Video: ಬಿಜೆಪಿ ಅಭ್ಯರ್ಥಿಯ ಪಾದ ಮುಟ್ಟಿ ನಮಸ್ಕರಿಸಿದ ಪ್ರಧಾನಿ ಮೋದಿ, ಯಾರು ಈ ರವೀಂದ್ರ ಸಿಂಗ್ ನೇಗಿ?
Ravinder Singh Negi: ಬರುವ ಫೆಬ್ರವರಿಯಲ್ಲಿ ದೆಹಲಿ ವಿಧಾನಸಭಾ ಚುನಾವಣೆ ನಡೆಯುತ್ತಿದ್ದು, ಎಲ್ಲಾ ಪಕ್ಷಗಳಂತೆ ಬಿಜೆಪಿ ಕೂಡ ಚುನಾವಣಾ ಪ್ರಚಾರದಲ್ಲಿ ತೊಡಗಿಕೊಂಡಿದೆ. ಬಿಜೆಪಿ ಪರವಾಗಿ ಪ್ರಧಾನಿ ನರೇಂದ್ರ ಮೋದಿ ಬುಧವಾರ ದೆಹಲಿಯ ಕರವಾಲ್ ನಗರದಲ್ಲಿ ರ್ಯಾಲಿ ನಡೆಸಿದರು. ಆಗ ಪಟ್ಪರ್ಗಂಜ್ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ರವೀಂದ್ರ ಸಿಂಗ್ ನೇಗಿ ಅವರ ಪಾದಗಳನ್ನು ಮೂರು ಬಾರಿ ಮುಟ್ಟಿ ನಮಸ್ಕರಿಸಿದ್ದಾರೆ.
ಬರುವ ಫೆಬ್ರವರಿಯಲ್ಲಿ ದೆಹಲಿ ವಿಧಾನಸಭಾ ಚುನಾವಣೆ ನಡೆಯುತ್ತಿದ್ದು, ಎಲ್ಲಾ ಪಕ್ಷಗಳಂತೆ ಬಿಜೆಪಿ ಕೂಡ ಚುನಾವಣಾ ಪ್ರಚಾರದಲ್ಲಿ ತೊಡಗಿಕೊಂಡಿದೆ. ಬಿಜೆಪಿ ಪರವಾಗಿ ಪ್ರಧಾನಿ ನರೇಂದ್ರ ಮೋದಿ ಬುಧವಾರ ದೆಹಲಿಯ ಕರವಾಲ್ ನಗರದಲ್ಲಿ ರ್ಯಾಲಿ ನಡೆಸಿದರು. ಆಗ ಪಟ್ಪರ್ಗಂಜ್ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ರವೀಂದ್ರ ಸಿಂಗ್ ನೇಗಿ ಅವರ ಪಾದಗಳನ್ನು ಮೂರು ಬಾರಿ ಮುಟ್ಟಿ ನಮಸ್ಕರಿಸಿದ್ದಾರೆ. ಮೊದಲು ರವೀಂದ್ರ ಸಿಂಗ್ ಅವರು ಪ್ರಧಾನಿ ಮೋದಿ ಪಾದಗಳನ್ನು ಮುಟ್ಟಿ ನಮಸ್ಕರಿಸಿದರು, ಮೋದಿ ಅದಕ್ಕೆ ಪ್ರತಿಯಾಗಿ ರವೀಂದ್ರ ಅವರಿಗೂ ನಮಸ್ಕರಿಸಿದ್ದಾರೆ.
ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಈಗ ರವೀಂದ್ರ ನೇಗಿ ಯಾರು ಎಂಬ ಪ್ರಶ್ನೆ ಕಾಡುತ್ತಿದೆ. ರವೀಂದ್ರ ನೇಗಿ ಅವರ ಪಾದಗಳನ್ನು ಪ್ರಧಾನಿ ಮೋದಿ ಮುಟ್ಟಿದಾಗ ಅಲ್ಲಿದ್ದ ಇತರ ನಾಯಕರೂ ಆಶ್ಚರ್ಯಚಕಿತರಾದರು. ಬಿಜೆಪಿ ಅಭ್ಯರ್ಥಿ ರವೀಂದ್ರ ನೇಗಿ ಮೂಲತಃ ಉತ್ತರಾಖಂಡದವರು.
ಅವರು ಪ್ರಸ್ತುತ ದೆಹಲಿ ಮುನ್ಸಿಪಲ್ ಕಾರ್ಪೊರೇಷನ್ ಸದಸ್ಯ ಮತ್ತು ವಿನೋದ್ ನಗರ ವಾರ್ಡ್-198 ರಿಂದ ಕೌನ್ಸಿಲರ್ ಆಗಿದ್ದಾರೆ. ರವೀಂದ್ರ ನೇಗಿ ಆರ್‌ಎಸ್‌ಎಸ್‌ನಲ್ಲೂ ಉತ್ತಮ ಹಿಡಿತ ಹೊಂದಿದ್ದಾರೆ. ಕೆಲವರು ಇದನ್ನು ಪ್ರಧಾನಿಯವರ ವಿನಯ ಎನ್ನುತ್ತಿದ್ದಾರೆ. ಬಿಜೆಪಿ ಅಭ್ಯರ್ಥಿ ರವೀಂದ್ರ ಸಿಂಗ್ ನೇಗಿ ಅವರು ಈ ಬಾರಿ ಪಟ್ಪರ್ಗಂಜ್ ವಿಧಾನಸಭಾ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಿದ್ದಾರೆ. ಈ ಬಾರಿ ಆಮ್ ಆದ್ಮಿ ಪಕ್ಷ ಅವಧ್ ಓಜಾ ಅವರನ್ನು ಕಣಕ್ಕಿಳಿಸಿದೆ.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ