ನವೀನ್ ಎಂದಿದ್ದ ಹೆಸರನ್ನು ಬದಲಿಸಿಕೊಂಡಿದ್ದೇಕೆ ಯಶ್? ಅದಕ್ಕಿದೆ ಮುಖ್ಯ ಕಾರಣ

ರಾಕಿಂಗ್ ಸ್ಟಾರ್ ಯಶ್ ಅವರ ನಿಜವಾದ ಹೆಸರು ನವೀನ್ ಎಂಬುದು ಕಡಿಮೆ ಜನರಿಗೆ ತಿಳಿದಿರುವ ವಿಷಯ. ಅವರು ತಮ್ಮ ಚಲನಚಿತ್ರ ವೃತ್ತಿಜೀವನಕ್ಕಾಗಿ ಯಶ್ ಎಂಬ ಹೆಸರನ್ನು ಆಯ್ಕೆ ಮಾಡಿಕೊಂಡರು. ವೃತ್ತಿಪರ ಕಾರಣಗಳಿಂದಾಗಿ ಈ ಹೆಸರು ಬದಲಾವಣೆ ನಡೆದಿದೆ ಎಂದು ಅವರು ಸಂದರ್ಶನ ಒಂದರಲ್ಲಿ ಹೇಳಿಕೊಂಡಿದ್ದರು.

ನವೀನ್ ಎಂದಿದ್ದ ಹೆಸರನ್ನು ಬದಲಿಸಿಕೊಂಡಿದ್ದೇಕೆ ಯಶ್? ಅದಕ್ಕಿದೆ ಮುಖ್ಯ ಕಾರಣ
ಯಶ್
Follow us
 ಶ್ರೀಲಕ್ಷ್ಮೀ ಎಚ್
| Updated By: ರಾಜೇಶ್ ದುಗ್ಗುಮನೆ

Updated on:Dec 31, 2024 | 7:50 AM

ರಾಕಿಂಗ್ ಸ್ಟಾರ್ ಯಶ್ ಅವರ ಹೆಸರು ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಎಲ್ಲರಿಗೂ ಯಶ್ ಹೆಸರು ಪರಿಚಿತ. ಇದಕ್ಕೆ ಕಾರಣ ಆಗಿದ್ದು ‘ಕೆಜಿಎಫ್’ ಹಾಗೂ ‘ಕೆಜಿಎಫ್ 2’ ಸಿನಿಮಾ. ಇದು ಯಶ್ ಅವರ ವೃತ್ತಿ ಜೀವನವನ್ನೇ ಬದಲಿಸಿತ್ತು. ಯಶ್ ಅವರು ಇಷ್ಟು ದೊಡ್ಡ ಮಟ್ಟದಲ್ಲಿ ಹೆಸರು ಮಾಡಿದ್ದರೂ ಅವರು ಬೇರನ್ನು ಮರೆತಿಲ್ಲ. ಕನ್ನಡದಲ್ಲೇ ಸಿನಿಮಾ ಮಾಡಲು ಆದ್ಯತೆ ನೀಡುತ್ತಿದ್ದಾರೆ. ಯಶ್ ಅವರ ಬಗೆಗಿನ ಅಪರೂಪದ ವಿಚಾರಗಳು ಆಗಾಗ ಚರ್ಚೆ ಆಗುತ್ತಲೇ ಇರುತ್ತವೆ. ಈಗ ಯಶ್ ಅವರ ಮೊದಲ ಹೆಸರ ಬಗ್ಗೆ ಚರ್ಚೆ ಜೋರಾಗಿದೆ.

ಯಶ್ ಅವರ ಮೊದಲ ಹೆಸರು ನವೀನ್ ಎಂದು. ಮೊದಲಿನಿಂದಲೂ ಈ ಹೆಸರು ಚಾಲ್ತಿಯಲ್ಲಿ ಇದೆ. ಆದರೆ, ಅದನ್ನು ಅವರು ಯಶ್ ಎಂದು ಇಂಡಸ್ಟ್ರಿಗೆ ಬರುವಾಗ ಬದಲಿಸಿಕೊಂಡರು. ಅವರು ಈ ರೀತಿ ಮಾಡಲು ಕಾರಣ ಏನು ಎಂಬುದನ್ನು ಸ್ವತಃ ಅವರೇ ರಿವೀಲ್ ಮಾಡಿದ್ದರು. ಈ ವಿಡಿಯೋ ಈಗ ಮತ್ತೆ ವೈರಲ್ ಆಗಿದೆ.

ಸಂದರ್ಶನ ಒಂದರಲ್ಲಿ ಯಶ್ ಅವರು ಮಾತನಾಡಿದ್ದರು. ಮೊದಲು ನವೀನ್ ಎಂದು ಇದ್ದ ಹೆಸರನ್ನು ಯಶ್ ಆಗಿ ಬದಲಿಸಿಕೊಂಡಿದ್ದು ಏಕೆ ಎಂಬುದನ್ನು ಅವರು ಹೇಳಿದ್ದರು. ‘ಜಾತಕದ ಪ್ರಕಾರ ಒಂದು ಹೆಸರು ಇಡಬೇಕಿತ್ತು. ಅದನ್ನು ‘ಯ’ ಅಕ್ಷರದಿಂದ ಇಡಬೇಕಿತ್ತು. ಹೀಗಾಗಿ, ಯಶ್ವಂತ್ ಎಂದು ಹೆಸರು ಇಟ್ಟಿದ್ದರು. ಮನೆಯಲ್ಲಿ ಕರೆಯುತ್ತಿದ್ದು ಯಶ್ ಅಂತ. ಆದರೆ, ಇದು ಅಧಿಕೃತವಾಗಿ ಇಟ್ಟ ಹೆಸರು ಆಗಿರಲಿಲ್ಲ’ ಎಂದಿದ್ದರು ಯಶ್.

‘ಜನವರಿಯಲ್ಲಿ ಹುಟ್ಟಿದೆ ಅನ್ನೋ ಕಾರಣಕ್ಕೆ ನವೀನ್ ಎಂದು ಹೆಸರು ಇಟ್ಟಿದ್ದರು. ಇಂಡಸ್ಟ್ರಿಗೆ ಬಂದಾಗ ಹೆಸರು ಬದಲಾಯಿಸಿದೆ. ಧಾರಾವಾಹಿಗೆ ಹೆಸರು ಕೊಡೋಕೆ ಹೋದೆ. ಆಗ ನವೀನ್ ಎಂದು ಸಾಕಷ್ಟು ಜನರು ಇದ್ದರು. ಗೊಂದಲ ಎಂಬ ಕಾರಣಕ್ಕೆ ಆಗ ಯಶ್ ಎಂದು ಹೆಸರು ಕೊಟ್ಟೆ. ಅಲ್ಲಿಂದ ಅದುವೇ ಚಾಲ್ತಿಗೆ ಬಂತು’ ಎಂದಿದ್ದರು ಯಶ್.

ಇದನ್ನೂ ಓದಿ: ಫ್ಲೆಕ್ಸ್, ಬ್ಯಾನರ್ ಆಡಂಬರ ಬೇಡ: ಯಶ್ ಹುಟ್ಟುಹಬ್ಬಕ್ಕೆ ಮುಖ್ಯವಾದ ಸಂದೇಶ

ಯಶ್ ಅವರು ಈಗ ಅಧಿಕೃತವಾಗಿ ಎಲ್ಲ ಕಡೆಗಳಲ್ಲಿ ನವೀನ್ ಎಂಬ ಹೆಸರನ್ನು ಯಶ್ ಎಂದೇ ಬದಲಿಸಿಕೊಂಡಿದ್ದಾರೆ. ಅವರ ರೇಂಜ್ ರೋವರ್ ಕಾರು ಯಶ್ ಹೆಸರಲ್ಲೇ ನೋಂದಣಿ ಆಗಿದೆ. ನವೀನ್ ಎಂಬುದು ಈಗ ಎಲ್ಲಿಯೂ ಬಳಕೆಯಲ್ಲಿ ಇಲ್ಲ. ಆದಾಗ್ಯೂ ಈ ವಿಚಾರ ಆಗಾಗ ಚರ್ಚೆ ಆಗುತ್ತಲೇ ಇರುತ್ತದೆ. ಯಶ್ ಅವರು ಸದ್ಯ ‘ಟಾಕ್ಸಿಕ್’ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ಇದಲ್ಲದೆ ರಾಮಾಯಣ ಚಿತ್ರ ಕೂಡ ಅವರ ಕೈಯಲ್ಲಿ ಇದ್ದು, ಇದರಲ್ಲಿ ರಾವಣನ ಪಾತ್ರ ಮಾಡುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 7:49 am, Tue, 31 December 24