತಿದ್ದರು. ಬಿಹಾರದಲ್ಲಿ ಯುವ ಸತ್ಯಾಗ್ರಹ ಸಮಿತಿ ಎಂಬ ಹೊಸ ಸಂಘಟನೆಯನ್ನು ರಚಿಸಲಾಗಿದೆ. ಕಳೆದ ವರ್ಷ ಡಿಸೆಂಬರ್ 13 ರಂದು ನಡೆದ ಜಂಟಿ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ, ರಾಜ್ಯ ರಾಜಧಾನಿ ಪಾಟ್ನಾದ ಬಾಪು ಭವನದ ಪರೀಕ್ಷಾ ಕೇಂದ್ರದಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆ ಎಂಬ ವದಂತಿ ಹರಡಿತ್ತು.

ನೂರಾರು ಅಭ್ಯರ್ಥಿಗಳು ಪರೀಕ್ಷೆಯನ್ನು ಬಹಿಷ್ಕರಿಸಿದ್ದರು. ಇದಾದ ಬಳಿಕ ಮತ್ತೆ ಬಾಪು ಪರೀಕ್ಷಾ ಸಂಕೀರ್ಣದಲ್ಲಿ ಪರೀಕ್ಷೆ ನಡೆಸಲು ಬಿಪಿಎಸ್‌ಸಿ ಆದೇಶಿಸಿದೆ. ಇದಕ್ಕೆ ಸಂಬಂಧಿಸಿದಂತೆ ಪಾಟ್ನಾದ ಹಲವು ಕೇಂದ್ರಗಳಲ್ಲಿ ಮರು ಪರೀಕ್ಷೆಯನ್ನೂ ಆಯೋಜಿಸಲಾಗಿತ್ತು. ಮತ್ತೊಂದೆಡೆ, ಹೆಚ್ಚಿನ ಸಂಖ್ಯೆಯ ಅಭ್ಯರ್ಥಿಗಳು ಸಂಪೂರ್ಣ ಪರೀಕ್ಷೆಯನ್ನು ರದ್ದುಗೊಳಿಸುವಂತೆ ಒತ್ತಾಯಿಸುತ್ತಿದ್ದಾರೆ.

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ