AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಗ್ ಬಾಸ್ ವೇದಿಕೆಯಲ್ಲಿ ಸುದೀಪ್​ ಕಡೆಯಿಂದ ಚೈತ್ರಾಗೆ ಸಿಕ್ತು ಎಂದೂ ಮರೆಯಲಾಗದ ಗಿಫ್ಟ್

ಕೆಲವು ಎಪಿಸೋಡ್​ಗಳ ಹಿಂದೆ ಕಿಚ್ಚ ಸುದೀಪ್ ಅವರು ಚೈತ್ರಾ ಕುಂದಾಪುರಗೆ ಸಿಕ್ಕಾಪಟ್ಟೆ ಕ್ಲಾಸ್ ತೆಗೆದುಕೊಂಡಿದ್ದರು. ಆದರೆ ಈಗ ಅವರಿಗೆ ಭರಪೂರ ಪ್ರೀತಿ ಸಿಕ್ಕಿದೆ. ಬಿಗ್ ಬಾಸ್​ ವೇದಿಕೆಯಲ್ಲೇ ಸುದೀಪ್ ಅವರು ಒಂದು ಉಡುಗೊರೆ ನೀಡಿದ್ದಾರೆ. ಹೊಸ ವರ್ಷದ ಪ್ರಯುಕ್ತ ಚೈತ್ರಾ ಅವರಿಗೆ ಈ ಗಿಫ್ಟ್ ನೀಡಲಾಗಿದೆ. ಇಂಥ ಉಡುಗೊರೆ ಸಿಕ್ಕಿದ್ದಕ್ಕೆ ಚೈತ್ರಾ ಕುಂದಾಪುರ ಅವರು ಎಮೋಷನಲ್ ಆಗಿದ್ದಾರೆ.

ಬಿಗ್ ಬಾಸ್ ವೇದಿಕೆಯಲ್ಲಿ ಸುದೀಪ್​ ಕಡೆಯಿಂದ ಚೈತ್ರಾಗೆ ಸಿಕ್ತು ಎಂದೂ ಮರೆಯಲಾಗದ ಗಿಫ್ಟ್
Chaithra Kundapura
ಮದನ್​ ಕುಮಾರ್​
|

Updated on: Dec 29, 2024 | 10:22 PM

Share

‘ಬಿಗ್ ಬಾಸ್ ಕನ್ನಡ ಸೀಸನ್​ 11’ ಕಾರ್ಯಕ್ರಮದಲ್ಲಿ ಭಾನುವಾರದ (ಡಿಸೆಂಬರ್​ 29) ಎಪಿಸೋಡ್​ ಚೈತ್ರಾ ಕುಂದಾಪುರ ಅವರ ಪಾಲಿಗೆ ಎಮೋಷನಲ್ ಆಗಿತ್ತು. ಯಾಕೆಂದರೆ ಅವರಿಗೆ ಕಿಚ್ಚ ಸುದೀಪ್​ ಕಡೆಯಿಂದ ಮರೆಯಲಾಗದ ಒಂದು ಗಿಫ್ಟ್ ಸಿಕ್ಕಿದೆ. ಹೊಸ ವರ್ಷ ಸಮೀಪಿಸುತ್ತಿದೆ. ಈ ಸಂದರ್ಭದಲ್ಲಿ ಅಮೂಲ್ಯವಾದ ಉಡುಗೊರೆ ಸಿಕ್ಕಿದ್ದಕ್ಕೆ ಚೈತ್ರಾ ಕುಂದಾಪುರ ಅವರಿಗೆ ಬಹಳ ಖುಷಿ ಆಯಿತು. ಅಷ್ಟಕ್ಕೂ ಕಿಚ್ಚ ಸುದೀಪ್​ ನೀಡಿದ್ದು ಏನು? ತಾವೇ ಧರಿಸಿದ್ದ ಕಿವಿಯ ರಿಂಗ್! ರಜತ್ ಅವರಿಗೂ ಇದೇ ಉಡುಗೊರೆ ನೀಡಲಾಗಿದೆ.

2024ರ ವರ್ಷ ಮುಗಿಯುತ್ತಿದೆ. 2025ರ ವರ್ಷದ ಆಗಮನಕ್ಕೆ ಕ್ಷಣಗಣನೆ ಶುರುವಾಗಿದೆ. 2024ರ ಕೊನೆಯ ವೀಕೆಂಡ್​ ಸಂಚಿಕೆಯನ್ನು ಕಿಚ್ಚ ಸುದೀಪ್ ಅವರು ಡಿ.29ರಂದು ನಡೆಸಿಕೊಟ್ಟರು. ಹೊಸ ವರ್ಷಕ್ಕಾಗಿ ದೊಡ್ಮನೆಯ ಸ್ಪರ್ಧಿಗಳು ಒಬ್ಬರಿಗೊಬ್ಬರು ಗಿಫ್ಟ್ ಕೊಟ್ಟುಕೊಳ್ಳುವಂತೆ ಸುದೀಪ್ ಹೇಳಿದರು. ಸ್ಪರ್ಧಿಗಳಿಂದ ಎಲ್ಲರಿಗೂ ಗಿಫ್ಟ್ ಸಿಕ್ಕಿತು. ಆದರೆ ರಜತ್ ಮತ್ತು ಚೈತ್ರಾ ಕುಂದಾಪುರ ಅವರಿಗೆ ಯಾರೂ ಗಿಫ್ಟ್ ಕೊಡಲಿಲ್ಲ. ಹಾಗಾಗಿ ಸುದೀಪ್ ಅವರು ತಾವೇ ಗಿಫ್ಟ್ ನೀಡುವುದಾಗಿ ತಿಳಿಸಿದರು.

ಪ್ರತಿ ವೀಕೆಂಡ್​ನಲ್ಲೂ ಸುದೀಪ್ ಅವರು ಸ್ಟೈಲಿಶ್​ ಆಗಿ ಬರುತ್ತಾರೆ. ಅವರ ಫ್ಯಾಷನ್​ ಬಗ್ಗೆ ಫ್ಯಾನ್ಸ್ ಮೆಚ್ಚುಗೆ ಸೂಚಿಸುತ್ತಾರೆ. ಈ ಹಿಂದಿನ ಸೀಸನ್​ಗಳಲ್ಲಿ ಸುದೀಪ್ ಅವರು ಜಾಕೆಟ್​ಗಳನ್ನು ಕೆಲವು ಸ್ಪರ್ಧಿಗಳಿಗೆ ಉಡುಗೊರೆ ನೀಡಿದ್ದರು. ಈಗ ಹೊಸ ಸಂಚಿಕೆಯಲ್ಲಿ ತಾವು ಧರಿಸಿದ್ದ ಕಿವಿ ರಿಂಗ್​ಗಳನ್ನು ರಜತ್ ಮತ್ತು ಚೈತ್ರಾಗೆ ಸುದೀಪ್ ನೀಡಿದರು. ‘ಈ ಮೂಲಕ ನಿಮ್ಮಿಬ್ಬರನ್ನು ಒಂದಾಗಿಸಿದ್ದೇನೆ’ ಎಂದು ಸುದೀಪ್ ಹೇಳಿದರು.

ಇದನ್ನೂ ಓದಿ: ಚಾಮುಂಡಿ ಬೆಟ್ಟಕ್ಕೆ ಬಂದ ಸುದೀಪ್​; ಕಿಚ್ಚನ ನೋಡಲು ಜನಸಾಗರ

ಸುದೀಪ್ ಅವರು ಗಿಫ್ಟ್​ ನೀಡಿದ್ದು ನೋಡಿ ಚೈತ್ರಾ ಕುಂದಾಪುರ ಅವರು ತುಂಬ ಎಮೋಷನಲ್ ಆದರು. ರಜತ್ ಕೂಡ ಸಖತ್ ಖುಷಿಪಟ್ಟರು. ಬಿಗ್ ಬಾಸ್​ ಸ್ಪರ್ಧಿಗಳು ತಪ್ಪು ಮಾಡಿದಾಗ ಸುದೀಪ್ ಅವರು ಗರಂ ಆಗುತ್ತಾರೆ. ಉಳಿದ ಎಲ್ಲ ಸಂದರ್ಭಗಳಲ್ಲೂ ಅವರು ಸ್ಪರ್ಧಿಗಳಿಗೆ ತಮ್ಮ ಮನೆಯ ಸದಸ್ಯರ ರೀತಿಯೇ ಪ್ರೀತಿ ತೋರಿಸುತ್ತಾರೆ. ಅವರು ನೀಡುವ ಪ್ರೋತ್ಸಾಹದ ಮಾತು ಮತ್ತು ಉಡುಗೊರೆಗಳೇ ಇದಕ್ಕೆ ಸಾಕ್ಷಿ. ಸುದೀಪ್​ ನಡೆಸಿಕೊಡುವ ಕೊನೆಯ ಸೀಸನ್​ ಇದು. ಮುಂದಿನ ಸೀಸನ್​ನಿಂದ ತಾವು ಬಿಗ್ ಬಾಸ್ ನಿರೂಪಣೆ ಮಾಡುವುದಿಲ್ಲ ಎಂದು ಸುದೀಪ್ ಅವರು ಈಗಾಗಲೇ ಘೋಷಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.