ಬಾಲಿವುಡ್ನ ಈ ಖ್ಯಾತ ನಿರ್ದೇಶಕನಿಗೆ ಇಷ್ಟವಾಯ್ತು ‘ಎ’ ಹಾಗೂ ‘ಓಂ’; ನೇರವಾಗಿ ಉಪ್ಪಿ ನೋಡಲು ಬಂದ ಡೈರೆಕ್ಟರ್
ಬಾಲಿವುಡ್ ನಿರ್ದೇಶಕರೊಬ್ಬರು ಕನ್ನಡದ ಪ್ರಸಿದ್ಧ ನಿರ್ದೇಶಕ ಉಪೇಂದ್ರ ಅವರ 'ಓಂ' ಮತ್ತು 'ಎ' ಚಿತ್ರಗಳನ್ನು ಮೆಚ್ಚಿಕೊಂಡಿದ್ದಾರೆ. ರಾಮ್ ಗೋಪಾಲ್ ವರ್ಮಾ ಅವರ ಸಲಹೆಯ ಮೇರೆಗೆ ಈ ಚಿತ್ರಗಳನ್ನು ವೀಕ್ಷಿಸಿದಾಗಿ ಹೇಳಿರುವ ಅವರು, ಉಪೇಂದ್ರರ ನಿರ್ದೇಶನದ ಶೈಲಿಯನ್ನು ಮೆಚ್ಚಿಕೊಂಡಿದ್ದಾರೆ. ಆ ಬಗ್ಗೆ ಇಲ್ಲಿದೆ ವಿವರ.
ಉಪೇಂದ್ರ ನಿರ್ದೇಶನದ ಸಿನಿಮಾಗಳಿಗೆ ಪ್ರತ್ಯೇಕ ಅಭಿಮಾನಿ ವರ್ಗವೇ ಇದೆ. ಅವರ ನಿರ್ದೇಶನದ ‘ಓಂ’ ಸಿನಿಮಾ ಬರೆದ ದಾಖಲೆಗಳು ಒಂದೆರಡಲ್ಲ. ಅದೇ ರೀತಿ ಅವರ ನಿರ್ದೇಶನದ ‘ಎ’ ಕೂಡ ಸೂಪರ್ ಡೂಪರ್ ಹಿಟ್ ಆಯಿತು. ಉಪೇಂದ್ರ ಅವರಿಗೆ ಕೇವಲ ಕರ್ನಾಟಕದಲ್ಲಿ ಮಾತ್ರವಲ್ಲ ಪರಭಾಷೆಯಲ್ಲೂ ಅಭಿಮಾನಿಗಳು ಇದ್ದಾರೆ. ಬಾಲಿವುಡ್ನ ಖ್ಯಾತ ನಿರ್ದೇಶಕನಿಗೂ ‘ಎ’ ಹಾಗೂ ‘ಓಂ’ ಸಿನಿಮಾಗಳು ಇಷ್ಟ ಆಗಿವೆ. ಈ ಬಗ್ಗೆ ಅವರು ಓಪನ್ ಆಗಿ ಮಾತನಾಡಿದ್ದಾರೆ.
ಉಪೇಂದ್ರ ನಿರ್ದೇಶನದ ಈ ಸಿನಿಮಾಗಳ ಬಗ್ಗೆ ಮಾತನಾಡಿದ್ದು ಬೇರಾರೂ ಅಲ್ಲ ಬಾಲಿವುಡ್ನ ಖ್ಯಾತ ನಿರ್ದೇಶಕ ಅನುರಾಗ್ ಕಶ್ಯಪ್. ಭಿನ್ನ ಸಿನಿಮಾಗಳ ಮೂಲಕ ಅವರು ಗಮನ ಸೆಳೆದಿದ್ದಾರೆ. ನಟನೆಯಲ್ಲೂ ಅವರು ಹೆಸರು ಮಾಡಿದ್ದಾರೆ. ಅವರು ನಿರ್ದೇಶನ ಮಾಡಿದ ‘ಗ್ಯಾಂಗ್ ಆಫ್ ವಸ್ಸೇಪುರ್’ ಸಾಕಷ್ಟು ಹೆಸರು ಮಾಡಿದೆ. ‘ಮಹರಾಜ’ ಸಿನಿಮಾದಲ್ಲಿ ವಿಲನ್ ಪಾತ್ರ ಮಾಡಿ ಮೆಚ್ಚುಗೆ ಪಡೆದಿದ್ದಾರೆ. ಅನುರಾಗ್ ಕಶ್ಯಪ್ ಈಗ ಒಂದು ಅಚ್ಚರಿಯ ವಿಚಾರ ರಿವೀಲ್ ಮಾಡಿದ್ದಾರೆ.
ಸಂದರ್ಶನ ಒಂದರಲ್ಲಿ ಅನುರಾಗ್ ಕಶ್ಯಪ್ ಅವರು ಮಾತನಾಡಿದ್ದಾರೆ. ‘ದಕ್ಷಿಣದಲ್ಲಿ ಸಿನಿಮಾಗಳಲ್ಲಿ ನಾನು ನೋಡಿದ್ದು ಎಂದರೆ ಉಪೇಂದ್ರ ಅವರ ಸಿನಿಮಾಗಳು. ಅವರ ನಿರ್ದೇಶನದ ಎ ಹಾಗೂ ಓಂ ಸಿನಿಮಾ ನೋಡಿದ್ದೇನೆ. ರಾಮ್ ಗೋಪಾಲ್ ವರ್ಮಾ ಅವರು ಈ ಚಿತ್ರಗಳನ್ನು ನೋಡುವಂತೆ ಹೇಳಿದ್ದರು’ ಎಂದಿದ್ದಾರೆ ಅನುರಾಗ್ ಕಶ್ಯಪ್.
View this post on Instagram
ಅನುರಾಗ್ ಕಶ್ಯಪ್ ಅವರು ಉಪೇಂದ್ರ ಅವರ ಅಬಿಮಾನಿಯಾದರು. ಈ ಕಾರಣದಿಂದಲೇ ಅವರು ‘ಉಪೇಂದ್ರ’ ಸಿನಿಮಾದ ಶೂಟಿಂಗ್ ಮಾಡುವಾಗ ಮಂಗಳೂರಿಗೆ ತೆರಳಿದ್ದರು. ಸೆಟ್ನಲ್ಲಿ ಅವರು ಸಮಯ ಕಳೆದು ಬಂದಿದ್ದರು. ಈ ವಿಚಾರ ಕೇಳಿ ಅನೇಕರಿಗೆ ಅಚ್ಚರಿ ಆಗಿದೆ. ಈ ವಿಡಿಯೋ ಕ್ಲಿಪ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಇದನ್ನೂ ಓದಿ: ‘ಯುಐ’ ಸಿನಿಮಾ ಗೆಲುವಿನ ಬಳಿಕ ಉಡುಪಿ ಕೃಷ್ಣನ ದರ್ಶನ ಪಡೆದ ಉಪೇಂದ್ರ
ಉಪೇಂದ್ರ ಅವರು ಸದ್ಯ ‘ಯುಐ’ ಸಿನಿಮಾದ ಯಶಸ್ಸಿನ ಅಲೆಯಲ್ಲಿ ತೇಲುತ್ತಿದ್ದಾರೆ. ಈ ಚಿತ್ರ ಬಾಕ್ಸ್ ಆಫೀಸ್ನಲ್ಲಿ ಒಳ್ಳೆಯ ಕಲೆಕ್ಷನ್ ಮಾಡುತ್ತಿದೆ. ಈ ಚಿತ್ರಕ್ಕೆ ಅವರದ್ದೇ ನಿರ್ದೇಶನ ಇರುವುದರಿಂದ ಹೆಚ್ಚಿನ ಕ್ರೇಜ್ ಸೃಷ್ಟಿ ಆಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 11:57 am, Tue, 31 December 24