ಕಿರುತೆರೆಗೆ ಬರುತ್ತಿದೆ ಕಿಚ್ಚನ ಬ್ಲಾಕ್ ಬಸ್ಟರ್ ಸಿನಿಮಾ ‘ಮ್ಯಾಕ್ಸ್’
Kichcha Sudeep: 2024 ರ ಕನ್ನಡ ಚಿತ್ರರಂಗದ ಸೂಪರ್ ಹಿಟ್ ಸಿನಿಮಾ ಎಂದರೆ ಅದು ಸುದೀಪ್ ನಟನೆಯ ‘ಮ್ಯಾಕ್ಸ್’. ಡಿಸೆಂಬ್ 25ಕ್ಕೆ ಬಿಡುಗಡೆ ಆಗಿ ಬಾಕ್ಸ್ ಆಫೀಸ್ನಲ್ಲಿ ಅಬ್ಬರಿಸಿದ್ದ, ಇನ್ನೂ ಅಬ್ಬರ ಮುಂದುವರೆಸಿರುವ ‘ಮ್ಯಾಕ್ಸ್’ ಸಿನಿಮಾ ಇದೀಗ ಟಿವಿಗೆ ಬರುತ್ತಿದೆ. ಮನೆ ಮಂದಿಯೆಲ್ಲ ಒಟ್ಟಿಗೆ ಕೂತು ‘ಮ್ಯಾಕ್ಸ್’ ವೀಕ್ಷಿಸುವ ದಿನಗಳು ಬಹಳ ದೂರ ಇಲ್ಲ. ಅಂದಹಾಗೆ ಯಾವ ಚಾನೆಲ್ನಲ್ಲಿ ಪ್ರಸಾರವಾಗಲಿದೆ ‘ಮ್ಯಾಕ್ಸ್’.

ಕಳೆದ ವರ್ಷ ಕನ್ನಡ ಚಿತ್ರರಂಗದ ಬ್ಲಾಕ್ ಬಸ್ಟರ್ ಸಿನಿಮಾ ‘ಮ್ಯಾಕ್ಸ್’. ಡಿಸೆಂಬರ್ 25ಕ್ಕೆ ಬಿಡುಗಡೆ ಆದ ಸುದೀಪ್ ನಟನೆಯ ಈ ಸಿನಿಮಾ 2024ರ ಕನ್ನಡ ಅತ್ಯಂತ ಯಶಸ್ವಿ ಸಿನಿಮಾ ಎನಿಸಿಕೊಂಡಿತು. ಒಂದು ರಾತ್ರಿಯಲ್ಲಿ ನಡೆಯುವ ಥ್ರಿಲ್ಲರ್ ಕತೆ ಒಳಗೊಂಡ ಈ ಸಿನಿಮಾ ಮಾಸ್ ಪ್ರೇಕ್ಷಕರ ಜೊತೆಗೆ ಎಲ್ಲರನ್ನೂ ಸೆಳೆದಿದೆ. ‘ಮ್ಯಾಕ್ಸ್’ ಸಿನಿಮಾ ಇನ್ನೂ ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಾಣುತ್ತಿದೆ. ಇದರ ನಡುವೆ ಸಿನಿಮಾದ ಟಿವಿ ಬಿಡುಗಡೆ ಸುದ್ದಿ ಹೊರಬಿದ್ದಿದೆ. ಮನೆಯಲ್ಲಿ ಆರಾಮವಾಗಿ ಕೂತು ‘ಮ್ಯಾಕ್ಸ್’ ಸಿನಿಮಾ ವೀಕ್ಷಿಸುವ ಸಮಯ ಬಹಳ ಹತ್ತಿರದಲ್ಲಿದೆ.
‘ಮ್ಯಾಕ್ಸ್’ ಸಿನಿಮಾ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿದೆ. ಜೀ ವಾಹಿನಿಯು ಭಾರಿ ಮೊತ್ತಕ್ಕೆ ‘ಮ್ಯಾಕ್ಸ್’ ಸಿನಿಮಾದ ಡಿಜಿಟಲ್ ಹಕ್ಕು ಖರೀದಿ ಮಾಡಿದ್ದು, ಸಿನಿಮಾ ಅನ್ನು ಶೀಘ್ರವೇ ಟಿವಿಯಲ್ಲಿ ತೆರೆಗೆ ತರುವುದಾಗಿ ಘೋಷಣೆ ಮಾಡಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡಿರುವ ಜೀ ಕನ್ನಡ ವಾಹಿನಿ, ‘ಕಿರುತೆರೆಯಲ್ಲಿ ಮ್ಯಾಕ್ಸಿಮಮ್ ಮನರಂಜನೆ ನೀಡೋಕೆ ಶೀಘ್ರದಲ್ಲೇ ಬರ್ತಿದೆ ಕಿಚ್ಚ ಸುದೀಪ್ ಅಭಿನಯದ ಬ್ಲಾಕ್ ಬಸ್ಟರ್ ‘MAX’ ಎಂಬ ಪೋಸ್ಟರ್ ಅನ್ನು ಜೀ ಕನ್ನಡ ವಾಹಿನಿ ಹಂಚಿಕೊಂಡಿದೆ. ಸಿನಿಮಾದ ಟಿವಿ ಪ್ರೀಮಿಯರ್ ದಿನಾಂಕ ಘೋಷಣೆ ಮಾಡಿಲ್ಲವಾದರೂ ಶೀಘ್ರವೇ ಟಿವಿಯಲ್ಲಿ ಬರಲಿದೆ ಎಂದಷ್ಟೆ ಹೇಳಲಾಗಿದೆ.
ಇದನ್ನೂ ಓದಿ:ಬಿಗ್ ಬಾಸ್ ಮುಗಿಸಿದ ತ್ರಿವಿಕ್ರಮ್ಗೆ ‘ಸಿಸಿಎಲ್’ನಲ್ಲಿ ಇಲ್ಲ ಚಾನ್ಸ್ ? ಉತ್ತರಿಸಿದ ಸುದೀಪ್
ಕ್ರಿಸ್ಮಸ್ ಹಬ್ಬಕ್ಕೆ ಚಿತ್ರಮಂದಿರದಲ್ಲಿ ಬಿಡುಗಡೆ ಆಗಿದ್ದ ‘ಮ್ಯಾಕ್ಸ್’ ಸಿನಿಮಾ ಮುಂದೆ ಬರಲಿರುವ ಮಹಾ ಶಿವರಾತ್ರಿ ಹಬ್ಬಕ್ಕೆ ಟಿವಿಯಲ್ಲಿ ಪ್ರಸಾರ ಆಗುವ ಸಾಧ್ಯತೆ ದಟ್ಟವಾಗಿದೆ. ಫೆಬ್ರವರಿ 25ಕ್ಕೆ ಮಹಾಶಿವರಾತ್ರಿ ಹಬ್ಬವಿದ್ದು, ಅದೇ ದಿನವೇ ‘ಮ್ಯಾಕ್ಸ್’ ಸಿನಿಮಾ ಬಿಡುಗಡೆ ಆಗುವ ಸಂಭವ ಇದೆ. ಈ ಬಗ್ಗೆ ಜೀ ಕನ್ನಡ ವಾಹಿನಿ ಇನ್ನಷ್ಟೆ ಅಧಿಕೃತ ಘೋಷಣೆ ಮಾಡಬೇಕಿದೆ. ಚಿತ್ರಮಂದಿರದಲ್ಲಿ ಗಳಿಕೆಯಲ್ಲಿ ದಾಖಲೆ ಬರೆದ ‘ಮ್ಯಾಕ್ಸ್’ ಸಿನಿಮಾ ಟಿವಿಯಲ್ಲಿಯೂ ಭರ್ಜರಿ ಟಿಆರ್ಪಿ ಬಾಚುವ ವಿಶ್ವಾಸವಿದೆ.
‘ಮ್ಯಾಕ್ಸ್’ ಸಿನಿಮಾದ ಒಟಿಟಿ ಬಿಡುಗಡೆ ಸಹ ಸನಿಹದಲ್ಲೇ ಇದೆ ಎನ್ನಲಾಗುತ್ತಿದೆ. ‘ಮ್ಯಾಕ್ಸ್’ ಸಿನಿಮಾದ ಟಿವಿ ಹಕ್ಕು ಖರೀದಿ ಮಾಡಿರುವ ಜೀನವರೇ ಡಿಜಿಟಲ್ ಹಕ್ಕು ಸಹ ಖರೀದಿ ಮಾಡಿದ್ದು, ಜಿ5 ನಲ್ಲಿ ‘ಮ್ಯಾಕ್ಸ್’ ಸಿನಿಮಾ ಹಲವು ಭಾಷೆಗಳಲ್ಲಿ ಒಟ್ಟಿಗೆ ಪ್ರೀಮಿಯರ್ ಆಗಲಿದೆ ಎನ್ನಲಾಗುತ್ತಿದೆ. ಈ ಬಗ್ಗೆ ಜೀ5 ಅಧಿಕೃತ ಹೇಳಿಕೆ ಹೊರಬೀಳಬೇಕಿದೆ. ‘ಮ್ಯಾಕ್ಸ್’ ಸಿನಿಮಾ ಅನ್ನು ತಮಿಳಿನ ನಿರ್ದೇಶಕ ವಿಜಯ್ ಕಾರ್ತಿಕೇಯ, ನಿರ್ದೇಶನ ಮಾಡಿದ್ದಾರೆ. ನಿರ್ಮಾಣ ಮಾಡಿರುವುದು ತಮಿಳಿನ ಕಲೈಪುಲಿ ಎಸ್ ಥನು ಮತ್ತು ಕಿಚ್ಚ ಸುದೀಪ್.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ