Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಮ್ಯಾಕ್ಸ್’ ರಿಲೀಸ್ ಬಳಿಕ ಹೇಗಿದೆ ‘ಯುಐ’ ಕಲೆಕ್ಷನ್; ಇಲ್ಲಿದೆ ಲೆಕ್ಕಾಚಾರ

ವರ್ಷಾಂತ್ಯದಲ್ಲಿ ತೆರೆಕಂಡ ಉಪೇಂದ್ರ ಅವರ 'ಯುಐ' ಮತ್ತು ಸುದೀಪ್ ಅವರ 'ಮ್ಯಾಕ್ಸ್' ಚಿತ್ರಗಳು ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಗಳಿಕೆ ಮಾಡಿವೆ. 'ಯುಐ' ಚಿತ್ರ ಉತ್ತಮ ಕಲೆಕ್ಷನ್ ಮಾಡುತ್ತಿದೆ. 'ಮ್ಯಾಕ್ಸ್' ಕೂಡ ಪ್ರೇಕ್ಷಕರನ್ನು ಆಕರ್ಷಿಸುತ್ತಿದೆ. ಎರಡೂ ಚಿತ್ರಗಳ ಯಶಸ್ಸು ಮತ್ತು ಅವುಗಳ ಬಾಕ್ಸ್ ಆಫೀಸ್ ಗಳಿಕೆ ಬಗ್ಗೆ ಇಲ್ಲಿದೆ ವಿವರ.

‘ಮ್ಯಾಕ್ಸ್’ ರಿಲೀಸ್ ಬಳಿಕ ಹೇಗಿದೆ ‘ಯುಐ’ ಕಲೆಕ್ಷನ್; ಇಲ್ಲಿದೆ ಲೆಕ್ಕಾಚಾರ
ಯುಐ-ಮ್ಯಾಕ್ಸ್
Follow us
ರಾಜೇಶ್ ದುಗ್ಗುಮನೆ
|

Updated on: Dec 28, 2024 | 9:05 AM

ವರ್ಷಾಂತ್ಯಕ್ಕೆ ಸಿನಿಪ್ರಿಯರಿಗೆ ಭರ್ಜರಿ ಹಬ್ಬದೂಟ ಸಿಕ್ಕಿದೆ. ಕನ್ನಡದಲ್ಲಿ ಬ್ಯಾಕ್ ಟು ಬ್ಯಾಕ್ ಎರಡು ಬಿಗ್ ಸಿನಿಮಾಗಳು ರಿಲೀಸ್ ಆಗಿದ್ದು, ಗಮನ ಸೆಳೆದಿದೆ. ಯಾವ ಸಿನಿಮಾ ನೋಡಬೇಕು ಎನ್ನುವ ಗೊಂದಲ ಸಿನಿಪ್ರಿಯರಿಗೆ ಮೂಡಿದೆ. ಈ ಮಧ್ಯೆ ಎರಡೂ ಚಿತ್ರಗಳ ಗಳಿಕೆ ಯಾವ ರೀತಿಯಲ್ಲಿ ಇದೆ? ಯಾವ ಸಿನಿಮಾ ಹೆಚ್ಚು ಕಲೆಕ್ಷನ್ ಮಾಡಿದೆ? ಆ ಬಗ್ಗೆ ಇಲ್ಲಿದೆ ಮಾಹಿತಿ.

ಉಪೇಂದ್ರ ನಟಿಸಿ, ನಿರ್ದೇಶಿಸಿರುವ ‘ಯುಐ’ ಚಿತ್ರ ಡಿಸೆಂಬರ್ 20ರಂದು ರಿಲೀಸ್ ಆಯಿತು. ಜನರು ಈ ಚಿತ್ರ ನೋಡಿ ಫ್ಯಾನ್ಸ್ ಭರ್ಜರಿ ಮೆಚ್ಚುಗೆ ಸೂಚಿಸಿದರು. ಅನೇಕರು ತಲೆಗೆ ಹುಳಬಿಟ್ಟುಕೊಂಡರು. ಒಟ್ಟಾರೆ ಜನರಿಗೆ ಈ ಚಿತ್ರ ಇಷ್ಟ ಆಯಿತು. ಈ ಸಿನಿಮಾನ ಫ್ಯಾನ್ಸ್ ಮತ್ತೆ ಮತ್ತೆ ಹೋಗಿ ವೀಕ್ಷಣೆ ಮಾಡಿದರು. ಈ ಸಿನಿಮಾದ ಹವಾ ಇರುವಾಗಲೇ ‘ಮ್ಯಾಕ್ಸ್’ ಸಿನಿಮಾ ರಿಲೀಸ್ ಆಯಿತು.

ಸುದೀಪ್ ನಟನೆಯ ‘ಮ್ಯಾಕ್ಸ್’ ಸಿನಿಮಾ ಡಿಸೆಂಬರ್ 25ರಂದು ತೆರೆಗೆ ಬಂತು. ಈ ಚಿತ್ರ ಮಾಸ್ ಆ್ಯಕ್ಷನ್ ಶೈಲಿಯಲ್ಲಿ ಮೂಡಿ ಬಂತು. ಈ ಚಿತ್ರದಲ್ಲಿ ಭರ್ಜರಿ ಆ್ಯಕ್ಷನ್ ಹಾಗೂ ಸಸ್ಪೆನ್ಸ್ ಇದೆ ಎಂಬ ಕಾರಣಕ್ಕೆ ಜನರು ಮುಗಿಬಿದ್ದು ಸಿನಿಮಾ ವೀಕ್ಷಿಸುತ್ತಿದ್ದಾರೆ. ಈ ಕಾರಣಕ್ಕೆ ‘ಯುಐ’ ಚಿತ್ರದ ಕಲೆಕ್ಷನ್ ಕೊಂಚ ತಗ್ಗಿದೆ.

ಡಿಸೆಂಬರ್ 27ರಂದು ‘ಯುಐ’ ಚಿತ್ರ ಕೇವಲ ಒಂದು ಕೋಟಿ ರೂಪಾಯಿ ಗಳಿಕೆ ಮಾಡಿದೆ. ಈ ಮೂಲಕ ಚಿತ್ರದ ಒಟ್ಟಾರೆ ಗಳಿಕೆ 26.3 ಕೋಟಿ ರೂಪಾಯಿ ಆಗಿದೆ. ಏಳು ದಿನಗಳಲ್ಲಿ ಸಿನಿಮಾ ಇಷ್ಟು ದೊಡ್ಡ ಗಳಿಕೆ ಮಾಡಿದರೆ ‘ಯುಐ’ ಕೇವಲ ಮೂರೇ ದಿನಕ್ಕೆ 16 ಕೋಟಿ ರೂಪಾಯಿ ಬಾಚಿಕೊಂಡಿದೆ. ಇಂದು (ಡಿಸೆಂಬರ್ 28) ಹಾಗೂ ನಾಳೆ (ಡಿಸೆಂಬರ್ 29) ಸಿನಿಮಾ ಭರ್ಜರಿ ಕಲೆಕ್ಷನ್ ಮಾಡುವ ನಿರೀಕ್ಷೆ ಇದೆ.

ಇದನ್ನೂ ಓದಿ: ಬಾಸಿಸಂ​ ಕೇಕ್​ ವಿವಾದಕ್ಕೆ ಸ್ಪಷ್ಟನೆ ನೀಡಿದ ಸುದೀಪ್​ ಆಪ್ತ ಪ್ರದೀಪ್​

ಸುದೀಪ್ ಹಾಗೂ ಉಪೇಂದ್ರ ಮಧ್ಯೆ ಒಳ್ಳೆಯ ಬಾಂಡಿಂಗ್ ಇದೆ. ಸುದೀಪ್ ಅವರು ಉಪೇಂದ್ರ ಅವರ ಅಭಿಮಾನಿ ಕೂಡ ಹೌದು. ಆದಾಗ್ಯೂ ಎರಡೂ ಸಿನಿಮಾಗಳು ಒಟ್ಟಿಗೆ ತೆರೆಗೆ ಬಂದಿದ್ದು ಏಕೆ ಎಂಬ ಪ್ರಶ್ನೆ ಅನೇಕರಲ್ಲಿ ಮೂಡಿದೆ. ಇದಕ್ಕೆ ಕಾರಣವೂ ಇದೆ ಎಂದು ಹೇಳಲಾಗುತ್ತಿದೆ. ‘ಮ್ಯಾಕ್ಸ್’ ಸಿನಿಮಾಗೆ ತಮಿಳಿನ ನಿರ್ಮಾಪಕರು. ಈ ಕಾರಣಕ್ಕೆ ರಿಲೀಸ್ ಕೂಡ ಅವರದ್ದೇ ನಿರ್ಧಾರ ಎನ್ನಲಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.