ಡಿಸೆಂಬರ್ 30ರ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ ನೋಡಿ
ಡಿಸೆಂಬರ್ 30, 2024ರ ಸೋಮವಾರದಂದು ಅಮಾವಾಸ್ಯೆ ತಿಥಿ ಇದೆ. ಈ ದಿನದ 12 ರಾಶಿಗಳ ದೈನಂದಿನ ಫಲಗಳನ್ನು ಇಲ್ಲಿ ನೀಡಿರುವ ವಿಡಿಯೋದಲ್ಲಿ ವಿವರಿಸಲಾಗಿದೆ. ಪ್ರತಿಯೊಂದು ರಾಶಿಯ ಫಲ, ಶುಭ ಸಮಯ, ಅದೃಷ್ಟ ಸಂಖ್ಯೆ, ಶುಭ ದಿಕ್ಕು, ಶುಭ ಬಣ್ಣ ಮತ್ತು ಜಪಿಸಬೇಕಾದ ಮಂತ್ರಗಳನ್ನು ತಿಳಿಸಲಾಗಿದೆ.
ಇಂದು ದಿನಾಂಕ 30-12-2024 ಸೋಮವಾರ, ಕ್ರೋಧಿನಾಮ ಸಂವತ್ಸರ, ದಕ್ಷಿಣಾಯನ, ಮಾರ್ಗಶಿರ ಮಾಸ, ಹೇಮಂತ ಋತು, ಕೃಷ್ಣ ಪಕ್ಷ, ಅಮಾವಾಸ್ಯಾ ತಿಥಿ, ಮೂಲ ನಕ್ಷತ್ರ, ವೃದ್ಧಿಯೋಗ ಇರತಕ್ಕಂತಹ ಈ ದಿನದ ರಾಹುಕಾಲ 8:05 ನಿಂದ 9:31 ರ ತನಕ ರಾಹುಕಾಲ ಇರುತ್ತದೆ. ಸರ್ವಸಿದ್ಧಿ ಕಾಲ, ಸಂಕಲ್ಪಕಾಲ, ಶುಭಕಾಲ ಬೆಳಗ್ಗೆ 9:31 ನಿಂದ 10:57 ರ ತನಕ ಸಂಕಲ್ಪಕಾಲ ಇರಲಿದೆ.
ಈ ಅಮಾವಾಸ್ಯೆ ಬೆಳಗ್ಗೆ 4:01 ನಿಂದ ನಾಳೆ 3:56 ರ ತನಕ ಇರುತ್ತೆ. ಅಂದರೆ, ಪರಿಪೂರ್ಣ ದಿನದ ಅಮಾವಾಸ್ಯೆ ಕೂಡ ಇಂದು ಆಗಿರುತ್ತೆ. ಇದನ್ನು ಎಳ್ಳು ಅಮಾವಾಸ್ಯೆ ಎಂದೂ ಕರೀತಾರೆ. ಹಬ್ಬದ ದಿನವಾಗಿ ಕೂಡ ಉತ್ತರ ಕರ್ನಾಟಕದಲ್ಲಿ ಕೆಲವು ಭಾಗಗಳಲ್ಲಿ ಈ ಅಮಾವಾಸ್ಯೆಯನ್ನ ಎಳ್ಳು ಅಮಾವಾಸ್ಯೆಯಾಗಿ ನಾವು ಆಚರಣೆ ಮಾಡಿಕೊಳ್ಳುತ್ತೇವೆ. ಈ ದಿನದ ದ್ವಾದಶ ರಾಶಿಗಳ ಫಲಾಫಲವನ್ನು ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ ಬಸವರಾಜ ಗುರೂಜಿ ಇಲ್ಲಿ ವಿವರಿಸಿದ್ದಾರೆ.
Published on: Dec 30, 2024 06:37 AM
Latest Videos