
UI
ಉಪೇಂದ್ರ ಅವರು ಕನ್ನಡದಲ್ಲಿ ಭಿನ್ನ ಸಿನಿಮಾಗಳನ್ನು ನಿರ್ದೇಶನ ಮಾಡುವುದರಲ್ಲಿ ಎತ್ತಿದ ಕೈ. ಅವರು 2015ರಲ್ಲಿ ರಿಲೀಸ್ ಆದ ‘ಉಪ್ಪಿ 2’ ನಿರ್ದೇಶನದ ಬಳಿಕ ಕೈಗೆತ್ತಿಕೊಂಡ ಸಿನಿಮಾ ಎಂದರೆ ‘ಯುಐ’. ಉಪೇಂದ್ರ ಅವರೇ ಕಥೆ ಬರೆದು, ನಿರ್ದೇಶನ ಮಾಡಿದ್ದಾರೆ. ಮನೋಹರನ್ ಹಾಗೂ ಕೆಪಿ ಶ್ರೀಕಾಂತ್ ಸಿನಿಮಾನ ನಿರ್ಮಾಣ ಮಾಡಿದ್ದಾರೆ. ಈ ಚಿತ್ರದ ಮೂಲಕ ಪ್ರೇಕ್ಷಕರ ತಲೆಗೆ ಹುಳ ಬಿಡುವ ಕೆಲಸವನ್ನು ಉಪೇಂದ್ರ ಮಾಡಲಿದ್ದಾರೆ. ಈ ಸಿನಿಮಾದಲ್ಲಿ ಉಪೇಂದ್ರ ಅವರ ಜೊತೆಗೆ ರೀಷ್ಮಾ ನಾಣಯ್ಯ, ಓಂ ಸಾಯಿ ಪ್ರಕಾಶ್ ಮೊದಲಾದವರು ನಟಿಸಿದ್ದಾರೆ. ಈ ಚಿತ್ರದ ಬಹುತೇಕ ದೃಶ್ಯ ಗ್ರಾಫಿಕ್ಸ್ನಿಂದ ಕೂಡಿರಲಿದೆ. ಕ್ರಿಸ್‌ಮಸ್ ಪ್ರಯುಕ್ತ ಈ ಚಿತ್ರ ಇದೇ ಡಿಸೆಂಬರ್ 20ರಂದು ರಿಲೀಸ್ ಆಗಲಿದೆ. ಇದರ ರಿಲೀಸ್ಗೆ ಫ್ಯಾನ್ಸ್ ಕಾದಿದ್ದಾರೆ. ಉಪೇಂದ್ರ ಅವರು ನಿರ್ದೇಶಕನಾಗಿ ಮತ್ತೆ ಮೆಚ್ಚುಗೆ ಪಡೆಯುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ
ಯುಗಾದಿಗೆ ನಿಮ್ಮ ಮುಂದೆ ಬರ್ತಿದೆ ‘ಯುಐ’ ಸಿನಿಮಾ; ಎಲ್ಲಿ? ಎಷ್ಟು ಗಂಟೆಗೆ?
ಉಪೇಂದ್ರ ನಿರ್ದೇಶನದ ‘ಯುಐ’ ಚಿತ್ರವು ಮಾರ್ಚ್ 30ರಂದು ಟಿವಿಯಲ್ಲಿ ಪ್ರಸಾರ ಕಾಣುತ್ತಿದೆ. ಯೇಟರ್‌ನಲ್ಲಿ ಯಶಸ್ವಿಯಾದ ಈ ಚಿತ್ರ ಒಟಿಟಿಗೆ ಬಿಡುಗಡೆಯಾಗದೆ ನೇರವಾಗಿ ಟಿವಿಯಲ್ಲಿ ಪ್ರಸಾರವಾಗುತ್ತಿದೆ. ಚಿತ್ರದಲ್ಲಿ ಸಮಾಜದ ವಿವಿಧ ಅಂಶಗಳನ್ನು ಪ್ರಸ್ತಾಪಿಸಲಾಗಿದೆ. "ಟ್ರೋಲ್" ಹಾಡು ವಿಶೇಷ ಆಕರ್ಷಣೆಯಾಗಿದೆ. ದುನಿಯಾ ವಿಜಯ್ ನಟಿಸಿ, ನಿರ್ದೇಶಿಸಿರುವ ‘ಭೀಮ’ ಸಿನಿಮಾ ಕೂಡ ಅದೇ ದಿನ ಪ್ರಸಾರ ಕಾಣುತ್ತಿದೆ.
- Shreelaxmi H
- Updated on: Mar 26, 2025
- 9:17 am
ಒಟಿಟಿಯಲ್ಲಿ ‘ಯುಐ’ ಚಿತ್ರಕ್ಕಾಗಿ ಕಾದವರಿಗೆ ಸಿಹಿ ಸುದ್ದಿ? ಇಲ್ಲಿದೆ ಅಪ್ಡೇಟ್
ಉಪೇಂದ್ರ ನಟನೆಯ ಹಾಗೂ ನಿರ್ದೇಶನದ ‘ಯುಐ’ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ದೊಡ್ಡ ಯಶಸ್ಸು ಕಂಡಿತು. ಈಗ ಒಟಿಟಿ ರಿಲೀಸ್ ಬಗ್ಗೆ ಅಭಿಮಾನಿಗಳಲ್ಲಿ ಕುತೂಹಲವಿದೆ. ಮಾರ್ಚ್ ಅಂತ್ಯಕ್ಕೆ ಜೀ5 ನಲ್ಲಿ ಈ ಸಿನಿಮಾ ರಿಲೀಸ್ ಆಗುವ ಸಾಧ್ಯತೆ ಇದೆ ಎಂದು ವರದಿಯಾಗಿದೆ, ಆದರೆ ಅಧಿಕೃತ ಘೋಷಣೆ ಇನ್ನೂ ಬಾಕಿ ಇದೆ.
- Rajesh Duggumane
- Updated on: Mar 6, 2025
- 12:39 pm
ಟೆಲಿವಿಷನ್ ಪ್ರೀಮೀಯರ್ಗೆ ‘ಮ್ಯಾಕ್ಸ್’ ಹಾಗೂ ‘ಯುಐ’ ರೆಡಿ; ಟಿಆರ್ಪಿ ಕ್ಲ್ಯಾಶ್
ಮ್ಯಾಕ್ಸ್ ಮತ್ತು UI ಎರಡೂ ಸೂಪರ್ ಹಿಟ್ ಕನ್ನಡ ಚಿತ್ರಗಳು ಇತ್ತೀಚೆಗೆ ಬಾಕ್ಸ್ ಆಫೀಸ್‌ನಲ್ಲಿ ದೊಡ್ಡ ಯಶಸ್ಸು ಕಂಡಿವೆ. ಈಗ ಈ ಎರಡು ಚಿತ್ರಗಳು ಜೀ ಕನ್ನಡದಲ್ಲಿ ಪ್ರಸಾರಗೊಳ್ಳಲಿವೆ. ಆದರೆ, ನಿಖರವಾದ ದಿನಾಂಕ ಇನ್ನೂ ಘೋಷಣೆಯಾಗಿಲ್ಲ. ಸುದೀಪ್ ನಟನೆಯ ಮ್ಯಾಕ್ಸ್ ಮತ್ತು ಉಪೇಂದ್ರ ನಿರ್ದೇಶನದ UI ಚಿತ್ರಗಳು ಟಿವಿಯಲ್ಲಿ ಯಾವ ದಿನ ಪ್ರಸಾರವಾಗುತ್ತವೆ ಎಂಬುದು ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ.
- Shreelaxmi H
- Updated on: Feb 2, 2025
- 6:30 am
ಹೊಸ ವರ್ಷದ ಮೊದಲ ದಿನವೇ ದಾಖಲೆಯ ಗಳಿಕೆ ಮಾಡಿದ ‘ಮ್ಯಾಕ್ಸ್’; ಮಂಕಾದ ‘ಯುಐ’
‘ಮ್ಯಾಕ್ಸ್’ ಚಿತ್ರ ಹೊಸ ವರ್ಷದಲ್ಲಿ ಅದ್ಭುತ ಗಳಿಕೆ ಮಾಡಿದೆ. ‘ಯುಐ’ ಚಿತ್ರದ ಗಳಿಕೆ ಕಡಿಮೆಯಾಗಿದೆ. ‘ಮ್ಯಾಕ್ಸ್’ ಚಿತ್ರದ ಜನಪ್ರಿಯತೆ ಹೆಚ್ಚಾಗಿದ್ದು, ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದಿದೆ. ಇದರಿಂದಾಗಿ ಬಾಕ್ಸ್ ಆಫೀಸ್‌ನಲ್ಲಿ ಉತ್ತಮ ಗಳಿಕೆಯಾಗಿದೆ. 2024ರಲ್ಲಿ ಕರ್ನಾಟಕದಲ್ಲಿ ಅತಿ ಹೆಚ್ಚು ಗ್ರಾಸ್ ಕಲೆಕ್ಷನ್ ಮಾಡಿದ ಸಿನಿಮಾ ಎಂಬ ಹೆಗ್ಗಳಿಕೆಗೆ ಈ ಚಿತ್ರ ಪಾತ್ರವಾಗಿದೆ.
- Rajesh Duggumane
- Updated on: Jan 2, 2025
- 10:04 am
‘ಯುಐ’ ಚಿತ್ರದ ಗಳಿಕೆ ಹಿಂದಿಕ್ಕಿದ ‘ಮ್ಯಾಕ್ಸ್’; ಯಾವ ಸಿನಿಮಾದ ಕಲೆಕ್ಷನ್ ಎಷ್ಟು?
ಉಪೇಂದ್ರ ನಟನೆಯ ‘ಯುಐ’ ಮತ್ತು ಸುದೀಪ್ ನಟನೆಯ ‘ಮ್ಯಾಕ್ಸ್’ ಚಿತ್ರಗಳು ಕೇವಲ ಐದು ದಿನಗಳ ಅಂತರದಲ್ಲಿ ಬಿಡುಗಡೆಯಾಗಿ ಬಾಕ್ಸ್ ಆಫೀಸ್ ನಲ್ಲಿ ಭರ್ಜರಿ ಯಶಸ್ಸು ಕಂಡಿದೆ. ‘ಮ್ಯಾಕ್ಸ್’ ಚಿತ್ರವು ಚಿಕ್ಕ ಅವಧಿಯಲ್ಲಿಯೇ ‘ಯುಐ’ ಚಿತ್ರದ ಕಲೆಕ್ಷನ್ ಅನ್ನು ಮೀರಿಸಿದೆ. ಎರಡೂ ಚಿತ್ರಗಳು ಉತ್ತಮ ಪ್ರತಿಕ್ರಿಯೆಯನ್ನು ಪಡೆದಿದ್ದರೂ, ‘ಮ್ಯಾಕ್ಸ್’ ಚಿತ್ರವು ಹೆಚ್ಚಿನ ರೇಟಿಂಗ್ ಮತ್ತು ಕಲೆಕ್ಷನ್ ಅನ್ನು ಪಡೆದುಕೊಂಡಿದೆ.
- Rajesh Duggumane
- Updated on: Dec 31, 2024
- 9:40 am
‘ಯುಐ’-‘ಬೇಬಿ ಜಾನ್’ ಗಳಿಕೆ ಹಿಂದಿಕ್ಕಿ ದಾಖಲೆ ಬರೆಯಲು ರೆಡಿ ಆದ ‘ಮ್ಯಾಕ್ಸ್’; ಕ್ರಿಸ್ಮಸ್ನ ರಿಯಲ್ ವಿನ್ನರ್
ಕ್ರಿಸ್‌ಮಸ್ ಹಬ್ಬದಲ್ಲಿ ಬಿಡುಗಡೆಯಾದ ‘ಯುಐ’ ಮತ್ತು ‘ಮ್ಯಾಕ್ಸ್’ ಕನ್ನಡ ಚಿತ್ರಗಳು ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಗಳಿಕೆ ಮಾಡಿವೆ. ‘ಮ್ಯಾಕ್ಸ್’ ಚಿತ್ರ ಕೇವಲ ಐದು ದಿನಗಳಲ್ಲಿ 28 ಕೋಟಿ ರೂಪಾಯಿ ಗಳಿಸಿದೆ. ಈ ಮೂಲಕ ‘ಯುಐ’ ಚಿತ್ರದ ಗಳಿಕೆ ಹಿಂದಿಕ್ಕಲು ರೆಡಿ ಆಗಿದೆ. ಹಿಂದಿಯ ‘ಬೇಬಿ ಜಾನ್’ಚಿತ್ರದ ಗಳಿಕೆಗೆ ಹೋಲಿಸಿದರೆ, ‘ಮ್ಯಾಕ್ಸ್’ ಕ್ರಿಸ್ಮಸ್ನ ನಿಜವಾದ ವಿನ್ನರ್.
- Rajesh Duggumane
- Updated on: Dec 30, 2024
- 1:03 pm
‘ಯುಐ’ ಸಿನಿಮಾ ಗೆಲುವಿನ ಬಳಿಕ ಉಡುಪಿ ಕೃಷ್ಣನ ದರ್ಶನ ಪಡೆದ ಉಪೇಂದ್ರ
ನಟ ಉಪೇಂದ್ರ ಅವರಿಗೆ ‘ಯುಐ’ ಸಿನಿಮಾ ಮೂಲಕ ಗೆಲುವು ಸಿಕ್ಕಿದೆ. ಅವರು ನಿರ್ದೇಶನ ಮಾಡಿದ ಸಿನಿಮಾ ಎಂಬ ಕಾರಣಕ್ಕೆ ‘ಯುಐ’ ಮೇಲೆ ದೊಡ್ಡ ಮಟ್ಟದ ನಿರೀಕ್ಷೆ ಇತ್ತು. ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿದ್ದರಿಂದ ಚಿತ್ರತಂಡಕ್ಕೆ ಖುಷಿ ಆಗಿದೆ. ಈ ಸಿನಿಮಾದ ಯಶಸ್ಸಿನ ಬಳಿಕ ನಟ, ನಿರ್ದೇಶಕ ಉಪೇಂದ್ರ ಅವರು ಉಡುಪಿಯ ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಿದ್ದಾರೆ.
- Madan Kumar
- Updated on: Dec 29, 2024
- 8:05 pm
‘ಮ್ಯಾಕ್ಸ್’ ರಿಲೀಸ್ ಬಳಿಕ ಹೇಗಿದೆ ‘ಯುಐ’ ಕಲೆಕ್ಷನ್; ಇಲ್ಲಿದೆ ಲೆಕ್ಕಾಚಾರ
ವರ್ಷಾಂತ್ಯದಲ್ಲಿ ತೆರೆಕಂಡ ಉಪೇಂದ್ರ ಅವರ 'ಯುಐ' ಮತ್ತು ಸುದೀಪ್ ಅವರ 'ಮ್ಯಾಕ್ಸ್' ಚಿತ್ರಗಳು ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಗಳಿಕೆ ಮಾಡಿವೆ. 'ಯುಐ' ಚಿತ್ರ ಉತ್ತಮ ಕಲೆಕ್ಷನ್ ಮಾಡುತ್ತಿದೆ. 'ಮ್ಯಾಕ್ಸ್' ಕೂಡ ಪ್ರೇಕ್ಷಕರನ್ನು ಆಕರ್ಷಿಸುತ್ತಿದೆ. ಎರಡೂ ಚಿತ್ರಗಳ ಯಶಸ್ಸು ಮತ್ತು ಅವುಗಳ ಬಾಕ್ಸ್ ಆಫೀಸ್ ಗಳಿಕೆ ಬಗ್ಗೆ ಇಲ್ಲಿದೆ ವಿವರ.
- Rajesh Duggumane
- Updated on: Dec 28, 2024
- 9:05 am
UI Box Office Collection: ‘ಯುಐ’ ಸಿನಿಮಾದ ಸೋಮವಾರದ ಗಳಿಕೆ ಎಷ್ಟು? ‘ಮ್ಯಾಕ್ಸ್’ ಬಂದ ಬಳಿಕ ಮುಂದೇನು?
ಉಪೇಂದ್ರ ನಟನೆಯ ‘ಯುಐ’ ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಯಶಸ್ಸು ಕಂಡಿದೆ. ಕ್ರಿಸ್‌ಮಸ್ ರಜೆ ಚಿತ್ರಕ್ಕೆ ಅನುಕೂಲಕರವಾಗಿದೆ. ಆದರೆ, ಬುಧವಾರ ಬಿಡುಗಡೆಯಾಗುವ ‘ಮ್ಯಾಕ್ಸ್’ ಚಿತ್ರದಿಂದ ಯುಐ ಚಿತ್ರದ ಗಳಿಕೆಯ ಮೇಲೆ ಪರಿಣಾಮ ಬೀರಬಹುದು. ಉಪೇಂದ್ರ ಅವರು ‘ಯುಐ’ ಮೂಲಕ ದೊಡ್ಡ ಮಟ್ಟದ ಯಶಸ್ಸು ಕಂಡಿದ್ದಾರೆ.
- Rajesh Duggumane
- Updated on: Dec 24, 2024
- 9:40 am
‘ಯುಐ’ ಚಿತ್ರಕ್ಕೆ ಜಾಕ್ಪಾಟ್ ಗಳಿಕೆ; ಮೂರು ದಿನಕ್ಕೆ ದಾಖಲೆಯ ಕಲೆಕ್ಷನ್ ಮಾಡಿದ ಉಪ್ಪಿ ಸಿನಿಮಾ
ಉಪೇಂದ್ರ ನಟನೆಯ ‘ಯುಐ’ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಅದ್ಭುತ ಯಶಸ್ಸು ಕಂಡಿದೆ. ಮೂರು ದಿನಗಳಲ್ಲಿ ಚಿತ್ರ ಒಳ್ಳೆಯ ಗಳಿಕೆ ಮಾಡಿದೆ. ಕನ್ನಡದ ಜೊತೆ ತೆಲುಗು ಮತ್ತು ತಮಿಳಿನಲ್ಲೂ ಚಿತ್ರ ಒಳ್ಳೆಯ ಪ್ರತಿಕ್ರಿಯೆ ಪಡೆದಿದೆ. ವಿಭಿನ್ನ ನಿರ್ದೇಶನ ಮತ್ತು ಕಥಾವಸ್ತು ಇದಕ್ಕೆ ಕಾರಣ. 'ಮ್ಯಾಕ್ಸ್' ಸಿನಿಮಾ ಬಿಡುಗಡೆಯೊಂದಿಗೆ ಈ ಚಿತ್ರ ಥಿಯೇಟರ್‌ಗಳ ಹಂಚಿಕೆಯ ಸವಾಲು ಎದುರಿಸಬೇಕಿದೆ.
- Rajesh Duggumane
- Updated on: Dec 23, 2024
- 7:32 am