ಮೈಸೂರು: ಸುತ್ತೂರು ಜಾತ್ರಾ ಮಹೋತ್ಸವದಲ್ಲಿ ಕಣ್ಮನ ಸೆಳೆದ ಲಕ್ಷದೀಪೋತ್ಸವ
ಸುತ್ತೂರು ಜಾತ್ರಾ ಮಹೋತ್ಸವವು ಜನೆವರಿ 26 ರಂದು ಆರಂಭಗೊಂಡಿದೆ ಮತ್ತು 6 ದಿನಗಳ ಕಾಲ ನಡೆಯುವ ಧಾರ್ಮಿಕ ಉತ್ಸವ ನಾಳೆ ಅಂದರೆ ಶುಕ್ರವಾರ ಸಂಪನ್ನಗೊಳ್ಳುತ್ತದೆ. ಜನೆವರಿ 28ರಂದು ನಡೆದ ರಥೋತ್ಸವವನ್ನು ಟಿವಿ9 ವರದಿ ಮಾಡಿದೆ. ಹಲವಾರು ಧಾರ್ಮಿಕ ಅಚರಣೆಗಳ ಜೊತೆ ಸುತ್ತೂರು ಮಠದ ಶ್ರೀಗಳಾಗಿರುವ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿಯವರ ಸಮಕ್ಷಮ ಸಾಮೂಹಿಕ ವಿವಾಹ ಕಾರ್ಯಕ್ರಮವೂ ನಡೆದಿದೆ.
ಮೈಸೂರು: ಈಗಾಗಲೇ ವರದಿಯಾಗಿರುವಂತೆ ಸುತ್ತೂರು ಜಾತ್ರಾ ಮಹೋತ್ಸವ ಆರಂಭಗೊಂಡು ಇವತ್ತಿಗೆ 5ನೇ ದಿನ. ಆದಿ ಜಗದ್ಗುರು ಶಿವರಾತ್ರೀಶ್ವವರ ಶಿವಯೋಗಿ ಮಹೋತ್ಸವದಲ್ಲಿ ನಿನ್ನೆ ರಾತ್ರಿ ಲಕ್ಷ ದೀಪೋತ್ಸವ ಬಹು ವಿಜೃಂಭಣೆಯಿಂದ ನಡೆಯಿತು. ಜಾತ್ರೆಯಲ್ಲಿ ಭಾಗಿಯಾಗಿದ್ದ ಲಕ್ಷಾಂತರ ಭಕ್ತಾದಿಗಳು ದೀಪ ಬೆಳಗಿ ತಮ್ಮ ಹರಕೆ ಪೂರೈಸಿಕೊಂಡರು. ದೀಪೋತ್ಸವದ ವಿಹಂಗಮ ದೃಶ್ಯವು ಡ್ರೋಣ್ ಕೆಮೆರಾದಲ್ಲಿ ಸೆರೆಯಾಗಿದ್ದು ಇದನ್ನು ವೀಕ್ಷಿಸುವುದು ಮನಸ್ಸಿಗೆ ಮುದ ನೀಡುತ್ತದೆ. ಬಣ್ಣಬಣ್ಣದ ವಿದ್ಯುತ್ ದೀಪಗಳ ಚಿತ್ತಾರ ಕಣ್ಮನ ಸೆಳೆಯುತ್ತದೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಅಮಿತ್ ಶಾಗೆ ಶ್ರೀಗಂಧದ ಚಾಮುಂಡೇಶ್ವರಿ ದೇವಿ ವಿಗ್ರಹ ಉಡುಗೊರೆ ನೀಡಿದ ಸುತ್ತೂರು ಶ್ರೀ
Published on: Jan 30, 2025 10:40 AM
Latest Videos

ನೇಪಾಳಕ್ಕೆ ವಾಪಸ್ ಹೊರಟ ವಿದ್ಯಾರ್ಥಿಗಳಿಗೆ ಆಹಾರ ಕೊಟ್ಟು ನೆರವಾದ ಎಬಿವಿಪಿ

ಕಲಬುರಗಿ: ಕಾರ್ಮಿಕನ ಮೃತದೇಹವನ್ನು ಪ್ರಾಣಿ ತರಹ ಎಳೆದೊಯ್ದ ಸಿಮೆಂಟ್ ಕಂಪನಿ

Daily Devotional: ಸ್ವಾತಿ ನಕ್ಷತ್ರ ಮಹತ್ವ ಹಾಗೂ ಫಲ ತಿಳಿಯಿರಿ

Daily horoscope: ಬುಧವಾರ ಯಾವ ರಾಶಿಯವರಿಗೆ ಶುಭ, ಅಶುಭ ತಿಳಿಯಿರಿ
