ವಿಜಯೇಂದ್ರರನ್ನು ಬದಲಾಯಿಸದಿದ್ದರೆ ಪಕ್ಷ ಅವನತಿ ತಲುಪೋದು ಗ್ಯಾರಂಟಿ: ಡಾ ಕೆ ಸುಧಾಕರ್, ಸಂಸದ
ಬಣಗಳಲ್ಲಿ ತನಗೆ ವಿಶ್ವಾಸವಿಲ್ಲ ಎಂದು ಸುಧಾಕರ್ ಹೇಳುತ್ತಾರೆ, ಆದರೆ ಬಸನಗೌಡ ಪಾಟೀಲ್ ಯತ್ನಾಳ್ ಅವರ ಟೀಮ್ ಹೇಳುತ್ತಿರುವುದರಲ್ಲಿ ತಪ್ಪಿಲ್ಲ ಅಂತಲೂ ಅವರು ಹೇಳುತ್ತಾರೆ. ತಮ್ಮ ಒಳ್ಳೆಯತನವನ್ನೇ ದೌರ್ಬಲ್ಯ ಅಂತ ವಿಜಯೇಂದ್ರ ಭಾವಿಸಿದ್ದರೆ ತಮ್ಮ ಶಕ್ತಿ ಏನು ಅನ್ನೋದನ್ನು ತೋರಿಸಬೇಕಾಗುತ್ತದೆ ಎಂದು ಸುಧಾಕರ್ ಹೇಳುತ್ತಾರೆ.
ಬೆಂಗಳೂರು: ಸಂಸದ ಡಾ ಕೆ ಸುಧಾಕರ್ ತಮ್ಮ ರಾಜ್ಯಾಧ್ಯಕ್ಷನ ವಿರುದ್ಧ ಸಿಡಿದೆದ್ದಿದ್ದಾರೆ. ಅವರು ಮಾತಾಡುವ ರೀತಿ ನೋಡಿದರೆ ಬಹಳ ದಿನಗಳಿಂದ ಅವರಲ್ಲಿ ವಿಜಯೇಂದ್ರ ವಿರುದ್ಧ ಅಸಮಾಧಾನ ಬೇಗುದಿ ಮತ್ತು ಕೋಪ ಮನೆ ಮಾಡಿತ್ತು ಅನಿಸುತ್ತದೆ. ತಮ್ಮನ್ನು ತುಳಿಯುವ ಪ್ರಯತ್ನ ವಿಜಯೇಂದ್ರ ಮಾಡುತ್ತಿದ್ದಾರೆಂದು ನೇರವಾಗಿ ಅರೋಪಿಸುವ ಸುಧಾಕರ್, ವಿಜಯೇಂದ್ರ ತಮ್ಮ ಧೋರಣೆ ಬದಲಾಯಿಸದಿದ್ದರೆ ಲಕ್ಷಾಂತರ ಜನ ಕಟ್ಟಿ ಬೆಳೆಸಿದ ಬಿಜೆಪಿಯನ್ನು ಅವನತಿಗೆ ಕೊಂಡೊಯ್ಯುವುದು ಶತಸಿದ್ಧ ಎನ್ನುತ್ತಾರೆ. ವಿಜಯೇಂದ್ರನ ಧೋರಣೆ, ಅಹಂಕಾರ ಮತ್ತು ಮನಸ್ಥಿತಿಗೆ ತಮ್ಮ ಧಿಕ್ಕಾರ ಎಂದು ಸುಧಾಕರ್ ಹೇಳುತ್ತಾರೆ ಮತ್ತು ಬಜೆಟ್ ಅಧಿವೇಶನ ಶುರುವಾದ ಬಳಿಕ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಮತ್ತು ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರ ಅಪಾಯಿಂಟ್ಮೆಂಟ್ ಪಡೆದು ವಿಜಯೇಂದ್ರರನ್ನು ಸ್ಥಾನದಿಂದ ಬದಲಾಯಿಸುವಂತೆ ಕೋರುತ್ತೇನೆ ಎನ್ನುತ್ತಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಬಿಜೆಪಿಯಲ್ಲಿ ಭುಗಿಲೆದ್ದ ಅಸಮಾಧಾನ: ವಿಜಯೇಂದ್ರ ವಿರುದ್ಧ ಬಹಿರಂಗವಾಗಿಯೇ ಗುಡುಗಿದ ಸುಧಾಕರ್