ಕುದುರೆಮುಖ ಅರಣ್ಯದಲ್ಲಿ ನಕ್ಸಲ್​ ನಾಯಕಿ ಸುಂದರಿ ವಾಸ: ಶರಣಾಗಿ ಮನೆಗೆ ಬಾ ಎಂದ ಸಹೋದರ

ಕುದುರೆಮುಖ ಅರಣ್ಯದಲ್ಲಿ ನಕ್ಸಲ್​ ನಾಯಕಿ ಸುಂದರಿ ವಾಸ: ಶರಣಾಗಿ ಮನೆಗೆ ಬಾ ಎಂದ ಸಹೋದರ

ಪೃಥ್ವಿರಾಜ್​ ಬಿ.ಯು. ಮಂಗಳೂರು
| Updated By: ವಿವೇಕ ಬಿರಾದಾರ

Updated on:Jan 06, 2025 | 9:42 AM

ವಿಕ್ರಂಗೌಡನ ಎನ್‌ಕೌಂಟರ್ ನಂತರ, ನಕ್ಸಲ್ ಚಟುವಟಿಕೆಗಳಲ್ಲಿ ಮಹತ್ವದ ಬೆಳವಣಿಗೆ ಕಂಡುಬಂದಿದೆ. ನಕ್ಸಲ್ ನಾಯಕಿ ಸುಂದರಿ ಸೇರಿದಂತೆ ಮೂವರು ನಕ್ಸಲರು ಶರಣಾಗಲು ನಿರ್ಧರಿಸಿದ್ದಾರೆ. ಸುಂದರಿಯ ಕುಟುಂಬ ಅವಳನ್ನು ಮನೆಗೆ ಮರಳಲು ಆಹ್ವಾನಿಸಿದೆ. ಸರ್ಕಾರದ ಶರಣಾಗತಿ ತಂಡ ಸುಂದರಿಯೊಂದಿಗೆ ನಿರಂತರ ಸಂಪರ್ಕದಲ್ಲಿದೆ. ಈ ಬೆಳವಣಿಗೆಯು ನಕ್ಸಲಿಸಂ ವಿರುದ್ಧದ ಹೋರಾಟದಲ್ಲಿ ಹೊಸ ತಿರುವನ್ನು ತರಬಹುದು.

ಮಂಗಳೂರು, ಜನವರಿ 06: ವಿಕ್ರಂಗೌಡ ( Naxal Vikram Gouda) ಎನ್​​ಕೌಂಟರ್ ಬೆನ್ನಲ್ಲೇ ನಕ್ಸಲ್ ವಲಯದಲ್ಲಿ ಮಹತ್ವದ ಬೆಳವಣಿಗೆಯಾಗಿದೆ. ನಕ್ಸಲ್ ನಾಯಕಿ ಸುಂದರಿ (Naxal Sundari) ಸೇರಿದಂತೆ ಮೂವರು ಶರಣಾಗಲು ನಿರ್ಧರಿಸಿದ್ದಾರೆ. ನಕ್ಸಲ್​ ಪಡೆಯ ನಾಯಕ ಸುಂದರಿ ಮನೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಕುದುರೆಮುಖ ಅರಣ್ಯ ವಾಪ್ತಿಯ ಕುತ್ಲೂರಿನಲ್ಲಿದೆ. ಸುಂದರಿ ಸಹೋದರ ವಸಂತ ಅಲಿಯಾಸ್ ಆನಂದ್ ಕೂಡ ನಕ್ಸಲ್ ಆಗಿದ್ದನು. ಸಹೋದರ ಹಿಂದೆಯೇ ಸುಂದರಿ ಕೂಡ ನಕ್ಸಲ್​ ಚಟುವಟಿಕೆಗೆ ಇಳಿದಳು. ನಕ್ಸಲ್ ನಾಯಕಿ ಸುಂದರಿ ಸದ್ಯ ಕುದುರೆಮುಖ ಕಾಡಿನಲ್ಲಿ ಬೀಡುಬಿಟ್ಟಿದ್ದಾಳೆ. ನಕ್ಸಲ್ ನಾಯಕಿ ಸುಂದರಿ ಶರಣಾಗತಿಯಾಗಲು ಒಪ್ಪುತ್ತಿದ್ದಂತೆ, ಸರ್ಕಾರದ ಶರಣಾಗತಿ ತಂಡ ಆಕೆಯ ಜೊತೆ ನಿರಂತರ ಸಂಪರ್ಕದಲ್ಲಿದೆ.

ಸುಂದರಿ ಸಹೋದರ ಸುರೇಶ್ ಟಿವಿ9 ಜೊತೆ ಮಾತನಾಡಿ, ಶರಣಾಗತಿ ತಂಡ ನಮ್ಮನ್ನು ಸಂಪರ್ಕ‌ ಮಾಡಿ ಮಾತನಾಡಿದೆ. ಸುಂದರಿ ಶರಣಾಗಿ ಬಂದರೆ ನಾವು ಸ್ವಾಗತ ಮಾಡುತ್ತೇವೆ. ಹೋರಟ ನಿಲ್ಲಿಸಿ ಬಂದರೆ ಮನೆಗೆ ಸೇರಿಸಿಕೊಳ್ಳುತ್ತೇವೆ. ಅವರು ನಕ್ಸಲ್ ಹೋರಾಟ ನಿಲ್ಲಿಸಿ ನಮ್ಮ ಜೊತೆ ಸಾಮಾನ್ಯ ನಾಗರಿಕರಂತೆ ಬದುಕಲಿ. ಮನೆಬಿಟ್ಟು ಹೋಗಿ 17 ವರ್ಷ ಆಗಿದೆ. ಈಗ ವಾಪಾಸ್ ಬಂದರೆ ನಮಗೆ ಸಂತೋಷವಾಗುತ್ತದೆ. ಶರಣಾಗಿ ಮನೆಗೆ ಬಾ ಸುಂದರಿ ಎಂದು ಮನವಿ ಮಾಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published on: Jan 06, 2025 09:41 AM