ಭವ್ಯಾಗೆ ಮುಖಕ್ಕೆ ಹೊಡೆದಂತೆ ಹೇಳಿದ ತ್ರಿವಿಕ್ರಂ; ಕಣ್ಣೀರು ಹಾಕುತ್ತಲೇ ಚಾಲೆಂಜ್ ಮಾಡಿದ ನಟಿ

‘ಬಿಗ್ ಬಾಸ್ ಕನ್ನಡ ಸೀಸನ್ 11’ರಲ್ಲಿ ಭವ್ಯಾ ಮತ್ತು ತ್ರಿವಿಕ್ರಂ ಅವರ ನಡುವೆ ತೀವ್ರ ಜಗಳ ನಡೆದಿದೆ. ತ್ರಿವಿಕ್ರಂ ಅವರು ಭವ್ಯಾ ಅವರಿಗೆ ಮುಖಕ್ಕೆ ಹೊಡೆದಂತೆ ಹೇಳಿದ್ದಾರೆ. ಇದರಿಂದ ಭವ್ಯಾ ಅವರಿಗೆ ಕಣ್ಣೀರು ಬಂದಿದೆ. ಭವ್ಯಾ ಅವರು ತ್ರಿವಿಕ್ರಂ ಅವರಿಗೆ ಚಾಲೆಂಜ್ ಹಾಕಿ ಹೊರನಡೆದಿದ್ದಾರೆ. ಇಬ್ಬರ ನಡುವಿನ ಜಗಳ ಸಾಕಷ್ಟು ಚರ್ಚೆಗೆ ಕಾರಣವಾಗಿದೆ.

ಭವ್ಯಾಗೆ ಮುಖಕ್ಕೆ ಹೊಡೆದಂತೆ ಹೇಳಿದ ತ್ರಿವಿಕ್ರಂ; ಕಣ್ಣೀರು ಹಾಕುತ್ತಲೇ ಚಾಲೆಂಜ್ ಮಾಡಿದ ನಟಿ
ಭವ್ಯಾ-ತ್ರಿವಿಕ್ರಂ
Follow us
ರಾಜೇಶ್ ದುಗ್ಗುಮನೆ
|

Updated on: Jan 07, 2025 | 7:28 AM

‘ಬಿಗ್ ಬಾಸ್ ಕನ್ನಡ ಸೀಸನ್ 11’ರಲ್ಲಿ ಭವ್ಯಾ ಗೌಡ ಹಾಗೂ ತ್ರಿವಿಕ್ರಂ ಗೆಳೆತನದ ಮಧ್ಯೆ ಸಂಪೂರ್ಣವಾಗಿ ಬಿರುಕು ಮೂಡಿದೆ. ಇದು ಪದೇ ಪದೇ ಎದ್ದು ಕಾಣುತ್ತಿದೆ. ಈಗ ತ್ರಿವಿಕ್ರಂ ಅವರು ಭವ್ಯಾಗೆ ಮುಖಕ್ಕೆ ಹೊಡೆದಂತೆ ಹೇಳಿದ್ದಾರೆ. ಅವರು ಅಷ್ಟು ಕಟುವಾಗಿ ನಡೆದುಕೊಂಡಿದ್ದು ನೋಡಿ ಭವ್ಯಾಗೆ ಕಣ್ಣಲ್ಲಿ ನೀರೇ ಬಂದು ಬಿಟ್ಟಿದೆ. ಇದನ್ನು ಅವರು ನಿಯಂತ್ರಿಸಿಕೊಂಡು ತ್ರಿವಿಕ್ರಂಗೆ ಚಾಲೆಂಜ್ ಹಾಕಿ ಹೊರ ಹೋಗಿದ್ದಾರೆ.

ಬಿಗ್ ಬಾಸ್ ಮನೆಯಲ್ಲಿ ತ್ರಿವಿಕ್ರಂ, ಮಂಜು, ಧನರಾಜ್ ಟಿಕೆಟ್ ಟು ಫಿನಾಲೆ ರೇಸ್​ನಲ್ಲಿ ಇದ್ದಾರೆ. ಭವ್ಯಾ, ಹನುಮಂತ, ಗೌತಮಿ, ಮೋಕ್ಷಿತಾ, ಚೈತ್ರಾ ಟಿಕೆಟ್​ ಟು ಹೋಮ್ ಗುಂಪಿನಲ್ಲಿ ಇದ್ದಾರೆ. ಈ ಐವರ ಪೈಕಿ ಗೇಮ್ ಆಡಿ ಒಬ್ಬರು ಗೆಲ್ಲಬೇಕು. ಆ ಬಳಿಕ ‘ಟಿಕೆಟ್ ಟು ಫಿನಾಲೆ’ ಗ್ರೂಪ್ ಸೇರಿಕೊಳ್ಳಬೇಕು. ಇದಕ್ಕೆ ಪ್ರತಿಯಾಗಿ, ‘ಟಿಕೆಟ್​ ಟು ಫಿನಾಲೆ ಗ್ರೂಪ್’ನಿಂದ ಒಬ್ಬರು ‘ಟಿಕೆಟ್​ ಟು ಹೋಂ’ ಗುಂಪನ್ನು ಸೇರಬೇಕು.

ಮಂಜು ಅವರು ಮೊದಲು ‘ಟಿಕೆಟ್ ಟು ಫಿನಾಲೆ’ ಗ್ರೂಪ್​ನಲ್ಲಿ ಇದ್ದರು. ಆ ಬಳಿಕ ಭವ್ಯಾ ಅವರು ಗೆದ್ದು, ಮಂಜುನ ಅಲ್ಲಿಗೆ ಕಳುಹಿಸಲಾಯಿತು. ಮುಂದಿನ ಸುತ್ತಿನಲ್ಲಿ ಮಂಜು ಅವರು ಗೆದ್ದರು. ಆ ವೇಳೆ ‘ಟಿಕೆಟ್ ಟು ಫಿನಾಲೆ’ ಗುಂಪಿನಲ್ಲಿದ್ದ ಒಬ್ಬರನ್ನು ಎದುರಾಳಿ ಗುಂಪಿಗೆ ಕಳುಹಿಸಬೇಕಾಗಿತ್ತು. ಆಗ ಒಬ್ಬರು ಒಂದೊಂದು ಹೆಸರನ್ನು ತೆಗೆದುಕೊಂಡರು.

ಇದನ್ನೂ ಓದಿ: ಭವ್ಯಾನ ಉತ್ತಮ ಎದುರಾಳಿಯಾಗಿ ಮಾಡಿದ ನಾನು ಎಂಬರ್ಥದಲ್ಲಿ ಮಾತನಾಡಿದ ತ್ರಿವಿಕ್ರಂ

ಭವ್ಯಾ ಅವರು ಧನರಾಜ್ ಹೆಸರು ತೆಗೆದುಕೊಂಡರೆ, ತ್ರಿವಿಕ್ರಂ ಹಾಗೂ ಧನರಾಜ್ ಭವ್ಯಾ ಹೆಸರನ್ನು ತೆಗೆದುಕೊಂಡರು. ‘ಭವ್ಯಾ ಮನರಂಜನೆ ನೀಡಿದ್ದು ಕಡಿಮೆ’ ಎಂದರು ತ್ರಿವಿಕ್ರಂ. ‘ನನಗೆ ಹೋಲಿಸಿದರೆ ನೀವು ಯಾವುದೇ ಮನರಂಜನೆ ನೀಡೇ ಇಲ್ಲ’ ಎಂದರು ಭವ್ಯಾ. ‘ಆದರೆ, ನೀನು ನನ್ನ ಹೆಸರು ತೆಗೆದುಕೊಂಡಿಲ್ಲ’ ಎಂದರು ತ್ರಿವಿಕ್ರಂ. ಈ ವೇಳೆ ಭವ್ಯಾಗೆ ಮುಖಕ್ಕೆ ಹೊಡೆದಂತೆ ಆಗಿ ಕಣ್ಣೀರು ಬಂತು. ‘ಇರಲಿ ನಾನು ಹೋಗಿ ಬರುತ್ತೇನೆ. ನನಗೂ ಅವಕಾಶ ಸಿಗುತ್ತದೆ’ ಎಂದು ಚಾಲೆಂಜ್ ಮಾಡಿ ಹೋದರು ಭವ್ಯಾ. ಸದ್ಯ ಇಬ್ಬರ ಮಧ್ಯೆ ನಡೆದ ಕಿತ್ತಾಟ ಸಾಕಷ್ಟು ಚರ್ಚೆ ಹುಟ್ಟುಹಾಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಕೈ ತುತ್ತಿನ ಹಿಂದಿರುವ ಮಹತ್ವದ ಬಗ್ಗೆ ನಿಮಗೆ ಗೊತ್ತಾ?
ಕೈ ತುತ್ತಿನ ಹಿಂದಿರುವ ಮಹತ್ವದ ಬಗ್ಗೆ ನಿಮಗೆ ಗೊತ್ತಾ?
ವಿಷ್ಣು, ಗಣೇಶನ ಲಹರಿ ಇರುವ ಈ ದಿನದ ರಾಶಿ ಭವಿಷ್ಯ ಹೇಗಿದೆ ತಿಳಿಯಿರಿ
ವಿಷ್ಣು, ಗಣೇಶನ ಲಹರಿ ಇರುವ ಈ ದಿನದ ರಾಶಿ ಭವಿಷ್ಯ ಹೇಗಿದೆ ತಿಳಿಯಿರಿ
2025ರ ಸರ್ಕಾರಿ ಕ್ಯಾಲೆಂಡರ್ ಹೇಗಿರುತ್ತದೆ? ಇಲ್ಲಿದೆ ನೋಡಿ ವಿಡಿಯೋ
2025ರ ಸರ್ಕಾರಿ ಕ್ಯಾಲೆಂಡರ್ ಹೇಗಿರುತ್ತದೆ? ಇಲ್ಲಿದೆ ನೋಡಿ ವಿಡಿಯೋ
ಹಿಮದಿಂದ ತುಂಬಿದ ಕಣಿವೆಯಲ್ಲಿ ಚಿರತೆಗಳ ಕುಣಿದಾಟ
ಹಿಮದಿಂದ ತುಂಬಿದ ಕಣಿವೆಯಲ್ಲಿ ಚಿರತೆಗಳ ಕುಣಿದಾಟ
ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ