‘ಯುಐ’ ಚಿತ್ರದ ಗಳಿಕೆ ಹಿಂದಿಕ್ಕಿದ ‘ಮ್ಯಾಕ್ಸ್’; ಯಾವ ಸಿನಿಮಾದ ಕಲೆಕ್ಷನ್ ಎಷ್ಟು?

ಉಪೇಂದ್ರ ನಟನೆಯ ‘ಯುಐ’ ಮತ್ತು ಸುದೀಪ್ ನಟನೆಯ ‘ಮ್ಯಾಕ್ಸ್’ ಚಿತ್ರಗಳು ಕೇವಲ ಐದು ದಿನಗಳ ಅಂತರದಲ್ಲಿ ಬಿಡುಗಡೆಯಾಗಿ ಬಾಕ್ಸ್ ಆಫೀಸ್ ನಲ್ಲಿ ಭರ್ಜರಿ ಯಶಸ್ಸು ಕಂಡಿದೆ. ‘ಮ್ಯಾಕ್ಸ್’ ಚಿತ್ರವು ಚಿಕ್ಕ ಅವಧಿಯಲ್ಲಿಯೇ ‘ಯುಐ’ ಚಿತ್ರದ ಕಲೆಕ್ಷನ್ ಅನ್ನು ಮೀರಿಸಿದೆ. ಎರಡೂ ಚಿತ್ರಗಳು ಉತ್ತಮ ಪ್ರತಿಕ್ರಿಯೆಯನ್ನು ಪಡೆದಿದ್ದರೂ, ‘ಮ್ಯಾಕ್ಸ್’ ಚಿತ್ರವು ಹೆಚ್ಚಿನ ರೇಟಿಂಗ್ ಮತ್ತು ಕಲೆಕ್ಷನ್ ಅನ್ನು ಪಡೆದುಕೊಂಡಿದೆ.

‘ಯುಐ’ ಚಿತ್ರದ ಗಳಿಕೆ ಹಿಂದಿಕ್ಕಿದ ‘ಮ್ಯಾಕ್ಸ್’; ಯಾವ ಸಿನಿಮಾದ ಕಲೆಕ್ಷನ್ ಎಷ್ಟು?
ಉಪೇಂದ್ರ-ಸುದೀಪ್
Follow us
ರಾಜೇಶ್ ದುಗ್ಗುಮನೆ
|

Updated on:Dec 31, 2024 | 9:40 AM

ಉಪೇಂದ್ರ ನಟನೆಯ ‘ಯುಐ’ ಸಿನಿಮಾ ಹಾಗೂ ಸುದೀಪ್ ಅಭಿನಯದ ‘ಮ್ಯಾಕ್ಸ್’ ಚಿತ್ರ ಐದೇ ದಿನಗಳ ಅಂತರದಲ್ಲಿ ರಿಲೀಸ್ ಆಗಿದೆ. ‘ಯುಐ’ ಸಿನಿಮಾ ಡಿಸೆಂಬರ್ 20ರಂದು ತೆರೆಗೆ ಬಂದರೆ, ‘ಮ್ಯಾಕ್ಸ್’ ಸಿನಿಮಾ ಡಿಸೆಂಬರ್ 25ರಂದು ರಿಲೀಸ್ ಆಗಿದೆ. ಈ ಎರಡೂ ಸಿನಿಮಾಗಳನ್ನು ಜನರು ಮೆಚ್ಚಿಕೊಂಡಿದ್ದಾರೆ. ಆದರೆ, ಹೆಚ್ಚಿನ ರೇಟಿಂಗ್ ಸಿಕ್ಕಿದ್ದು ಹಾಗೂ ದೊಡ್ಡ ಮಟ್ಟದ ಕಲೆಕ್ಷನ್ ಆಗಿದ್ದು ‘ಮ್ಯಾಕ್ಸ್’ ಚಿತ್ರಕ್ಕೆ ಅನ್ನೋದು ವಿಶೇಷ.

‘ಯುಐ’ ಸಿನಿಮಾ ಬಾಕ್ಸ್ ಆಫೀಸ್​ನಲ್ಲಿ ಮೊದಲ ವಾರ ಒಳ್ಳೆಯ ಪರ್ಫಾರ್ಮೆನ್ಸ್ ನೀಡಿದೆ. ಈ ಸಿನಿಮಾಗೆ ಉಪೇಂದ್ರ ನಿರ್ದೇಶನ ಇದೆ ಎಂಬುದೇ ಚಿತ್ರಕ್ಕೆ ಪ್ಲಸ್ ಪಾಯಿಂಟ್ ಆಗಿದೆ. ಸಿನಿಮಾ ಭಿನ್ನವಾಗಿ ಮೂಡಿ ಬಂದಿದ್ದು, ಉಪೇಂದ್ರ ಹಲವು ವಿಚಾರಗಳನ್ನು ಹೇಳಿದ್ದಾರೆ. ಈ ಎಲ್ಲಾ ಕಾರಣದಿಂದ ಚಿತ್ರ ಉತ್ತಮ ಕಲೆಕ್ಷನ್ ಮಾಡಿದೆ. ಈ ಚಿತ್ರ 10 ದಿನಕ್ಕೆ ಸುಮಾರು 29.45 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. 11ನೇ ದಿನದ ಗಳಿಕೆ ಕೊಂಚ ತಗ್ಗಿದ್ದು, 30 ಕೋಟಿ ರೂಪಾಯಿ ಆಸುಪಾಸಿನಲ್ಲಿ ಚಿತ್ರದ ಗಳಿಕೆ ಇದೆ. ಈಗ ಮ್ಯಾಕ್ಸ್ ಈ ಗಳಿಕೆಯನ್ನು ಹಿಂದಿಕ್ಕಿದೆ ಎನ್ನಲಾಗಿದೆ.

‘ಮ್ಯಾಕ್ಸ್’ ಚಿತ್ರಕ್ಕೆ ಉತ್ತಮ ರೆಸ್ಪಾನ್ಸ್ ಸಿಕ್ಕಿದೆ. ಈ ಚಿತ್ರ ಸೋಮವಾರ (ಡಿಸೆಂಬರ್ 30) ಎರಡೂವರೆ ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ವಾರದ ದಿನ ಇಷ್ಟು ದೊಡ್ಡ ಮಟ್ಟದ ಕಲೆಕ್ಷನ್ ಆಗಿರುವುದು ಚಿತ್ರಕ್ಕೆ ಸಹಕಾರಿ ಆಗಿದೆ. ಈ ಮೂಲಕ ಚಿತ್ರದ ಒಟ್ಟಾರೆ ಕಲೆಕ್ಷನ್ 30.15 ಕೋಟಿ ರೂಪಾಯಿ ಆಗಿದೆ. ಈ ಮೂಲಕ ‘ಯುಐ’ ಕಲೆಕ್ಷನ್ ಹಿಂದಿಕ್ಕಿದೆ.

‘ಯುಐ’ 30 ಕೋಟಿ ರೂಪಾಯಿ ಕ್ಲಬ್ ಸೇರಲು ತೆಗೆದುಕೊಂಡಿದ್ದು ಬರೋಬ್ಬರಿ 11 ದಿನ. ಆದರೆ, ಸುದೀಪ್ ಸಿನಿಮಾ ಕೇವಲ 6 ದಿನಕ್ಕೆ ಇಷ್ಟು ದೊಡ್ಡ ಮಟ್ಟದ ಕಲೆಕ್ಷನ್ ಮಾಡಿದೆ ಅನ್ನೋದು ವಿಶೇಷ. ಈ ಸಿನಿಮಾದಿಂದ ನಿರ್ಮಾಪಕರ ಮೊಗದಲ್ಲಿ ಖುಷಿ ಮೂಡಿದೆ.

ಇದನ್ನೂ ಓದಿ: ‘ಮ್ಯಾಕ್ಸ್’ ಕಲೆಕ್ಷನ್ ಎಷ್ಟು? ನಿರ್ಮಾಪಕನಾಗಿ ಕಿಚ್ಚ ಸುದೀಪ್ ಹೇಳಿದ್ದೇನು?

ಈಗಾಗಲೇ ಉಪೇಂದ್ರ ಹಾಗೂ ಸುದೀಪ್ ಎರಡೂ ಸಿನಿಮಾಗಳು ಸಕ್ಸಸ್​ಮೀಟ್​ನ ಆಯೋಜಿಸಿವೆ. ಉಪೇಂದ್ರ ಅವರು ಹಲವು ವರ್ಷಗಳ ಬಳಿಕ ನಿರ್ದೇಶನಕ್ಕೆ ಮರಳಿರೋದು ಅಭಿಮಾನಿಗಳಿಗೆ ಖುಷಿ ಕೊಟ್ಟಿದೆ. ‘ಮ್ಯಾಕ್ಸ್’ ಮೂಲಕ ಸುದೀಪ್ ಮಾಸ್ ಅವತಾರ ತಾಳಿದ್ದು ಚಿತ್ರಕ್ಕೆ ಸಹಕಾರಿ ಆಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 9:02 am, Tue, 31 December 24