ಟೆಲಿವಿಷನ್ ಪ್ರೀಮೀಯರ್ಗೆ ‘ಮ್ಯಾಕ್ಸ್’ ಹಾಗೂ ‘ಯುಐ’ ರೆಡಿ; ಟಿಆರ್ಪಿ ಕ್ಲ್ಯಾಶ್
ಮ್ಯಾಕ್ಸ್ ಮತ್ತು UI ಎರಡೂ ಸೂಪರ್ ಹಿಟ್ ಕನ್ನಡ ಚಿತ್ರಗಳು ಇತ್ತೀಚೆಗೆ ಬಾಕ್ಸ್ ಆಫೀಸ್‌ನಲ್ಲಿ ದೊಡ್ಡ ಯಶಸ್ಸು ಕಂಡಿವೆ. ಈಗ ಈ ಎರಡು ಚಿತ್ರಗಳು ಜೀ ಕನ್ನಡದಲ್ಲಿ ಪ್ರಸಾರಗೊಳ್ಳಲಿವೆ. ಆದರೆ, ನಿಖರವಾದ ದಿನಾಂಕ ಇನ್ನೂ ಘೋಷಣೆಯಾಗಿಲ್ಲ. ಸುದೀಪ್ ನಟನೆಯ ಮ್ಯಾಕ್ಸ್ ಮತ್ತು ಉಪೇಂದ್ರ ನಿರ್ದೇಶನದ UI ಚಿತ್ರಗಳು ಟಿವಿಯಲ್ಲಿ ಯಾವ ದಿನ ಪ್ರಸಾರವಾಗುತ್ತವೆ ಎಂಬುದು ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ.

ಕಳೆದ ವರ್ಷ ರಿಲೀಸ್ ಆದ ಸೂಪರ್ ಹಿಟ್ ಚಿತ್ರಗಳಲ್ಲಿ ‘ಮ್ಯಾಕ್ಸ್’ ಹಾಗೂ ‘ಯುಐ’ ಸಿನಿಮಾಗಳು ಮುಂಚೂಣಿಯಲ್ಲಿ ನಿಲ್ಲುತ್ತವೆ. ಡಿಸೆಂಬರ್ ಅಂತ್ಯದಲ್ಲಿ ಕೆಲವೇ ದಿನಗಳ ಅಂತರದಲ್ಲಿ ಈ ಚಿತ್ರಗಳು ರಿಲೀಸ್ ಆದವು. ಬಾಕ್ಸ್ ಆಫೀಸ್‌ನಲ್ಲಿ ಸಿನಿಮಾ ಗಮನ ಸೆಳೆದವು. ಈಗ ಚಿತ್ರಗಳು ಟಿವಿಯಲ್ಲಿ ಪ್ರಸಾರ ಕಾಣೋಕೆ ರೆಡಿ ಆಗಿವೆ. ಹಾಗಾದರೆ, ಯಾವ ದಿನಾಂಕಂದಂದು ಈ ಚಿತ್ರಗಳು ಟಿವಿಯಲ್ಲಿ ಪ್ರಸಾರ ಕಾಣುತ್ತವೆ? ಯಾವ ಚಾನೆಲ್ನಲ್ಲಿ ಎಂಬ ಪ್ರಶ್ನೆಗೆ ಉತ್ತರ ಹುಡುಕೋಣ.
‘ಮ್ಯಾಕ್ಸ್’ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಗಳಿಕೆ ಮಾಡಿದ ಚಿತ್ರ. ಸುದೀಪ್ ಅವರು ವೃತ್ತಿ ಜೀವನದಲ್ಲಿ ಇತ್ತೀಚೆಗೆ ಇಷ್ಟು ದೊಡ್ಡ ಮಟ್ಟದ ಗೆಲುವನ್ನು ನೋಡಿರಲಿಲ್ಲ ಎಂದರೂ ತಪ್ಪಾಗಲಾರದು. ಇಷ್ಟು ದೊಡ್ಡ ಖ್ಯಾತಿ ಪಡೆದ ‘ಮ್ಯಾಕ್ಸ್’ ಸಿನಿಮಾ ಜೀ ಕನ್ನಡದಲ್ಲಿ ಪ್ರಸಾರ ಕಾಣಲಿದೆ. ಇದಕ್ಕಾಗಿ ಫ್ಯಾನ್ಸ್ ಕಾದಿದ್ದಾರೆ. ‘ಮ್ಯಾಕ್ಸ್’ ಸಿನಿಮಾದಲ್ಲಿ ಸುದೀಪ್, ಉಗ್ರಂ ಮಂಜು ಮೊದಲಾದವರು ನಟಿಸಿದ್ದಾರೆ.
ಈ ಸಿನಿಮಾ ಇನ್ನೂ ಒಟಿಟಿಗೆ ಬಂದಿಲ್ಲ. ಆಗಲೇ ಟಿವಿಯಲ್ಲಿ ಪ್ರಸಾರ ಕಾಣೋಕೆ ರೆಡಿ ಆಗಿದೆ. ಈ ಬಗ್ಗೆ ಜೀ ಕನ್ನಡದಿಂದಲೇ ಅಧಿಕೃತ ಘೋಷಣೆ ಆಗಿದೆ. ಆದರೆ, ದಿನಾಂಕ ಇನ್ನೂ ರಿವೀಲ್ ಆಗಿಲ್ಲ. ‘ಶೀಘ್ರವೇ ಸಿನಿಮಾ ಜೀ ಕನ್ನಡದಲ್ಲಿ ಪ್ರಸಾರ ಕಾಣಲಿದೆ’ ಎಂದಷ್ಟೇ ಹೇಳಿದೆ.
ಮತ್ತೊಂದೆಡೆ ‘ಯುಐ’ ಚಿತ್ರ ಕೂಡ ಟಿವಿಯಲ್ಲಿ ಪ್ರಸಾರ ಕಾಣುತ್ತಿದೆ. ‘ಮ್ಯಾಕ್ಸ್’ ಚಿತ್ರ ರಿಲೀಸ್ ಆಗುವುದಕ್ಕೂ ಐದು ದಿನ ಮೊದಲು ರಿಲೀಸ್ ಆಗಿದ್ದ ಈ ಚಿತ್ರವು ಭಿನ್ನ ಸಿನಿಮಾ ಎಂಬ ಪಟ್ಟ ಪಡೆದಿತ್ತು. ಎಲ್ಲಕ್ಕಿಂತ ಮುಖ್ಯವಾಗಿ ಉಪೇಂದ್ರ ಅವರ ನಿರ್ದೇಶನ ಚಿತ್ರಕ್ಕೆ ಇತ್ತು. ಈ ಕಾರಣದಿಂದಲೂ ಸಿನಿಮಾ ಗಮನ ಸೆಳೆದಿತ್ತು. ಈಗ ಚಿತ್ರವು ಜೀ ಕನ್ನಡದಲ್ಲಿ ಪ್ರಸಾರ ಕಾಣಲಿದೆ. ಇದರ ದಿನಾಂಕದ ಬಗ್ಗೆಯೂ ಕುತೂಹಲ ಇದೆ. ಫೆಬ್ರವರಿ 25ಕ್ಕೆ ಮಹಾಶಿವರಾತ್ರಿ ಹಬ್ಬವಿದ್ದು, ಅದೇ ದಿನವೇ ‘ಮ್ಯಾಕ್ಸ್’ ಸಿನಿಮಾ ಬಿಡುಗಡೆ ಆಗುವ ಸಂಭವ ಇದೆ. ಈ ಬಗ್ಗೆ ಜೀ ಕನ್ನಡ ವಾಹಿನಿ ಇನ್ನಷ್ಟೆ ಅಧಿಕೃತ ಘೋಷಣೆ ಮಾಡಬೇಕಿದೆ
ಇದನ್ನೂ ಓದಿ: ಕಿರುತೆರೆಗೆ ಬರುತ್ತಿದೆ ಕಿಚ್ಚನ ಬ್ಲಾಕ್ ಬಸ್ಟರ್ ಸಿನಿಮಾ ‘ಮ್ಯಾಕ್ಸ್’
‘ಯುಐ’ ಹಾಗೂ ‘ಮ್ಯಾಕ್ಸ್’ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ದೊಡ್ಡ ಮಟ್ಟದ ಕ್ಲ್ಯಾಶ್ ಪಡೆದಿದ್ದವು. ಈಗ ಟಿವಿಯಲ್ಲಿ ಪ್ರಸಾರ ಕಂಡು ಟಿಆರ್ಪಿಯಲ್ಲೂ ಇವರ ಮಧ್ಯೆ ಸ್ಪರ್ಧೆ ಏರ್ಪಡುವ ನಿರೀಕ್ಷೆ ಇದೆ. ಯಾವ ಸಿನಿಮಾಗೆ ಹೆಚ್ಚಿನ ಟಿಆರ್ಪಿ ಸಿಗುತ್ತದೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಮೂಡಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.