ಸುಧಾಕರ್ ಆಡಿರುವ ಮಾತುಗಳು ಅವರಿಗಾಗಲೀ ನನಗಾಗಲೀ ಶೋಭೆ ನೀಡಲ್ಲ: ಬಿವೈ ವಿಜಯೇಂದ್ರ
ಸುಧಾಕರ್ ಅವರು ಹೇಳಿರುವಂತೆ ತಾನು ಧೋರಣೆಯನ್ನು ಬದಲಾಯಿಸಿಕೊಳ್ಳುತ್ತೇನೆ, ಬೇರೆ ಕೆಲ ನಾಯಕರೂ ಇದೇ ಮಾತನ್ನು ಹೇಳಿದ್ದಾರೆ, ಸಂಸದರು ಆಡಿರುವ ಎಲ್ಲ ಮಾತುಗಳನ್ನು ಮಾಧ್ಯಮಗಳಲ್ಲಿ ನೋಡಿದ್ದೇನೆ ಕೇಳಿದ್ದೇನೆ, ಅವರನ್ನು ಆದಷ್ಟು ಬೇಗ ಭೇಟಿಮಾಡುವ ಪ್ರಯತ್ನ ಮಾಡುತ್ತೇನೆ ಮತ್ತು ಅವರು ಚುನಾವಣಾ ಪ್ರಕ್ರಿಯೆ ಅರ್ಥಮಾಡಿಕೊಳ್ಳುವ ಪ್ರಯತ್ನ ಮಾಡಬೇಕು ಎಂದು ವಿಜಯೇಂದ್ರ ಹೇಳಿದರು.
ಬೆಂಗಳೂರು: ಚಿಕ್ಕಬಳ್ಳಾಪುರ ಸಂಸದ ಡಾ ಕೆ ಸುಧಾಕರ್ ನಿನ್ನೆ ಪಕ್ಷದ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಬೆಂಕಿಯುಗುಳಿದ್ದರು. ಅದಕ್ಕೆ ವಿಜಯೇಂದ್ರ ನೀಡಿರುವ ಪ್ರತಿಕ್ರಿಯೆ ಸಾಫ್ಟ್ ಆಗಿದೆ ಎಂದರೆ ಅತಿಶಯೋಕ್ತಿ ಅನಿಸದು. ಇವತ್ತು ಮಾಧ್ಯಮಗಳೊಂದಿಗೆ ಮಾತಾಡಿದ ಅವರು ಜಿಲ್ಲಾಧ್ಯಕ್ಷರನ್ನು ಆಯ್ಕೆ ಮಾಡುವ ಪ್ರಕ್ರಿಯೆ ಇಡೀ ದೇಶದಲ್ಲಿ ಒಂದೇ ತೆರನಾಗಿದೆ, ತಾನು ಬದಲಾಯಿಸುವ ಅಥವಾ ಹಸ್ತಕ್ಷೇಪ ಮಾಡುವುದಕ್ಕೆ ಹೋಗಿಲ್ಲ, ಆಯ್ಕೆಯಾಗಿರುವ ವ್ಯಕ್ತಿ ಪಕ್ಷದ ಕಾರ್ಯಕರ್ತ ಮತ್ತು ಸುಧಾಕರ್ ಸಂಬಂಧಿಕನಾಗಿದ್ದಾನೆ ಎಂದು ವಿಜಯೇಂದ್ರ ಹೇಳಿದರು. ತಮ್ಮ ಆಕ್ರೋಶ ವ್ಯಕ್ತಪಡಿಸುವ ಭರದಲ್ಲಿ ಸುಧಾಕರ್ ಅವರು, ಸಮಾಧಿ ಮಾಡಲಾಗುತ್ತಿದೆ ಎಂಬ ಮಾತುಗಳನ್ನು ಆಡಬಾರದು, ಅದು ತನಗೆ ಮತ್ತು ಅವರಿಗೂ ಶೋಭೆ ನೀಡಲ್ಲ ಎಂದು ವಿಜಯೇಂದ್ರ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ವಿಜಯೇಂದ್ರರನ್ನು ಬದಲಾಯಿಸದಿದ್ದರೆ ಪಕ್ಷ ಅವನತಿ ತಲುಪೋದು ಗ್ಯಾರಂಟಿ: ಡಾ ಕೆ ಸುಧಾಕರ್, ಸಂಸದ