AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಾಸಿಸಂ​ ಕೇಕ್​ ವಿವಾದಕ್ಕೆ ಸ್ಪಷ್ಟನೆ ನೀಡಿದ ಸುದೀಪ್​ ಆಪ್ತ ಪ್ರದೀಪ್​

ಕಿಚ್ಚ ಸುದೀಪ್ ಅಭಿನಯದ ‘ಮ್ಯಾಕ್ಸ್’ ಸಿನಿಮಾ ಗೆಲ್ಲುತ್ತಿದ್ದಂತೆಯೇ ಆಪ್ತ ಬಳಗದವರು ಸೆಲೆಬ್ರೇಟ್ ಮಾಡಿದ್ದಾರೆ. ಈ ವೇಳೆ ಕತ್ತರಿಸಿದ ಕೇಕ್​ನಲ್ಲಿ ‘ಬಾಸಿಸಂ​ ಕಾಲ ಮುಗಿಯಿತು’ ಎಂದು ಬರೆದಿರುವುದು ಕೆಲವರ ಕಣ್ಣು ಕುಕ್ಕಿದೆ. ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ಫೋಟೋ ಬಗ್ಗೆ ಸುದೀಪ್ ಅವರ ಆಪ್ತ ಬಳಗದಲ್ಲಿ ಗುರುತಿಸಿಕೊಂಡ ನಟ ಪ್ರದೀಪ್ ಅವರು ಪ್ರತಿಕ್ರಿಯೆ ನೀಡಿದ್ದಾರೆ.

ಬಾಸಿಸಂ​ ಕೇಕ್​ ವಿವಾದಕ್ಕೆ ಸ್ಪಷ್ಟನೆ ನೀಡಿದ ಸುದೀಪ್​ ಆಪ್ತ ಪ್ರದೀಪ್​
Pradeep
ಮದನ್​ ಕುಮಾರ್​
|

Updated on: Dec 26, 2024 | 10:57 PM

Share

‘ಬಾಸಿಸಂ​ ಕಾಲ ಮುಗಿಯಿತು, ಮ್ಯಾಕ್ಸಿಮಮ್ ಮಾಸ್​ ಕಾಲ ಶುರುವಾಯ್ತು’ ಎಂಬ ವಾಕ್ಯ ಈಗ ಸೆನ್ಸೇಷನ್ ಸೃಷ್ಟಿ ಮಾಡಿದೆ. ಕಿಚ್ಚ ಸುದೀಪ್​ ನಟನೆಯ ‘ಮ್ಯಾಕ್ಸ್’ ಸಿನಿಮಾ ಹಿಟ್ ಆಗಿದೆ. ಈ ಖುಷಿಯನ್ನು ಸೆಲೆಬ್ರೇಟ್​ ಮಾಡಲು ಕಟ್ ಮಾಡಿದ ಕೇಕ್​ನಲ್ಲಿ ಈ ಮೇಲಿನ ವಾಕ್ಯ ಕಾಣಿಸಿದೆ. ಇದನ್ನು ನೋಡಿ ಹಲವರು ಹಲವು ರೀತಿಯಲ್ಲಿ ಅರ್ಥ ಮಾಡಿಕೊಂಡಿದ್ದಾರೆ. ಈ ವಾಕ್ಯದ ಮೂಲಕ ಬೇರೆ ನಟರಿಗೆ ಟಾಂಗ್ ಕೊಡಲಾಗಿದೆಯಾ ಎಂಬ ಅನುಮಾನ ಕೂಡ ಮೂಡಿದೆ. ಈ ಎಲ್ಲ ಪ್ರಶ್ನೆಗಳಿಗೆ ನಟ ಪ್ರದೀಪ್ ಅವರು ಸ್ಪಷ್ಟನೆ ನೀಡಿದ್ದಾರೆ. ಕೇಕ್ ಹಿಂದಿರುವ ಪೂರ್ತಿ ಕಹಾನಿಯನ್ನು ಅವರು ವಿವರಿಸಿದ್ದಾರೆ.

‘ಮ್ಯಾಕ್ಸ್’ ಸಿನಿಮಾ ಡಿಸೆಂಬರ್​ 25ರಂದು ಬಿಡುಗಡೆ ಆಯಿತು. ಎರಡೂವರೆ ವರ್ಷಗಳ ಗ್ಯಾಪ್ ಬಳಿಕ ಸುದೀಪ್ ಅವರು ಬಿಗ್ ಸ್ಕ್ರೀನ್​ನಲ್ಲಿ ಕಾಣಿಸಿಕೊಂಡಿದ್ದಕ್ಕೆ ಅವರ ಅಭಿಮಾನಿಗಳಿಗೆ ಸಖತ್ ಖುಷಿ ಆಯಿತು. ಅಲ್ಲದೇ ಚಿತ್ರರಂಗದಲ್ಲಿ ಇರುವ ಸುದೀಪ್ ಅವರ ಆಪ್ತ ಬಳಗದವರು ಕೂಡ ಈ ಸಿನಿಮಾಗೆ ಯಶಸ್ಸು ಸಿಗಲಿ ಎಂದು ಹಾರೈಸಿದರು. ಮೊದಲ ದಿನ ಹೌಸ್​ಫುಲ್ ಆದ ಬಳಿಕ ಪ್ರದೀಪ್ ಮುಂತಾದವರು ಸಂಭ್ರಮಿಸಿದರು. ಆ ಸಂಭ್ರಮಾಚರಣೆಗೆ ಸಿದ್ಧವಾಗಿದ್ದೇ ಈ ಕೇಕ್​.

‘ನಿನ್ನೆ ಮ್ಯಾಕ್ಸ್ ಸಿನಿಮಾ ಬಿಡುಗಡೆ ಆಯಿತು. ಸಿನಿಮಾ ನೋಡಿದ ಮೇಲೆ ತುಂಬ ಇಷ್ಟ ಆಯಿತು. ಹಾಗಾಗಿ ವಿಶ್ ಮಾಡಲು ಸುದೀಪಣ್ಣ ಅವರ ಮನೆಗೆ ನಾನು ರಾತ್ರಿ ಹೋಗಿದ್ದೆ. ಹೋಗುವ ದಾರಿಯಲ್ಲಿ ನಾನು ಆ ಕೇಕ್​ ತೆಗೆದುಕೊಂಡು ಹೋಗಿದ್ದೆ. ಅದರ ಮೇಲೆ ಬರೆದ ಲೈನ್ಸ್​ಗೆ​ ಅನಗತ್ಯವಾಗಿ ಬೇರೆ ನಟರನ್ನು ಲಿಂಕ್ ಮಾಡಿ ವಿವಾದ ಸೃಷ್ಟಿಸಲು ಪ್ರಯತ್ನಿಸುತ್ತಿರುವುದು ನನ್ನ ಗಮನಕ್ಕೆ ಬಂತು. ಹಾಗಾಗಿ ಸ್ಪಷ್ಟನೆ ನೀಡುತ್ತಿದ್ದೇನೆ’ ಎಂದು ಪ್ರದೀಪ್ ಹೇಳಿದ್ದಾರೆ.

‘ಯಾವ ನಟನಿಗೂ ಹೋಲಿಕೆ ಮಾಡಿ ಕೇಕ್ ಮೇಲೆ ಅದನ್ನು ಬರೆದಿಲ್ಲ. ಮ್ಯಾಕ್ಸ್​ ಸಿನಿಮಾದ ಹಾಡಿನಲ್ಲಿ ಲೈನ್ ಬರುತ್ತದೆ. ಮ್ಯಾಕ್ಸೇ ಮ್ಯಾಕ್ಸಿಮಮ್ ಮಾಸ್​. ಮಾಸಲಿ ಮಾಸಿಗೇ ಬಾಸ್​ ಎಂಬ ಸಾಲನ್ನೇ ಅನುವಾದಿಸಿ ಕೇಕ್​ ಮೇಲೆ ಬರೆಸಲಾಗಿತ್ತು. ಪ್ರತಿ ನಟರಿಗೆ ತಮ್ಮದೇ ಆದ ಫ್ಯಾನ್ಸ್ ಬಳಗ ಇರುತ್ತೆ. ಅವರು ತಮ್ಮ ಹೀರೋಗೆ ಬಾಸ್​, ಅಣ್ಣ, ಸರ್ ಎಂದೆಲ್ಲ ಕರೆಯುತ್ತಾರೆ. ಒಂದು ಪದ ಯಾವ ನಟನಿಗೂ ಸೀಮಿತ ಆಗಿರುವುದಿಲ್ಲ. ಯಾವ ನಾಯಕ ನಟನನ್ನೂ ಉದ್ದೇಶಿಸಿ ಬರೆದ ಸಾಲು ಅದಲ್ಲ’ ಎಂದು ಪ್ರದೀಪ್ ಅವರು ಸ್ಪಷ್ಟನೆ ನೀಡಿದ್ದಾರೆ.

ಇದನ್ನೂ ಓದಿ: Max Movie Review: ‘ಮ್ಯಾಕ್ಸ್’ ಸಿನಿಮಾಗೆ ಬಲ ತುಂಬಿದ ಕಥೆಯ ಶರವೇಗ, ಕಿಚ್ಚನ ಆವೇಗ

‘ಸೋಶಿಯಲ್ ಮೀಡಿಯಾದಲ್ಲಿ ಯಾರೂ ಗೊಂದಲಕ್ಕೆ ಒಳಗಾಗುವ ಅವಶ್ಯಕತೆ ಇಲ್ಲ. ಯಾರಿಗೂ ವೈಯಕ್ತಿಕವಾಗಿ ಮಾಡಿರುವಂಥದ್ದಲ್ಲ. ಕನ್ನಡ ಚಿತ್ರರಂಗ ಅದ್ಭುತವಾದ ಕುಟುಂಬ. ಡಿಸೆಂಬರ್​ನಲ್ಲಿ ಬಂದ ಯುಐ, ಮ್ಯಾಕ್ಸ್ ಸಿನಿಮಾಗಳು ಅದ್ಭುತ ಪ್ರದರ್ಶನ ಕಂಡಿವೆ. ಕನ್ನಡ ಚಿತ್ರರಂಗದಲ್ಲಿ ಯಾವ ನಟನೂ ಇನ್ನೊಬ್ಬ ನಟನಿಗೆ ಟಾಂಟ್​ ಕೊಡುವ ಪರಿಸ್ಥಿತಿ ಬಂದಿಲ್ಲ’ ಎಂದಿದ್ದಾರೆ ಪ್ರದೀಪ್.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಬಸ್​​ನಲ್ಲಿ 240 ಗ್ರಾಂ ಚಿನ್ನ ಕದ್ದಾಕೆ ಸಿಕ್ಕಿಬಿದ್ದಿದ್ಹೇಗೆ ಗೊತ್ತಾ?
ಬಸ್​​ನಲ್ಲಿ 240 ಗ್ರಾಂ ಚಿನ್ನ ಕದ್ದಾಕೆ ಸಿಕ್ಕಿಬಿದ್ದಿದ್ಹೇಗೆ ಗೊತ್ತಾ?
ಸಿದ್ದರಾಮಯ್ಯ ಅಧಿಕಾರದಿಂದ ಇಳಿಯೋದು ಯಾವಾಗ?: ಕೋಡಿಮಠ ಶ್ರೀ ಸ್ಪೋಟಕ ಭವಿಷ್ಯ
ಸಿದ್ದರಾಮಯ್ಯ ಅಧಿಕಾರದಿಂದ ಇಳಿಯೋದು ಯಾವಾಗ?: ಕೋಡಿಮಠ ಶ್ರೀ ಸ್ಪೋಟಕ ಭವಿಷ್ಯ
ಕೂಲಿ ಕಾರ್ಮಿಕ ಮಹಿಳೆ ಜತೆ ಲವ್ವಿಡವ್ವಿ: ಗುತ್ತಿಗೆದಾರನನ್ನ ಕೊಚ್ಚಿ ಕೊಂದ್ರು
ಕೂಲಿ ಕಾರ್ಮಿಕ ಮಹಿಳೆ ಜತೆ ಲವ್ವಿಡವ್ವಿ: ಗುತ್ತಿಗೆದಾರನನ್ನ ಕೊಚ್ಚಿ ಕೊಂದ್ರು
ನಮ್ಮಿಂದ ತಪ್ಪಾಗಿದೆ ಕ್ಷಮಿಸಿ: ಕನ್ನಡಿಗರ ಕ್ಷಮೆಯಾಚಿಸಿದ ಬೆಂಗಳೂರಿನ ಕಂಪನಿ
ನಮ್ಮಿಂದ ತಪ್ಪಾಗಿದೆ ಕ್ಷಮಿಸಿ: ಕನ್ನಡಿಗರ ಕ್ಷಮೆಯಾಚಿಸಿದ ಬೆಂಗಳೂರಿನ ಕಂಪನಿ
ರಿಜ್ವಾನ್ ಬ್ಯಾಟಿಂಗ್‌ ಅರ್ಧಕ್ಕೆ ನಿಲ್ಲಿಸಿ ವಾಪಸ್ ಕರೆಸಿಕೊಂಡ ನಾಯಕ
ರಿಜ್ವಾನ್ ಬ್ಯಾಟಿಂಗ್‌ ಅರ್ಧಕ್ಕೆ ನಿಲ್ಲಿಸಿ ವಾಪಸ್ ಕರೆಸಿಕೊಂಡ ನಾಯಕ
ಸಿದ್ರಾಮಯ್ಯ ಮೈಸೂರು, ಡಿಕೆಶಿ ಕನಕಪುರ ಇದ್ದಂಗೆ ನಮ್ಗೆ ಆಗ್ಬೇಕು ಎಂದ ಖರ್ಗೆ
ಸಿದ್ರಾಮಯ್ಯ ಮೈಸೂರು, ಡಿಕೆಶಿ ಕನಕಪುರ ಇದ್ದಂಗೆ ನಮ್ಗೆ ಆಗ್ಬೇಕು ಎಂದ ಖರ್ಗೆ
ಲಕ್ಕುಂಡಿಯಲ್ಲಿ ಸಿಕ್ಕ ನಿಧಿಗೆ ವಾರಸುದಾರರು ಯಾರು? ಕಾಯ್ದೆ ಹೇಳೋದೇನು?
ಲಕ್ಕುಂಡಿಯಲ್ಲಿ ಸಿಕ್ಕ ನಿಧಿಗೆ ವಾರಸುದಾರರು ಯಾರು? ಕಾಯ್ದೆ ಹೇಳೋದೇನು?
ಹಿಮಾಚಲದ ಕಟ್ಟಡದಲ್ಲಿ ಬೆಂಕಿ ಅವಘಡ; 8 ವರ್ಷದ ಮಗು ಸಾವು, ಹಲವರಿಗೆ ಗಾಯ
ಹಿಮಾಚಲದ ಕಟ್ಟಡದಲ್ಲಿ ಬೆಂಕಿ ಅವಘಡ; 8 ವರ್ಷದ ಮಗು ಸಾವು, ಹಲವರಿಗೆ ಗಾಯ
ಬಿಗ್​ಬಾಸ್​ಗೆ ಸಂಕಷ್ಟ; ಶೋ ಹಾಗೂ ನಟ ಸುದೀಪ್ ವಿರುದ್ಧ ದೂರು ದಾಖಲು
ಬಿಗ್​ಬಾಸ್​ಗೆ ಸಂಕಷ್ಟ; ಶೋ ಹಾಗೂ ನಟ ಸುದೀಪ್ ವಿರುದ್ಧ ದೂರು ದಾಖಲು
ಉಚ್ಛಾಟಿತ ಶಾಸಕ ಯತ್ನಾಳ್​ ಸಂಪರ್ಕದಲ್ಲಿದ್ಯಾ BJP ಹೈಕಮಾಂಡ್​?
ಉಚ್ಛಾಟಿತ ಶಾಸಕ ಯತ್ನಾಳ್​ ಸಂಪರ್ಕದಲ್ಲಿದ್ಯಾ BJP ಹೈಕಮಾಂಡ್​?