ನನಗೆ ತ್ರಿವಿಕ್ರಮ್ ಪರಿಚಯವೇ ಇರಲಿಲ್ಲ: ಆ ಘಟನೆ ನೆನೆದ ಕಿಚ್ಚ ಸುದೀಪ್
ಸೆಲೆಬ್ರಿಟಿ ಕ್ರಿಕೆಟ್ ಲೀಗ್ ಎಂದರೆ ಬರೀ ಕ್ರಿಕೆಟ್ ಅಲ್ಲ. ಅದು ಕಲಾವಿದರ ನಡುವಿನ ಬಾಂಧವ್ಯಕ್ಕೂ ಕಾರಣ ಆಗಿದೆ. ಕನ್ನಡ ಮಾತ್ರವಲ್ಲದೇ ಪರಭಾಷೆಯ ಚಿತ್ರರಂಗದ ಸೆಲೆಬ್ರಿಟಿಗಳ ನಡುವೆ ನಂಟು ಬೆಳೆಯಲು ಕೂಡ ಸಿಸಿಎಲ್ ಕಾರಣವಾಗಿದೆ. ಈ ಬಗ್ಗೆ ಕಿಚ್ಚ ಸುದೀಪ್ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದಾರೆ.
ತ್ರಿವಿಕ್ರಮ್ ಅವರು ‘ಬಿಗ್ ಬಾಸ್ ಕನ್ನಡ ಸೀಸನ್ 11’ ಶೋನಲ್ಲಿ ರನ್ನರ್ ಅಪ್ ಆದರು. ಕಿಚ್ಚ ಸುದೀಪ್ ಅವರಿಗೆ ತ್ರಿವಿಕ್ರಮ್ ಪರಿಚಯ ಆಗಿದ್ದು ಸಿಸಿಎಲ್ ಮೂಲಕ. ಅದಕ್ಕೂ ಮೊದಲು ಅವರಿಗೆ ಪರಿಚಯವೇ ಇರಲಿಲ್ಲ. ಆ ಬಗ್ಗೆ ಸುದೀಪ್ ಅವರು ಪ್ರೆಸ್ಮೀಟ್ನಲ್ಲಿ ಮಾತಾಡಿದ್ದಾರೆ. ‘ಕರಣ್, ತ್ರಿವಿಕ್ರಮ್, ರಾಜೀವ್, ಜೆಕೆ ಯಾರು ಎಂಬ ಪರಿಚಯ ನನಗೆ ಇರಲಿಲ್ಲ. ಕ್ರಿಕೆಟ್ಗೆ ಬಂದಾಗ ಕ್ಲೋಸ್ ಆದರು’ ಎಂದು ಸುದೀಪ್ ಅವರು ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Follow Us
Latest Videos

