ಬಿಗ್ ಬಾಸ್ ಮುಗಿಸಿದ ತ್ರಿವಿಕ್ರಮ್ಗೆ ‘ಸಿಸಿಎಲ್’ನಲ್ಲಿ ಇಲ್ಲ ಚಾನ್ಸ್ ? ಉತ್ತರಿಸಿದ ಸುದೀಪ್
‘ಸೆಲೆಬ್ರಿಟಿ ಕ್ರಿಕೆಟ್ ಲೀಗ್’ ಅಥವಾ ಸಿಸಿಎಲ್ ಆರಂಭಕ್ಕೆ ಕ್ಷಣಗಣನೆ ಆರಂಭ ಆಗಿದೆ. ಇದನ್ನು ಸುದೀಪ್ ಅವರು ಸಾಕಷ್ಟು ಆಸಕ್ತಿಯಿಂದ ಮುನ್ನಡೆಸಿಕೊಂಡು ಹೋಗುತ್ತಿದ್ದಾರೆ. ಈಗ ಅವರ ಗೆಳೆಯ ತ್ರಿವಿಕ್ರಂ ಕೂಡ ಬಿಗ್ ಬಾಸ್ ಆಡಲಿದ್ದಾರೆ. ಈ ವಿಚಾರವನ್ನು ಸುದೀಪ್ ಅವರು ಸುದ್ದಿಗೋಷ್ಠಿಯಲ್ಲಿ ರಿವೀಲ್ ಮಾಡಿದ್ದಾರೆ.
‘ಸೆಲೆಬ್ರಿಟಿ ಕ್ರಿಕೆಟ್ ಲೀಗ್’ ಮೂಲಕ ಸೆಲೆಬ್ರಿಟಿಗಳು ಒಂದು ಕಡೆ ಸೇರುತ್ತಿದ್ದಾರೆ. ಇದರ ಮೂಲಕ ಕಲಾವಿದರ ನಡುವೆ ಬಾಂಧವ್ಯ ಕೂಡ ಹೆಚ್ಚುತ್ತಿದೆ. ತ್ರಿವಿಕ್ರಂ ಅವರ ಪರಿಚಯ ಸುದೀಪ್ಗೆ ಆಗಿದ್ದು ಇಲ್ಲಿಯೇ. ತ್ರಿವಿಕ್ರಂ ಅವರು ‘ಬಿಗ್ ಬಾಸ್’ನಲ್ಲಿ ಸ್ಪರ್ಧಿಸಿದ್ದರು. ಈ ಕಾರಣಕ್ಕೆ ಅವರಿಗೆ ಕ್ರಿಕೆಟ್ ಪ್ರ್ಯಾಕ್ಟಿಸ್ ಸಾಧ್ಯ ಆಗಿರಲಿಲ್ಲ. ಅವರು ಸಿಸಿಎಲ್ನಲ್ಲಿ ಭಾಗವಹಿಸಲಿದ್ದಾರೋ ಅಥವಾ ಇಲ್ಲವೋ ಎನ್ನುವ ಪ್ರಶ್ನೆ ಇತ್ತು. ಅದಕ್ಕೆ ಉತ್ತರ ಸಿಕ್ಕಿದೆ. ಸುದೀಪ್ ಅವರು ಈ ಬಗ್ಗೆ ಮಾತನಾಡಿದ್ದಾರೆ. ಮೇಲಿನ ವಿಡಿಯೋ ನೋಡಿ
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.