ಚಾಮುಂಡಿ ಬೆಟ್ಟಕ್ಕೆ ಬಂದ ಸುದೀಪ್; ಕಿಚ್ಚನ ನೋಡಲು ಜನಸಾಗರ
ಕಿಚ್ಚ ಸುದೀಪ್ ಅವರಿಗೆ ಇರುವ ಅಭಿಮಾನಿ ಬಳಗ ದೊಡ್ಡದು. ಅವರನ್ನು ನೇರವಾಗಿ ನೋಡಬೇಕು ಎಂಬ ಆಸೆ ಎಲ್ಲ ಅಭಿಮಾನಿಗಳಿಗೂ ಇರುತ್ತದೆ. ಹಾಗಾಗಿ ಸುದೀಪ್ ಹೋದಲ್ಲಿ, ಬಂದಿಲ್ಲ ಸಾಕಷ್ಟು ಜನರು ಸೇರುತ್ತಾರೆ. ಇಂದು (ಡಿಸೆಂಬರ್ 29) ಮೈಸೂರಿಗೆ ತೆರಳಿದ ಸುದೀಪ್ ಅವರನ್ನು ಕಣ್ತುಂಬಿಕೊಳ್ಳಲು ಅಪಾರ ಸಂಖ್ಯೆಯ ಅಭಿಮಾನಿಗಳು ನೆರೆದಿದ್ದರು.
ನಟ ಕಿಚ್ಚ ಸುದೀಪ್ ಅವರು ಮ್ಯಾಕ್ಸ್ ಸಿನಿಮಾದ ಗೆಲುವಿನ ಖುಷಿಯಲ್ಲಿ ಇದ್ದಾರೆ. ಈ ನಡುವೆ ಅವರು ಮೈಸೂರಿಗೆ ಭೇಟಿ ನೀಡಿದ್ದಾರೆ. ಚಾಮುಂಡಿ ಬೆಟ್ಟಕ್ಕೆ ಬಂದು ದೇವರ ದರ್ಶನ ಪಡೆದಿದ್ದಾರೆ. ಸುದೀಪ್ ಅವರನ್ನು ನೋಡಲು ಅಲ್ಲಿ ಜನಸಾಗರವೇ ಸೇರಿದೆ. ಅಭಿಮಾನಿಗಳ ಕಡೆಗೆ ಕಿಚ್ಚ ಕೈ ಬೀಸಿದ್ದಾರೆ. ಆ ಸಂದರ್ಭದ ವಿಡಿಯೋ ಇಲ್ಲಿದೆ. ಸುದೀಪ್ ಅವರ ಮುಂದಿನ ಸಿನಿಮಾ ಬಗ್ಗೆ ಕುತೂಹಲ ಹೆಚ್ಚಾಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Latest Videos