ದಳಪತಿ ವಿಜಯ್ ಬಗ್ಗೆ ಕಿಚ್ಚ ಸುದೀಪ್ ಹೇಳಿದ್ದೇನು?
Sudeep: ಕಿಚ್ಚ ಸುದೀಪ್ ಹಲವು ಭಾಷೆಗಳಲ್ಲಿ ಹಲವು ಸ್ಟಾರ್ ನಟ, ನಿರ್ದೇಶಕರುಗಳೊಟ್ಟಿಗೆ ಕೆಲಸ ಮಾಡಿದ್ದಾರೆ. ಒಂದು ರೀತಿ ದಶಕದ ಹಿಂದೆಯೇ ಅವರು ಪ್ಯಾನ್ ಇಂಡಿಯಾ ಸ್ಟಾರ್. ಕೆಲ ವರ್ಷಗಳ ಹಿಂದೆ ಸುದೀಪ್, ದಳಪತಿ ವಿಜಯ್ ನಟನೆಯ ‘ಪುಲಿ’ ಸಿನಿಮಾದಲ್ಲಿ ಅವರೊಟ್ಟಿಗೆ ನಟಿಸಿದ್ದರು. ಇತ್ತೀಚೆಗಿನ ಸಂದರ್ಶನದಲ್ಲಿ ಸುದೀಪ್, ದಳಪತಿ ವಿಜಯ್ ಅವರ ಬಗ್ಗೆ ಮಾತನಾಡಿದ್ದಾರೆ.
ಕಿಚ್ಚ ಸುದೀಪ್ ಬಹುಭಾಷಾ ನಟ. ದಶಕಕ್ಕೂ ಮುಂಚೆಯೇ ಸುದೀಪ್ ಪ್ಯಾನ್ ಇಂಡಿಯಾ ಸ್ಟಾರ್ ಎನಿಸಿಕೊಂಡವರು. ಬಾಲಿವುಡ್ನಲ್ಲಿ ಅಮಿತಾಬ್ ಬಚ್ಚನ್, ಸಲ್ಮಾನ್ ಖಾನ್, ರಿತೇಶ್ ದೇಶ್ಮುಖ ಇನ್ನಿತರೆ ಸ್ಟಾರ್ ನಟ-ನಟಿಯರೊಟ್ಟಿಗೆ ನಟಿಸಿದ್ದಾರೆ. ನೆರೆಯ ಚಿತ್ರರಂಗಗಳಲ್ಲಿಯೂ ಸಹ ರಾಜಮೌಳಿಯ ನಿರ್ದೇಶನದ ಎರಡು ಸಿನಿಮಾಗಳಲ್ಲಿ, ರಾಮ್ ಗೋಪಾಲ್ ವರ್ಮಾ ನಿರ್ದೇಶನದ ಕೆಲವು ಸಿನಿಮಾಗಳಲ್ಲಿ ದಳಪತಿ ವಿಜಯ್ ಜೊತೆ ಇನ್ನೂ ಕೆಲವು ಸ್ಟಾರ್ ನಟ, ನಿರ್ದೇಶಕರೊಟ್ಟಿಗೆ ಸುದೀಪ್ ಕೆಲಸ ಮಾಡಿದ್ದಾರೆ. ಇದೀಗ ಸುದೀಪ್ರ ‘ಮ್ಯಾಕ್ಸ್’ ಸಿನಿಮಾ ತೆಲುಗು ಹಾಗೂ ತಮಿಳಿನಲ್ಲಿಯೂ ಬಿಡುಗಡೆ ಆಗಿದ್ದು, ಇತ್ತೀಚೆಗಿನ ಸಂದರ್ಶನವೊಂದರಲ್ಲಿ ಸುದೀಪ್, ತಮಿಳಿನ ಸ್ಟಾರ್ ನಟ ದಳಪತಿ ವಿಜಯ್ ಬಗ್ಗೆ ಮಾತನಾಡಿದ್ದಾರೆ.
ಕೆಲ ವರ್ಷಗಳ ಹಿಂದೆ ಬಿಡುಗಡೆ ಆದ ‘ಪುಲಿ’ ಸಿನಿಮಾನಲ್ಲಿ ಸುದೀಪ್ ಹಾಗೂ ವಿಜಯ್ ಒಟ್ಟಿಗೆ ನಟಿಸಿದ್ದರು. ಆ ಸಿನಿಮಾದಲ್ಲಿ ಶ್ರೀದೇವಿ ಸಹ ಇದ್ದರು. ಇತ್ತೀಚೆಗಿನ ಸಂದರ್ಶನದಲ್ಲಿ ವಿಜಯ್ ಬಗ್ಗೆ ಮಾತನಾಡಿದ ಸುದೀಪ್, ‘ವಿಜಯ್ ಅವರು ಬಹಳ ದೊಡ್ಡ ಕನಸುಗಾರ ಜೊತೆಗೆ ಬಹಳ ಫೋಕಸ್ ಇರುವ ವ್ಯಕ್ತಿ. ಹಲವು ದೊಡ್ಡ ಯೋಜನೆಗಳನ್ನು ಅವರು ಹಾಕಿಕೊಂಡಿದ್ದಾರೆ ಮತ್ತು ಅದನ್ನು ಪೂರ್ಣಗೊಳಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರಿಗೆ ಅದ್ಭುತವಾದ ಫೋಕಸ್ ಇದೆ, ಅವರಿಗೆ ಯಾವುದನ್ನು ಹೇಗೆ? ಯಾವಾಗ? ಯಾರ ಒಟ್ಟಿಗೆ ಮಾಡಬೇಕು? ಎಂಬುದರ ಸ್ಪಷ್ಟ ಅರಿವಿದೆ’ ಎಂದಿದ್ದಾರೆ.
ಇದನ್ನೂ ಓದಿ:ಬಾಸಿಸಂ ಕೇಕ್ ವಿವಾದಕ್ಕೆ ಸ್ಪಷ್ಟನೆ ನೀಡಿದ ಸುದೀಪ್ ಆಪ್ತ ಪ್ರದೀಪ್
ಈ ಹಿಂದಿನ ಸಂದರ್ಶನವೊಂದರಲ್ಲಿ ಅವರು ‘ಪುಲಿ’ ಸಿನಿಮಾದ ಬಗ್ಗೆ ಮಾತನಾಡಿದ್ದರು. ಆ ಸಂದರ್ಶನದಲ್ಲಿ, ‘ವಿಜಯ್ ಅವರು ಬಹಳ ವರ್ಷಗಳಿಂದಲೂ ಭಾರಿ ದೊಡ್ಡ ಸಿನಿಮಾ ಒಂದನ್ನು ಮಾಡಬೇಕು ಎಂದುಕೊಂಡಿದ್ದರು. ಅವರು ನನಗಾಗಿ ಒಂದು ಪಾತ್ರವನ್ನು ಸಹ ರೆಡಿ ಮಾಡಿಕೊಂಡಿದ್ದರು. ಆ ಪಾತ್ರಕ್ಕೆ ನನಗೆ ಕೇಳಿದಾಗ ನನಗೆ ಅವಶ್ಯಕತೆ ಇದೆಯೋ ಇಲ್ಲವೋ ಎಂದು ಯೊಚಿಸುವುದರ ಬದಲಿಗೆ ದೊಡ್ಡ ಪ್ರಾಜೆಕ್ಟ್ನ ಭಾಗವಾಗಿರಬೇಕು ಹಾಗೂ ವಿಜಯ್ ಅವರೊಟ್ಟಿಗೆ ತೆರೆ ಹಂಚಿಕೊಳ್ಳಬೇಕು ಎನಿಸಿದ ಕಾರಣ ಒಪ್ಪಿಕೊಂಡೆ’ ಎಂದಿದ್ದರು.
ಈಗ ಸುದೀಪ್ ನಟನೆಯ ‘ಮ್ಯಾಕ್ಸ್’ ಸಿನಿಮಾ ಮೂರು ದಿನದ ಹಿಂದಷ್ಟೆ ಬಿಡುಗಡೆ ಆಗಿದ್ದು, ಸಿನಿಮಾ ಉತ್ತಮ ಗಳಿಕೆ ಮಾಡುತ್ತಿದೆ. ‘ಮ್ಯಾಕ್ಸ್’ ಸಿನಿಮಾ ತೆಲುಗು ಹಾಗೂ ತಮಿಳಿನಲ್ಲಿಯೂ ತೆರೆಗೆ ಬಂದಿದ್ದು, ಅಲ್ಲಿಯೂ ಉತ್ತಮ ಗಳಿಕೆ ಮಾಡುತ್ತಿದೆ. ಮ್ಯಾಕ್ಸ್ ಸಿನಿಮಾ, ಒಂದು ರಾತ್ರಿಯಲ್ಲಿ ನಡೆಯುವ ಕತೆಯಾಗಿದ್ದು, ಸಿನಿಮಾದಲ್ಲಿ ಭರ್ಜರಿ ಆಕ್ಷನ್ ದೃಶ್ಯಗಳ ಜೊತೆಗೆ ಥ್ರಿಲ್ಲರ್ ಅಂಶಗಳು ಸಹ ಇವೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ